ನರಗಳಲ್ಲಿ ಬಲಹೀನತೆ ನರಗಳು ಜೋಮು ಹಿಡಿಯುವುದು ಗಟ್ಟಿ ಆಗುವುದು ಸೆಳೆತ ಎಲ್ಲವನ್ನು ಉಪಶಮನ ಮಾಡುತ್ತದೆ ಈ ಮನೆಮದ್ದು!!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಾವು ಈಗಿನ ಆಧುನಿಕ ಕಾಲದಲ್ಲಿ ಆರ್ಟಿಫಿಷಿಯಲ್ ಜೀವನವನ್ನು ನಡೆಸುತ್ತಿದ್ದೇವೆ ಎಂದು ಭಾಸವಾಗುತ್ತಿದೆ. ಇದರ ಅರ್ಥ ನಾವು ಫಾಸ್ಟ್ ಫುಡ್ ಜಂಕ್ ಫುಡ್ ಅಧಿಕವಾಗಿ ಹತ್ತಿರ ಆಗಿ ಬಿಟ್ಟಿದ್ದೇವೆ. ಯಾವ ಯಾವ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಆಹಾರವನ್ನು ಸೇವನೆ ಮಾಡದೇ ಸಮಯವಿಲ್ಲದ ಸಮಯಕ್ಕೆ ಊಟವನ್ನು ಮಾಡುತ್ತೇವೆ. ಹೀಗಾಗಿ ನಮ್ಮನ್ನೇ ನಾವೇ ಕಾಯಿಲೆಗಳತ್ತ ಆಕರ್ಷಣೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಹಾಗೂ ಕಾಯಿಲೆಗಳಿಗೆ ತುತ್ತಾಗಿ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಾತ್ರೆಗಳು ಕೂಡ ಡುಪ್ಲಿಕೇಟ್ ಬರುತ್ತಿವೆ ಗೆಳೆಯರೇ ಅಲ್ಲವೇ? ಮಾತ್ರೆಗಳನ್ನು ನಾವು ಎಷ್ಟು ತೆಗೆದುಕೊಳ್ಳುತ್ತೇವೆ ಅಷ್ಟು ಅವುಗಳ ಪರಿಣಾಮ ನಮ್ಮ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಗಳಿಗೆ ತನ್ನದೇ ಆದ ಕಾರ್ಯವನ್ನು ನೀಡಲಾಗಿದೆ. ಉದಾಹರಣೆಗೆ ನರಗಳು. ನಮ್ಮ ದೇಹದಲ್ಲಿ ಲಕ್ಷಗಟ್ಟಲೆ ನರಗಳಿವೆ. ಪ್ರತಿಯೊಂದು ನರಗಳು ತಮ್ಮದೇ ಆದ ಪ್ರಕ್ರಿಯೆಯನ್ನು ನಡೆಸುತ್ತವೆ. ಯಾವುದಾದರೂ ಒಂದು ನರದ ಕಾರ್ಯದಲ್ಲಿ ಸ್ವಲ್ಪ ಬದಲಾವಣೆ ಆದರೂ ಕೂಡ ನಮ್ಮ ಇಡೀ ಶರೀರದ ಮೇಲೆ ಪರಿಣಾಮ ಬೀರುವುದು ಅಷ್ಟೇ ಸತ್ಯವಿದೆ.

 

ಹೀಗಾಗಿ ದೇಹದಲ್ಲಿ ಕೆಲವೊಂದು ಬದಲಾವಣೆ ಆಗುತ್ತದೆ. ಅಂದ್ರೆ ಕೈಕಾಲು ನೋವು ಬರುವುದು ಜೋಮು ಹಿಡಿಯುವುದು ಸೂಜಿ ಚುಚ್ಚಿದ ಹಾಗೆ ಆಗುವುದು ತಲೆನೋವು ಅಧಿಕವಾಗಿ ಬರುವುದು ನರಗಳಲ್ಲಿ ಬ್ಲೋಕೆಜ್ ಆಗುವುದು ನರಗಳು ಮರಗಟ್ಟುವಿಕೆ ಆಗುವುದು, ನರಗಳಲ್ಲಿ ಚಾಲನೆ ಅನ್ನುವುದು ಇರುವುದಿಲ್ಲ ಅರಿವು ಕೂಡ ಇರುವುದಿಲ್ಲ ಹಾಗೆ ಆಗುತ್ತದೆ ಗೆಳೆಯರೇ. ನಮ್ಮ ನರಗಳು ಗಟ್ಟಿ ಆಗಿ ಇರಬೇಕು. ಇಲ್ಲವಾದರೆ ಪೂರ್ತಿ ದೇಹವೇ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ ಅಂತ ಹೇಳಬಹುದು. ನರಗಳಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯದೇ ಹೋದಲ್ಲಿ ಖಂಡಿತವಾಗಿ ನರಗಳು ಬಲಹೀನ ಆಗುತ್ತವೆ. ಅದರಲ್ಲೂ ಅಧಿಕವಾಗಿ ಹೆಚ್ಚಾಗಿ ಮಧ್ಯಪಾನ ಧೂಮಪಾನ ಸಿಗರೇಟ್ ಬೀಡಿ ಇವೆಲ್ಲ ಚಟಗಳು ಕೂಡ ಒಂದು ಬಗೆಯ ನರಗಳ ನಾಶ ಪಡಿಸುವ ಕೆಟ್ಟ ಅಭ್ಯಾಸಗಳು ಅಂತ ಹೇಳಬಹುದು.
ಸರಿಯಾಗಿ ನೀರು ಕುಡಿಯದೆ ಇದ್ದಾಗ ವ್ಯಾಯಾಮ ಜಿಮ್ ವಾಕಿಂಗ್ ಮಾಡದೇ ಇದ್ದಾಗ ನಮ್ಮ ನರಗಳು ಹಿಡಿದುಕೊಂದಂತೆ ಆಗುತ್ತದೆ. ಅದಕ್ಕಾಗಿ ನಾವು ನಿತ್ಯವೂ ಒಳ್ಳೆಯ ಆಹಾರವನ್ನು ಸೇವಿಸಬೇಕು. ನೀರು ಹೆಚ್ಚಾಗಿ ಕುಡಿಯಬೇಕು ಡಯೆಟ್ ಸರಿಯಾಗಿ ಮಾಡಬೇಕು. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ನರಗಳಗಳನ್ನು ಶಕ್ತಿ ಪಡಿಸಲು ಒಂದು ಸೂಪರ್ ಮನೆಮದ್ದು ತಿಳಿಸಿ ಕೊಡುತ್ತೇವೆ ಬನ್ನಿ.

 

ಇದನ್ನು ನೀವು ಬಳಕೆ ಮಾಡಿ ನೋಡಿ ಖಂಡಿತವಾಗಿ ನಿಮ್ಮ ನರಗಳು ಜೋಮು ಹಿಡಿಯುವುದು ತಪ್ಪುತ್ತದೆ. ನರಗಳು ಸರಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತವೆ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಮತ್ತು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅಂತ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಒಂದು ಬಟ್ಟಲಿನಲ್ಲಿ ಒಂದು ಚಮಚ ಕಾಳು ಮೆಣಸು ಒಂದು ಚಕ್ಕೇ ಮತ್ತು ಮೂರು ಪಲಾವ್ ಎಲೆಗಳನ್ನು ತೆಗೆದುಕೊಳ್ಳಿ. ಒಂದು ಚಮಚ ಕುಂಬಳಕಾಯಿ ಬೀಜ ಹಾಗೂ ಒಂದು ಚಮಚ ಅಗಸೆ ಬೀಜ ತೆಗೆದುಕೊಳ್ಳಿ. ಒಂದೆರಡು ವಾಲ್ ನಟ್ಸ್ ಸೇರಿಸಿಕೊಳ್ಳಿ ಕೊನೆಯಲ್ಲಿ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿ ಕೊಳ್ಳಿ. ಇವೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಇದು ಪುಡಿ ಸಿದ್ಧವಾಗಿದೆ ಬಳಿಕ ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಬಿಸಿ ಹಾಲಿಗೆ ಅಥವಾ ನೀರಿಗೆ ಹಾಕಿ ಕುಡಿಯಬಹುದು. ಇದರಿಂದ ನರಗಳು ಜೋಮು ಹಿಡಿಯುವುದು ಕಡಿಮೆ ಆಗುತ್ತದೆ ತಲೆನೋವು ಮಾಯವಾಗುತ್ತದೆ ನರಗಳಲ್ಲಿ ಸೆಳೆತ ಎಲ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಈ ಮನೆಮದ್ದು. ತುಂಬಾನೇ ಸರಳವಾದ ಮನೆಮದ್ದು ಇದ್ದಾಗಿದೆ ಒಮ್ಮೆ ಟ್ರೈ ಮಾಡಿ ನೋಡಿ ಶುಭದಿನ.

Leave a Reply

Your email address will not be published. Required fields are marked *