ದಿನಕ್ಕೆ ಕೇವಲ ನಾಲ್ಕು ಬಾದಾಮಿ ತಿಂದರೆ ಏನಾಗುತ್ತದೆ ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ,ಬಾದಾಮಿ ಎಲ್ಲ ಡ್ರೈ ಫ್ರೂಟ್ಸ್ ಗಳಲ್ಲಿ ರಾರಾಜಿಸುತ್ತದೆ. ಇದು ಶ್ರೀಮಂತರು ಮಾತ್ರ ಬಳಸುವ ಸೂಪರ್, ಡ್ರೈ ಫ್ರೂಟ್ಸ್ ಅಂತ ಹೇಳಿದರೆ ತಪ್ಪಾಗಲಾರದು. ಒಂದು ಕೇಜಿ ಬಾದಾಮಿಗೆ 1000 ರೂಪಾಯಿ ಬೆಲೆ ಬಾಳುತ್ತದೆ. ಹೀಗಾಗಿ ಬಡವರು ಇದನ್ನು ಹೆಚ್ಚಾಗಿ ಖರೀದಿ ಮಾಡುವುದಿಲ್ಲ ಅದಕ್ಕಾಗಿ ಇದು ಶ್ರೀಮಂತರಿಗೆ ಮಾತ್ರ ಖರೀದಿಸುವ ಶಕ್ತಿ ಇದೆ ಗೆಳೆಯರೇ. ದಿನಕ್ಕೆ ಕೇವಲ ನಾಲ್ಕು ಬಾದಾಮಿ ತಿಂದರೆ ಸಾಕು ಮಿತ್ರರೇ ನಿಮಗೆ ಕನಿಷ್ಠ ಪಕ್ಷ ಒಂದು ತಿಂಗಳು ಒಂದು ಕೇಜಿ ಬಾದಾಮಿ ನಿಮ್ಮ ಮನೆಯಲ್ಲಿ ಒಂದು ತಿಂಗಳಿನವರೆಗೆ ಬರುತ್ತದೆ. ಬಾದಾಮಿ ಎಷ್ಟು ಪೋಷಕಾಂಶಗಳ ಆಹಾರ. ಇದು ಖನಿಜಗಳ ಮಹಾಪೂರವೇ ಅಂತ ಹೇಳಬಹುದು. ಇದು ದೈಹಿಕ ಆರೋಗ್ಯ ಮತ್ತು ಮನಸ್ಸಿನ ಆರೋಗ್ಯವನ್ನು ವೃದ್ಧಿಸುತ್ತದೆ. ಬಾದಾಮಿಯಲ್ಲಿ 16.5% ಪ್ರೊಟೀನ್ ಅಂಶವಿದೆ. ಮತ್ತು ಬಾದಾಮಿ ತಿನ್ನುವುದರಿಂದ ದೇಹಕ್ಕೆ ಯಾವುದೇ ಕಾರ್ಯ ನೀಡದೆ ಬಾದಾಮಿಯು ಶಕ್ತಿ ನೀಡುವುದು. ಇದರ ಜೊತೆಗೆ ಬಾದಾಮಿ ತಿನ್ನುವುದರಿಂದ ಪಿತ್ತವನ್ನು ಹೆಚ್ಚಿಸುವ ಗುಣವನ್ನೂ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳು ಇದ್ದು ಇದು ಮೆದುಳಿನ ವಿಕಾಸವನ್ನು ಉತ್ತಮಗೊಳಿಸುತ್ತದೆ.

 

ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಈ ಬಾದಾಮಿಯನ್ನು ತಿನ್ನಲು ನೀಡುವುದರಿಂದ ಅವರ ಮೆದುಳಿನ ವಿಕಸನ ಚೆನ್ನಾಗಿ ಆಗುತ್ತದೆ. ಮತ್ತು ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಬಾದಾಮಿ ಆಲಜೈಮರ್ ಎಂಬ ರೋಗವನ್ನು ನಿಯಂತ್ರಿಸಲು ತುಂಬಾನೇ ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಎಣ್ಣೆಯ ಅಂಶ ನರಗಳ ಪ್ರಚೋದನೆಗಳಿಗೆ ಪ್ರಯೋಜನಕಾರಿ. ಬಾದಾಮಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.ಬಾದಾಮಿಯು ಆರೋಗ್ಯಕಾರಿ ಚಯಾಪಚಯ ಕ್ರಿಯೆಗೆ ನೆರವಾಗುವುದು ಮತ್ತು ಬೊಜ್ಜು ಕಡಿಮೆ ಮಾಡುವುದು. ಅಧಿಕ ಪ್ರಮಾಣದ ಹೆಚ್.ಡಿ ಪ್ರೊಟೀನ್ ಅನ್ನು ಉತ್ಪತ್ತಿ ಮಾಡುತ್ತದೆ. ಈ ಸಮತೋಲನ ಆರೋಗ್ಯಕ್ಕೆ ಬಹಳ ಮುಖ್ಯ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನೂ ಈ ಬಾದಾಮಿಯಲ್ಲಿ ಅನೇಕ ಬಗೆಯ ಖನಿಜಗಳ ಮೂಲ ಸತ್ವವಿದೆ. ಇದರಲ್ಲಿ ಇರುವ ಫಾಸ್ಫರಸ್ ಅಂಶವು ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಬುಡದಿಂದ ಶಕ್ತಿಯನ್ನು ಹೆಚ್ಚಿಸುತ್ತವೆ. ಟೊಳ್ಳು ಮೂಳೆಗಳನ್ನು ಅಧಿಕವಾಗಿ ಬಲ ಪಡಿಸುತ್ತದೆ.

 

ಇದರಲ್ಲಿರುವ ಫೈಬರ್ ಅಂಶವು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಬಾದಾಮಿ. ಇನ್ನೂ ಬೆಳೆಯುವ ಮಕ್ಕಳಿಗೆ ಬಾದಾಮಿಯು ತುಂಬಾ ಪರಿಣಾಮಕಾರಿ ಆಗಿದೆ ಮತ್ತು ಇದು ಬುದ್ಧಿ ಬೆಳವಣಿಗೆ ಸಹಕಾರಿ. ಆಯುರ್ವೇದದ ಪ್ರಕಾರ ಬಾದಾಮಿಯಲ್ಲಿ ಶುದ್ಧತೆ ಹೆಚ್ಚಾಗಿದೆ ಮತ್ತು ಇದರಿಂದ ಧನಾತ್ಮಕ ಭಾವನೆ ಮತ್ತು ಸಂತೋಷ ನೀಡುವುದು. ಇದರಿಂದ ಮೆದುಳು ತುಂಬಾ ಶಾಂತ ಹಾಗೂ ಆರೋಗ್ಯಕಾರಿ ಆಗಿರುವುದು.ಬಾದಾಮಿ ಸೇವನೆ ಮಾಡಿದ ಮೇಲೆ ಚೆನ್ನಾಗಿ ನೀರು ಕುಡಿಯಬೇಕು ಇದರಿಂದ ಪಚನ ಕ್ರಿಯೆ ಸರಿಯಾಗಿ ಆಗುತ್ತದೆ. 2-3 ಬಾದಾಮಿಯನ್ನು ತಿಂದರೆ ಜೀರ್ಣಕ್ರಿಯೆಗೆ ನೆರವು ಆಗುತ್ತದೆ
ದೀರ್ಘಕಾಲಿಕ ಮಲಬದ್ಧತೆ ಮತ್ತು ದೀರ್ಘಕಾಲಿಕ ಕೆಮ್ಮನ್ನು ಇದು ನಿವಾರಣೆ ಮಾಡುವುದು. ಬಾದಾಮಿಯಲ್ಲಿ ನರ ವ್ಯವಸ್ಥೆಯನ್ನು ಉತ್ತೇಜಿಸುವಂತಹ ಗುಣಗಳು ಇವೆ ಮತ್ತು ಇದು ದೇಹದ ಅಂಗಾಂಶಗಳಿಗೆ ಪೋಷಣೆ ನೀಡುವುದು. ಸ್ನಾಯುಗಳನ್ನು ಬಲಪಡಿಸುವುದು ಮತ್ತು ಸಂಪೂರ್ಣವಾಗಿ ದೇಹದ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಉತ್ತಮವಾದ ಕೊಲೆಸ್ಟ್ರಾಲ್ ಇರುವುದರಿಂದ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಹಾಗೂ ಇದನ್ನು ಸೇವನೆ ಮಾಡುವುದರಿಂದ ಗುಪ್ತಚರ ಆಸಕ್ತಿ ಮತ್ತಷ್ಟು ಹೆಚ್ಚಿಸುತ್ತದೆ. ಬಾದಾಮಿಯಲ್ಲಿ ವಿಟಮಿನ್ ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಸತು ಅಂಶಗಳು ಅಡಗಿವೆ. ಇತರ ಬೀಜಗಳಿಗೆ ಹೋಲಿಸಿದಾಗ ಹೆಚ್ಚಿನ ಜೀವ ಸತ್ವಗಳು ಪೌಷ್ಟಿಕತೆ ಅಂಶಗಳು ಇರುವುದು ಬಾದಾಮಿಯಲ್ಲಿ. ಅಷ್ಟೇ ಅಲ್ಲದೇ ಇದು ಸೌಂದರ್ಯ ವರ್ಧಕವಾಗಿ ಕೆಲಸವನ್ನು ಮಾಡುತ್ತದೆ. ಚರ್ಮದ ಆರೈಕೆ ಮತ್ತು ಕೂದಲಿನ ಬೆಳವಣಿಗೆಗೆ ಇದು ಹೇಳಿ ಮಾಡಿಸಿದ ಸೂಪರ್ ಡ್ರೈ ಫ್ರೂಟ್ಸ್ ಅಂತ ಹೇಳಬಹುದು. ಆದರೆ ಇದನ್ನು ನೀವು ಸೇವನೆ ಮಾಡುವ ಮುನ್ನ ಸೂಕ್ಷ್ಮವಾಗಿ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.ಶುಭದಿನ.

Leave a Reply

Your email address will not be published. Required fields are marked *