ಸೀತಾಫಲ ಹಣ್ಣಿನಿಂದ ಆಗುವ ಆರೋಗ್ಯಕರ ಲಾಭಗಳು!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಹಣ್ಣುಗಳು ವಿವಿಧ ರೀತಿಯಲ್ಲಿ ವಿವಿಧ ಆಕಾರದಲ್ಲಿ ನಮಗೆ ದೊರೆಯುತ್ತವೆ. ಅದರಲ್ಲಿ ಸೀತಾಫಲ ಹಣ್ಣು ಕೂಡ ಒಂದಾಗಿದೆ. ನಿಮಗೆ ಗೊತ್ತೇ ಸೀತಾಫಲ ಹಣ್ಣು ಗುಚ್ಛ ಗುಚ್ಛವಾಗಿ ಇರುವುದರಿಂದ ಇದನ್ನು ಬಿಡಿಸಿ ಬಿಡಿಸಿ ತೆಗೆದು ತಿನ್ನಲು ಬಹಳ ಕಷ್ಟವಾದುದ್ದರಿಂದ ಇದನ್ನು ಹೆಚ್ಚಾಗಿ ತಿನ್ನಲು ಇಷ್ಟ ಪಡುವುದಿಲ್ಲ. ಒಂದು ಸೀತಾಫಲ ತಿನ್ನುವುದರಿಂದ ದೇಹಕ್ಕೆ ಎಷ್ಟೆಲ್ಲ ಲಾಭಗಳು ಆಗುತ್ತವೆ ಎಂದು ಮಾತಿನಲ್ಲಿ ಹೇಳಲು ಆಗುವುದಿಲ್ಲ. ಹೌದು ನಿಜಕ್ಕೂ ಈ ಹಣ್ಣು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ವಿಷಯದಲ್ಲಿ ಸೀತಾಫಲ ಹಣ್ಣು ತಿನ್ನುವುದರಿಂದ ಏನೆಲ್ಲಾ ಉಪಯೋಗವಿದೆ ಎಂಬುದನ್ನು ತಿಳಿದುಕೊಳ್ಳೋಣ. ಅದು ಯಾವ ವಿಷಯ ಎಂದು ತಿಳಿಸಿ ಕೊಡುತ್ತೇವೆ. ಸೀತಾಫಲದಲ್ಲಿ ರೈಬೋ ಫ್ಲೇವಿನ್ ಹಾಗೂ ವಿಟಮಿನ್ ಸಿ ಮತ್ತು ಎ ಹೇರಳವಾಗಿದೆ. ಇದೇ ಕಾರಣಕ್ಕೆ ಇದು ಕಣ್ಣಿನ ಆರೋಗ್ಯಕ್ಕೆ ಮತ್ತು ಕಣ್ಣಿನ ಉತ್ತಮವಾದ ದೃಷ್ಟಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಮತ್ತು ಅಧಿಕವಾದ ಕೊಬ್ಬು ಶೇಖರಣೆ ಆಗಿರುವುದನ್ನು ಕಡಿಮೆ ಮಾಡುತ್ತದೆ.

 

ಸೀತಾಫಲ ದಲ್ಲಿ ಪ್ರೊಟೀನ್ ಕ್ಯಾಲ್ಷಿಯಂ ಮ್ಯಾಗ್ನಿಷಿಯಂ ಕಬ್ಬಿಣ ಬೀಟ್ರೂಟ್ ಶರ್ಕರ ಪಿಸ್ಟ್ ಹೇರಳವಾಗಿದೆ. ಇದು ದೇಹಕ್ಕೆ ದುಪ್ಪಟ್ಟು ಶಕ್ತಿಯನ್ನು ನೀಡುತ್ತದೆ. ಜೊತೆಗೆ ಮಕ್ಕಳಿಗೆ ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ. ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು. ಮುಖ್ಯವಾಗಿ ನಾರಿನ ಅಂಶ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಶರೀರದ ಮೇಲೆ ಕುರುಹು ಗಳು ಆಗಿದ್ದರೆ ಈ ಸೀತಾಫಲ ಅನ್ನು ತಿನ್ನುವುದರಿಂದ ಖಂಡಿತವಾಗಿ ಕುರುಹು ಕಡಿಮೆ ಆಗುತ್ತದೆ. ಇನ್ನೂ ಗರ್ಭಿಣಿಯರಿಗೆ ಈ ಸೀತಾಫಲ ಹಣ್ಣು ಹೇಳಿ ಮಾಡಿಸಿದ ಸೂಪರ್ ಫ್ರೂಟ್ ಅಂತ ಹೇಳಬಹುದು. ಈ ಹಣ್ಣು ಗರ್ಭವತಿಯರು ಸೇವನೆ ಮಾಡಿದರೆ, ಗರ್ಭಪಾತ ಆಗುವ ಸಾಧ್ಯತೆ ತುಂಬಾನೇ ಕಡಿಮೆ ಇರುತ್ತದೆ. ಹೀಗಾಗಿ ನೀವು ಆರೋಗ್ಯವಾಗಿ ಗರ್ಭಧಾರಣೆ ಹೊಂದಬಹುದು.

 

ಇನ್ನೂ ಒಳಗಡೆ ಇರುವ ಮಗುವಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಮಗು ತುಂಬಾನೇ ಆರಾಮದಾಯಕ ಆಗಿ ಬೆಳೆಯುತ್ತದೆ. ಮಗುವಿನ ಮೆದುಳು ತುಂಬಾನೇ ಆರೋಗ್ಯವಾಗಿ ಬೆಳೆಯುತ್ತದೆ.
ಗರ್ಭಿಣಿಯರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಈ ಸೀತಾಫಲ ಹಣ್ಣು ತಿನ್ನುವುದರಿಂದ ಹೊಟ್ಟೆಯಲ್ಲಿ ಆಗುವ ನೋವು ಅನ್ನು ನಿವಾರಣೆ ಮಾಡಬಹುದು. ಮತ್ತು ಮುಖ್ಯವಾಗಿ ತಲೆಯಲ್ಲಿ ಆಗಿರುವ ಸೀರು ಮತ್ತು ಹೇನುಗಳನ್ನು ಹೊಟ್ಟು ಎಲ್ಲವನ್ನು ತೆಗೆದು ಹಾಕುತ್ತದೆ. ಸೀತಾಫಲ ಹಣ್ಣಿನ ರಸವನ್ನು ಹಲ್ಲುಗಳಿಗೆ ಹಚ್ಚಿದರೆ ಖಂಡಿತವಾಗಿ ಹಲ್ಲು ನೋವು ನಿವಾರಣೆ ಆಗುತ್ತದೆ. ಒಸಡುಗಳು ಗಟ್ಟಿ ಆಗುತ್ತವೆ.
ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ ಮತ್ತು ಸೀತಾಫಲ ಹಣ್ಣು ಜೀರ್ಣಶಕ್ತಿ ವೃದ್ಧಿಸುತ್ತದೆ. ಅದಕ್ಕಾಗಿ ಸೀತಾಫಲ ಹೆಚ್ಚು ಹಣ್ಣಾದಾಗ ತಿನ್ನುವುದು ಒಳ್ಳೆಯದು. ಹಸಿ ಕಾಯಿ ಇದ್ದಾಗ ತಿನ್ನುವುದು ರುಚಿಯಾಗಿ ಇರುವುದಿಲ್ಲ. ಹೀಗಾಗಿ ಹಣ್ಣು ತಂದು ಹಣ್ಣಿನಿಂದ ಲಾಭವನ್ನು ಪಡೆದುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *