ನಮಸ್ತೇ ಕನ್ನಡ ನಾಡಿನ ಆತ್ಮೀಯ ಗೆಳೆಯರೇ, ದಾಲ್ಚಿನ್ನಿ ನಮ್ಮ ಮಸಾಲೆ ಪದಾರ್ಥಗಳಲ್ಲಿ ಒಂದು ಅಂತ ಹೇಳಬಹುದು. ಹೌದು ಪ್ರತಿಯೊಂದು ಮಸಾಲೆ ಪದಾರ್ಥವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತವೆ. ಇನ್ನೂ ಸಾಮಾನ್ಯವಾಗಿ ಹಾಲು. ಹಾಲು ಎಲ್ಲರಿಗೂ ಗೊತ್ತು ಜೊತೆಗೆ ಇದರಲ್ಲಿ ಕ್ಯಾಲ್ಷಿಯಂ ಪೋಷಕಾಂಶಗಳ ಆಗರವಾಗಿದೆ. ಇನ್ನೂ ಇಂದಿನ ಲೇಖನದ ಮೂಲ ಉದ್ದೇಶ ಏನೆಂದರೆ ಹಾಲಿನಲ್ಲಿ ದಾಲ್ಚಿನ್ನಿ ಹಾಕಿ ಕುಡಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಸಿಗುತ್ತವೆ ಅಂತ ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಅಡುಗೆಗೆ ಬಳಕೆ ಮಾಡುವ ದಾಲ್ಚಿನ್ನಿ ಅನ್ನು ನಾವು ಕೆಲವು ಭಾರೀ ಮನೆಮದ್ದುಗಳಾಗಿ ಕೂಡ ಬಳಕೆ ಮಾಡಬಹುದು. ದಾಲ್ಚಿನ್ನಿ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳು ಸಿಗುತ್ತವೆ. ಜೊತೆಗೆ ಹಾಲಿನಲ್ಲಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳ ಸಹಕಾರಿ ಮತ್ತು ಲಾಭಕಾರಕ. ದಾಲ್ಚಿನ್ನಿ ಕೆಲವು ಅನಾರೋಗ್ಯವನ್ನು ತಡೆಗಟ್ಟುವ ಮತ್ತು ಕಾಯಿಲೆಗಳನ್ನು ದೂರ ಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ.
ದಾಲ್ಚಿನ್ನಿಯನ್ನು ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಇವೆರಡರಲ್ಲಿ ಇರುವ ಔಷಧೀಯ ಗುಣಗಳು ನಮ್ಮ ಆರೋಗ್ಯವನ್ನು ವೃದ್ದಿಸುವಲ್ಲಿ ಎರಡನೆಯ ಮಾತಿಲ್ಲ ಮಿತ್ರರೇ. ದಾಲ್ಚಿನ್ನಿ ಉರಿಊತ ಶಮನಕಾರಿ ಗುಣವನ್ನೂ ಹೊಂದಿದೆ. ಹಾಗೆಯೇ ಹಾಲು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವೆರಡೂ ಪದಾರ್ಥಗಳನ್ನು ಮಿಶ್ರಣ ಮಾಡಿ ಕುಡಿದಾಗ ಸಿಗುವ ಆರೋಗ್ಯಕರ ಪ್ರಯೋಜನಗಳು ಅತ್ಯದ್ಬುತ ಮತ್ತು ಬಹಳ ಪ್ರಯೋಜನಕಾರಿ. ಹಾಗಾದರೆ ಈ ದಾಲ್ಚಿನ್ನಿ ಹಾಲನ್ನು ಹೇಗೆ ತಯಾರಿಸುವುದು ಅಂತ ಹೇಳುವುದಾದರೆ ದಾಲ್ಚಿನ್ನಿ ಪುಡಿಯನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯಬೇಕು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ದಾಲ್ಚಿನ್ನಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನಗಳು ಆಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ದಾಲ್ಚಿನ್ನಿ ಅನ್ನು ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ಶೀತ ನೆಗಡಿಂ ಜ್ವರ ನಿಯಂತ್ರಣಕ್ಕೆ ಬರುತ್ತದೆ. ದಾಲ್ಚಿನ್ನಿ ನೆಗಡಿ ಮತ್ತು ಜ್ವರಕ್ಕೆ ಉತ್ತಮ ಮನೆಮದ್ದು ಆಗಿ ಕೆಲಸವನ್ನು ಮಾಡುತ್ತದೆ.
ದಾಲ್ಚಿನ್ನಿ ಅನ್ನು ಹಾಲಿನಲ್ಲಿ ಹಾಕಿ ಬೆರೆಸಿ ಕುಡಿದರೆ ಸಾಕು ನಿಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಬಹಳ ಉತ್ತಮ. ಜೀರ್ಣಕ್ರಿಯೆಗೆ ಉತ್ತಮ. ದಾಲ್ಚಿನ್ನಿ ಮತ್ತು ಹಾಲು ಜೀರ್ಣಕ್ರಿಯೆಗೆ ಉತ್ತಮ ಸಹಕಾರಿ. ಇದರಲ್ಲಿ ಇರುವ ಕೆಲವು ಅಂಶಗಳು ಜೀರ್ಣಕ್ರಿಯೆಯ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಅಜೀರ್ಣತೆ ಇಂದ ಉಂಟಾಗುವ ಹೊಟ್ಟೆಯ ಸಮಸ್ಯೆ ಆದ ಹೊಟ್ಟೆ ಉಬ್ಬರ ಹೊಟ್ಟೆ ನೋವು ಉರಿ ಊತ ಎಲ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಅಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಅದಕ್ಕಾಗಿ ಮಧುಮೇಹಿಗಳು ಪ್ರತಿನಿತ್ಯವೂ ಹಾಲಿನಲ್ಲಿ ಸ್ವಲ್ಪ ದಾಲ್ಚಿನ್ನಿ ಹಾಕಿಕೊಂಡು ಕುದಿಸಿ ಕುಡಿದರೆ ಸಾಕು ಖಂಡಿತವಾಗಿ ಶುಗರ್ ಲೆವೆಲ್ ನಿಯಂತ್ರಣಕ್ಕೆ ಬರುತ್ತದೆ. ದಾಲ್ಚಿನ್ನಿ ಮತ್ತು ಹಾಲಿನಲ್ಲಿ ಇರುವ ಕೆಲವೊಂದು ಅಂಶಗಳು ಸುಖವಾದ ನಿದ್ರೆಗೆ ಜಾರುವಂತೆ ಮಾಡುತ್ತದೆ. ನೀವೇನಾದರೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತವಾಗಿ ರಾತ್ರಿ ಮಲಗುವಾಗ ದಾಲ್ಚಿನ್ನಿ ಹಾಲನ್ನು ಕುಡಿದು ಮಲಗಿ ಹಾಗೂ ಉತ್ತಮವಾದ ನಿದ್ರೆಯನ್ನು ಪಡೆದುಕೊಳ್ಳಿ.
ದಾಲ್ಚಿನ್ನಿ ಹಾಲಿನಲ್ಲಿ ಮೂಳೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಮುಂದೆ ನಿಮಗೆ ಅರ್ಥಟೀಸ್ ನಂತಹ ಮೂಳೆಗಳಿಗೆ ಸಂಭಂದ ಪಟ್ಟ ಸಮಸ್ಯೆಯನ್ನು ಹೋಗಲಾಡಿಸಲು ಅನುವಾಗುತ್ತದೆ ಈ ದಾಲ್ಚಿನ್ನಿ ಹಾಲು. ಖಂಡಿತವಾಗಿ ಒಮ್ಮೆ ಟ್ರೈ ಮಾಡಿ ನೋಡಿ ಶುಭದಿನ.