ಮಧುಮೇಹಿಗಳು ಅಂಥಹ ಆಹಾರಗಳನ್ನು ಮತ್ತು ಒಣ ಹಣ್ಣುಗಳನ್ನು ಸೇವನೆ ಮಾಡಬಾರದು. ಅವುಗಳು ಇಲ್ಲಿವೆ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಲ್ಲಿ ಮಧುಮೇಹ ಉಂಟಾಗುತ್ತದೆ. ನಮ್ಮ ಜಗತ್ತಿನಲ್ಲಿ ಪ್ರತಿದಿನವೂ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತು ಕಡಿಮೆ ಆಗುತ್ತಿಲ್ಲ ಗೆಳೆಯರೇ. ಹೀಗಾಗಿ ಮಧುಮೇಹಿಗಳು ಆದಷ್ಟು ತಮ್ಮ ಆಹಾರದ ಬಗ್ಗೆ ಪಾನೀಯಗಳ ಬಗ್ಗೆ ಬಹಳಷ್ಟು ಕಾಳಜಿಯನ್ನು ವಹಿಸಬೇಕು. ಇದು ತುಂಬಾ ಮುಖ್ಯ ಹಾಗೂ ಅವಶ್ಯಕ ಗೆಳೆಯರೇ. ಇದರಿಂದ ದೇಹದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಸಾಕಷ್ಟು ಜನರು ಉತ್ತಮವಾದ ಆರೋಗ್ಯಕ್ಕೆ ಒಣ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಆದರೆ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿಯಲಾಗಿದೆ. ಹಾಗಾದರೆ ಸಕ್ಕರೆಯ ಕಾಯಿಲೆ ಇದ್ದವರು ಯಾವೆಲ್ಲ ಒಣ ಹಣ್ಣುಗಳನ್ನು ತಿನ್ನಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲಿಗೆ ಖರ್ಜೂರ. ಇದರಲ್ಲಿ ಯಥೇಚ್ಛವಾಗಿ ಸಕ್ಕರೆಯ ಪ್ರಮಾಣ ಅಧಿಕವಾಗಿ ಇರುತ್ತದೆ. ಇದೇ ಒಂದು ಕಾರಣಕ್ಕೆ ದೇಹದ ರಕ್ತದಲ್ಲಿರುವ ಸಕ್ಕರೆಯ ಮಟ್ಟವು ಅಧಿಕವಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಹಾಗೂ ಇದು ಮತ್ತಷ್ಟು ಶುಗರ್ ಲೆವೆಲ್ ಅನ್ನು ಹೆಚ್ಚಿಸುವ ಅಪಾಯವನ್ನು ಮತ್ತಷ್ಟು ದುಪ್ಪಟ್ಟು ಮಾಡುವ ಭಯವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಮಧುಮೇಹಿಗಳು ಈ ಒಣ ಖರ್ಜೂರವನ್ನು ಸೇವನೆ ಮಾಡಲು ಹೋಗಬೇಡಿ. ಎರಡನೆಯದು ಒಣದ್ರಾಕ್ಷಿ. ಇದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಮಧುಮೇಹ ರೋಗಿಗಳಿಗೆ ಇದು ಬಹಳ ಅಪಾಯಕಾರಿ. ಇದರಲ್ಲಿ ಹೇರಳವಾಗಿ ಗ್ಲೂಕೋಸ್ ಮಟ್ಟವು ಹೇರಳವಾಗಿದೆ. ಇದೇ ಕಾರಣಕ್ಕೆ ದೇಹದಲ್ಲಿ ಗಮನಾರ್ಹವಾಗಿ ಗ್ಲೂಕೋಸ್ ಮಟ್ಟವು ದೇಹದಲ್ಲಿ ಹೆಚ್ಚುತ್ತದೆ. ಹೀಗಾಗಿ ಮಧುಮೇಹಿಗಳು ಒಣದ್ರಾಕ್ಷಿ ಸೇವನೆ ಮಾಡಬಾರದು. ಇನ್ನೂ ಬ್ರೆಡ್. ಹೌದು ಮಧುಮೇಹಿ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯ ಬಗ್ಗೆ ಅಧಿಕವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ.

 

ಹೀಗಾಗಿ ಅವರು ಬಿಳಿ ಬ್ರೆಡ್ ಅನ್ನು ತಿನ್ನಬಾರದು ಏಕೆಂದರೆ ಇದರಲ್ಲಿ ಪಿಸ್ಟವು ಹೇರಳವಾಗಿರುತ್ತದೆ. ಇನ್ನೂ ಹಣ್ಣುಗಳಲ್ಲಿ ಹೇಳುವುದಾದರೆ ಸಪೋಟ ಹಣ್ಣು. ಇದನ್ನು ಮಧುಮೇಹಿಗಳು ತಿನ್ನಲು ಹೋಗಬಾರದು.
ಇದು ರುಚಿಯಲ್ಲಿ ಬಹಳ ಸಿಹಿಯಾಗಿ ಇರುತ್ತದೆ. ಇದರಲ್ಲಿ ಗ್ಲಾಮಿಕ್ ಎಂಬ ಅಂಶವು ಇದೆ. ಇದು ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಚಿಕ್ಕು ಹಣ್ಣು ತಿನ್ನಬಾರದು. ಇನ್ನೂ ಮುಖ್ಯವಾಗಿ ಆಲೂಗಡ್ಡೆ. ಈ ಆಲೂಗಡ್ಡೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಇದನ್ನು ಮಧುಮೇಹಿಗಳು ಆದಷ್ಟು ಕಡಿಮೆ ಸೇವನೆ ಮಾಡಬೇಕು. ಹೌದು ಇಲ್ಲವಾದರೆ ಇದು ಶುಗರ್ ಲೆವೆಲ್ ಅನ್ನು ಹೆಚ್ಚು ಮಾಡುವಲ್ಲಿ ಎರಡನೆಯ ಮಾತು ಇಲ್ಲ ಗೆಳೆಯರೇ. ಇದೊಂದು ಭಯಂಕರವಾದ ತರಕಾರಿ ಅಂತ ಹೇಳಬಹುದು. ಇದರಲ್ಲಿ ಕಾರ್ಭೋಹೈಡ್ರೆಟ್ ಅಧಿಕವಾಗಿ ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ನೋಡಿದ್ರಲಾ ಮಧುಮೇಹಿಗಳು ಇಂತಹ ಆಹಾರಗಳನ್ನು ಒಣ ಹಣ್ಣುಗಳನ್ನು ಸೇವನೆ ಮಾಡಬಾರದು ಎಂದು. ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *