ನಮಸ್ತೆ ಪ್ರಿಯ ಓದುಗರೇ, ಮದ್ದೂರು ಎಂಬ ಊರಿನ ಹೆಸರನ್ನು ಕೇಳಿದ ತಕ್ಷಣ ಮದ್ದೂರು ವಡೆ ನೆಂಪಾಗುತ್ತೆ ಅಲ್ವಾ? ಮದ್ದೂರು ಕೇವಲ ಮದ್ದೂರು ವಡೆಯ ಹೆಸರಿನಿಂದ ಮಾತ್ರ ಪ್ರಸಿದ್ಧಿ ಆಗಿಲ್ಲ. ಈ ತಾಯಿಯ ಹೆಸರಿನಿಂದಲೂ ಮದ್ದೂರು ಕರ್ನಾಟಕ ರಾಜ್ಯದಲ್ಲಿ ವಿಶೇಷವಾದ ಸ್ಥಾನ ಮಾನ ಪಡೆದಿದೆ. ಬನ್ನಿ ಹಾಗಾದರೆ ತಡ ಮಾಡದೆ ಇಂದಿನ ಲೇಖನದಲ್ಲಿ ಮದ್ದೂರಿನ ಮದ್ದೂರಮ್ಮನ ದರ್ಶನ ಮಾಡಿ ಆಕೆಯ ಕೃಪೆಗೆ ಪಾತ್ರರಾ ಗೋಣ. ಮದ್ದೂರಿನ ಸುಂದರವಾದ ಪ್ರದೇಶದಲ್ಲಿ ಮದ್ದುರಮ್ಮಾ ದೇವಿಯು ಸಪ್ತ ಮಾತ್ರುಕೆಯರ ಜೊತೆ ನೆಲೆ ನಿಂತು ಭಕ್ತರನ್ನು ಉದ್ದರಿಸುತ್ತಿದ್ದು, ಅತ್ಯಂತ ಶಕ್ತಿಶಾಲಿ ಆದ ಈ ದೇವಿಯ ಸನ್ನಿಧಾನಕ್ಕೆ ಬಂದು ಕರ್ಪೂರವನ್ನು ಹಚ್ಚಿ ತಮ್ಮ ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಭೂತ ಪಿಶಾಚಿ ಭಾದೆ ಇಂದ ಬಳಲುವವರು ಕೂಡ ಈ ಕ್ಷೇತ್ರಕ್ಕೆ ಬಂದು ಅಮ್ಮನವರಿಗೆ ಪೂಜೆ ಮಾಡಿ ತಮ್ಮ ಸಮಸ್ಯೆಗಳಿಂದ ಮುಖ್ತಿಯ ನ್ನೂ ಪಡೆದಿದ್ದಾರೆ. ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಅಥವಾ ಇನ್ಯಾವುದೇ ಕಷ್ಟಕರ ಸಮಸ್ಯೆ ಇರ್ಲಿ, ಈ ಅಮ್ಮನವರನ್ನು ನಂಬಿ ಬಂದು ಹರಕೆ ಹೊತ್ತರೆ ಜೀವನದಲ್ಲಿ ಬಂದಿರುವ ಸಮಸ್ಯೆಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಹೀಗಾಗಿ ಮದ್ದೂರು ಮಾತ್ರವಲ್ಲದೆ ಬೆಂಗಳೂರು, ಕನಕಪುರ, ಮಾಗಡಿ, ಹಾಸನ, ಮಂಡ್ಯ, ಕೊಡಗು, ತಮಿಳುನಾಡು, ಕೇರಳದಿಂದ ಜನರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕೋರಿಕೆಗಳನ್ನು ಮಾನ್ಯ ಮಾಡುವಂತೆ ಅಮ್ಮನವರಲ್ಲಿ ಹರಕೆ ಹೊತ್ತುಕೊಳಳುತ್ತಾರೆ. ಮದ್ದೂರಿನಲ್ಲಿ ನೆಲೆಸಿರುವ ಈ ದೇವಿಯು ಕೊಡಗಿನ ಮೂಲದವಳಾಗಿದ್ದು ಆ ತಾಯಿಯು ಮದ್ದೂರಿಗೆ ಬಂದು ನೆಲೆಸಿರುವುದರ ಹಿಂದೆ ಅನೇಕ ಕಥೆಗಳನ್ನು ಹೇಳಲಾಗುತ್ತದೆ. ತುಂಬಾ ಹಿಂದೆ ಕೊಡಗನ್ನು ಆಳುತ್ತಿದ್ದ ಮನೆತನದವರು ಈ ತಾಯಿಯನ್ನು ಆರಾಧ್ಯ ದೇವಿಯಾಗಿ ಪೂಜಿಸುತ್ತಿದ್ದರು. ಆದ್ರೆ ಕಾಲಕ್ರಮೇಣ ರಾಜ ಮನೆತನದವರು ಈ ದೇವಿಗೆ ಸರಿಯಾಗಿ ಪೂಜೆ ಮಾಡದ ಕಾರಣ ತಾಯಿಯು ಕೋಪಗೊಂಡು ಸಪ್ತ ಮಾಥ್ರುಕೆಯರ ಜೊತೆ ಎತ್ತಿನ ಗಾಡಿಯ ಮೂಲಕ ಈ ಸ್ಥಳದಲ್ಲಿ ಬಂದು ನೆಲೆಸಿದಳು ಎಂದು ಒಂದು ಕಥೆಯಲ್ಲಿ ಹೇಳಿದರೆ, ಇನ್ನೊಂದು ಕಥೆಯಲ್ಲಿ ಕೊಡಗಿನ ಮೂಲದಾವಲಾದ ಈ ದೇವಿಯು ಅಡಿಕೆ ವ್ಯಾಪಾರಿ ತನ್ನ ಕಷ್ಟವನ್ನು ನೀಗಿಸು ಎಂದು ದೇವಿಗೆ ಹರಕೆ ಹೊತ್ತು ಕೊಂಡಿದ್ದರ ಪರವಾಗಿ ಅವನ ಕಷ್ಟವನ್ನು ದೂರ ಮಾಡಲು ಈ ಸಪ್ತ ಮಾಥ್ರುಕೆಯಾರ ಜೊತೆ ಗೂಡಿ ಎತ್ತಿನ ಗಾಡಿಯಲ್ಲಿ ಬಂದು ಈ ಸ್ಥಳದಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರದಲ್ಲಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಇಲ್ಲಿ ಮದ್ದುರಮ್ಮ ಜಾತ್ರೆಯು ತುಂಬಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜಾತ್ರೆ ಆರಂಭ ಆಗುವುದಕ್ಕೂ ಮುನ್ನ ದಿನ ದನಗಳ ಜಾತ್ರೆ ನಡೆಯುತ್ತದೆ, ಜಾತ್ರೆ ಸಮಯದಲ್ಲಿ ಕೊಂಡೋತ್ಸವ, ಸಿಡಿ ಉತ್ಸವ, ಉಯ್ಯಲೋತ್ಸವಾ ನಡೆಸಲಾಗುವುದು. ಈ ದೇವಿಯ ಜಾತ್ರೆ ಎಷ್ಟು ಪ್ರಸಿದ್ಧಿ ಆಗಿದೆ ಎಂದ್ರೆ, ಇಲ್ಲಿನ ಜಾತ್ರೆ ಕುರಿತಾಗಿ ಹಿರಿಯರು ಥೈಲೂರ ಕೊಂಡ ಚೆಂದ, ಹೆಮ್ಮನ ಹಳ್ಳಿಯ ಬಂಡಿ ಚೆಂದ, ಮದ್ದೂರಿನ ಸಿಡಿ ನೋಡಲು ಚೆಂದವೋ ಚೆಂದ ಎಂದು ಬಾಯ್ತುಂಬಾ ಹೊಗಳುತ್ತಾರೆ. ನಿತ್ಯವೂ ಪೂಜೆ ಗೊಳ್ಳುವ ಮದ್ದುರಮ್ಮನ ಮಹಿಮೆ ಅಪಾರ ಆಗಿದ್ದು, ದೇವಾಲಯದ ಗರ್ಭಗುಡಿ ಒಳಗಡೆ ಸರ್ವಾಲಂಕೃತಾ ಬೋಶಿತೆ ಆದ ದೇವಿಯನ್ನು ಒಂದು ಬಾರಿ ನೋಡಿದ್ರೂ ಸಾಕು ಬದುಕಿನ ಜಂಜಾಟಗಳ ಎಲ್ಲವೂ ಮಾಯವಾದಂತೆ. ಬೇಡಿ ಬಂದ ಭಕ್ತರನ್ನು ತನ್ನ ಕರುಣೆಯ ಹಸ್ತದಲ್ಲಿ ಹರಸುತ್ತಿರುವ ಈ ಪುಣ್ಯ ಆಲಯವನ್ನು ಬೆಳಿಗ್ಗೆ 6- ಸಂಜೆ 7 ಗಂಟೆ ವರೆಗೂ ದರ್ಶನ ಮಾಡಬಹುದು. ಈ ಕ್ಷೇತ್ರವು ಮಂಡ್ಯ ಜಿಲ್ಲೆಯ ಮದ್ದೂರು ಎಂಬ ಪಟ್ಟಣದಲ್ಲಿ ಇದೆ. ಈ ಆಲಯವು ಬೆಂಗಳೂರಿನಿಂದ 81 ಕಿಮೀ, ಮೈಸೂರಿನಿಂದ 64 ಕಿಮೀ, ರಾಮನಗರದಿಂದ 35 ಕಿಮೀ, ಮಂಡ್ಯದಿಂದ 19 ಕಿಮೀ ದೂರದಲ್ಲಿದೆ. ಮದ್ದೂರು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಸಾಧ್ಯವಾದರೆ ಮದ್ದೂರಿನ ಮದ್ದುರಮ್ಮಾನ ದರ್ಶನ ಮಾಡಿ. ಶುಭದಿನ.