ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇತ್ತೀಚಿನ ದಿನಗಳಲ್ಲಿ ದಣಿವು ಆಯಾಸ ಸುಸ್ತು ನಿಶ್ಯಕ್ತಿ ಅನ್ನುವುದು ಅತಿ ಬೇಗನೇ ಕಾಡುತ್ತಿದೆ ಅಲ್ಲವೇ? ಇದಕ್ಕೆ ಕಾರಣ ನಾವು ಸೇವನೆ ಮಾಡುವ ಆಹಾರ ಮತ್ತು ನಮ್ಮ ಜೀವನ ಶೈಲಿ ಅಂತ ಹೇಳಬಹುದು. ಅದರಲ್ಲೂ ನಾವು ಸೇವನೆ ಮಾಡುವ ಆಹಾರದಲ್ಲಿ ಯಾವುದೇ ಪೋಷಕಾಂಶಗಳು ಪೌಷ್ಟಿಕತೆಯ ಕೊರತೆ ಇರುವುದರಿಂದ ನಮಗೆ ಕೈಕಾಲು ನೋವು ಮೈಕೈ ನೋವು ತಲೆನೋವು ಎಲ್ಲವೂ ಬರುತ್ತಾ ಇರುತ್ತದೆ. ಅದಕ್ಕಾಗಿ ನಾವು ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಬೇಕು ಪೌಷ್ಟಿಕತೆ ಹೊಂದಿರುವ ಆಹಾರಗಳನ್ನು ಸೇವನೆ ಮಾಡಬೇಕು. ಇಲ್ಲವಾದರೆ ನಾವು ಕಷ್ಟ ಪಟ್ಟು ದುಡಿದ ಹಣವೂ ಆಸ್ಪತ್ರೆಗೆ ಹಾಕಬೇಕಾಗುತ್ತದೆ. ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಇರುವಾಗಲೇ ಅದರ ಬಗ್ಗೆ ಕಾಳಜಿ ವಹಿಸಬೇಕು. ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ನಮಗೆ ಅನಾರೋಗ್ಯದ ಸಮಸ್ಯೆಗಳಾದ ತಲೆನೋವು ಮೈಕೈ ನೋವು ಕೈಕಾಲು ನೋವು ಬರುವುದು ಶುರು ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಸುಸ್ತು ನಿಶ್ಯಕ್ತಿ ಆಯಾಸ ಆಗುತ್ತಿದ್ದರೆ ನಿಮಗೆ ನಾವು ಒಂದು ಎನರ್ಜಿಟಿಕ್ ಡ್ರಿಂಕ್ಸ್ ಅನ್ನು ತಿಳಿಸಿ ಕೊಡುತ್ತೇವೆ ಬನ್ನಿ.
ಕೇವಲ ಈ ಡ್ರಿಂಕ್ ನೀವು ಕುಡಿಯುವುದರಿಂದ ಖಂಡಿತವಾಗಿ ನಿಮಗೆ ಸುಸ್ತು ಆಯಾಸ ಆಗುವುದಿಲ್ಲ. ಹಾಗಾದರೆ ಬನ್ನಿ ಮನೆಮದ್ದು ತಯಾರಿಸುವುದು ಹೇಗೆ ಅಂತ ತಿಳಿಯೋಣ. ಈ ಡ್ರಿಂಕ್ ಅನ್ನು ತಯಾರು ಮಾಡಲು ಎಲ್ಲ ಬಗೆಯ ಡ್ರೈ ಫ್ರೂಟ್ಸ್ ಗಳು ಬೇಕಾಗುತ್ತದೆ. ಮೊದಲಿಗೆ 20ಗ್ರಾಂ ವಾಲ್ ನಟ್ಸ್ ತೆಗೆದುಕೊಳ್ಳಿ. ಇದು ದೇಹದಲ್ಲಿ ಅಧಿಕವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಉತ್ತಮವಾದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಬೆಳವಣಿಗೆ ಅನ್ನು ಸುಗಮಗೊಳಿಸುತ್ತದೆ. ಮತ್ತು ನಮ್ಮ ದೇಹದ ಆಯಾಸವನ್ನು ತೆಗೆದು ಹಾಕುತ್ತದೆ. ಇನ್ನೂ ಎರಡನೆಯದು 20ಗ್ರಾಂ ಅಷ್ಟು, ಬಾದಾಮಿ ತೆಗೆದುಕೊಳ್ಳಿ. ಇದರಲ್ಲಿ ಅಧಿಕವಾದ ಪೋಷಕಾಂಶಗಳು ಪೌಷ್ಟಿಕತೆ ಮತ್ತು ವಿಟಮಿನ್ ಎ ಇದೆ ಮ್ಯಾಗ್ನಿಷಿಯಂ ಕಬ್ಬಿಣ ಕರಗುವ ನಾರು ಪ್ರೊಟೀನ್ ಹಾಗೂ ಪೊಟ್ಯಾಶಿಯಂ ಹೇರಳವಾಗಿ ಇವೆ. ಇವೆಲ್ಲವೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.ಬಾದಮಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಹಾಗೂ ನಿಶ್ಯಕ್ತಿ ದೂರವಾಗುತ್ತದೆ.
ಇನ್ನೂ 20 ಗ್ರಾಂ ನಷ್ಟೂ ಪಿಸ್ತಾ ತೆಗೆದುಕೊಳ್ಳಿ. ಇದರಲ್ಲಿ ತಾಮ್ರ ಸತು ಐರನ್ ವಿಟಮಿನ್ ಡಿ ಕೆ ಖನಿಜಗಳು ಮ್ಯಾಗ್ನಿಷಿಯಂ ಇದೆ. ಇವುಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲೀ ಸಹಾಯ ಮಾಡುತ್ತದೆ. ನಿಶ್ಯಕ್ತಿಯನ್ನು ದೂರ ಮಾಡುತ್ತದೆ. ಇನ್ನೂ 20ಗ್ರಾಂ ಅಷ್ಟು ಗೋಡಂಬಿ ಅನ್ನು ತೆಗೆದುಕೊಳ್ಳಿ. ಇದರಲ್ಲಿ ಮ್ಯಾಗ್ನಿಷಿಯಂ ರಂಜಕ ಕಬ್ಬಿಣ ಸತು ಅಂಶಗಳು ಹೇರಳವಾಗಿ ಇವೆ. ಜೊತೆಗೆ ಪ್ರೊಟೀನ್ ಫೈಬರ್ ಮತ್ತು ಆರೋಗ್ಯಕರ ಕೊಬ್ಬು ಇದೆ. ಇವೆಲ್ಲವೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಜೊತೆಗೆ ಉತ್ತಮವಾದ ಶಕ್ತಿಯನ್ನು ಒದಗಿಸುತ್ತದೆ. ಈಗ ಈ ಎಲ್ಲ ಡ್ರೈ ಫ್ರೂಟ್ಸ್ ಗಳನ್ನೂ ಒಂದು ಪಾತ್ರೆಯಲ್ಲಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ತದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಬೇಕಾದರೆ ನೀವು ರುಚಿಗೆ ವಾಸನೆಗೆ ಏಲಕ್ಕಿ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.
ಈ ಪುಡಿಯನ್ನು ನೀವು ಹಾಲಿನಲ್ಲಿ ಹಾಕಿ ಕುಡಿಯಬಹುದು ಅಥವಾ ಲಸ್ಸಿಯಲ್ಲಿ ಹಾಕಿ ಕುಡಿಯಬಹುದು.ಒಂದು ಲೋಟ ಹಾಲಿಗೆ ಎರಡು ಚಮಚ ಈ ಪುಡಿ ಹಾಗೂ ಸಕ್ಕರೆ ಮತ್ತು ಅರಿಶಿಣ ಹಾಕಿ
ಕುದಿಸಿ ಕುಡಿಯಿರಿ.ವಾರದಲ್ಲಿ ನಾಲ್ಕು ಬಾರಿ ಸೇವನೆ ಮಾಡಿ. ಇದರಿಂದ ನಿಮ್ಮ ನಿಶ್ಯಕ್ತಿ ಸುಸ್ತು ದಣಿವು ಆಯಾಸ ಎಲ್ಲವೂ ಮಾಯವಾಗುತ್ತದೆ. ಶುಭದಿನ.