ಸೆಪ್ಟೆಂಬರ್ 20, ಮಂಗಳವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಮೊಡಲಿಂದಲೆ ಇಂದ್ರಿಯಗಳನ್ನು ಸರಿಯಾದ ಹತೋಟಿಯಲ್ಲಿ ಇಟ್ಟುಕೊಂಡು ಈ ಪಾಪ ಕರ್ತೃವಾದ ಇಂದ್ರಿಯ ನಿಗ್ರಹ ಇಲ್ಲದ ಕಾಮ ಕ್ರೋಧಗಳನ್ನು ಮೊದಲೇ ನೀನು ನಾಶ ಮಾಡಿಬಿಡು ಆಗ ನಿನಗೆ ಯಾವುದೇ ರೀತಿಯ ತೊಂದರೆ ಅಥವಾ ದೋಷಗಳು ಈ ಭೂಮಿಯಲ್ಲಿ ಬರುವುದಿಲ್ಲ. ಇಂದು ಶ್ರೀ ಶುಭಕ್ರುತ್ಥ್ ನಾಮ ಸಂವತ್ಸರ. ದಕ್ಷಿಣಾಯನ ವರ್ಷ ಋತು,ಭಾದ್ರಪದ ಮಾಸ ಕೃಷ್ಣ ಪಕ್ಷ ಇಂದು ಸೆಪ್ಟೆಂಬರ್ 20 ನೆ ತಾರೀಕು. ಮಂಗಳವಾರ. ಇಂದು ಪುನರ್ವಸು ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಅಮ್ಮನ ಆಶೀರ್ವಾದ ಪಡೆಯುವುದನ್ನು ಮರೆಯಬೇಡಿ. ದೊಡ್ಡವರ ಆಶೀರ್ವಾದ ಹೆಚ್ಚು ಪಡೆದಷ್ಟು ಇವತ್ತು ಬಹಳ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಅಮ್ಮನಿಗೆ ವಿಶೇಷವಾದ ಸಹಯೋಗ ನಿಮ್ಮಿಂದ ಬೇಕಿರುತ್ತೆ. ಅದನ್ನು ಖಂಡಿತವಾಗಿ ಕೊಡಿ. ವೃಷಭ ರಾಶಿಯವರಿಗೆ ಇದು ಬಹಳ ಒಳ್ಳೆಯ ದಿನ. ಪರಾಕ್ರಮ ತುಂಬಾ ಜಾಸ್ತಿ ಇರುತ್ತೆ. ಅನೇಕರಿಂದ ನೀವು ಯಶಸ್ಸನ್ನು ಕಾಣುತ್ತೀರಿ. ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ನಿಮ್ಮ ವಿಶೇಷವಾದ ಸಂತೋಷ ಕಾಣುವ ದಿನ.

 

ಮಿಥುನ ರಾಶಿಯವರಿಗೆ ಇದು ಬಹಳ ಒಳ್ಳೆಯ ದಿನ. ಸಂಸಾರದಲ್ಲಿ ಬಹಳ ನೆಮ್ಮದಿ. ಮತ್ತು ಹಿಂದೆ ಯಾವುದೋ ಜನ್ಮದ ಪುಣ್ಯ ನನಗೆ ಇಂದು ಸಿಕ್ಕಿದೆ ಹಾಗಾಗಿ ಇಷ್ಟು ಸಂತೋಷವಾಗಿ ಇದ್ದೇನೆ. ಇಂತಹ ಒಳ್ಳೆಯ ಸಂಸಾರವನ್ನು ಪಡೆದಿದ್ದೇನೆ ಎನ್ನುವ ಧನ್ಯತೆ ಪ್ರಾಪ್ತಿ ಆಗುತ್ತೆ. ಕರ್ಕಾಟಕ ರಾಶಿಗೆ ಇಂದು ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಶಾಂತಿ ಇರುವ ದಿನ. ಜನ್ಮಾಂತರದ ಪುಣ್ಯದಿಂದ ಎಷ್ಟೊಂದು ಒಳ್ಳೆಯ ದಿನಗಳನ್ನು ನಾನು ನೋಡುತ್ತಿದ್ದೇನೆ ಎಂದು ಅಂದುಕೊಳ್ಳುವ ದಿನ. ಸಿಂಹ ರಾಶಿಗೆ ಇಂದು ಆಧ್ಯಾತ್ಮಿಕತೆ ತುಂಬಾ ಜಾಸ್ತಿ ಇರುತ್ತೆ ಆಧ್ಯಾತ್ಮದ ಕಡೆ ಬಹಳ ಹೆಚ್ಚಿನ ಗಮನ ಕೊಡ್ತಾ ಇರ್ಥಿರಿ. ಒಂದೆರೆಡು ಹೆಜ್ಜೆ ಹಿಂದೆ ಇಟ್ಟು ನಾನು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುವ ದಿನ. ಕನ್ಯಾ ರಾಶಿಗೆ ಬಹಳ ಒಳ್ಳೆಯ ದಿನ. ಸಾಮಾಜಿಕ ಜೀವನದಲ್ಲಿ ಹೆಚ್ಚಿನ ಯಶಸ್ಸು. ಇಷ್ಟಾರ್ಥ ಸಿದ್ಧಿ. ಗುಂಪುಗಳಿಂದ ನೆಮ್ಮದಿ. ತುಲಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಇಂದು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುತ್ತೀರಿ. ಹಿಂದೆ ಯಾವುದೋ ಜನ್ಮದ ಪುಣ್ಯ ನನಗೆ ಇಂತಹ ಒಳ್ಳೆಯ ಕೆಲಸದ ಅವಕಾಶ ಕೊಟ್ಟಿದೆ ಎಂದು ಧನ್ಯತೆ ಆಗುವ ದಿನ.

 

ವೃಶ್ಚಿಕ ರಾಶಿಗೆ ಭಾಗ್ಯೋದಯ ಆಗುತ್ತೆ. ಹಿಂದಿನ ಯಾವುದೋ ಜನ್ಮದ ಪುಣ್ಯದ ಫಲವನ್ನು ಇಂದು ನೀವು ಅನುಭವಿಸುತ್ತೀರಿ. ದೊಡ್ಡವರಿಗೆ ವಿನಮ್ರತೆಯಿಂದ ನಮಸ್ಕಾರ ಮಾಡಿ ಹೆಚ್ಚಿನ ಆಶೀರ್ವಾದ ಪಡೆಯಿರಿ. ಧನಸ್ಸು ರಾಶಿಗೆ ಮನಸ್ಸಿಗೆ ನೆಮ್ಮದಿ ಇವತ್ತು ಆಧ್ಯಾತ್ಮಿಕತೆ ಇಂದ ಮಾತ್ರ ಪ್ರಾಪ್ತಿ ಆಗುತ್ತೆ. ಎಷ್ಟು ಆಧ್ಯಾತ್ಮಿಕತೆ ಹೆಚ್ಚು ಸಾಧ್ಯ ಆಗುತ್ತೆ ಅಷ್ಟು ಒಳ್ಳೆಯ ತನ ನೀವು ತೋರಿಸಬೇಕು. ಮಕರ ರಾಶಿಗೆ ಬಹಳ ಒಳ್ಳೆಯ ದಿನ. ನನ್ನ ಜೀವನದಲ್ಲಿ ಸಹ ಇಂತಹ ದಿನಗಳು ಇರುತ್ತಾ ಅಂತ ನೀವು ಆಶ್ಚರ್ಯ ಪಡುವ ದಿನ. ಮನಸ್ಸಿಗೆ ಬಹಳ ನೆಮ್ಮದಿ ಕಾಣುತ್ತೀರಿ. ಕುಂಭ ರಾಶಿಗೆ ಇವತ್ತು ನೀವು ನಿಮ್ಮ ಸಾಮಾಜಿಕ ವಾತಾವರಣದಲ್ಲಿ ಹೆಚ್ಚಿನ ಆಧ್ಯಾತ್ಮಿಕತೆ ತೋರಿಸಿದಷ್ಟು ನಿಮ್ಮ ಕೀರ್ತಿ ಜಾಸ್ತಿ ಆಗುತ್ತೆ. ಶತ್ರುಗಳು ಹಿಮ್ಮೆಟ್ಟುತ್ತಾರೇ. ನಿಮ್ಮ ಅದೃಷ್ಟ ನಿಮ್ಮ ಶಕ್ತಿ ಹೆಚ್ಚುತ್ತದೆ. ಮೀನಾ ರಾಶಿಗೆ ಬಹಳ ಒಳ್ಳೆಯ ದಿನ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ನಿಮ್ಮ ಕ್ರಿಯಾಶೀಲತೆ ಇಡೀ ತಿಂಗಳಲ್ಲಿ ಹೆಚ್ಚಾಗಿರುತ್ತೆ. ಬುದ್ಧಿ ತುಂಬಾ ತೀಕ್ಷ್ಣವಾಗಿ ಇರುತ್ತೆ. ಮಕ್ಕಳಿಗೆ ನಿಮ್ಮಿಂದ ನೆಮ್ಮದಿ . ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ನೆಮ್ಮದಿ. ಎಲ್ಲಾ ಕಡೆಯಿಂದ ನೆಮ್ಮದಿ ಕಾಣುತ್ತೀರಿ. ಪುನಃ ನಾಳೆ ನಿಮ್ಮ ರಾಶಿ ಭವಿಷ್ಯ ದ ಜೊತೆ ಭೇಟಿಯಾಗೋಣ.

Leave a Reply

Your email address will not be published. Required fields are marked *