ವರ್ಷದಲ್ಲಿ ಒಂದು ಬಾರಿ ಉಡುಪಿಯ ಕಾರ್ಕಳದ ಶ್ರೀ ಅನಂತಶಯನ ದೇವಸ್ಥಾನದಲ್ಲಿ ನೆಲೆಸಿರುವ ಸ್ವಾಮಿಗೆ ನಡೆಯುತ್ತೆ ಚಾಮರ ಸೇವೆಯೆಂಬ ವಿಶಿಷ್ಟ ಸೇವೆ…!

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ನಮಗೆಲ್ಲಾ ಕಾರ್ಕಳ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಜೈನ ಬಸದಿಗಳು, ಕಾರ್ಕಳದ ಗೊಮ್ಮಟೇಶ್ವರ ವಿಗ್ರಹ ನೆನಪಾಗುತ್ತೆ ಅಲ್ವಾ. ಪ್ರಕೃತಿ ಸೌಂದರ್ಯದ ಜೊತೆಗೆ ಅನೇಕ ಪುಣ್ಯ ಕ್ಷೇತ್ರಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡ ಕಾರ್ಕಳವನ್ನು ಜೈನ ಕಾಶಿ ಎಂದೇ ಕರೆಯಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಕಾರ್ಕಳದಲ್ಲಿ ಇರುವ ಪುರಾತನವಾದ ಅನಂತಶಯನ ಸ್ವಾಮಿಯ ದೇಗುಲದ ಕುರಿತಾಗಿ ಮಾಹಿತಿಗಳನ್ನು ಪಡೆದುಕೊಂಡು ಬರೋಣ. ಜೈನ ರಾಜರು ಆಳುತ್ತಿದ್ದ ಕಾಲದಲ್ಲಿ ಪಾಂಡ್ಯ ನಗರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಕಾರ್ಕಳದಲ್ಲಿ ಸುಮಾರು 800 ವರ್ಷಗಳಷ್ಟು ಪುರಾತನವಾದ ಅನಂತಶಯನ ಸ್ವಾಮಿಯ ದೆಗೂಲವಿದ್ದು, ಈ ದೇಗುಲವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅನಂತಶಯನ, ಅನಂತ ಪದ್ಭನಾಭ ಎಂಬೆಲ್ಲ ಹೆಸರಿನಿಂದ ಇಲ್ಲಿರುವ ದೇವರನ್ನು ಭಕ್ತರು ಪೂಜಿಸುತ್ತಾರೆ. ಈ ದೇವಸ್ಥಾನದ ವೈಶಿಷ್ಟ್ಯ ಎಂದರೆ ಗರ್ಭಗೃಹ ಮತ್ತು ತೀರ್ಥ ಮಂಟಪಗಳು ಒಂದಕ್ಕೊಂದು ತಾಕಿಕೊಂಡಿವೆ ಎನ್ನುವುದು. ಗೋಪುರ, ಮೊಗಸಾಲೆ, ಪ್ರಾಕಾರ, ಪ್ರದಕ್ಷಿಣಾ ಪಥ ವಾನ್ನು ಒಳಗೊಂಡಿರುವ ಈ ದೇಗುಲದಲ್ಲಿ ಗರ್ಭಗೃಹದ ಛಾವಣಿಯನ್ನು ತಾಮ್ರದ ಲೋಹದಿಂದ ಹೋದಿಸಲಾಗಿದೆ. ಅದ್ಭುತ ಕಲಾ ಕೆ ತ್ತ ನೆಗಳುಳ್ಳ ಈ ದೇಗುಲಕ್ಕೆ ಬಂದು ಅನಂತ ಪದ್ಭನಾಭಾ ಸ್ವಾಮಿಯ ಎದುರಿನಲ್ಲಿ ನಿಂತು ಭಕ್ತಿಯಿಂದ ಬೇಡಿಕೊಂಡರೆ ಮನದ ಅಭಿಲಾಷೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ.

 

ಸಾಕಷ್ಟು ಮಂದಿ ಇಷ್ಟಾರ್ಥ ಸಿದ್ಧಿಗಾಗಿ ಅನಂತ ಚತುರ್ದಶಿ ವ್ರತವನ್ನು ಕೂಡ ಕೈಗೊಳ್ಳುವ ಹರಕೆಯನ್ನು ಕೂಡ ಇಲ್ಲಿಗೆ ಬಂದು ಹೊತ್ತುಕೊಳ್ಳುತ್ತಾರೆ. ಅಲ್ಲದೆ ಕೌಟುಂಬಿಕ ಸಮಸ್ಯೆ, ವ್ಯವಹಾರಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ ಹೀಗೆ ನಾನಾ ಬಗೆಯ ಸಮಸ್ಯೆಗಳು ಇದ್ದವರು ಇಲ್ಲಿಗೆ ಬಂದು ಸ್ವಾಮಿ ನೀನು ನಮ್ಮ ಸಮಸ್ಯೆಗಳನ್ನು ಬಗೆ ಹರಿಸಿ ಕೊಡು ನಾವು ನಮ್ಮ ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಯಾರೇ ಬಂದು ಏನನ್ನೇ ಬೇಡಿದರೂ ಈ ಸ್ವಾಮಿ ಕರುಣಿಸುತ್ತಾನೆ ಎನ್ನುವುದು ಈ ದೇವನನ್ನು ನಂಬಿ ಬದುಕಿನಲ್ಲಿ ಯಶಸ್ಸು ಗಳಿಸಿದ ಸದ್ಭಕ್ತರ ಮನದ ಮಾತಾಗಿದೆ. ಇನ್ನೂ ಹಲವಾರು ಅನಂತಶಯನ ಸ್ವಾಮಿಯ ದೇಗುಲದಲ್ಲಿ ದೇವರ ಮೂರ್ತಿಯು ನಿಂತ ಭಂಗಿಯಲ್ಲಿ ಇದ್ದರೆ ಈ ದೇಗುಲದಲ್ಲಿ ಸ್ವಾಮಿಯು ತನ್ನ ಬಲಗೈಯನ್ನು ತಲೆಗೆ ಆಲಿಸಿಕೊಂದು ಆದಿಶೇಷನ ಮೇಲೆ ಪವಡಿಸಿ, ಶಂಖ, ಗಧೆ ಚಕ್ರಗಳನ್ನು ಹಿಡಿದು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಸ್ವಾಮಿಯ ಹೊಕ್ಕಳಿನಲ್ಲಿ ಬ್ರಹ್ಮ ದೇವರು ಉಪಸ್ಥಿತ ನಿದ್ದು ದೇವರ ಪಾದದ ಬಳಿ ಶ್ರೀದೇವಿ ಭೂದೇವಿಯ ರು ಹಾಸಿನರಾಗಿದ್ದರೆ. ಈ ರೀತಿಯ ಅನಂತಶಯನ ಮೂರ್ತಿಯನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಮದ್ವ ಸನ್ಯಾಸಿಯೊಬ್ಬರ ಆಕಾಂಕ್ಷೆ ಮೇರೆಗೆ ಜೈನ ಅರಸನಾದ ಭೈರವ ಅರಸನು ನೆಲ್ಲಿಕಾರು ಗ್ರಾಮದ ಕೆರೆಯ ಬಳಿ ಇರುವ ಅನಂತ ಪದ್ಭನಾಭನ ವಿಗ್ರಹ ಇರುವ ವಿಷಯಗಳನ್ನು ತಿಳಿದು ಆ ವಿಗ್ರಹವನ್ನು ತಾನು ನಿರ್ಮಿಸುತ್ತ ಇರುವ ಬಸದಿಯ ಒಳಗಡೆ ಪ್ರತಿಷ್ಠಾಪಿಸಿ ದ ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ದೇಗುಲವನ್ನು ಎಡ ಪಾಶ್ವದಿಂದ ನೋಡಿದ್ರೆ ಜೈನ ಬಸದಿ ಯಂತೆ ಕಾಣುತ್ತೆ ಅನ್ನೋದು ಹಲವಾರು ಜನರ ಅಭಿಪ್ರಾಯ ಆಗಿದೆ.

 

ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವವನ್ನಾ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಈ ದಿನ ಸರ್ವಾಲಂಕೃತ ಭೋಷಿತನಾದ ಪದ್ಭಾನಾಭ ಸ್ವಾಮಿಗೆ ಚಾಮರ ಸೇವೆಯನ್ನು ಮಾಡಲಾಗುತ್ತದೆ. ಈ ಸೇವೆಯನ್ನು ನೋಡಲು ದೂರದ ಊರಿನಿಂದ ಭಕ್ತರು ಆಗಮಿಸುತ್ತಾರೆ. ವೈಕುಂಠ ಏಕಾದಶಿ, ರಥಸಪ್ತಮಿ, ಅನಂತ ಚತುರ್ದಶಿ ಯಂದೂ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯವೂ ಶಾಸ್ತ್ರೋಕ್ತವಾಗಿ ಪೂಜೆಗೊಳ್ಳುತ್ತಿರುವ ಈ ದೇವನನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 01 ಗಂಟೆವರೆಗೂ ಸಂಜೆ 5- ರಾತ್ರಿ9 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅರ್ಚನೆ, ಅಭಿಷೇಕ ಅಲಂಕಾರ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಪ್ರತಿದಿನ ಮಧ್ಯಾನ ಅನ್ನ ಸಂತರ್ಪಣೆ ವ್ಯವಸ್ಥೆ ಇದ್ದು ದೇವಸ್ಥಾನದಲ್ಲಿ ಉಳಿದುಕೊಳ್ಳಲು ಛತ್ರ ದ ವ್ಯವಸ್ಥೆ ಇದೆ. ಅನಂತಶಯನ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಕಾರ್ಕಳ ನಗರದ ಮಧ್ಯ ಭಾಗದಲ್ಲಿ ಇದೆ. ಕಾರ್ಕಳ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಕಾರ್ಕಳ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಅಥವಾ ಆಟೋ ವಾಹನದಲ್ಲಿ ಸುಲಭವಾಗಿ ತಲುಪಬಹುದು. ಸಾಧ್ಯವಾದರೆ ನೀವು ಒಮ್ಮೆ ಭೇಟಿ ಕೊಡಿ. ಶುಭದಿನ.

Leave a Reply

Your email address will not be published. Required fields are marked *