ಚಕ್ಕೋತ ಹಣ್ಣು ಹುಳಿ ಎಂದು ತಿನ್ನದೆ ಇರಬೇಡಿ. ತಿನ್ನದೇ ಹೋದಲ್ಲಿ ಖಂಡಿತವಾಗಿ ನಿಮಗೆ ಹಾನಿ. ಹಾಗಾದರೆ ಅದರ ಪ್ರಯೋಜನಗಳು ಯಾವುವು ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಚಕ್ಕೊತ ಹಣ್ಣು ರುಚಿಯಲ್ಲಿ ಹುಳಿ ಇದೆ ಎಂದು ಅದನ್ನು ಸೇವಿಸದೇ ಇರಬೇಡಿ. ಸೇವಸದೆ ಹೋದಲ್ಲಿ ನಿಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳು ಸಿಗುವುದಿಲ್ಲ. ಅದಕ್ಕಾಗಿ ಈ ಹಣ್ಣು ಎಲ್ಲಿಯಾದರೂ ಸಿಕ್ಕರೆ ಖಂಡಿತವಾಗಿ ಬಿಡಬೇಡಿ. ಸೇವನೆ ಮಾಡಿ ಹಾಗೂ ಇದರಿಂದ ಸಿಗುವ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಿ. ಚಕ್ಕೋತ ಹಣ್ಣು ನೈಸರ್ಗಿಕವಾಗಿ ಸಿಗುವ ಸಿಟ್ರಿಕ್ ಆಸಿಡ್ ಇರುವ ಹಣ್ಣು ಆಗಿದೆ. ಇದು ಪ್ರಮುಖವಾಗಿ ಹಸಿರು ಬಣ್ಣದಲ್ಲಿ ಇರುತ್ತದೆ. ಹೂವುಗಳು ಬಗ್ಗೆ ಹೇಳುವುದಾದರೆ ಬಹಳಷ್ಟು ಪ್ರಕಾಶಮಯ ಆಗಿದ್ದು ಐದು ದಳಗಳಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೇ ವಿಶಿಷ್ಟವಾದ ಆಹ್ಲಾದಕರ ಸುವಾಸನೆಯನ್ನು ಹೊಂದಿರುತ್ತದೆ. ಹೀಗಾಗಿ ಇವುಗಳನ್ನು ಸುಗಂಧ ದ್ರವ್ಯವನ್ನು ತಯಾರಿಸಲು ಬಳಸಲಾಗುತ್ತದೆ. ನಿಮಗೆ ಗೊತ್ತೇ ಆಯುರ್ವೇದ ಪದ್ಧತಿಯಲ್ಲಿ ಪ್ರತಿಯೊಂದು ಗಿಡದ ಹೂವು ಹಣ್ಣು ಕಾಯಿ ಕಾಂಡ ಎಲ್ಲವನ್ನು ಬಳಕೆ ಮಾಡಿಕೊಂಡು ಔಷಧವನ್ನು ತಯಾರಿಸುವ ಪದ್ಧತಿಯನ್ನು ಒಳಗೊಂಡಿದೆ.

 

ಈ ಹಣ್ಣನ್ನು ಸಲಾಡ್ ಜ್ಯೂಸ್ ನೂಡಲ್ಸ್ ಪಾಸ್ತಾ ಕೇಕ್ ಮತ್ತು ಫುಡ್ ಅನ್ನು ತಯಾರಿಸುವಲ್ಲಿ ಬಳಕೆ ಮಾಡುತ್ತಾರೆ. ಚಕ್ಕೋತ ಹಣ್ಣಿನ ರಸ ದೇಹವನ್ನು ಶಾಂತಗೊಳಿಸುತ್ತದೆ. ಈ ಹಣ್ಣಿನ ಹೊರ ಪದರು ಗಟ್ಟಿಯಾಗಿ ಇರುವುದರಿಂದ ಇದನ್ನು ತಿನ್ನಲು ಬಹಳ ಕಷ್ಟವಾಗುತ್ತದೆ ಆದ್ದರಿಂದ ಇದನ್ನು ನೀವು ಜ್ಯಾಮ್ ತಯಾರಿಸಲು ಬಳಕೆ ಮಾಡಿಕೊಳ್ಳಬಹುದು. ಕೇವಲ ಅರ್ಧ ಚಕ್ಕೋತ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಇದರಲ್ಲಿ ಇರುವ ವಿಟಮಿನ್ ಸಿ ಅಂಶವು ದೇಹಕ್ಕೆ ಒದಗಿಸುತ್ತದೆ. ವಿಟಮಿನ್ ಸಿ ಅಂಶವು ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚಕ್ಕೋತ ಹಣ್ಣು ಹೆಚ್ಚಿನ ನಾರಿನಾಂಶ ಹೊಂದಿರುವ ಕಾರಣ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮೂತ್ರಪಿಂಡದ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತದೆ. ಹಾಗೂ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದ್ದೆ.

 

ಮುಖ್ಯವಾಗಿ ಕಾಂನ್ಸ್ಟಿಪೇಶನ್ ಅನ್ನು ನಿವಾರಣೆ ಮಾಡುವಲ್ಲಿ ಚಕ್ಕೋತ ಹಣ್ಣು ಬಹಳ ಪ್ರಯೋಜನಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಮೂತ್ರದ ಸೋಂಕಿನ ವಿರುದ್ದ ಹೊರಡುತ್ತದೆ. ಚಕ್ಕೋತ
ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಇದ್ದು ಉರಿ ಮೂತ್ರದ ಸಮಸ್ಯೆಯನ್ನು ಹೋಗಲಾಡಿಸಲು ಅನುವಾಗುತ್ತದೆ. ಅಲ್ಲದೆ ಸ್ವತಂತ್ರವಾದ ಫ್ರೀ ರಾಡಿಕಲ್ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಅಂಶವು ಮಾನವನ ದೇಹದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಅಲ್ಲದೇ ಇದು ಮನುಷ್ಯನ ದೇಹಕ್ಕೆ ಅವಶ್ಯಕವಾಗಿ ಬೇಕೆ ಬೇಕಾಗುತ್ತದೆ. ಕಬ್ಬಿಣದ ಕೊರತೆ ರಕ್ತಹೀನತೆಗೆ ಕಾರಣವಾಗುತ್ತದೆ. ಆದ್ದರಿಂದ ಚಕ್ಕೋತ ಹಣ್ಣು ತಿನ್ನುವುದರಿಂದ ದೇಹಕ್ಕೆ ಕಬ್ಬಿಣ ಅಂಶ ಹೆಚ್ಚುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚು ಮಾಡುತ್ತದೆ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಆಹಾರದ ಖನಿಜಗಳಾದ ಸತು ತಾಮ್ರ ಮ್ಯಾಗ್ನಿಷಿಯಂ ಕಬ್ಬಿಣ ಕ್ಯಾಲ್ಷಿಯಂ ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿದೆ. ಇದು ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *