ಪ್ರತಿನಿತ್ಯವೂ ಇಂತಹ ಚಿಕ್ಕ ಅನುಕೂಲವಾದ ಕೆಲಸವನ್ನು ರೂಢಿಸಿಕೊಳ್ಳಿ. ನಿಮ್ಮ ತ್ವಚೆಯು ಗ್ಲೋ ಆಗುತ್ತದೆ.

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಕಾರ್ಯಗಳಿಂದ ಮತ್ತು ಸುಖ ಸಂತೋಷದಿಂದ ಶುರು ಆಗುತ್ತದೆ. ಪ್ರತಿನಿತ್ಯವೂ ಎಲ್ಲ ವಿಷಯಗಳ ಬಗ್ಗೆ ಕಾಳಜಿ ವಹಿಸುವ ನಾವು ಅವುಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆ ಆದರೆ ತ್ವಚೆಯ ಬಗ್ಗೆ ನಿರ್ಲಕ್ಷ್ಯವನ್ನು ಮಾಡುತ್ತೇವೆ. ಜೀವನಕ್ಕೆ ಕೆಲಸ ದುಡ್ಡು ಎಷ್ಟು ಮುಖ್ಯವೋ ಅಷ್ಟೇ ಸುಂದರವಾಗಿ ಕಾಣಲು ತ್ವಚೆಯ ಆರೋಗ್ಯವೂ ಅಷ್ಟೇ ಮುಖ್ಯವಾಗಿ ಇರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ತ್ವಚೆ ಸುಂದರವಾಗಿ ಹೊಳೆಯುವಂತೆ ಇರಬೇಕೆಂಬ ಆಸೆ ಇರುತ್ತದೆ ಗೆಳೆಯರೇ, ಆದರೆ ಈಗಿನ ಆಧುನಿಕ ಕಾಲದಲ್ಲಿ ಹೊಂದಿಕೊಂಡು ಬದುಕುತ್ತಿರುವ ನಮ್ಮೆಲ್ಲರಿಗೂ ಕೂಡ ನಮ್ಮ ತ್ವಚೆಗೆ ಸಮಯ ಕೊಡುವುದೇ ಇರುವಷ್ಟು ಬಡವರಾಗಿದ್ದೇವೆ. ಅದರಲ್ಲೂ ಚರ್ಮದ ವಿಷಯದಲ್ಲಿ ನಾವು ಬಹಳಷ್ಟು ನಿಲಕ್ಷ್ಯವನ್ನು ಮಾಡುತ್ತೇವೆ. ಇದರಿಂದ ನಮ್ಮ ತ್ವಚೆಯು ಮಟ್ಟಶ್ಟು ಹದಗೆಡುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಮತ್ತು ತುಂಬಾನೇ ಕಡಿಮೆ ಸಮಯದಲ್ಲಿ ನಿಮ್ಮ ಮುಖದ ತ್ವಚೆ ಮತ್ತು ಸೌಂದರ್ಯ ಹೇಗೆ ಕಾಪಾಡುವುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲಿಗೆ ಒಂದು ಬಟ್ಟಲಿನಲ್ಲಿ ನಿಂಬೆ ರಸ ಹಾಕಿಕೊಳ್ಳಿ. ನಂತರ ಅದರಲ್ಲಿ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಬಳಿಕ ಅದರಲ್ಲಿ ಓಟ್ಸ್ ಪುಡಿಯನ್ನು ಸೇರಿಸಿ. ಚೆನ್ನಾಗಿ ಇವುಗಳನ್ನು ಮಿಕ್ಸ್ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಹಾಗೂ 4-5 ನಿಮಿಷದವರೆಗೆ ಈ ಲೇಪನ ನಿಮ್ಮ ಮುಖದ ಮೇಲೆ ಇರುವಂತೆ ನೋಡಿಕೊಳ್ಳಿ. ಮುಖವನ್ನು ಸ್ಕ್ರಬ್ ಮಾಡಿ ಮುಖವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಆಮೇಲೆ ತಣ್ಣೀರು ಅಥವಾ ಐಸ್ ಕ್ಯೂಬ್ ನಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಮುಖದ ಮೇಲೆ ಆಗಿರುವ ಎಲ್ಲ ರಂಧ್ರಗಳು ಮುಚ್ಚುತ್ತದೆ. ಇನ್ನೂ ಕೆಲವರಿಗೆ ಎಣ್ಣೆ ಚರ್ಮ ಇರುತ್ತದೆ. ಮುಖವನ್ನು ಎಷ್ಟು ತೊಳೆದರೂ ಕೂಡ ಮತ್ತೆ ಮತ್ತೆ ಎಣ್ಣೆ ಜಿಡ್ಡು ಬರುತ್ತಲೇ ಇರುತ್ತದೆ. ಇದರಿಂದ ಜನರು ಬಹಳಷ್ಟು ಬೇಸತ್ತು ಹೋಗುತ್ತಾರೆ. ಅಷ್ಟೇ ಅಲ್ಲದೇ ಎಣ್ಣೆಯುಕ್ತ ಚರ್ಮವಿದ್ದರೆ ಮುಖದ ಮೇಲೆ ಬಹಳಷ್ಟು ಮೊಡವೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಎಣ್ಣೆ ಚರ್ಮ ಇದ್ದವರಿಗೆ ಇಲ್ಲೊಂದು ಸೂಪರ್ ಮನೆಮದ್ದು ಇಲ್ಲಿದೆ ನೋಡಿ. ಅದುವೇ ಸೌತೇಕಾಯಿ

 

ನೀವು ಸೌತೆಕಾಯಿ ಮತ್ತು ಆ್ಯಪಲ್ ಸೈಡರ್ ವಿನೆಗರ್ ಅನ್ನು ಬಳಸಬಹುದು. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬಹುದು. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.
ಸ್ವಲ್ಪ ಸಮಯದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ. ನಂತರ ವಿಟಮಿನ್ ಇ ಇರುವ ಕೆನೆ ಅಂಶವನ್ನು ನಿಮ್ಮ ಮುಖದ ಮೇಲೆ ಇರಿಸಿ. ಇದು ಎಣ್ಣೆ ಅಂಶವನ್ನು ತೆಗೆದು ಹಾಕಿ ನಿಮ್ಮ ಮುಖವೂ ಹೊಳೆಯುವಂತೆ ಮಾಡುತ್ತದೆ. ಇನ್ನೂ ಡ್ರೈ ಸ್ಕಿನ್ ಇರುವವರಿಗೆ ಸೌತೆಕಾಯಿ ರಸ ಬಹಳ ಉಪಯುಕ್ತ ಅವರು ನಿಂಬೆ ರಸದ ಬದಲಾಗಿ ಕುಕುಂಬರ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು.
ಡ್ರೈ ಸ್ಕಿನ್ ಇರುವವರಿಗೆ ನಿಂಬೆ ಹಣ್ಣಿನ ರಸ ಸೂಕ್ತವಲ್ಲ ಇದು ಚರ್ಮವನ್ನು ಮತ್ತಷ್ಟು ಡ್ರೈ ಮಾಡುತ್ತದೆ. ಆದರೆ ಎಣ್ಣೆಯುಕ್ತ ಚರ್ಮವುಳ್ಳವರು ನಿಂಬೆ ರಸವನ್ನು ಬಳಸಬಹುದು. ಶುಭದಿನ.

Leave a Reply

Your email address will not be published. Required fields are marked *