ನಮಸ್ತೆ ಪ್ರಿಯ ಓದುಗರೇ, ಇಂದ್ರಿಯಗಳು ಉತ್ತಮವಾದವು ಈ ಜಡ ದೇಹಕ್ಕಿಂತ ಇಂದ್ರಿಯಗಳು ಉತ್ತಮ. ಇಂದ್ರಿಯಗಳಿಗಿಂತ ಮನಸ್ಸು ಉತ್ತಮವಾದದ್ದು. ಈ ಮನಸ್ಸಿಗಿಂತ ಬುದ್ಧಿ ಉತ್ತಮವಾದದ್ದು. ಬುದ್ದಿಗಿಂತ ಜ್ಞಾನ ಉತ್ತಮವಾದದ್ದು, ಆತ್ಮ ಇನ್ನೂ ಉತ್ತಮವಾದದ್ದು. ಇಂದು ಶ್ರೀ ಶುಭಕ್ರುತ್ಥ್ ನಾಮ ಸಂವತ್ಸರ. ದಕ್ಷಿಣಾಯನ ವರ್ಷ ಋತು,ಭಾದ್ರಪದ ಮಾಸ ಕೃಷ್ಣ ಪಕ್ಷ ಇಂದು ಸೆಪ್ಟೆಂಬರ್ 21. ಏಕಾದಶಿ, ಇಂದು ಪುಷ್ಯ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಮನಸ್ಸಿಗೆ ನೆಮ್ಮದಿ ತರುವ ದಿವಸ. ಆದ್ರೆ ಇಂದು ನೀವು ಸ್ವಲ್ಪ ಜವಾಬ್ದಾರಿಗಳನ್ನು ಸಮತೋಲನ ಮಾಡಿಕೊಳ್ಳಬೇಕು. ನಿಮ್ಮ ಮನೆಯ ಜವಾಬ್ದಾರಿ ಮತ್ತು ನಿಮ್ಮ ತಾಯಿ ಹಾಗೂ ನಿಮ್ಮ ಕಾರ್ಯಕ್ಷೇತ್ರ ದ ಜವಾಬ್ದಾರಿ ಮಧ್ಯೆ ಸ್ವಲ್ಪ ಏರು ಪೇರು ಆಗಬಹುದು. ಎಲ್ಲದನ್ನು ನೀವು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವೃಷಭ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ನಿಮ್ಮ ಪರಾಕ್ರಮ ಅತಿ ಹೆಚ್ಚು ಇರುತ್ತೆ. ಹಾಗಾಗಿ ಮುಖ್ಯವಾದ ಕೆಲಸಗಳನ್ನು ಲೀಲಾಜಾಲವಾಗಿ ನೀವು ನಿಭಾಯಿಸುತ್ತಿರಿ. ಮಾತುಕತೆಯ ಜಾಣ್ಮೆಯಿಂದ ಎಲ್ಲರನ್ನೂ ಗುಲ್ಲುತ್ತಿರಿ.
ಮಿಥುನ ರಾಶಿಯವರಿಗೆ ಇಂದು ಮನೆಗೆ ಅತಿ ಹೆಚ್ಚಿನ ನೆಮ್ಮದಿ ತರುವ ದಿನ. ಮನೆಯಲ್ಲಿ ಮನದಲ್ಲಿ ನೆಮ್ಮದಿ ಇರುವ ದಿನ. ಕುಟುಂಬದವರ ಜೊತೆ ಬಹಳ ಸಮಂಜಸವಾದ ಮಾತುಗಳಿಂದ ಇವತ್ತು ನೆಮ್ಮದಿ ಕಾಣುತ್ತೀರಿ ಹಾಗೂ ಅವರಿಗೂ ನಿಮ್ಮಿಂದ ಬಹಳ ನೆಮ್ಮದಿ ಪ್ರೀತಿ ಪ್ರಾಪ್ತಿ ಆಗುತ್ತೆ. ಕರ್ಕಾಟಕ ರಾಶಿಗೆ ಇದು ಬಹಳ ಒಳ್ಳೆಯ ದಿನ. ಅನೇಕ ರೀತಿಯಲ್ಲಿ ನಿಮಗೆ ಒಳ್ಳೆಯದು ಆಗುತ್ತೆ. ಇವತ್ತು ನಿಮ್ಮ ಸಿಕ್ಸ್ತ್ ಸೆನ್ಸ್ ಅನ್ನುವುದು ಬಹಳ ಚೆನ್ನಾಗಿದೆ ಹಾಗಾಗಿ ಮನಸ್ಸಿಗೆ ನೆಮ್ಮದಿ ನಿಮ್ಮ ಒಳಗೆ ನೀವು ಕಾಣುತ್ತೀರಿ. ಬೇರೆಯವರ ಅಗತ್ಯ ಇಂದು ನಿಮಗೆ ಬೀಳುವುದಿಲ್ಲ. ಸಿಂಹ ರಾಶಿಯವರಿಗೆ ಇಂದು ಒಂದೆರೆಡು ಹೆಜ್ಜೆ ಹಿಂದೆ ಇಟ್ಟು ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಬೇಕಾದ ದಿನ. ಎಲ್ಲಾ ಕಾರ್ಯಗಳಲ್ಲಿ ನಿಮಗೆ ಬೇಕಾದ ಪುರಸ್ಕಾರ ಸಹಕಾರ ಸಿಗದೆ ಹೋಗಬಹುದು ಎರಡು ದಿನಗಳ ನಂತರ ಎಲ್ಲವೂ ಬದಲಾಗುತ್ತೆ. ಕನ್ಯಾ ರಾಶಿಗೆ ಇಂದು ಬಹಳ ಪ್ರಶಸ್ತ ದಿನ. ಮನೆಗೆ ನಿಮಗೆ ಹೆಚ್ಚಿನ ನೆಮ್ಮದಿ ಪ್ರಾಪ್ತಿ ಆಗುತ್ತೆ. ಮನೆಯಲ್ಲಿ ಮನದಲ್ಲಿ ನೆಮ್ಮದಿ ಮತ್ತು ಮಿತ್ರರಿಂದ ಬಹಳ ಒಳ್ಳೆಯ ರೀತಿಯಲ್ಲಿ ಮುಂದೆ ಹೋಗುತ್ತೀರಿ. ಧನಾಗಮ, ಇಷ್ಟಾರ್ಥ ಸಿದ್ಧಿ. ತುಲಾ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು ಸಿಗುವಂತಹ ದಿನ. ನೀವು ಏನೇ ಮಾಡಿದರೂ ಇವತ್ತು ಯಶಸ್ಸು ಪಭಿಸುತ್ತೇ. ಹಾಗಂತ ಇರೋ ಕೆಲಸದಲ್ಲಿನ ಜವಾಬ್ದಾರಿ ಬಿಟ್ಟುಕೊಡಬೇಡಿ. ಜವಾಬ್ದಾರಿ ಇಂದ ಮಾಡಿದರೆ ನಿಮಗೆ ಸಕ್ಸಸ್ ಹೆಚ್ಚು.
ವೃಶ್ಚಿಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಭಾಗ್ಯೋದಯ ಆಗುತ್ತೆ ಮನಸ್ಸಿಗೆ ನೆಮ್ಮದಿ ಅನೇಕ ರೀತಿಯಲ್ಲಿ ಪ್ರಾಪ್ತಿ ಆಗುತ್ತೆ. ದೊಡ್ಡವರ ಆಶೀರ್ವಾದ ಕೂಡ ಸಿಗುತ್ತೆ ಆದ್ದರಿಂದ ಮನೆಯಲ್ಲಿ ದೊಡ್ಡವರ ಜೊತೆ ವಿನಯವಾಗಿರಿ. ಧನಸ್ಸು ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ನೆಮ್ಮದಿ ಅನೇಕ ರೀತಿಯಲ್ಲಿ ಪ್ರಾಪ್ತಿ ಆಗುತ್ತೆ. ಆದ್ರೆ ನೀವು ನಿಮ್ಮದೇ ಕೊರಗನ್ನು ಇಟ್ಟುಕೊಂಡರೆ ತೊಂದರೆ ಆಗಬಹುದು. ಆದ್ದರಿಂದ ಯಾವುದೇ ರೀತಿಯ ಕೊರಗು ಬೇಡ. ಮಕರ ರಾಶಿಗೆ ಬಹಳ ಒಳ್ಳೆಯ ದಿನ. ಬೇರೆಯವರಿಂದ ನಿಮಗೆ ಯಶಸ್ಸು ಪ್ರಾಪ್ತಿ ಆಗುತ್ತೆ. ಬೇರೆಯವರ ಮೂಲಕ ನಿಮಗೆ ನೆಮ್ಮದಿ ಪ್ರಾಪ್ತಿ ಆಗುತ್ತೆ. ಹಾಗಾಗಿ ಬೇರೆಯವರು ಮುಖ್ಯ ಆಗ್ತಾರೆ. ಕುಂಭ ರಾಶಿಗೆ ಇವತ್ತು ಮನಸ್ಸಿನಲ್ಲಿ ಕೆಚ್ಚೆದೆಯ ಅನುಭವ ಆಗುತ್ತೆ. ಏನು ಬೇಕಾದರೂ ಸಾಧಿಸುತ್ತೀನೆ ಎನ್ನುವ ಪೌರುಷ ಬರುತ್ತೆ. ಆ ಪೌರುಷವನ್ನು ಇಟ್ಟುಕೊಂಡು ಸುಮ್ಮ ಸುಮ್ಮನೆ ಯಾರನ್ನು ಎದುರು ಹಾಕಿಕೊಳ್ಳಬೇಡೀ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾಡಿಕೊಳ್ಳಿ. ಮೀನಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಇಡೀ ತಿಂಗಳಲ್ಲಿ ನಿಮ್ಮ ಕ್ರಿಯಾಶೀಲತೆ ಬಹಳ ಹೆಚ್ಚಿರುವ ದಿನ. ಮಕ್ಕಳಿಂದ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ. ಮದುವೆ ಮತ್ತು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಎಲ್ಲದರಲ್ಲೂ ಜಯವನ್ನು ಸಾಧಿಸುತ್ತೀರಿ. ಪುನಃ ನಾಳೆ ನಿಮ್ಮ ಭವಿಷ್ಯದ ಜೊತೆ ಭೇಟಿಯಾಗೋಣ. ಶುಭದಿನ.