ರಾಗಿ ಹಾಲು ದೇಹಕ್ಕೆ ತಂಪು ಆರೋಗ್ಯಕ್ಕೆ ಅಮೃತ ತೋಳಿಗೆ ಬಲ…!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಬೇಸಿಗೆ ಕಾಲದಲ್ಲಿ ದೇಹವು ತುಂಬಾನೇ ಉಷ್ಣದಿಂದ ತತ್ತರಿಸುತ್ತದೆ. ದೇಹದಿಂದ ಬೆವರು ಹೋಗಿ ಹೋಗಿ ದೇಹವು ನಿರ್ಜಲೀಕರಣ ಆಗುತ್ತದೆ. ಅಷ್ಟೇ ಅಲ್ಲದೇ ದೇಹದಲ್ಲಿ ಸುಸ್ತು ನಿಶ್ಯಕ್ತಿ ಆಯಾಸ ಸಮಸ್ಯೆಗಳು ಶುರು ಆಗುತ್ತದೆ. ಹಾಗೂ ದೇಹದಲ್ಲಿ ಅತಿಯಾದ ಉಷ್ಣ ಹೆಚ್ಚುವುದರಿಂದ ಬಾಯಿ ಹುಣ್ಣು ಆಗುತ್ತದೆ. ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಪಾದಗಳಲ್ಲಿ ಅಂಗೈಯಲ್ಲಿ ಉರಿಯುತ್ತದೆ. ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸೇಕಾಗುತ್ತದೆ ದೇಹದ ಉಷ್ಣತೆಯಿಂದ. ಇದನ್ನು ತಪ್ಪಿಸಲು ನಾವು ಹಾಗೂ ದೇಹದ ಉಷ್ಣತೆಯನ್ನು ಕಾಪಾಡಿ ಕೊಳ್ಳಲು ಹಾಗೂ ದೇಹವು ತಂಪಾಗಿ ಇರಿಸಿಕೊಳ್ಳಲು ಬೇಸಿಗೆ ಕಾಲದಲ್ಲಿ ಆರೋಗ್ಯಕ್ಕೂ ಒಳ್ಳೆಯದಾಗಿರುವ ಒಂದು ಸೂಪರ್ ರಾಗಿ ತಂಪು ಪಾನಕ ಅನ್ನು ತಿಳಿಸಿ ಕೊಡುತ್ತೇವೆ ಬನ್ನಿ. ದೇಹದ ಉಷ್ಣತೆಗೆ ಹಾಗೂ ಕಣ್ಣುಗಳ ಉರಿ ಪಾದಗಳ ಉರಿಗೆ ಎಲ್ಲ ರೀತಿಯಲ್ಲಿ ಇದೊಂದು ದಿವ್ಯ ಔಷಧವಾಗಿದೆ ಈ ರಾಗಿ ಪಾನಕ. ಹಾಗಾದರೆ ಬನ್ನಿ ಇದರ ಬಗ್ಗೆ ತಿಳಿಯೋಣ. ರಾಗಿ ತಂಪು ಪಾನಕ. ಇದನ್ನು ನೀವು ದಿಡೀರ ಆಗಿ ಮಾಡಿಕೊಳ್ಳಬಹುದು. ಚಿಕ್ಕವರಿನಿಂದ ಹಿಡಿದು ದೊಡ್ಡವರಿಗೆ ಕೂಡ ಇದನ್ನು ಸೇವನೆ ಮಾಡಬಹುದು.

 

ಮೊದಲಿಗೆ ಎರಡು ಗಂಟೆಗಳ ಕಾಲ ರಾಗಿಯನ್ನು ಚೆನ್ನಾಗಿ ನೆನೆಸಿಟ್ಟು ಕೊಳ್ಳಬೇಕು. ಇನ್ನೂ ಎರಡನೆಯದು ಬಾದಾಮಿ. 10-20 ಬಾದಾಮಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿಟ್ಟುಕೊಳ್ಳಿ. ಮೊದಲಿನ ಕಾಲದಲ್ಲಿ ನಮ್ಮ ಹಿರಿಯರು ಹೆಚ್ಚಾಗಿ ರಾಗಿಯನ್ನು ಬಳಕೆ ಮಾಡುತ್ತಿದ್ದರು. ಹೌದು ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ಕೊಡುತ್ತದೆ. ಹಾಗೂ ತೋಳಿಗೆ ಬಲವನ್ನು ನೀಡುತ್ತದೆ. ಮೊದಲಿಗೆ ಒಂದು ಮಿಕ್ಸಿ ಜಾರಿಗೆ ತೆಗೆದುಕೊಂಡು ಅದರಲ್ಲಿ ನೆನೆಸಿದ ರಾಗಿಯನ್ನು ಹಾಕಿ ಬಳಿಕ 10-20 ಗೋಡಂಬಿ ಅನ್ನು ಹಾಕಿ ಸ್ವಲ್ಪ ಕೊಬ್ಬರಿ ತುರಿ ಹಾಕಿ. ಮತ್ತು ಎರಡು ಏಲಕ್ಕಿ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಶೋಧನೆ ಮಾಡುವ ಚರಡಿ ಬಿಡಿಸುವ ಸಹಾಯದಿಂದ ಹಾಲನ್ನು ಬಿಡಿಸಿ ಕೊಳ್ಳಿ. ಮತ್ತೆ ಅದೇ ವಿಧಾನವನ್ನು ಮಾಡಿಕೊಂಡು ಹಾಲನ್ನು ಶೋಧಿಸಿ ಕೊಳ್ಳಿ.

 

ಇದು ತೂಕವನ್ನು ಇಳಿಸಿಕೊಳ್ಳಲು ಹಾಗೂ ಡಯೆಟ್ ಮಾಡುವವರಿಗೆ ಇದು ತುಂಬಾನೇ ಸಹಾಯ ಮಾಡುತ್ತದೆ. ಹೌದು ತೂಕ ಉಳಿಸಿಕೊಳ್ಳಲು ಬಯಸುವವರು ಈ ಪಾನಕವನ್ನು ನೀವು ಕುಡಿಯಬಹುದು. ಇನ್ನೂ ಈಗ ಈ ಹಾಲು ಸಿದ್ಧವಾಗಿದೆ. ನಿಮಗೆ ಎಷ್ಟು ಬೇಕು ಅಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಒಂದು ಕಪ್ ಬೆಲ್ಲ ಸಾಕಾಗುತ್ತದೆ ಮಿತ್ರರೇ. ರುಚಿಗೆ ತಕ್ಕಷ್ಟು ನೀವು ಹಾಕಿಕೊಳ್ಳಬಹುದು. ಸಕ್ಕರೆಯನ್ನು ಹಾಕಬೇಡಿ. ಬೆಲ್ಲವನ್ನು ಮಾತ್ರ ಬಳಕೆ ಮಾಡಿ. ಸ್ವಲ್ಪ ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ರುಚಿಕರವಾದ ಆರೋಗ್ಯಕರವಾದ ರಾಗಿ ತಂಪು ಪಾನಕ ಸಿದ್ದವಾಯಿತು.
ಬಿಸಿಲಿನಲ್ಲಿ ಆಟವನ್ನು ಆಡಿ ಬಂದ ಮಕ್ಕಳಿಗೆ ಹಾಗೂ ಕೆಲಸದಿಂದ ಬಂದವರಿಗೆ ಈ ಪಾನಕ ಮಾಡಿ ಕೊಡಬಹುದು ಗೆಳೆಯರೇ. ಈ ಪಾನಕ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಮತ್ತು ನಿಶ್ಯಕ್ತಿ ಸುಸ್ತು ದಣಿವು ಇವೆಲ್ಲವೂ ಕೂಡ ಕ್ರಮೇಣ ಕಡಿಮೆ ಆಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ. ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮಾಡುವ ಸುಲಭವಾದ ಮನೆಮದ್ದು ಇದಾಗಿದೆ. ಶುಭದಿನ.

Leave a Reply

Your email address will not be published. Required fields are marked *