ಬೇಸಿಗೆ ಕಾಲದಲ್ಲಿ ಹಾಗೂ ಈ ಸಮಯದಲ್ಲಿ ಹೆಚ್ಚಾಗಿ ಕಾಡುವ ಪೈಲ್ಸ್ ಸಮಸ್ಯೆಗೆ ಇಲ್ಲಿದೆ ಮನೆಮದ್ದುಗಳು.!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಅದಕ್ಕಾಗಿ ಈ ಬೇಸಿಗೆ ಕಾಲದಲ್ಲಿ ನಾವು ತಂಪು ಆಹಾರ ಮತ್ತು ಪಾನೀಯಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾದದ್ದು. ತಂಪು ಆಹಾರವನ್ನು ಸೇವನೆ ಮಾಡುವುದರಿಂದ ಪೈಲ್ಸ್ ಸಮಸ್ಯೆ ಕೂಡ ಬರದಂತೆ ಅಥವಾ ಉದ್ಭವ ಆಗದಂತೆ ತಡೆಯಬಹುದು. ಪೈಲ್ಸ್ ಸಮಸ್ಯೆ ಅನ್ನುವುದು ಬಹಳ ಭೀಕರವಾದ ಸಮಸ್ಯೆ ಅಂತ ಹೇಳಬಹುದು. ಈ ತೊಂದರೆ ಆದಾಗ ಈ ಸಮಸ್ಯೆ ನಮ್ಮ ಶತ್ರುಗಳಿಗೂ ಕೊಡಬೇಡ ದೇವರೆ ಎಂದು ಕೇಳಿಕೊಳ್ಳುತ್ತಾರೆ. ಅವರು ಪಡುವ ಪಾಡು ಅಷ್ಟಿಷ್ಟಲ್ಲ ಗೆಳೆಯರೇ. ಪೈಲ್ಸ್ ಅಂದ್ರೆ ರಕ್ತನಾಳಗಳು ಊದಿಕೊಂಡು ನೋವು ಮತ್ತು ರಕ್ತಸ್ರಾವವನ್ನು ಉಂಟು ಮಾಡುತ್ತದೆ. ಹೀಗಾಗಿ ಮಲ ವಿಸರ್ಜನೆ ಮಾಡುವಾಗ ಬಹಳ ಕಷ್ಟವಾಗುತ್ತದೆ. ಪದೇ ಪದೇ ಮಲ ವಿಸರ್ಜನೆ ಹೋಗಬೇಕೆಂದರೆ ತಲೆನೋವು ಬರುತ್ತದೆ ಹಾಗಂತ ಹೋಗದೆ ಇದ್ದರೆ ಕೂಡ ಬಹಳಷ್ಟು ಸಮಸ್ಯೆಗಳು ಆಗುತ್ತವೆ. ಹಾಗಾದರೆ ಈ ಪೈಲ್ಸ್ ಸಮಸ್ಯೆಯನ್ನು ಸುಲಭವಾಗಿ ನೈಸರ್ಗಿಕವಾಗಿ ಹೇಗೆ ತಡೆಗಟ್ಟಬಹುದು ಅಂತ ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

 

ಪೈಲ್ಸ್ ಅನ್ನು ಹೋಗಲಾಡಿಸಲು ನೀವು ಬಹಳ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ ಗೆಳೆಯರೇ ಅದಕ್ಕೆ ಮನೆಯಲ್ಲಿ ಸಿಗುವ ಮೂಲಂಗಿ ತರಕಾರಿ ಸಾಕು. ಮೂಲಂಗಿ ಜ್ಯೂಸ್ ಪ್ರತಿ ರಾತ್ರಿ ಮತ್ತು ಬೆಳಿಗ್ಗೆ ಸೇವನೆ ಮಾಡುವುದರಿಂದ ಪೈಲ್ಸ್ ಗೆ ಟಾಟಾ ಬೈ ಬೈ ಹೇಳಬಹುದು. ಅದಕ್ಕಾಗಿ ನೀವು ಒಂದು ಮೂಲಂಗಿ ತೆಗೆದುಕೊಂಡು ಅದರ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ರುಚಿಗೆ ಬೇಕಾದಷ್ಟು ಜೇನುತುಪ್ಪವನ್ನು ಹಾಕಿ ಸೇವನೆ ಮಾಡಿದರೆ ಸಾಕು ಪೈಲ್ಸ್ ಸಮಸ್ಯೆ ಮತ್ತೆಂದೂ ಬಾರದು. ಇನ್ನೂ ಎರಡನೆಯದಾಗಿ ಪೈಲ್ಸ್ ಸಮಸ್ಯೆ ಡ್ರೈ ಫ್ರೂಟ್ಸ್ ನಲ್ಲಿ ಅಂಜೂರ ಹಣ್ಣು ರಾಮಬಾಣ. ಇದನ್ನು ಅತ್ತಿ ಹಣ್ಣು ಅಂತ ಕೂಡ ಕರೆಯುತ್ತಾರೆ.
ಇದು ಮೂಲವ್ಯಾಧಿ ಸಮಸ್ಯೆಗೆ ದಿವ್ಯ ಔಷಧದಂತೆ ಕೆಲಸವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ನೀವು ನಾಲ್ಕೈದು ಅಂಜೂರದ ಹಣ್ಣು ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿ ತಿನ್ನುತ್ತಾ ಬಂದರೆ ಪೈಲ್ಸ್ ಸಮಸ್ಯೆ ತಕ್ಷಣವೇ ಮಾಯವಾಗುತ್ತದೆ. ಇನ್ನೂ ಮೂಲನೆಯದು ಹರಳೆಣ್ಣೆ. ಇದು ಉರಿ ಊತವನ್ನು ಶಮನ ಮಾಡುವ ಪ್ರಬಲವಾದ ಶಕ್ತಿಯನ್ನು ಹೊಂದಿದೆ. ಅದಕ್ಕಾಗಿ ಪ್ರತಿನಿತ್ಯವೂ ಹರಳೆಣ್ಣೆಯನ್ನು ಉಪಯೋಗಿಸುತ್ತಾ ಬನ್ನಿ ಅದು ಹೇಗೆಂದರೆ ಹರಳೆಣ್ಣೆಯನ್ನು ಪೀಡಿತ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಅಥವಾ ಹಾಲಿನಲ್ಲಿ ಒಂದೆರಡು ಹರಳೆಣ್ಣೆ ಹನಿಗಳನ್ನು ಹಾಕುವುದರಿಂದ ಪೈಲ್ಸ್ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.

 

ಬೇಸಿಗೆ ಕಾಲದಲ್ಲಿ ಉರಿ ಊತ ಹೆಚ್ಚಾದಾಗ ಕೂಡ ಪೈಲ್ಸ್ ಸಮಸ್ಯೆ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಇದನ್ನು ಹೋಗಲಾಡಿಸಲು ನಾವು ತಂಪಾದ ಆಹಾರ ಮತ್ತು ಪಾನೀಯಗಳನ್ನು ಕುಡಿಯುವುದು ಬಹಳ ಒಳ್ಳೆಯದು. ಮಜ್ಜಿಗೆ ಪೈಲ್ಸ್ ಸಮಸ್ಯೆಯನ್ನು ಹೋಗಲಾಡಿಸಲು ಬಹಳಷ್ಟು ಅದ್ಭುತವಾದ ಮನೆಮದ್ದು ಅಂತ ಹೇಳಬಹುದು. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಅಜವಾಯಿನ್ ಮತ್ತು ಉಪ್ಪು ಹಾಕಿ ನಿತ್ಯವೂ ಕುಡಿಯಿರಿ. ಹೀಗೆ ಮಾಡುವುದರಿಂದ ಖಂಡಿತವಾಗಿ ಪೈಲ್ಸ್ ಸಮಸ್ಯೆ ಗುಣಮುಖ ಆಗುತ್ತದೆ. ಇನ್ನೂ ಅಲೋವೆರಾ ಜೆಲ್. ಇದು ತನ್ನ ಪ್ರಭಾವಶಾಲಿ ಗುಣಗಳಿಂದ ಎಲ್ಲರನ್ನೂ ಆಕರ್ಷಿತರಾಗಿ ಮಾಡುತ್ತದೆ. ಇದು ಚರ್ಮದ ಆರೈಕೆಗೆ ಮಾತ್ರವಲ್ಲದೆ ಪೈಲ್ಸ್ ರೋಗವನ್ನು ಕೂಡ ನಿಯಂತ್ರಣ ಮಾಡುತ್ತದೆ. ಇದು ಊತ ಉರಿ ಮತ್ತು ಕಿರಿಕಿರಿ ಅನ್ನು ಕಡಿಮೆ ಮಾಡುತ್ತದೆ. ಪೀಡಿತ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಪೈಲ್ಸ್ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಕೊನೆಯದಾಗಿ ನಿಂಬೆ ಹಣ್ಣಿನ ರಸ. ಇದು ಕೂಡ ಪೈಲ್ಸ್ ಸಮಸ್ಯೆ ದಿವ್ಯ ಔಷಧ ಅಂತ ಹೇಳಬಹುದು.ನಿಂಬೆ ಹಣ್ಣಿನ ರಸದಲ್ಲಿ ಸ್ವಲ್ಪ ಜೇನುತುಪ್ಪ ಶುಂಠಿ ಹಾಕಿಕೊಂಡು ಪ್ರತಿನಿತ್ಯವೂ ಕುಡಿತ್ತಾ ಬಂದರೆ ಸಾಕು ಖಂಡಿತವಾಗಿ ಪೈಲ್ಸ್ ಸಮಸ್ಯೆ ನಿವಾರಣೆ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *