ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಕಲ್ಲು ಸಕ್ಕರೆಯ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡುತ್ತೇವೆ. ಸಕ್ಕರೆ ಮತ್ತು ಕಲ್ಲು ಸಕ್ಕರೆ ಎರಡು ಒಂದೇ ಅಲ್ಲ ಗೆಳೆಯರೇ. ಹಾಗೆಯೇ ನೀವು ಅಂದುಕೊಳ್ಳಬಹುದು, ಇವೆರಡೂ ಒಂದೇ ಗುಣಲಕ್ಷಣವನ್ನು ಹೊಂದಿವೆ ಅಥವಾ ಇಲ್ಲವೆಂದು. ಅದ್ಯಾಗೂ ನೀವು ಮಾರುಕಟ್ಟೆಯಲ್ಲಿ ಈ ಕಲ್ಲು ಸಕ್ಕರೆಯನ್ನು ಮಾರುವುದನ್ನು ನೋಡಿಯೇ ಇರುತ್ತೀರಿ. ಹಾಗೂ ಕೆಲವೊಂದು ತಪ್ಪಿ ಇದರ ರುಚಿಯನ್ನು ಕೂಡ ನೀವು ನೋಡಿರುತ್ತೀರಿ. ಹಾಗಾದರೆ ಸಕ್ಕರೆಗೆ ಇಲ್ಲದ ಮಹತ್ವ ಇದರಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ನೀವು ಈ ಕಲ್ಲು ಸಕ್ಕರೆಯನ್ನು ಯಾವ ರೀತಿಯಲ್ಲಿ ತಯಾರಿಸುತ್ತಾರೆ ಅನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮೊದಲಿಗೆ ಈ ಕಲ್ಲು ಸಕ್ಕರೆಯನ್ನು ತಯಾರಿಸಲು ಸಕ್ಕರೆ ಮತ್ತು ಬೆಲ್ಲವನ್ನು ತಯಾರಿಸಿ ಉಳಿದ ಪದಾರ್ಥಗಳ ಸಹಾಯದಿಂದ ಇದನ್ನು ತಯಾರು ಮಾಡುತ್ತಾರೆ.
ಸಕ್ಕರೆಗಿಂತ ಈ ಕಲ್ಲು ಸಕ್ಕರೆ ಯಾಕೆ ಉತ್ತಮ ಅಂತ ನಮ್ಮ ಹಿರಿಯರು ಹೇಳುತ್ತಾರೆ ಅಂದರೆ ಮುಖ್ಯವಾಗಿ ಇದು ಬೇಸಿಗೆ ಕಾಲದಲ್ಲಿ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಇದರ ಸೇವನೆ ಮಾಡಲು ನಮ್ಮ ಹಿರಿಯರು ಹೇಳುತ್ತಿದ್ದರು . ಅಷ್ಟೇ ಅಲ್ಲದೇ ಇದು ಆರೋಗ್ಯದ ದೃಷ್ಟಿಯಿಂದ ಅಂದರೆ ಮಲ ವಿಸರ್ಜನೆ ಮಾಡುವಾಗ ರಕ್ತಸ್ರಾವ ಆಗಿತ್ತಿದ್ದಿರೆ ಅಥವಾ ಮೂಗಿನಿಂದ ರಕ್ತ ಬರುತ್ತಿದ್ದರೆ ಅಂಥವರಿಗೆ ಈ ಕಲ್ಲು ಸಕ್ಕರೆ ರಾಮಬಾಣ ಅಂತ ಹೇಳಲಾಗಿದೆ. ಇನ್ನೂ ಸಾಮಾನ್ಯವಾಗಿ ಎಲ್ಲರೂ ಚಿಕ್ಕ ಪುಟ್ಟ ಕಾಯಿಲೆಗಳಿಗೆ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅವುಗಳಿಂದ ಅವರ ಮಾನಸಿಕ ಹಾಗೂ ದೈಹಿಕ ಒತ್ತಡ ಹೆಚ್ಚಾಗುತ್ತದೆ ಅಂಥಹ ಸಮಯದಲ್ಲಿ ನೀವು ಕಲ್ಲು ಸಕ್ಕರೆಯನ್ನು ಚೀಪುವುದರಿಂದ ಖಂಡಿತವಾಗಿ ಇದರಿಂದ ಗುಣಮುಖರಾಗುತ್ತೀರಿ. ಇನ್ನೂ ಕೆಲವರಿಗೆ ಊಟವನ್ನು ಮಾಡಿದ ಬಳಿಕ ಕೂಡ ಹೊಟ್ಟೆ ಹಸಿವು ಆಗುತ್ತದೆ ಎಷ್ಟು ತಿಂದರೂ ಹಸಿವು ನೀಗುವುದಿಲ್ಲ ಹಾಗೆಯೆ ತಲೆಸುತ್ತುವಿಕೆ ತಲೆನೋವು ನಿಶ್ಯಕ್ತಿ ಆಯಾಸ ಆಗುತ್ತದೆ. ಇದನ್ನು ಹೋಗಲಾಡಿಸಲು ನೀವು ಕಲ್ಲು ಸಕ್ಕರೆಯ ರಸವನ್ನು ಹೀರಿಕೊಳ್ಳಬೇಕು.
ಇನ್ನೂ ನೆಗಡಿ ಅಥವಾ ಶೀತ ಆದಾಗ ನಮಗೆ ಎಂಥಹ ಮೃಷ್ಟಾನ್ನ ಭೋಜನ ನೀಡಿದರು ಕೂಡ ಅದರ ರುಚಿ ಸವಿಯಲು ಆಗುವುದಿಲ್ಲ. ಹೀಗಾಗಿ ಜೀರ್ಣ ಕ್ರಿಯೆಗೆ ಕೂಡ ಸಮಸ್ಯೆಯನ್ನು ಉಂಟು ಮಾಡಿ ವಾಕರಿಕೆ ಬರಲು ಶುರು ಆಗುತ್ತದೆ. ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾದರೆ ನಮಗೆ ಮಲಬದ್ಧತೆ ಸಮಸ್ಯೆ ಕೂಡ ಬೆನ್ನತ್ತುತ್ತದೆ. ಅಂಥಹ ಸಮಯದಲ್ಲಿ ಈ ಕಲ್ಲು ಸಕ್ಕರೆ ರಸವನ್ನು ನಿಧಾನವಾಗಿ ಚೀಪುತ್ತಾ ಇದ್ದರೆ ಇವೆಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇನ್ನೂ ಯಾರಿಗೆ ಕೆಮ್ಮು ಅಧಿಕವಾಗಿ ಕಾಡುತ್ತಿರುತ್ತದೆ ಅಂತವರು ಈ ಕಲ್ಲು ಸಕ್ಕರೆ ಸೇವನೆ ಮಾಡುವುದು ಸೂಕ್ತ. ಅದಕ್ಕಾಗಿ ನೀವು ಸ್ವಲ್ಪ ಕಲ್ಲು ಸಕ್ಕರೆ ಮತ್ತು ಅದರಲ್ಲಿ ಕರಿಮೆಣಸು ಪುಡಿ ಹಾಗೂ ತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ಸೇವನೆ ಮಾಡಿದರೆ ಎಂಥಹ ವಿಪರೀತವಾದ ಕೆಮ್ಮು ಕೂಡ ನಿವಾರಣೆ ಆಗುತ್ತದೆ. ಇನ್ನೂ ಮಹಿಳೆಯರಲ್ಲಿ ಮುಖ್ಯವಾಗಿ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತಿದೆ. ಅದಕ್ಕಾಗಿ ಅವರು ಈ ಕಲ್ಲು ಸಕ್ಕರೆಯನ್ನು ಸೇವನೆ ಮಾಡುವುದರಿಂದ ಖಂಡಿತವಾಗಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತದೆ. ಋತುಚಕ್ರದ ಸಮಯದಲ್ಲಿ ಉಂಟಾಗುವ ಮನಸ್ಸಿನ ಕಿರಿಕಿರಿ ಅನ್ನು ಕೂಡ ತಪ್ಪಿಸುತ್ತದೆ. ಇನ್ನೂ ಈ ಕಲ್ಲು ಸಕ್ಕರೆ ಅನ್ನು ಚಿಕ್ಕ ಮಕ್ಕಳಿಗೆ ಕೊಡುವುದರಿಂದ ಖಂಡಿತವಾಗಿ ಅವರ ಮೆದುಳಿನ ವಿಕಸನ ಆಗುತ್ತದೆ ಜೋತೆಗೆ ಮೆದುಳು ಆಯಾಸ ಆಗುವುದನ್ನು ತಪ್ಪಿಸುತ್ತದೆ ಒಟ್ಟಾರೆ ಮಕ್ಕಳ ಇದು ಆರೋಗ್ಯಕ್ಕೆ ಇದು ಒಂದು ಉತ್ತಮವಾದ ಪದಾರ್ಥ ಅಂತ ಹೇಳಬಹುದು. ರಾತ್ರಿ ಮಲಗುವ ವೇಳೆಯಲ್ಲಿ ಚಿಕ್ಕ ಮಕ್ಕಳಿಗೆ ಹಾಲಿನಲ್ಲಿ ಕಲ್ಲು ಸಕ್ಕರೆ ಹಾಕಿ ಬಿಸಿ ಮಾಡಿ ಕೊಡುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮತ್ತು ದೊಡ್ಡವರಲ್ಲಿ ಮುಖ್ಯವಾಗಿ ದಣಿವು ಹೋಗಲಾಡಿಸಲು ಅದ್ಭುತವಾಗಿ ಈ ಕಲ್ಲು ಸಕ್ಕರೆ ಸಹಾಯ ಮಾಡುತ್ತದೆ.