ಮಹೇಶ್ವರನು ವೈದ್ಯನಾಥೇಶ್ವರ ನಾಗಿ ಭಕ್ತರನ್ನು ಸಲಹುತ್ತಿರುವ ಪುರಾತನವಾದ ದೆಗೂಲವೇ ಶ್ರೀ ಆದಿನಾಥೇಶ್ವರ ದೇವಸ್ಥಾನ, ಆದ್ಯಪಾಡಿ.

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೇ ಸೃಷ್ಟಿಯ ಲಯ ಕರ್ತನಾದ ಪರಮೇಶ್ವರ ನೆಲೆ ನಿಲ್ಲದ ಜಾಗಗಳಿಲ್ಲ. ಸ್ಮಶಾನ ವಾಸಿ ಅಂತ ಕರೆಯೋ ಈ ದೇವನನ್ನು ಭಕ್ತಿಯಿಂದ ಸ್ಮರಿಸಿದರೆ, ಆ ದೇವ ಸುಪ್ರಸನ್ನಾನಾಗಿ ಬೇಡಿದ ವರವನ್ನು ಕರುಣಿಸುತ್ತಾನೆ ಎಂದೇ ಹೇಳಬಹುದು. ಮನುಷ್ಯನಿಗೆ ಸಂಪತ್ತು, ಆಯಸ್ಸು, ನೆಮ್ಮದಿಯ ಜೊತೆ ಆರೋಗ್ಯ ಕೂಡ ಬೇಕೆ ಬೇಕು. ಆರೋಗ್ಯ ಇಲ್ಲದೆ ಹೋದರೆ ನಾವು ಯಾವ ಕಾರ್ಯವನ್ನು ಸಾಧಿಸೋಕೆ ಸಾಧ್ಯ ಆಗೋದಿಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಭವ ರೋಗಗಳನ್ನು ಹರಣ ಮಾಡುವ ಶಿವನ ಪುಣ್ಯ ಧಾಮವನ್ನು ದರ್ಶನ ಮಾಡಿ ಬದುಕಿನಲ್ಲಿ ಚೈತನ್ಯವನ್ನು ತುಂಬಿಸಿ ಕೊಳ್ಳೋಣ. ಒಂದು ಕಡೆ ಸುಂದರವಾದ ಬೆಟ್ಟ ಇನ್ನೊಂದು ಕಡೆ ಪಲ್ಗುಣಿ ನದಿಯ ಸುಂದರವಾದ ತಟದ ನೋಟ. ಪ್ರಕೃತಿಯ ರುದ್ರ ರಮಣೀಯತೆಯನ್ನು ತನ್ನ ಒಡಲಲ್ಲಿ ಹುದುಗಿಸಿಕೊಂ ಡಿರುವ ಈ ಸ್ಥಳವನ್ನು ನೋಡ್ತಾ ಇದ್ರೆ ಬದುಕಿನ ನೋವುಗಳೆಲ್ಲ ಶಮನ ಆಗುತ್ತೆ.

 

ಇಂತಹ ಸುಂದರವಾದ ಪರಿಸರದ ನಡುವೆ ಪರಮೇಶ್ವರನು ನಾಥೇಶ್ವರನಾಗಿ ನೆಲೆಸಿದ ದಿವ್ಯ ಕ್ಷೇತ್ರ ಇದ್ದು, ಈ ದೇಗುಲಕ್ಕೆ ಸುಮಾರು 700 ವರ್ಷಗಳ ಇತಿಹಾಸ ಇದೆ. ಉದ್ಭವ ರೂಪಿಯಾಗಿ ನೆಲೆಸಿರುವ ಈ ಸ್ವಾಮಿಯನ್ನು ವೈದ್ಯ ನಾಥೇಶ್ವರ ಎಂದು ಕರೆಯಲಾಗುತ್ತದೆ. ಇನ್ನೂ ಆದಿನಾಥ ಮಹಾದೇವ ಆದಿರೋಗ ವಿನಾಷನಾ, ಆದಿ ಶತ್ರು ವಿನಾಶಾಯಾ ಆದಿನಾಥಯತೆ ನಮಃ. ಎಂದು ಈ ದೇವನನ್ನು ಭಕ್ತಿಯಿಂದ ಸ್ತುತಿಸಿದ್ದಾರೆ ಸಾಕು ಇಷ್ಟಾರ್ಥಗಳು ಸಿದ್ಧಿ ಆಗುತ್ತಂತೆ. ಇಲ್ಲಿರುವ ಸ್ವಾಮಿಯು ರೋಗ ನಿವಾರಕ, ಆರೋಗ್ಯ ದಾಯಕ ಹಾಗೂ ಜ್ಞಾನ ಪ್ರದಾಯಾಕ ಆಗಿದ್ದು, ಉಬ್ಬಸ ರೋಗ ಇರುವವರು ಇಲ್ಲಿಗೆ ಬಂದು ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಿದರೆ ಉಬ್ಬಸ ರೋಗವು ಶಾಶ್ವತವಾಗಿ ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಈ ದೇಗುಲದಲ್ಲಿ ಆದಿ ನಾಥೇಶ್ವರ ಜೊತೆ ಗಣಪತಿ ಕೂಡ ನೆಲೆಸಿದ್ದು, ಭಕ್ತರನ್ನು ಹರಸುತ್ತಿದ್ದನೆ. ಸುಂದರವಾದ ಗರ್ಭ ಗೃಹ, ಕಲ್ಯಾಣಿ, ಪ್ರದಕ್ಷಿಣಾ ಪಥ, ನಂದಿ ವಿಗ್ರಹವನ್ನಾ ಒಳಗೊಂಡಿರುವ ಈ ದೇಗುಲಕ್ಕೆ ಹೋದ್ರೆ ಮನಸ್ಸು ಪ್ರಶಾಂತ ಆಗುತ್ತೆ.

 

ಪ್ರತಿ ವರ್ಷವೂ ಶಿವರಾತ್ರಿಯ ನ್ನೂ ಈ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಗುಲವನ್ನು ಮದುವಣಗಿತ್ತಿ ಯಂತೇ ಸಿಂಗರಿಸಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿಯಂದು ದೊಡ್ಡ ರಂಗ ಪೂಜೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಕೂಡ ಇಲ್ಲಿ ನಡೆಸಲಾಗುತ್ತದೆ. ನಿತ್ಯ ಪೂಜೆಗೊಳ್ಳುತ್ತಿರುವ ಈ ಆದಿ ನಾಥೇಶ್ವರನನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಮಹಾ ಪೂಜೆ, ಶಿವ ಪೂಜೆ, ಕಾರ್ತಿಕ ಪೂಜೆ, ಬಿಲ್ವಾರ್ಚನೆ, ಏಕ ರುದ್ರಾಭಿಷೇಕ, ಶತ ರುದ್ರಾಭಿಷೇಕ, ಹೂವಿನ ಪೂಜೆ, ತುಲಾಭಾರ ಸೇವೆ, ಉಬ್ಬಸ ಕಾಣಿಕೆ, ಅನ್ನದಾನ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಆದಿ ನಾಥೇಶ್ವರನು ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಆದ್ಯಾಪಾಡಿ ಎಂಬ ಸ್ಥಳದಲ್ಲಿದ್ದು ಈ ದೇಗುಲವು ರಾಜಧಾನಿ ಬೆಂಗಳೂರಿನಿಂದ 350 ಕಿಮೀ, ಉಡುಪಿಯಿಂದ 60 ಕಿಮೀ, ಕುಂದಾಪುರದಿಂದ 95 ಕಿಮೀ, ಮಂಗಳೂರಿನಿಂದ 8 ಕಿಮೀ ದೂರದಲ್ಲಿದೆ. ಮಂಗಳೂರಿಗೆ ರಾಜ್ಯದ ನಾನಾ ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದ್ದು, ಮಂಗಳೂರು ಉತ್ತಮ ರೈಲ್ವೇ ಹಾಗೂ ವಿಮಾನ ನಿಲ್ದಾಣ ಸೌಲಭ್ಯ ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಆದಿ ನಾಥೇಶ್ವರನ ಕೃಪೆಗೆ ಪಾತ್ರರಾಗಿ ಎನ್ನುತ್ತಾ ಇಂದಿನ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.

Leave a Reply

Your email address will not be published. Required fields are marked *