ಬೆಲ್ಲವನ್ನು ನಿಯಮಿತವಾಗಿ ತಿನ್ನಬಹುದೇ!!!ಪ್ರತಿಯೊಬ್ಬರೂ ತಿಳಿಯಬೇಕಾದ ಸಂಗತಿ!!!

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದರೆ ನಾವು ಉತ್ತಮವಾದ ಆರೋಗ್ಯಕರವಾದ ಡಯೆಟ್ ಅನ್ನು ಫಾಲೋ ಮಾಡಬೇಕು. ಇದು ಹೇಗೆ ಸಾಧ್ಯ? ನಿಮಗೆ ಗೊತ್ತೇ ನಮ್ಮ ಹಿರಿಯರು ಅನಾದಿ ಕಾಲದಿಂದಲೂ ನಾವು ಆರೋಗ್ಯವಾಗಿ ಇರಲು ನಮ್ಮ ಅಡುಗೆ ಮನೆಯಲ್ಲಿಯೇ ಮನೆಮದ್ದು ಇವೆ ಎಂದು. ಹೌದು ಇದು ನಿಜಕ್ಕೂ ಸತ್ಯವಾದ ಸಂಗತಿ ಆದರೂ ಕೂಡ ಯಾರು ಇದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅಡುಗೆ ಮನೆಯಲ್ಲಿ ಸಿಗುವ ಬೆಲ್ಲದ ಸೇವನೆ ಇಂದ ಏನೆಲ್ಲ ಲಾಭಗಳು ಸಿಗುತ್ತವೆ ಅಂತ ತಿಳಿಯೋಣ. ಬೆಲ್ಲವನ್ನು ಪ್ರತಿ ನಿತ್ಯವೂ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವೂ ತುಂಬಾನೇ ಚೆನ್ನಾಗಿ ಇರುತ್ತದೆ ಇದರ ಜೊತೆಗೆ ಅನೇಕ ಬಗೆಯ ಕಾಯಿಲೆಗಳು ಕೂಡ ಬರದಂತೆ ನಮ್ಮನ್ನು ಕಾಪಾಡುತ್ತದೆ ಈ ಬೆಲ್ಲ. ಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಜೊತೆಗೆ ರಕ್ತವನ್ನು ಶುದ್ಧೀಕರಿಸುತ್ತದೆ.

 

ಬೆಲ್ಲವು ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧೀಕರಿಸು ನೈಸರ್ಗಿಕ ಪದಾರ್ಥ ಅಂತ ಹೇಳಿದರೆ ತಪ್ಪಾಗಲಾರದು. ಯಕೃತ್ ನ ಕಾರ್ಯವನ್ನು ಸರಾಗವಾಗಿ ನಡೆಯುವಂತೆ ಮಾಡುತ್ತದೆ ಮತ್ತು ದೇಹದಲ್ಲಿ ಇರುವ ಎಲ್ಲ ಬಗೆಯ ಕಲ್ಮಶಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಗೆ ತೆಗೆದು ಹಾಕುವ ಕೆಲಸವನ್ನು ಮಾಡುತ್ತದೆ. ಇದರಲ್ಲಿ ಸೆಲೆನಿಯಮ್ ಉತ್ಕರ್ಷಣ ಗುಣಗಳು ನಮ್ಮ ದೇಹದ ಶಕ್ತಿಯನ್ನು ದುಪ್ಪಟ್ಟು ಮಾಡುತ್ತದೆ. ಮತ್ತು ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಬೆಲ್ಲದಲ್ಲಿ ಪೋಲೆಟ್ ಅಂಶ ಸಮೃದ್ಧವಾಗಿದೆ ಆದ ಕಾರಣ, ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಮತ್ತು ಗರ್ಭಿಣಿಯರಿಗೆ ಇದು ಬಹಳ ಉತ್ತಮವಾದ ದಿವ್ಯ ಔಷಧ ಆಗಿದೆ. ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ತಕ್ಷಣವೇ ಶಕ್ತಿಯನ್ನು ನೀಡುತ್ತದೆ. ಬೆಲ್ಲದಲ್ಲಿ ಪೊಟ್ಯಾಶಿಯಂ ಅಂಶ ಇರುವುದರಿಂದ ದೇಹದಲ್ಲಿ ಆಸಿಡ್ ಆಮ್ಲವನ್ನು ತಡೆಯುತ್ತದೆ. ಕೀಲು ನೋವು ವಯಸ್ಸಾದ ಮೇಲೆ ಬರುವುದು ಸಹಜ ಅದಕ್ಕಾಗಿ ಮುಂಜಿತವಾಗಿಯೆ ನೀವು ಇದನ್ನು ತಡೆಯಲು ಬೆಲ್ಲವನ್ನು ಹಾಲಿನಲ್ಲಿ ಅಥವಾ ಶುಂಠಿ ರಸದೊಂದಿಗೆ ಕುಡಿಯಿರಿ.

 

ಇದರಿಂದ ಕೀಲು ನೋವು ನಿವಾರಣೆ ಆಗುತ್ತದೆ. ನಿಮ್ಮ ಮೂಳೆಗಳು ಸ್ನಾಯುಗಳು ಬಲಗೊಳ್ಳುತ್ತವೆ. ಅಷ್ಟೇ ಅಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಬೆಲ್ಲವನ್ನು ಬಹಳ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಇನ್ನೂ ಕೆಲವರು ತೂಕವನ್ನು ಇಳಿಸಿಕೊಳ್ಳಲು ಊಟವನ್ನು ಬಿಡುತ್ತಾರೆ ಆದರೆ ಇದು ತಪ್ಪು. ಅದಕ್ಕಾಗಿ ನೀವು ಬೆಲ್ಲವನ್ನು ಸೇವನೆ ಮಾಡಿ. ಇದರಲ್ಲಿ ಇರುವ ಖನಿಜಗಳು ವಿಟಮಿನ್ ಗಳು ಅಧಿಕ ಪ್ರಮಾಣದ ಪೋಷಕಾಂಶಗಳು ನಿಮಗೆ ನೈಸರ್ಗಿಕವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖನಿಜಗಳು ವಿಟಮಿನ್ ಗಳು ಇರುವುದರಿಂದ ಇದು ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದರ ಜೊತೆಗೆ ಚರ್ಮವನ್ನು ದೋಷರಹಿತ ವಾಗಿರುವಂತೆ ಮಾಡುತ್ತದೆ. ಮತ್ತು ಚರ್ಮವೂ ಸುಕ್ಕು ಗಟ್ಟುವಿಕೆಯನ್ನು ತಡೆಯುತ್ತದೆ. ಮುಖದಲ್ಲಿ ಮೂಡಿರುವ ಕಪ್ಪು ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಇನ್ನೂ ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವಿಗೆ ಹಾಗೂ ಶಕ್ತಿ ಒದಗಿಸುವ ದಿವ್ಯ ಔಷಧ ಆಗಿದೆ ಅಂತ ಹೇಳಬಹುದು.
ಮುಟ್ಟಿನ ಸಮಯದಲ್ಲಿ ಆಗುವ ಹೊಟ್ಟೆ ನೋವು ಬೆನ್ನು ನೋವು ಸೆಳೆತಗಳು ಇದು ರಾಮಬಾಣ ಇದ್ದಂತೆ. ಜೀರ್ಣ ಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ ಈ ಬೆಲ್ಲ. ಬೆಲ್ಲವನ್ನು ನಿಯಮಿತವಾಗಿ ಉಪಯೋಗಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *