ರವೆ ಉಪ್ಪಿಟ್ಟು ಸೇವನೆ ಮಾಡಿದರೆ ತೂಕ ಕಡಿಮೆ ಆಗುತ್ತಾ??ಇದು ನಿಜವೇ!!!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ಬೆಳಿಗ್ಗೆ ತಿಂಡಿ ಅಥವಾ ಉಪಹಾರ ಮಾಡಬೇಕಾದರೆ ಅವಲಕ್ಕಿ ಉಪ್ಪಿಟ್ಟು ಶಿರಾ ವಡೆ ಈ ಬಗೆಯ ಅನೇಕ ಖಾದ್ಯಗಳನ್ನು ಮಾಡಿ ಸೇವನೆ ಮಾಡುತ್ತೇವೆ. ಇದರಲ್ಲಿ ರವೆ ಉಪ್ಪಿಟ್ಟು ಕೂಡ ಬಹಳಷ್ಟು ಬಳಕೆಗೆ ಬರುತ್ತದೆ. ಇದನ್ನು ಕೆಲವರು ಇಷ್ಟ ಪಟ್ಟು ಸೇವನೆ ಮಾಡಿದರೆ ಇನ್ನೂ ಕೆಲವರು ಕಾಂಕ್ರೀಟ್ ಎಂದು ಮೂಗು ಮುರಿಯುವ ಜನರೇ ಹೆಚ್ಚು ಅಂತ ಹೇಳಬಹುದು. ಹೌದು ಬೇರೆಯವರ ಮಾತು ಯಾಕೆ ಮಿತ್ರರೇ ನಾವೇ ಮಾರುದ್ದ ಓಡಿ ಹೋಗುತ್ತೇವೆ ಈ ಉಪ್ಪಿಟ್ಟು ಅಂದರೆ. ಆದರೆ ಕೆಲವರಿಗೆ ಇದು ಅನಿವಾರ್ಯ ಆಗಿರುತ್ತದೆ ಕೆಲಸದ ಒತ್ತಡದ ಸಮಯದಲ್ಲಿ ಬೇಗನೆ ಸಿದ್ದ ಮಾಡಿಕೊಂಡು ಸವಿಯಲು. ಉಪ್ಪಿಟ್ಟು ಒಂದು ಅದ್ಭುತವಾದ ಉಪಹಾರ. ಇದನ್ನು ನಾವು ಚಟ್ನಿ ಜೊತೆಗೆ ಸೇವನೆ ಮಾಡಿದರೆ ಇದರ ಮಜವೇ ಬೇರೆ ಗೆಳೆಯರೇ. ಹೌದು ಉಪ್ಪಿಟ್ಟು ಆರೋಗ್ಯಕರ ಲಾಭಗಳ ಬಗ್ಗೆ ಬಹುಶಃ ನಿಮಗೆ ಗೊತ್ತಿಲ್ಲ ಅನ್ನಿಸುತ್ತದೆ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಉಪ್ಪಿಟ್ಟು ತಿಂದು ಕೂಡ ತೂಕವನ್ನು ಇಳಿಸಿಕೊಳ್ಳಬಹುದು ಎಂದು ತಿಳಿಸಿ ಕೊಡುತ್ತೇವೆ.

 

ನಾವು ಉಪ್ಪಿಟ್ಟು ಅನ್ನು ಉಪವಾಸ ಇದ್ದ ಸಮಯದಲ್ಲಿ ಮಾತ್ರ ಹೆಚ್ಚಿಗೆ ನೆನಪು ಮಾಡುತ್ತೇವೆ. ರವೆ ಉಪ್ಪಿಟ್ಟು ರವೆ ಸಜ್ಜಿಗೆ ಕೇಸರಿ ಬಾತ್ ಮಾಡಿಕೊಂಡು ದೇವರಿಗೆ ನೈವದ್ಯ ತೋರಿಸಿ ಸುಮ್ಮನಿರುತ್ತೇವೆ. ಸಾಮಾನ್ಯವಾಗಿ ರವೆಯನ್ನು ಅಕ್ಕಿ ನುಚ್ಚು ಅಥವಾ ಗೋಧಿ ನುಚ್ಚು ಎಂದು ಕರೆಯುತ್ತಾರೆ. ರವೆ ಉಪ್ಪಿಟ್ಟು ಸೇವನೆ ಕೂಡಲೇ ತಕ್ಷಣವೇ ಜೀರ್ಣವಾಗುತ್ತದೆ. ಹೌದು ರವೇ ಉಪ್ಪಿಟ್ಟು ಸವಿಯಲು ಬಹಳ ರುಚಿಯಾಗಿ ಇರುತ್ತದೆ. ಸಾಮಾನ್ಯವಾಗಿ ರವೆಯನ್ನು ತರೀತರಿ ಆಗಿ ಮಿಲ್ ಗಳಲ್ಲಿ ಮಾಡಿಕೊಂಡು ಬರುತ್ತಾರೆ.ದೇಹದ ತೂಕ ಕಡಿಮೆ ಮಾಡಿಕೊಳ್ಳಲೇ ಬೇಕು ಎನ್ನುವ ಹಲವರಿಗೆ ರವೆಯಿಂದ ತಯಾರು ಮಾಡಿದ ಆಹಾರ ಪದಾರ್ಥಗಳಿಗಿಂತ ಮಿಗಿಲಾದ ಆಹಾರ ಪದಾರ್ಥಗಳು ಮತ್ತೊಂದಿಲ್ಲ ಎಂದು ಹೇಳಬಹುದು. ಹೌದು ಇದು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯವೂ ಉಪ್ಪಿಟ್ಟು ತಿನ್ನುವುದರಿಂದ ನಮ್ಮ ದೇಹದ ತೂಕವು ಕೂಡ ಕಡಿಮೆ ಆಗುತ್ತದೆ ಎಂದು ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಉಪ್ಪಿಟ್ಟು ಸೇವನೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಜೊತೆಗೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಇದರಲ್ಲಿ ಅನೇಕ ಬಗೆಯ ಕಾಳುಗಳನ್ನು ತರಕಾರಿಗಳನ್ನು ಹಾಕಿ ಮಾಡುವುದರಿಂದ ನಮ್ಮ ದೇಹವು ಮತ್ತಷ್ಟು ಶಕ್ತಿಯುತ ಆಗುತ್ತದೆ. ಮತ್ತು ಚೈತನ್ಯದಿಂದ ಇರುವಂತೆ ಹಾಗೂ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ಆದ್ರೆ ನೀವು ರವೆಯಿಂದ ತಯಾರು ಮಾಡುವ ಆಹಾರ ಪದಾರ್ಥ ಸಿಹಿಯಾಗಿರಲಿ ಅಥವಾ ಖಾರದ ಪದಾರ್ಥ ಆಗಿರಲಿ, ಆದಷ್ಟು ಮಿತಿಯಾಗಿ ಇರಲಿ ಮತ್ತು ಎಣ್ಣೆಯ ಅಂಶವನ್ನು ಕಡಿಮೆ ಹೊಂದಿರಲಿ. ಆದಷ್ಟು ತರಕಾರಿ ಮತ್ತು ಕಾಳುಗಳನ್ನು ಚೆನ್ನಾಗಿ ಹಾಕಿ ಮಾಡಿ ಸೇವನೆ ಮಾಡಿದರೆ ನಿಜಕ್ಕೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೋಡಿದ್ರಲಾ ಉಪ್ಪಿಟ್ಟು ನಮ್ಮ ಆರೋಗ್ಯಕ್ಕೆ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *