ಕೆಲವೇ ಸೆಕೆಂಡುಗಳಲ್ಲಿ ಫಲಿತಾಂಶ ನೀಡುವ ಅದ್ಭುತವಾದ ಸರಳವಾದ ಬ್ಯೂಟಿ ಟಿಪ್ಸ್ ಗಳು.ಇಲ್ಲಿವೆ ನೋಡಿ.

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಸುಂದರವಾಗಿ ಸೌಂದರ್ಯವಾಗಿ ಕಾಣಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಇದು ಒಂದು ಪ್ರತಿಯೊಬ್ಬರ ಆಸೆ ಅಲ್ಲದೇ ಕನಸು ಕೂಡ ಆಗಿರುತ್ತದೆ.
ಅದರಲ್ಲೂ ಮಹಿಳೆಯರಿಗೆ ಎಷ್ಟೇ ಸುಂದರವಾಗಿ ಇದ್ದರೂ ಸಾಲದು!! ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಆದರೆ ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನಿಮ್ಮ ಸೌಂದರ್ಯ ದೀರ್ಘಕಾಲದವರೆಗೆ ಉಳಿಯುತ್ತಿಲ್ಲವೇ. ಹಾಗಾದರೆ ನಾವು ತಿಳಿಸುವ ಈ ಬ್ಯೂಟಿ ಟಿಪ್ಸ್ ಗಳನ್ನು ನೋವು ಫಾಲೋ ಮಾಡಿ ನೋಡಿ ಖಂಡಿತವಾಗಿ ನಿಮಗೆ ಫಲಿತಾಂಶ ಸಿಗುತ್ತದೆ. ಹಾಗಾದರೆ ಬನ್ನಿ ಅವುಗಳು ಯಾವುವು ಅಂತ ಒಂದೊಂದಾಗಿ ತಿಳಿಯೋಣ ಬನ್ನಿ. ಹೌದು ನಾವು ನಮ್ಮ ಅಂದವನ್ನು ಅಥವಾ ಸೌಂದರ್ಯವನ್ನು ಹೆಚ್ಚಿಸಲು ಒಂದಲ್ಲ ನೂರು ದಾರಿಗಳನ್ನು ಹುಡುಕುತ್ತೇವೆ. ಇವುಗಳ ಮಧ್ಯೆ ನೀವು ನಾವು ತಿಳಿಸುವ ಈ ಬ್ಯೂಟಿ ಟ್ರಿಕ್ಸ್ ಗಳನ್ನ್ ಅನುಸರಣೆ ಮಾಡಬಹುದು. ಇವುಗಳನ್ನು ಮಾಡಲು ಬಹಳ ಕಷ್ಟಪಡಬೇಕಾಗಿಲ್ಲ ಗೆಳೆಯರೇ. ಬಹಳ ಸರಳವಾದ ಮತ್ತು ಸುಲಭವಾದ ಟ್ರಿಕ್ಸ್ ಗಳು. ಬಹಳ ಬೇಗನೇ ನಿಮಗೆ ರಿಸಲ್ಟ್ ಅನ್ನು ಕೊಡುತ್ತವೆ. ಅದಕ್ಕಾಗಿ ನೀವು ಕೂಡ ಇವುಗಳನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಮೊದಲನೆಯ ಟ್ರಿಕ್ಸ್ ಅರಿಶಿಣ ಚಂದನ ಮತ್ತು ಹಾಲು. ಇವೆಲ್ಲವನ್ನು ಮಿಕ್ಸ್ ಮಾಡಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ.

 

ಈ ಲೇಪನವನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಅಂದರೆ ಮುಖಕ್ಕೆ ಹಚ್ಚಿಕೊಂಡ ಲೇಪನ ಚೆನ್ನಾಗಿ ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖಕ್ಕೆ ಫ್ರೆಶ್ ನೆಸ್ ಬರುತ್ತದೆ ಹಾಗೂ ಮುಖವೂ ಗ್ಲೋ ಆಗಿ ಕಾಣುತ್ತದೆ. ಇನ್ನೂ ಎರಡನೆಯ ಬ್ಯೂಟಿ ಟಿಪ್ಸ್ ಯಾವುದು ಅಂದರೆ ಮೊಸರಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಬಳಿಕ ಇದರಲ್ಲಿ ಗ್ರೀನ್ ಟೀ ಮಾಡಿ ಸೋಸಿ ಅದರ ರಸವನ್ನು ಇದರಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ನಯವಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದರಿಂದ ಸುಂದರವಾದ ತ್ವಚೆ ನಿಮ್ಮದಾಗುತ್ತದೆ. ಇನ್ನೂ ನೀವೇನಾದರೂ ಅಥವಾ ನಿಮ್ಮ ಮನೆಯಲ್ಲಿ ನಾಳೆ ಸಮಾರಂಭ ಅಥವಾ ಫಂಕ್ಷನ್ ಇದ್ದಾಗ ಅದರ ಹಿಂದಿನ ದಿನ ನಿಮ್ಮ ಮುಖದ ಮೇಲೆ ಮೊಡವೆಗಳು ಆದಾಗ ಕೊಲಗೆಟ್ ಅನ್ನು ಆ ಮೊಡವೆಯ ಮೇಲೆ ಹಚ್ಚಿ. ಇದರಿಂದ ಮೊಡವೆಗಳು ನಿವಾರಣೆ ಆಗುತ್ತದೆ.

 

ಇನ್ನೂ ನಾಲ್ಕನೆಯ ಟಿಪ್ಸ್ ಯಾವುದು ಎಂಬುದನ್ನು ಅಂತ ಹೇಳುವುದಾದರೆ, ಮೊಟ್ಟೆಯ ಬಿಳಿ ಭಾಗವನ್ನು ನಾಲ್ಕು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ. ಈ ಲೇಪನವನ್ನು ನೀವು ನಿಮ್ಮ ಮುಖದಲ್ಲಿ ಕಪ್ಪು ಕಪ್ಪು ಕಲೆಗಳು ಆಗಿರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಬಳಿಕ 18 ನಿಮಿಷ ಬಿಟ್ಟು ತೊಳೆದುಕೊಳ್ಳಿ. ಇದರಿಂದ ಕಪ್ಪು ಕಲೆಗಳು ಡಾರ್ಕ್ ಸರ್ಕಲ್ ನಿವಾರಣೆ ಆಗುತ್ತವೆ. ಇನ್ನೂ ಕೊನೆಯ ಬ್ಯೂಟಿ ಟಿಪ್ಸ್ ಯಾವುದು ಅಂತ ತಿಳಿಯೋಣ ಬನ್ನಿ. ಅಲೋವೆರಾ ಮತ್ತು ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಮಸಾಜ್ ಮಾಡಿಕೊಂಡು ಬಳಿಕ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖವೂ ಎಷ್ಟು ಮೆತ್ತಗೆ ಮೃದು ನುಣುಪಾಗುತ್ತದೆ ಅಂದರೆ ಮತ್ತೆ ಮತ್ತೆ ಮುಟ್ಟುವಂತೆ ಅನ್ನಿಸುತ್ತದೆ ಅಷ್ಟೊಂದು ಮೃದು ಆಗುತ್ತದೆ. ನಿಜಕ್ಕೂ ಈ ಬ್ಯೂಟಿ ಟಿಪ್ಸ್ ಗಳು ಬಹಳ ಸರಳವಾದ ಸುಲಭವಾದ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮಾಡುವ ಟಿಪ್ಸ್ ಗಳು ಇವಾಗಿವೆ. ಶುಭದಿನ.

Leave a Reply

Your email address will not be published. Required fields are marked *