ಬೇಸಿಗೆ ಕಾಲದಲ್ಲಿ ನಿಮ್ಮ ಆರೋಗ್ಯ ಮತ್ತು ಯೌವ್ವನ ಹೆಚ್ಚಿಸುವ ಅದ್ಭುತವಾದ 5 ಜ್ಯೂಸ್ ಗಳು!!!

ಆರೋಗ್ಯ

ನಮಸ್ತೇ ಕನ್ನಡ ನಾಡಿನ ಸಮಸ್ತ ಮಿತ್ರರಿಗೆ, ಬೇಸಿಗೆ ಕಾಲದಲ್ಲಿ ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟವಾಗುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವ ಜನರಿಗೆ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಮತ್ತು ಸಮಯ ಕೊಡುವುದಕ್ಕೆ ಆಗುವುದಿಲ್ಲ. ಅಂಥಹ ಸಮಯದಲ್ಲಿ ಏನು ಮಾಡಬೇಕು ಗೊತ್ತೇ? ಅದರಲ್ಲೂ ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯನ್ನು ಹೆಚ್ಚಿಸುವ ಮತ್ತು ನಿಮ್ಮ ಯೌವ್ವನವನ್ನು ವೃದ್ಧಿಸುವ ಕೆಲವು ಹೋಂ ಮೆಡ್ ಪಾನೀಯಗಳನ್ನು ಅಥವಾ ಜ್ಯೂಸ್ ಅನ್ನು ತಿಳಿಸಿಕೊಡುತ್ತೇವೆ ಬನ್ನಿ. ಪ್ರತಿಯೊಬ್ಬ ಮನುಷ್ಯನೂ ತಾನು ದೈಹಿಕವಾಗಿ ಫೀಟ್ ಆಗಿರಬೇಕು ಸುಂದರವಾಗಿ ಇರಬೇಕು ಸದೃಢವಾದ ಮೈಕಟ್ಟು ಎತ್ತರವನ್ನು ಹೊಂದಬೇಕು ಅಂತ ಆಸೆ ಇರುತ್ತದೆ ಜೊತೆಗೆ ಇದಕ್ಕಾಗಿ ಅವರು ಹರಸಾಹಸ ವಾನ್ನು ಮಾಡುತ್ತಾರೆ ಅಂದರೆ ವ್ಯಾಯಾಮ ಜಿಮ್ ಡಯೆಟ್ ಮತ್ತು ಕೆಲಸವನ್ನು ಮಾಡುತ್ತಾರೆ. ನಾವು ಶಕ್ತಿಶಾಲಿ ಆಗಿರಬೇಕಾದರೆ ಕೇವಲ ಆಹಾರವನ್ನು ಅಥವಾ ಊಟವನ್ನು ಮಾಡಿದರೆ ಸಾಕಾಗುವುದಿಲ್ಲ ಜೊತೆಗೆ ಪೋಷಕಾಂಶ ವಿಟಮಿನ್ಸ್ ಖನಿಜಗಳು ಹೊಂದಿರುವ ಹಣ್ಣಿನ ಜ್ಯೂಸ ಗಳನ್ನು ಕುಡಿಯುವುದು ಕೂಡ ಬಹಳ ಉತ್ತಮ. ಇವುಗಳು ನೀವು ಆರೋಗ್ಯವಾಗಿ ಇರುವುದನ್ನು ಮಾತ್ರ ಮಾಡುವುದಲ್ಲದೆ ನಿಮ್ಮನ್ನು ಯೌವ್ವನದಂತೆ ಇಡಲು ಬಹಳಷ್ಟು ಸಹಾಯ ಮಾಡುತ್ತವೆ.

 

ತಾಜಾ ಹಣ್ಣಿನ ಜ್ಯೂಸ್ ಅನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲಾ ಬಗೆಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಆರೋಗ್ಯ ಮತ್ತು ಸೌಂದರ್ಯ ಎರಡು ಕೂಡ ವೃದ್ಧಿ ಆಗುತ್ತದೆ. ಮೊದಲನೆಯ ಹಣ್ಣಿನ ಜ್ಯೂಸ್ ಯಾವುದು ಅಂತ ಹೇಳುವುದಾದರೆ, ದಾಳಿಂಬೆ ಹಣ್ಣಿನ ಜ್ಯೂಸ್, ಇದರಲ್ಲಿ ಪೋಲಿಫಿನನ್ಸ್ ಎಂಬ ಅಂಶವಿದ್ದು ಇದರ ಜೊತೆಗೆ ಆಂಟಿ ಆಕ್ಸಿಡೆಂಟ್ ಗಳು ಇವೆ. ಇದನ್ನು ಸೇವನೆ ಮಾಡುವುದರಿಂದ ಉರಿ ಊತ ಕ್ಯಾನ್ಸರ್ ಅಧಿಕ ರಕ್ತದೊತ್ತಡ ದೂರ ಮಾಡುತ್ತದೆ. ಹಾಗೂ ನಿಮ್ಮ ದೇಹದಲ್ಲಿ ರಕ್ತಹೀನತೆ ಸಮಸ್ಯೆ ಇದ್ದರೆ ಅದನ್ನು ದೂರ ಮಾಡುತ್ತದೆ. ಅನೀಮಿಯಾ ರೋಗದಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಇನ್ನೂ ಕ್ಯಾರೆಟ್ ಜ್ಯೂಸ್. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮತ್ತು ಕ್ಯಾರೆಟ್ ನಲ್ಲಿ ಇರುವ ಲ್ಯುಟಿನ್ ಎಂಬ ಅಂಶ ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಕ್ಯಾರೆಟ್ ನಲ್ಲಿ ಬೀಟಾ ಕೆರೋಟಿನ್ ಅಂಶವು ಯತ್ತೆಚ್ಚವಾಗಿದೆ. ಆದ್ದರಿಂದ ನಿತ್ಯವೂ ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯಿರಿ. ಇಲ್ಲವಾದರೆ ಹಾಗೆಯೇ ತಿನ್ನಿ.

 

ಇನ್ನೂ ಬೀಟ್ರೂಟ್ ಜ್ಯೂಸ್. ಈ ಜ್ಯೂಸ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವುದಿಲ್ಲ. ಆದರೂ ಅನಿವಾರ್ಯವಾದರೂ ಕೂಡ ಇದು ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಬೀಟ್ರೂಟ್ ರಸ ನಮ್ಮ ಯೌವ್ವನವನ್ನೂ ವೃದ್ಧಿಸುತ್ತದೆ.ಬೀಟ್ರೂಟ್ ರಸ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾತಿಯಾಗಿದೆ. ಇನ್ನೂ ಗೋಧಿ ಹುಲ್ಲಿನ ಜ್ಯೂಸ್. ಈ ಜ್ಯೂಸ್ ನಲ್ಲಿ ಸ್ವಲ್ಪವೂ ರುಚಿ ಇಲ್ಲದೇ ಇದ್ದರೂ ಕೂಡ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಸಿರು ಪತ್ರಗಳಲ್ಲಿ ಇರುವ ಕ್ಲೋರೊಫಿಲ್ ಎಂಬ ಅಂಶವು ಈ ಗೋಧಿ ಹುಲ್ಲಿನಲ್ಲಿದೆ. ಇದರಲ್ಲಿ ಉರಿ ಊತ ವಿರೋಧಿ ಗುಣಗಳನ್ನು ಹೊಂದಿದೆ ಹಾಗೂ ಅನೇಕ ವಯೋಸಾಯ ಕಾಯಿಲೆಗಳಿಂದ ದೂರವಿರಬಹುದು. ಆದ್ದರಿಂದ ಕನಿಷ್ಠ ವಾರದಲ್ಲಿ ಒಂದು ಬಾರೀ ಸೇವನೆ ಮಾಡಿ. ಸೌತೆಕಾಯಿ ಜ್ಯೂಸ್. ಹೌದು ಇದು ಕೂಡ ಬೇಸಿಗೆ ಕಾಲದಲ್ಲಿ ಸಿಗುವ ರಸಭರಿತವಾದ ತರಕಾರಿ ಆಗಿದೆ. ಇದರ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ ಹಾಗೂ ನಿಮ್ಮ ದೇಹವು ತಂಪಾಗಿ ಇರುತ್ತದೆ. ಇದರಿಂದ ನಿಮಗೆ ಯಾವುದೇ ಕಾರಣಕ್ಕೂ ಸಮಸ್ಯೆ ಆಗುವುದಿಲ್ಲ ಜೊತೆಗೆ ನಿಮ್ಮ ತ್ವಚೆಯ ಆರೋಗ್ಯವೂ ವೃದ್ಧಿ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *