ಸೆಪ್ಟೆಂಬರ್ 18, ಭಾನುವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಜ್ಞಾನ ಯಾವಾಗಲೂ ಕಾಮ ಎನ್ನುವುದರಿಂದ ಆವೃತವಾಗಿದ್ದು, ಜ್ಞಾನ ಇದ್ರು ಸಹ ಕಾಮಕ್ಕೆ ಒಳಗಾಗಿ ಕೆಲಸಗಳನ್ನು ಮಾಡುತ್ತಿವೀ. ಭಗವದ್ಗೀತೆಯ ಶ್ಲೋಕಗಳನ್ನು ಕೆಳುತ್ತಿರುವಾಗ ಅರೇ ಇದು ನನಗೂ ಗೊತ್ತು ನನಗೂ ಗೊತ್ತು, ತಂದೆ ತಾಯಿಗಳು ಹೇಳಿದಾಗ ಕೂಡ ಇದು ನನಗೆ ಗೊತ್ತು ಎನ್ನುವ ಭಾವನೆ ಇರುತ್ತೆ. ಆದ್ರೂ ಕೂಡ ತಿಳಿದು ಕೂಡ ನಾವು ಮಾಡಬಾರದಾ ಕೆಲಸಗಳನ್ನು ಮಾಡುತ್ತೇವೆ ಯಾವುದು ಎಲ್ಲವೂ ಅದನ್ನು ಮಾಡಿ ನಾವು ನಮ್ಮ ಬಂಧನಕ್ಕೆ ಒಳಗಾಗುತ್ತಿವಿ. ಯಾಕೆ ಅಂದ್ರೆ ನಾವು ಕಾಮ ಕ್ರೋಧಕ್ಕೆ ಒಳಗಾಗಿ ಅದರ ಮೂಲಕ ಕೆಲಸ ಮಾಡಿಬಿಡುತ್ತೇವೆ. ಇಂದು ಶುಭಕ್ಕತ್ ನಾಮ ಸಂವತ್ಸರ, ದಕ್ಷಿನಾಯಿನೆ ವರ್ಷ ಋತು, ಭಾದ್ರಪದ ಮಾಸ ಶುಕ್ಲ ಪಕ್ಷ ಇಂದು ಸೆಪ್ಟೆಂಬರ್ 18 ಭಾನುವಾರ, ಮೃಗಶಿರಾ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿನ ಅತಿ ಹೆಚ್ಚಿನ ನೆಮ್ಮದಿ ಮಧ್ಯಾನದ ವರೆಗೂ ಕೂಡ ಸಂಸಾರದಲ್ಲಿ ನೆಮ್ಮದಿ. ಮಧ್ಯಾನದ ನಂತರ ನಿಮಗೆ ಅಣ್ಣ ತಮ್ಮಂದಿರಿಂದ ಮಿತ್ರರಿಂದ ಸಂತೋಷ ಹಾಗೂ ಪರಾಕ್ರಮ ಹೆಚ್ಚು ಇರುತ್ತೆ.

 

ವೃಷಭ ರಾಶಿಯವರಿಗೆ ಇಂದು ನಿಮ್ಮಲ್ಲಿ ನೀವು ಆನಂದವನ್ನು ಪಡೆದುಕೊಳ್ಳುತ್ತೀರಿ. ಶಾಂತಿ ಮನದಲ್ಲಿ ಹಾಗೂ ಮನಸಿನಲ್ಲಿ ನೆಲೆಸಿರುತ್ತೆ. ಮಧ್ಯಾನದ ನಂತರ ನಿಮ್ಮ ಶಾಂತಿ ನಿಮ್ಮ ಪ್ರೀತಿಯನ್ನು ಕುಟುಂಬದವರಿಗೆ ಹಂಚಿ ಬಹಳ ಒಳ್ಳೆಯ ದಿನಗಳನ್ನು ನೀವು ನೋಡ್ತೀರಾ. ಮಿಥುನ ರಾಶಿಯವರಿಗೆ ಬಹಳ ಒಳ್ಳೆಯ ದಿನ. ಮಧ್ಯಾನದ ವರೆಗೆ ಸ್ವಲ್ಪ ಮನಸ್ಸಿನಲ್ಲಿ ಕಳವಳ ಇದ್ರು ಕೂಡ ಮಧ್ಯಾನದ ನಂತರ ಕಳವಳ ಎಲ್ಲವೂ ಮಾಯವಾಗಿ ಬಹಳ ಒಳ್ಳೆಯ ರೀತಿಯಲ್ಲಿ ನೀವು ಅನೇಕ ಸಾಧನೆಗಳನ್ನು ಮಾಡಿಕೊಳ್ಳುತ್ತೀರಿ. ಕರ್ಕಾಟಕ ರಾಶಿಗೆ ಮಧ್ಯಾನದ ವರೆಗೂ ಕೂಡ ಬಹಳ ಬ್ಯುಸಿ ಆಗಿ ಇರ್ತಿರಿ. ಮಿತ್ರರು ನಿಮ್ಮನ್ನು ಮುತ್ತಿ ಹಾಕಿರುತ್ತಾರೆ. ಮಧ್ಯಾನದ ಮೇಲೆ ಸ್ವಲ್ಪ ಗಂಭೀರವಾಗಿ ಇರಿ. ಒಂದೆರಡು ಹೆಜ್ಜೆ ಮುಂದಕ್ಕೆ ಇಡಲು ಯೋಚನೆ ಮಾಡಬೇಕಾದ ಪ್ರಮೇಯ ಬರಬಹುದು. ಸಿಂಹ ರಾಶಿಯವರಿಗೆ ಮಧ್ಯಾನದ ವರೆಗೂ ಕೆಲಸವನ್ನು ಬಹಳ ಯಶಸ್ವಿಯಾಗಿ ನಿಭಾಯಿಸುತ್ತಿರಿ. ಮಧ್ಯಾನದ ಮೇಲೆ ಪಾರ್ಟಿ ಮುಡ್ ಇತ್ಯಾದಿಗಳು ಶುರು ಆಗುತ್ತೆ. ಮಿತ್ರರಿಂದ ನಿಮಗೆ ಇಷ್ಟಾರ್ಥ ಸಿದ್ಧಿ. ಕನ್ಯಾ ರಾಶಿಗೆ ಮಧ್ಯಾನದ ವರೆಗೂ ಕೂಡ ಹಾಕಿದ ಸೂಚನೆಗಳು ಅನೇಕ ರೀತಿಯಲ್ಲಿ ಪ್ರಾಪ್ತಿ ಆಗುತ್ತೆ ಮನಸ್ಸಿನಲ್ಲಿ ನೆಮ್ಮದಿ ಕಾಣುತ್ತೀರಿ. ಮಧ್ಯಾನವಾದ ನಂತರ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಬಹಳ ಒಳ್ಳೆಯ ರೀತಿಯಲ್ಲಿ ಮನಸ್ಸಿಗೆ ನೀವು ನೆಮ್ಮದಿಯನ್ನು ಕಾಣುತ್ತೀರಿ. ಕಾರ್ಯವನ್ನು ಬೇಗ ಮುಗಿಸುವುದರಿಂದ. ತುಲಾ ರಾಶಿಗೆ ಮಧ್ಯಾನದ ವರೆಗೂ ಮನಸ್ಸಿನಲ್ಲಿ ಕಳವಳ ವ್ಯಾಕುಲತೆ ಅನಿಸುತ್ತೆ. ಮಧ್ಯಾನವಾದ ಮೇಲೆ ಭಾಗ್ಯೋದಯ ಆಗುತ್ತೆ ಇದರಿಂದ ಒಳ್ಳೇದು ಆಗುತ್ತೆ. ದೇವರ ಧ್ಯಾನವನ್ನು ಮಾಡುವುದನ್ನು ಮರೀಬೇಡಿ. ಒಂದಕ್ಕೆ ಹತ್ತರಷ್ಟು ಹೆಚ್ಚು ಪುಣ್ಯ ಫಲ ಪಡೆಯುತ್ತೀರಿ.

 

ವೃಶ್ಚಿಕ ರಾಶಿಗೆ ಮಧ್ಯಾನದ ವರೆಗೂ ಬೇರೆಯವರ ಸೌಹಾರ್ದತೆ ತುಂಬಾ ಚೆನ್ನಾಗಿ ಪ್ರಾಪ್ತಿ ಆಗುತ್ತಾ ಇರುತ್ತದೆ. ಹಾಗಾಗಿ ಎಲ್ಲಾ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತಿರಿ. ಮಧ್ಯಾಣವಾದ ಮೇಲೆ ಬೇರ್ಯವರಿಂದ ನನ್ನ ಜೀವನದಲ್ಲಿ ಬರಿ ಮಂಕು ಕವಿಯುತ್ತೆ ಎಂಬುದು ಅರ್ಥವಾಗುತ್ತೆ. ಮನಸ್ಸಿಗೆ ನೆಮ್ಮದಿ ಕಡಿಮೆ ಆಗುತ್ತೆ ಎರಡು ದಿನಗಳ ಕಾಲ ನೀವು ನಿಮ್ಮ ಪಾಡಿಗೆ ಇದ್ದು ಆಮೇಲೆ ಮುಂದಿನ ಯೋಚನೆ ಮಾಡಿ. ಧನಸ್ಸು ರಾಶಿಗೆ ಮಧ್ಯಾನದ ವರೆಗೆ ಸಾಮಾಜಿಕ ವ್ಯವಹಾರಗಳಲ್ಲಿ ಬಹಳ ಓಡಾಟ ಇರುತ್ತೆ. ಎಲ್ಲಾ ಕೆಲಸಗಳನ್ನೂ ನಿಭಾಯಿಸುತ್ತಿರಿ. ಮಧ್ಯಾನದ ಮೇಲೆ ಈ ಹುರುಪಿಗೆ ಸರಿಯಾದ ಪ್ರತಿಕ್ರಿಯೆ ನೀಡದೆ ಹೋದರೆ ಸರಿಯಾಗಲ್ಲ ಎಂದು ಅರ್ಥ ಆಗುತ್ತೆ. ಮಕರ ರಾಶಿಗೆ ಮಧ್ಯಾನದ ವರೆಗೆ ನಿಮ್ಮ ಕ್ರಿಯಾಶೀಲತೆ ಜಾಸ್ತಿ ಇರುತ್ತೆ. ನಿಮಗೆ ನಿಮ್ಮ ಮೆದುಳು ಬಹಳ ಉತ್ತೆಜಿತವಾಗಿ ಕೆಲಸ ಮಾಡುವಂತೆ ನೀಡುತ್ತೆ.ಮಧ್ಯಾನದ ಮೇಲೆ ವ್ಯವಹಾರಗಳಲ್ಲಿ ಚಟುವಟಿಕೆಗಳಲ್ಲಿ ಬ್ಯುಸಿ ಆಗುತ್ತಿರಿ. ಕುಂಭ ರಾಶಿಗೆ ಮಧ್ಯಾನದ ವರೆಗೆ ಕಳವಳ ಇರುತ್ತೆ. ಅಮ್ಮನ ಅರೋಗ್ಯದ ಕಡೆ ಯೋಚನೆ ಇರುತ್ತೆ. ಮಾಧ್ಯನವಾದ ಮೇಲೆ ಎಲ್ಲವೂ ಎಲ್ಲ ಯೋಚನೆಗಳು ಮಾಯವಾಗಿ ನೆಮ್ಮದಿಯನ್ನು ಕಾಣುತ್ತೀರಿ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು ದಾಂಪತ್ಯದಲ್ಲಿ ನೆಮ್ಮದಿ. ಮೀನಾ ರಾಶಿಗೆ ಮದ್ಯನದ ವರೆಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಕಡಿಮೆ ಆದಂತೆ ಅನಿಸುತ್ತೆ. ಅನೇಕ ರೀತಿಯ ವ್ಯವಹಾರಗಳನ್ನು ಮಾಡುತ್ತಿರಿ. ಮಧ್ಯಾನ ಮೇಲೆ ಕೆಲಸ ಮಾಡುವುದು ಬೇಡ. ನನ್ನ ಮನಸ್ಥಿತಿ ಸರಿ ಇಲ್ಲ ಎನ್ನುವ ಧೋರಣೆ ಅನುಸರಿಸಿದರೆ ಒಳ್ಳೆಯದು. ಒಂದೆರಡು ದಿನ ಸುಮ್ಮನೆ ಇದ್ದರ್ ಒಳ್ಳೆಯದು. ಪುನಃ ನಾಳೆ ನಿಮ್ಮ ಭವೈಶ್ಯದೊಂಡಿಗೆ ಸಿಗೋಣ. ಶುಭದಿನ.

Leave a Reply

Your email address will not be published. Required fields are marked *