ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತದೆ, ಅನೀಮಿಯಾ ಕಾಯಿಲೆ ದೂರವಾಗುತ್ತದೆ. ಯಾವುದೇ ಗೊಂದಲವಿಲ್ಲದೆ ಇದನ್ನು ಸೇವಿಸಿ ನೋಡಿ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ದೇಹದಲ್ಲಿ ರಕ್ತ ಕಡಿಮೆ ಆದರೆ ಅನೇಕ ಬಗೆಯ ರೋಗ ರುಜಿನಗಳು ನಮ್ಮ ದೇಹದಲ್ಲಿ ಮನೆ ಮಾಡಿಕೊಂಡು ಬಿಡುತ್ತದೆ. ಹೌದು ಮನುಷ್ಯನ ಇಡೀ ದೇಹವೇ ರಕ್ತದಿಂದ ಆವರಿಸಿದೆ. ಅದೇ ದೇಹದಲ್ಲಿ ಅವಶ್ಯಕಗಿಂತಲೂ ಕಡಿಮೆ ಆದರೆ ತುಂಬಾನೇ ಸಮಸ್ಯೆಗಳು ಆಗುತ್ತದೆ.ಸ್ವಲ್ಪ ಕೆಲಸವನ್ನು ಮಾಡಿದರು ಕೂಡ ಸುಸ್ತು ಆಯಾಸ ಅನ್ನಿಸುವುದು. ಹಾಗೂ ಏನು ಮಾಡಲು ಮನಸ್ಸು ಆಗದೇ ಇರುವುದು ಕೇವಲ ಮಲಗುವುದು ಮಾಡುವುದು ಮಾಡಬೇಕು ಅಂತ ಅನ್ನಿಸುತ್ತದೆ. ಶುರುವಾದ ಹಂತದಲ್ಲಿ ನಾವು ಕೆಲವೊಂದು ವಿಷಯಗಳನ್ನೂ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಅದೇ ಸಮಸ್ಯೆ ನಮಗೆ ಮುಂದೆ ಭಯಂಕರವಾಗಿ ಕಾಡಲು ಶುರು ಆಗುತ್ತದೆ ಅದಕ್ಕಾಗಿ ನಾವು ಯಾವುದೇ ಕಾಯಿಲೆಗಳು ಬರುವ ಮುನ್ನವೇ ಎಚ್ಚರಿಕೆ ವಹಿಸಬೇಕು ರಕ್ತದ ಕೊರತೆ ಆದಾಗ ನಮಗೆ ವೈದ್ಯರು ಅಥವಾ ಸಾಮಾನ್ಯವಾಗಿ ಜನರು ಕೆಂಪು ಬಣ್ಣದ ಹಣ್ಣುಗಳನ್ನು ತಿನ್ನಿ ಎಂದು ಸಲಹೆ ಅನ್ನು ನೀಡುತ್ತಾರೆ. ಆದರೆ ಎಲ್ಲ ತರಕಾರಿ ಹಾಗೂ ಹಣ್ಣುಗಳು ಎಲ್ಲರಿಗೂ ಹೊಂದಾಣಿಕೆ ಆಗುವುದಿಲ್ಲ. ಅದರಲ್ಲಿ ದಾಳಿಂಬೆ ಹಣ್ಣು ಕೂಡ ಒಂದಾಗಿದೆ.

 

ಈ ಮಾತು ಸತ್ಯವಿದೆ ಗೆಳೆಯರೇ ಆದರೆ ದಾಳಿಂಬೆ ಹಣ್ಣು ತಿನ್ನುವುದರಿಂದ ಕೆಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗುತ್ತದೆ. ಕ್ಯಾರೆಟ್ ಬೀಟ್ರೂಟ್ ಆ್ಯಪಲ್ ಹಣ್ಣುಗಳನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿದರೆ ರಕ್ತ ಹೆಚ್ಚುತ್ತದೆ ಎಂದು ಹಾಗೆಯೇ ಖರ್ಜೂರವನ್ನು ತಿನ್ನುವುದರಿಂದ ರಕ್ತ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಇಂತಹ ಕೆಲವು ವಿಷಯಗಳನ್ನು ನಾವು ಕೇವಲ ಒಂದೆರಡು ದಿನಗಳ ಕಾಲ ಮಾಡಿ ಬಿಟ್ಟು ಬಿಡುತ್ತೇವೆ.ಖರ್ಜೂರವನ್ನು ತಿನ್ನುವುದರಿಂದ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಅವರಿಗೆ ರಕ್ತಸ್ರಾವ ಹೆಚ್ಚುತ್ತದೆ. ಡಾರ್ಕ್ ಸರ್ಕಲ್ ಆಗುತ್ತವೆ. ಸ್ಟ್ರೆಚ್ ಮಾರ್ಕ್ ಆಗುತ್ತವೆ. ಪಿಗ್ಮೆಂಟೇಶನ್ ಆಗುತ್ತದೆ. ಮೊಡವೆಗಳು ಆಗುತ್ತವೆ ಕೂದಲು ಅಧಿಕವಾಗಿ ಉದುರುತ್ತವೆ. ಮುಖ್ಯವಾಗಿ ಮಹಿಳೆಯರಲ್ಲಿ. ಹೀಗಾಗಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಆಹಾರವೂ ಸರಿಯಾಗಿ ಸೂಟ್ ಆಗುವುದಿಲ್ಲ. ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂಬತ್ತು ದಿನಗಳ ವರೆಗೆ ಮಾಡುವ ಹಾಗೂ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುವ ಸೂಪರ್ ಮನೆಮದ್ದು ಅಥವಾ ಟ್ರಿಕ್ ಅನ್ನು ಹೇಳಿ ಕೊಡುತ್ತೇವೆ ಬನ್ನಿ.

 

ನಾವು ತಿಳಿಸುವ ಈ ಒಂದು ಯಂತ್ರವನ್ನು ನೀವು ಮಾಡಿದರೆ ಖಂಡಿತವಾಗಿ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತದೆ. ಇದನ್ನು ಸಿದ್ದ ಪಡಿಸಲು ಕೇವಲ ನಮಗೆ ಬೇಕಾಗಿರುವುದು ಕಪ್ಪು ಒಣದ್ರಾಕ್ಷಿ. ಮೊದಲನೆಯ ದಿನ ನೀವು ಮೂರು ಕಪ್ಪು ಒಣದ್ರಾಕ್ಷಿ ಅನ್ನು ಸೇವನೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ನೀವು ಈ ಒಣದ್ರಾಕ್ಷಿ ಅನ್ನು ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಒಂದು ಮಧ್ಯಾಹ್ನ ಮತ್ತು ರಾತ್ರಿ ಒಂದು ಸೇವನೆ ಮಾಡಿ. ಎರಡನೇಯ ದಿನ ಎರಡು ಎರಡು ಅಂದ್ರೆ ಒಟ್ಟಾರೆ ಆರು ಕಪ್ಪು ಒಣದ್ರಾಕ್ಷಿ ನೆನೆಸಿಟ್ಟು ಮರುದಿನ ಬೆಳಗ್ಗೆ ಮಧ್ಯಾಹ್ನ ರಾತ್ರಿ ಸೇವನೆ ಮಾಡಬೇಕು. ಇನ್ನೂ ಮೂರನೆಯ ದಿನ ಮೂರು ಮೂರು ಕಪ್ಪು ಒಣದ್ರಾಕ್ಷಿ ನೆನೆಸಿ ಮೂರು ಹೊತ್ತು ಸೇವನೆ ಮಾಡಬೇಕಾಗುತ್ತದೆ. ನಾಲ್ಕು ಮತ್ತು ಐದು ಆರನೇ ದಿನ ನಾಲ್ಕು ಕಪ್ಪು ಒಣದ್ರಾಕ್ಷಿ ನೆನೆಸಿಟ್ಟು ಸೇವನೆ ಮಾಡಬೇಕು. ಇನ್ನೂ 7,8,9 ದಿನ ನೀವು ವಿರುದ್ಧವಾಗಿ ಅಂದರೆ ಮೂರು ನೆನೆಸಿಟ್ಟು ಆಮೇಲೆ ಎರಡು ಆಮೇಲೆ ಒಂದು ನೆನೆಸಿಟ್ಟು ಸೇವನೆ ಮಾಡಬೇಕು.ಕೊನೆಯಲ್ಲಿ ಅಂದ್ರೆ ಒಂಬತ್ತನೇ ದಿನ ಒಂದೊಂದು ಕಪ್ಪು ಒಣದ್ರಾಕ್ಷಿ ಮೂರು ಹೊತ್ತು ಸೇವನೆ ಮಾಡ್ಬೇಕು. ಹೀಗೇ ಮಾಡುವುದರಿಂದ ಖಂಡಿತವಾಗಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತದೆ ಅನೀಮಿಯಾ ಸಮಸ್ಯೆ ಮಾಯವಾಗುತ್ತದೆ. ದೇಹಕ್ಕೆ ಶಕ್ತಿ ಬರುತ್ತದೆ.ಮೈಕೈ ನೋವು ಕೈ ಕಾಲು ಜೋಮು ಹಿಡಿಯುವುದು ಸೋತು ಬರುವುದು ತಲೆನೋವು ತಲೆ ಸುತ್ತು ಎಲ್ಲವೂ ಮಾಯವಾಗುತ್ತದೆ ಹಾಗೂ ಡಾರ್ಕ್ ಸರ್ಕಲ್ ನಿವಾರಣೆಗೆ ಸೂಪರ್ ಅಂತ ಹೇಳಬಹುದು. ಶುಭದಿನ.

Leave a Reply

Your email address will not be published. Required fields are marked *