ನಮಸ್ತೇ ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೆ, ನಾವು ಚಿಕ್ಕವರಿದ್ದಾಗ ಪೆಪ್ಪರ್ ಮಿಠಾಯಿ, ಚಾಕೊಲೇಟ್ ಹಣ್ಣುಗಳು ಇನ್ನಿತರ ವಸ್ತುಗಳನ್ನು ನಾವು ಸೇವನೆ ಮಾಡಿದ್ದೇವೆ ಗೆಳೆಯರೇ. ಅದರಲ್ಲಿ ಪುಟಾಣಿ ಅಥವಾ ಹುರಿಗಡಲೆ ಕೂಡ ಒಂದು ಅಂತ ಹೇಳಬಹುದು. ಹೌದು ಪುಟಾಣಿ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ನಮ್ಮ ಬಾಲ್ಯ. ನಾವು ನೀವೆಲ್ಲರೂ ಚಿಕ್ಕವರಿದ್ದಾಗ ಇದರ ಅನುಭವ ಪಡೇದ್ದಿದ್ದೇವೆ ಗೆಳೆಯರೇ. ಆದರೆ ಬಾಲ್ಯದಿಂದ ಹದಿ ಹರೆಯದ ವಯಸ್ಸಿಗೆ ತಲುಪುವವರೆಗೆ ಇದನ್ನು ನಾವು ಮರೆತು ಬಿಟ್ಟಿದ್ದೇವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಮುಷ್ಟಿಯಷ್ಟು ಹುರಿಗಡಲೆ ತಿಂದರೆ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ನಾವು ಟೈಮ್ ಪಾಸ್ ಗೆ ಎಂದು ಹುರಿಗಡಲೆ ಅನ್ನು ತಿನ್ನುತ್ತೇವೆ. ಆದರೆ ಇನ್ನೂ ಕೆಲವು ಜನರು ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಅಧಿಕವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಆಗುತ್ತದೆ ಎಂದು ಇದರ ಬಗ್ಗೆ ಬೇಜಾರು ವ್ಯಕ್ತ ಪಡಿಸುತ್ತಾರೆ. ಇದೇ ಒಂದು ಕಾರಣಕ್ಕೆ ಅವರು ಇದನ್ನು ಸೇವನೆ ಮಾಡಲು ಕೂಡ ಮುಂದಾಗುವುದಿಲ್ಲ.
ಆದರೆ ನಾವು ಒಂದು ಹಿಡಿಯಷ್ಟು ಹುರಿಗಡಲೆ ಸೇವನೆ ಮಾಡಿದರೆ ಖಂಡಿತವಾಗಿ ನಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಈ ಹುರಿಗಡಲೆ ಅಲ್ಲಿ ಕಬ್ಬಿಣ ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಾರ್ಬೋಹೈಡ್ರೇಟ್ ಮತ್ತು ಜೀವಸತ್ವಗಳು ಖನಿಜಗಳು ಫೈಬರ್ ಕೂಡ ಹೇರಳವಾಗಿ. ಇದೇ ಕಾರಣಕ್ಕೆ ನಮ್ಮಲ್ಲಿ ಶಕ್ತಿ ಕಡಿಮೆ ಆಗಿದ್ದರೆ ತ್ವರಿತವಾಗಿ ಶಕ್ತಿ ಹೆಚ್ಚುತ್ತದೆ. ಒಂದು ಕಪ್ ಕಡಲೆ ಅಲ್ಲಿ 15 ಗ್ರಾಂ ಅಷ್ಟು ಪ್ರೊಟೀನ್ ಇರುತ್ತದೆ.ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವೂ ಮತ್ತಷ್ಟು ದ್ವಿಗುಣಗೊಳ್ಳುತ್ತದೆ. ಇನ್ನೂ ಸಕ್ಕರೆ ಕಾಯಿಲೆ ಇರುವವರು ಕೂಡ ಈ ಹುರಿಗಡಲೆ ಅನ್ನು ಸೇವನೆ ಮಾಡಬಹುದು. ಮಧುಮೇಹಿಗಳಿಗೆ ಸಾಮಾನ್ಯವಾಗಿ ಅಧಿಕವಾಗಿ ಹೆಚ್ಚು ಹಸಿವು ಆಗುತ್ತಿರುತ್ತದೆ. ಅವರಿಗೆ ಏನಾದರೂ ತಿನ್ನಬೇಕು ಪ್ರತಿ ನಿಮಿಷಕ್ಕೂ ಅಂತ ಅನ್ನಿಸುತ್ತದೆ.
ಅಂಥಹ ಸಮಯದಲ್ಲಿ ನೀವು ಅವರಿಗೆ ಹುರಿಗಡಲೆ ತಿನ್ನಲು ಕೊಡಬಹುದು. ಹಾಗೂ ಇದು ಮಧುಮೇಹಿಗಳಿಗೆ ಸೂಪರ್ ಫುಡ್ ಅಂತ ಹೇಳಬಹುದು. ಇದು ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಒಟ್ಟಾರೆ ಆಗಿ ಮಧುಮೇಹವನ್ನು ನಿಯಂತ್ರಣದಲ್ಲೀಡಲು ತುಂಬಾನೇ ಸಹಾಯ ಮಾಡುತ್ತದೆ. ಮೇಲೆ ಹೇಳಿದ ಹಾಗೆ ಹುರಿಗಡಲೆ ಅಲ್ಲಿ ಅಧಿಕವಾಗಿ ನಾರಿನ ಅಂಶ ಇರುವುದರಿಂದ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಮತ್ತು ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುತ್ತದೆ ಈ ಹುರಿಗಡಲೆ. ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ. ಮತ್ತು ಯಾರು ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಕಷ್ಟ ಪಡುತ್ತಾರೆ. ಅಂಥವರಿಗೆ ಇದು ರಾಮಬಾಣ ಇದ್ದಂತೆ. ಅಂದ್ರೆ ಡಯೆಟ್ ಮಾಡುವವರಿಗೆ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ ಆಗ ಅವರು ಖಂಡಿತವಾಗಿ ಒಂದು ಹಿಡಿಯಷ್ಟು ಹುರಿಗಡಲೆ ತಿನ್ನಬಹುದು ಇನ್ನೂ ಇದರಲ್ಲಿರುವ ಕ್ಯಾಲ್ಷಿಯಂ ಅಂಶವು ನಮ್ಮ ಮೂಳೆಗಳಿಗೆ ಬಹಳ ಉತ್ತಮ. ಇದನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ.ಇನ್ನೂ ಮುಖ್ಯವಾಗಿ ಇದರಲ್ಲಿ ಕಬ್ಬಿನ ಅಂಶ ಇರುವುದರಿಂದ ಇದು ರಕ್ತಹೀನತೆ ಸಮಸ್ಯೆ ಬರದಂತೆ ನಮ್ಮನ್ನು ಕಾಪಾಡುತ್ತದೆ.
ಶುಭದಿನ.