ನಮಸ್ತೆ ಪ್ರಿಯ ಓದುಗರೇ, ಬೆಂಗಳೂರು ಎಂಬ ಮಾಯಾ ನಗರಿ ಹೆಸರು ಕೇಳುತ್ತಿದ್ದ ಹಾಗೆ ಥಟ್ಟನೆ ನೆನಪಾಗುವುದು ಕಾಂಕ್ರೀಟ್ ಕಟ್ಟಡಗಳು, ವಾಹನ ದಟ್ಟಣೆಗಳು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸೋ ಗಗನಚುಂಬಿ ಕಟ್ಟಡಗಳು ಆದ್ರೆ ಉದ್ಯಾನ ನಗರಿ ಅಂತ ಕರೆಯೋ ಈ ಊರಿನಲ್ಲಿ ಕಟ್ಟಡಗಳು ಮಾತ್ರವಲ್ಲ ಅನೇಕ ಶಕ್ತಿಶಾಲಿ ದೇವಾಲಯಗಳು ಕೂಡ ಇವೆ. ಅದ್ರಲ್ಲೂ ಜನಗನ್ಮತೆಯ ಈ ದೇವಾಲಯಕ್ಕೆ ಹೋಗಿ ಒಂದು ಸಣ್ಣ ಚೀಟಿಯನ್ನು ಕಟ್ಟಿ ಬಂದ್ರೆ ಸಾಕು ಬದುಕಿನ ಎಲ್ಲಾ ಕಷ್ಟಗಳು ದೂರ ಆದಂತೆ. ಬನ್ನಿ ಹಾಗಾದರೆ ಆ ದೇವಾಲಯ ಯಾವುದು ಆ ಜಗನ್ಮಾತೆಯ ಶಕ್ತಿ ಎಂಥದು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯವನ್ನು 1988 ರಲ್ಲಿ ನಿರ್ಮಿಸಲಾಗಿದ್ದು, ಏಳು ಅಂತಸ್ತಿನ 108 ಅಡಿ ಎತ್ತರದ ಸುಂದರ ಹಾಗೂ ಕಲಾತ್ಮಕ ಗೋಪುರವನ್ನು ಈ ಆಲಯ ಹೊಂದಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಗೋಪುರದ ಮೇಲೆ ರುಂಡ ಮಾಲಿನಿ, ಮಹಿಷಾಸುರ ಮರ್ಧಿನಿ, ಮಹಾಲಕ್ಷ್ಮಿ ದೇವಿ ಹಾಗೂ ಇನ್ನೂ ಎನೇಕ ಬಗೆಯ ದೇವಾನುದೇವತಗಳ ಶಿಲ್ಪಗಳನ್ನು ಕೆತ್ತಲಾಗಿದ್ದು, ಈ ರಾಜ ಗೋಪುರವು ದೇಗುಲವನ್ನು ಪ್ರವೇಷಿಸುವವರ ಕಣ್ ಮನ ತಣಿಸುತ್ತೆ. ವಿಶಾಲವಾದ ಪ್ರದಕ್ಷಿಣಾ ಪಥವನ್ನು ಹೊಂದಿರುವ ಈ ಆಲಯದಲ್ಲಿ ಆರು ಅಡಿ ಎತ್ತರದ ಮಹಿಷಾಸುರ ಮರ್ಧಿನಿ ಯ ಸುಂದರವಾದ ಮೂರ್ತಿ ಇದ್ದು, ತಾಯಿಯ ಪಾದದ ಬಳಿ ಎಮ್ಮೆಯ ತಲೆ ಇದೆ.
ಅಮ್ಮನವರು ಮಹಿಷಾಸುರನನ್ನು ಕೊಂದ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಇಲ್ಲಿ ದುರ್ಗಾಪರಮೇಶ್ವರಿ ಜೊತೆಗೆ ಗಣಪತಿ, ಶ್ರೀನಿವಾಸ ದೇವರು ಹಾಗೂ ಶಿವನ ಗುಡಿಗಳು ಇವೆ. ಈ ದೇಗುಲದಲ್ಲಿ ನೆಲೆಸಿರುವ ಈ ದೇವಿಯು ಅತ್ಯಂತ ಶಕ್ತಿಶಾಲಿ ಆಗಿದ್ದು, ಆಲಯಕ್ಕೇ ಹೋದವರು ತಮ್ಮ ಮನದ ಕೋರಿಕೆಯನ್ನು ಸಣ್ಣ ಚೀಟಿಯಲ್ಲಿ ಬರೆದು ತ್ರಿಶೂಲ ದಾರಿಯಾಗಿ ನಿಂತ ದುರ್ಗಾ ದೇವಿಯ ಪ್ರತಿಮೆಯ ಬಳಿ ಕಟ್ಟಿ ಬಂದ್ರೆ ಆರು ತಿಂಗಳ ಬಳಿಕ ಮನದ ಕೋರಿಕೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎನ್ನುವುದು ಈ ಕ್ಷೇತ್ರಕ್ಕೆ ಬಂದು ಕೋರಿಕೆಗಳನ್ನು ಇಡೇರಿಸಿಕೊಂ ಡ ಮನದ ಮಾತಾಗಿದೆ. ವ್ಯಾಪಾರ ಸಮಸ್ಯೆ, ಸಂತಾನ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಅನಾರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಕೌಟುಂಬಿಕ ಕಲಹ ಹೀಗೆ ಬದುಕಿನಲ್ಲಿ ಏನೇ ಕ್ಲಿಷ್ಟಕರವಾದ ಸಮಸ್ಯೆಗಳು ಇದ್ದರೂ ಅದನ್ನು ಚೀಟಿಯಲ್ಲಿ ಬರೆದು ತಾಯಿಗೆ ಒಪ್ಪಿಸಿದ್ರೆ ಆ ಸಮಸ್ಯೆಗಳು ಎಲ್ಲವೂ ಮಂಜಿನಂತೆ ಕರಗಿ ಬದುಕಿನಲ್ಲಿ ನೆಮ್ಮದಿ ದೊರಕುವಂತೆ ಈ ತಾಯಿಯು ಅನುಗ್ರಹಿಸುತ್ತಾಳೆ ಎನ್ನುವುದು ಈ ದೇಗುಲದ ವೈಶಿಷ್ಟ್ಯತೆ ಆಗಿದೆ. ಇನ್ನೂ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ದಂದು ಈ ದೇವಿಗೆ ಪ್ರಿಯವಾದ ದಿನಗಳಾಗಿದ್ದು ಈ ದಿನ ಮದುವೆಯಾದ ಹೆಣ್ಣು ಮಕ್ಕಳು ತಾಯಿಯ ದರ್ಶನ ಮಾಡಿ ಪೂಜೆ ಮಾಡಿಸಿಕೊಂಡು ಹೋದ್ರೆ ಅವರ ಮಾಂಗಲ್ಯ ಭಾಗ್ಯ ಸ್ಥಿರವಾಗಿ ಇರುವಂತೆ ದೇವಿಯು ಆಶೀರ್ವಾದ ನೀಡ್ತಳೆ ಎಂಬ ನಂಬಿಕೆ ಇದ್ದು, ಈ ದಿನಗಳಲ್ಲಿ ಹೆಚ್ಚು ಮಹಿಳಾ ಭಕ್ತರು ಆಗಮಿಸುತ್ತಾರೆ. ನವರಾತ್ರಿಯ ಒಂಭತ್ತು ದಿನಗಳು ದೇವಿಗೆ ವಿಶೇಷ ವಾದ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ.
ಈ ಸಮಯದಲ್ಲಿ ಸರ್ವ ಆಭರಣ ಭೋಷಿತೇ ಆದ ದೇವಿಯು ಪ್ರಸನ್ನ ವದಲಾಗಿ ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾಳೆ. ನಿತ್ಯವೂ ಇಲ್ಲಿ ದೇವಿಗೆ ತ್ರಿಕಾಲ ಪೂಜೆಯನ್ನು ಮಾಡಲಾಗುತ್ತದೆ. ಈ ದೇವಿಯನ್ನು ಬೆಳಿಗ್ಗೆ 7 ರಿಂದ ಮಧ್ಯಾನ 12 ರ ವರೆಗೆ, ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಕುಂಕುಮಾರ್ಚನೆ, ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ, ಸೀರೆ ಸಮರ್ಪಣೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಕಾಳಿಕಾ ದುರ್ಗಾಪರಮೇಶ್ವರಿಯ ಈ ಆಲಯವು ಬೆಂಗಳೂರಿನ ಬೀ ಎಲ್ ಬಳಿಯಿರುವ ಕ್ಷೇತ್ರದಲ್ಲಿ ಇದ್ದು, ಈ ಕ್ಷೇತ್ರವು ಕೆಂಪೇಗೌಡ ಬಸ್ ನಿಲ್ದಾಣ ದಿಂದ 17.1 ಕಿಮೀ, ದೂರದಲ್ಲಿದೆ. ಮೆಜೆಸ್ಟಿಕ್ ನಿಂದಾ ವಿದ್ಯಾರಣ್ಯ ಪುರಕ್ಕೆ 226 ನಂಬರ್ ನ ಬಸ್ ಮೂಲಕ ಪ್ರಯಾಣಿಸಿ ದೇಗುಲದ ಸ್ವಾಗತ ಕಮಾನಿನಿಂದ ಐದು ನಿಮಿಷಗಳ ಕಾಲ ನಡೆದುಕೊಂಡು ಹೋದ್ರೆ ಸುಲಭವಾಗಿ ಈ ದೇಗುಲವನ್ನು ತಲುಬಹುದಾಗಿದೆ. ಬೆಂಗಳೂರಿನಿಂದ ರಾಜ್ಯದ ಎಲ್ಲಾ ಭಾಗಗಳಿಂದಲೂ ಕರ್ನಾಟಕ ಸಾರಿಗೆ ವ್ಯವಸ್ಥೆ ಇದ್ದು, ಉದ್ಯಾನನಗರಿಯು ಉತ್ತಮವಾದ ರೈಲ್ವೇ ಹಾಗೂ ವಿಮಾನ ಯಾನದ ಸೌಲಭ್ಯ ಕೂಡ ಹೊಂದಿದೆ. ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ದೇವಿಯ ದರ್ಶನ ಪಡೆದು ಕೃತಾರ್ಥರಾಗಿ. ಶುಭದಿನ.