ನಮಸ್ತೆ ಪ್ರಿಯ ಓದುಗರೇ, ಹನುಮಂತ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಈ ದೇವಾ. ಸೀತಾಮಾತೆಯನ್ನು ಹುಡುಕುವ ಸಲುವಾಗಿ ಲಂಕೆಗೆ ಹಾರಿದ ಪರಮಾತ್ಮ ಇವನು. ಸದಾ ರಾಮ ನಾಮವನ್ನು ಜಪಿಸುತ್ತಾ ಇಂದಿಗೂ ಭೂಮಿ ಮೇಲೆ ನೆಲೆ ನಿಂತು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದನೆ. ಬನ್ನಿ ಇವತ್ತಿನ ಲೇಖನದಲ್ಲಿ ಬಂಗಾರಮಕ್ಕೀ ಯಲ್ಲಿ ನೆಲೆ ನಿಂತ ವೀರಾಂಜನೇಯ ನನ್ನು ದರ್ಶನ ಮಾಡಿ ಪುನೀತರಾಗೋಣ. ದಟ್ಟವಾದ ಕಾಡು ಮನಸ್ಸಿಗೆ ಮುದ ನೀಡೋ ಹಕ್ಕಿಗಳ ಕಲರವ ಶುಭ್ರವಾಗಿ ಕಾಣಿಸೊ ಶರಾವತಿ ನದಿ ಇಂತಹ ಸುಂದರವಾದ ಪರಿಸರದ ಮಧ್ಯದಲ್ಲಿ ನೆಲೆ ನಿಂತಿದ್ದಾನೆ ಶ್ರೀ ವೀರಾಂಜನೇಯ ಸ್ವಾಮಿ. ಈ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ದೇವರಿಗೆ ಪೂಜೆ ಮಾಡಿದರೆ, ಸಂತಾನ ಸಮಸ್ಯೆ, ಜಮೀನು, ಮನೆ ವ್ಯಾಜ್ಯ, ವ್ಯಾಪಾರ ಸಮಸ್ಯೆ, ಮಾನಸಿಕ ಸಮಸ್ಯೆ ದೂರವಾಗುತ್ತದೆ. ಇಷ್ಟು ಮಾತ್ರವಲ್ಲ ಜಾನುವಾರುಗಳಿಗೆ ತಗುಲುವ ರೋಗಗಳನ್ನು ಕೂಡ ಪರಿಹರಿಸುತ್ತಾನೇ ಈ ಅಂಜನೀಪುತ್ರ. ಈ ಸ್ಥಳದಲ್ಲಿ ಆಂಜನೇಯ ಬಂದು ನೆಲೆ ನಿಲ್ಲುವುದು ರ ಹಿಂದೆ ಒಂದು ಪುರಾಣದ ಕಥೆ ಕೂಡ ಇದೆ. ಹಿಂದೆ ಶ್ರೀರಾಮ ಸೀತಾಮಾತೆ ಹಾಗೂ ಲಕ್ಷ್ಮಣ ರೊಂದಿಗೆ ಇಲ್ಲಿಗೆ ಬಂದಿದ್ದನಂತೆ. ಒಂದು ದಿನ ಶ್ರೀರಾಮನಿಗೆ ಅತೀವ ಬಾಯಾರಿಕೆ ಆಗಿ ನೀರಿನ ಅಭಾವ ಆದಾಗ ರಾಮನು ತನ್ನ ಶಕ್ತಿಯಿಂದ ಶರಾವತಿ ನದಿಯನ್ನು ಸೃಷ್ಟಿ ಮಾಡಿದ.
ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿಯು ಶ್ರೀರಾಮಚಂದ್ರನಿಗೆ ಸಹಾಯ ಮಾಡಿದ. ಹೀಗಾಗಿ ರಾಮನು ವಾಯುಪುತ್ರನಗೆ ನೀನು ಇನ್ನು ಮುಂದೆ ಈ ಜಾಗದಲ್ಲಿ ನೆಲೆ ನಿಂತು ಇಲ್ಲಿನ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ಕರುಣಿಸು ಎಂದು ಸೂಚಿಸಿದಂತೆ ಹೀಗಾಗಿ ವೀರಾಂಜನೇಯ ನ ಶ್ರೀರಾಮಚಂದ್ರ ನ ಅನತೆಯಂತೆ ಈ ಸ್ಥಳದಲ್ಲಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇಗುಲದಲ್ಲಿ ದೇವರಿಗೆ ತ್ರಿಕಾಲ ಪೂಜೆ, ಅಭಿಷೇಕ, ಮಹಾ ನೈವೇದ್ಯ ನಡೆಸಲಾಗುತ್ತದೆ. ಯುಗಾದಿಯಂದು ಹೊಸ ತೇರಿನ ಉತ್ಸವ, ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಶ್ರೀರಾಮ ನವಮಿಯಂದು ದೇಗುಲದಲ್ಲಿ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಚೈತ್ರ ಶುದ್ಧ ಚೌತಿಯಂದು ಹನುಮ ಜಯಂತಿ ಸಂದರ್ಭದಲ್ಲಿ ದೇವರಿಗೆ ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ದಿನ ಸಾವಿರಾರು ಜನ ದರ್ಶನ ಮಾಡಿ ಪುನೀತರಾಗುತ್ತಾರೆ. ಇನ್ನೂ ಶ್ರಾವಣ ಮಾಸದಂದು ದೇವರಿಗೆ ನಿತ್ಯ ಪಾರಾಯಣ ಪೂಜೆ, ಸಹಸ್ರ ನಾಮ ಸತತ ಅಭಿಷೇಕ, ರುದ್ರಾಭಿಷೇಕ ಮಾಡಲಾಗುತ್ತದೆ. ಭಾದ್ರಪದ ಚೌತಿಯಂದು ಪರಮಾತ್ಮನಿಗೆ ವಿಶೇಷ ಅಲಂಕಾರ ಪೂಜೆ, ಪ್ರದಕ್ಷಿಣಾ ಸಹಿತ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಶರಣ್ಯವರ ರಾತ್ರಿಯ ಸಮಯದಲ್ಲಿ ಇಲ್ಲಿ ನಡೆಯುವ ಯಕ್ಷಗಾನವನ್ನು ನೋಡ್ತಾ ಇದ್ರೆ ನಮ್ಮ ಮನಸ್ಸು ದೇವರ ಅಂತರಂಗದ ಜೊತೆ ತಲ್ಲೀನ ಆಗುವುದು ಸತ್ಯ. ಭಾನುವಾರ ಸೋಮವಾರ ಶುಕ್ರವಾರ ಮತ್ತು ಶನಿವಾರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ದೇವರಿಗೆ ಬೆಳಿಗ್ಗೆ ಮಧ್ಯಹ್ನ ಮತ್ತು ಸಂಜೆ ಮೂರು ಹೊತ್ತು ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿಗೆ ಬಂದು ಯಾರು ಏನನ್ನೇ ಹರಕೆ ಹೊತ್ತುಕೊಂಡರು ಅವರ ಎಲ್ಲ ಆಸೆಗಳನ್ನು ಸಿದ್ಧಿ ಆಗುವಂತೆ ಮಾಡ್ತಾನೆ ಈ ವೀರಾಂಜನೇಯ ದೇವರು. ಬೆಳಿಗ್ಗೆ 6.30- ಮದ್ಯಾಹ್ನ 12 ಗಂಟೆ ವರೆಗೆ ಸಂಜೆ 5- ರಾತ್ರಿ 8 ಗಂಟೆ ವರೆಗೆ ದೇವರ ದರ್ಶನ ಮಾಡಬಹುದು. ಇಲ್ಲಿ ಬರುವ ಪ್ರತಿ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಇರುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಗಳ ನೆಲೆ ಗೂಡು ಅಂತ ಕರೆಯುವ ಗೇರುಸೊಪ್ಪ ಕ್ಷೇತ್ರದ ಜನರು ಇವತ್ತಿಗೂ ನಿಶ್ಚಿಂತೆ ಇಂದ ಬದುಕಲು ಕಾರಣ ಈ ಆಂಜನೇಯ ಸ್ವಾಮಿ ಎನ್ನುವುದು ಇಲ್ಲಿನ ಜನರ ಅಚಲವಾದ ನಂಬಿಕೆ ಆಗಿದೆ. ಸಾಧ್ಯವಾದರೆ ನೀವು ಒಮ್ಮೆ ಸಕಲ ಸಂಕಷ್ಟಗಳನ್ನು ನೀಗೋ ಶ್ರೀ ವೀರಾಂಜನೇಯ ಸ್ವಾಮಿಯನ್ನು ದರ್ಶನ ಮಾಡಿ. ವಾನರ ನಿಕರಾಧ್ಯಕ್ಷಮ್ ದಾನವ ಕುಲ ಕುಮುದಾ ರವಿಕರ ಸದ್ರುಕ್ಷಮ್, ದೀನ ಜನಾವನ ದೀಕ್ಷಮ್ ಪವನ ತತಃ ಸಾಂಕಪುಂಜ ಮುದ್ರಕ್ಷಾಂ. ಈ ಶ್ಲೋಕವನ್ನು ಪಠಿಸುವ ಎಲ್ಲರನ್ನೂ ಬಂಗಾರಮಕ್ಕಿಯ ವೀರಾಂಜನೇಯ ಸ್ವಾಮಿ ಕಾಪಾಡಲಿ ಎಂದು ಆಶಿಸುತ್ತಾ ಈ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.