ಎಂಟನೇ ಶತಮಾನಕ್ಕೆ ಸೇರಿದ ಕುಕನೂರಿನ ಶ್ರೀ ಮಹಾಮಾಯ ಜಗನ್ಮಾತೆಯ ದಿವ್ಯ ತಾಣವಿದು..!

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಆದಿಶಕ್ತಿ ಜಗನ್ಮಾತೆ ಭಕ್ತರನ್ನು ರಕ್ಷಿಸುವ ಸಲುವಾಗಿ ಭೂಮಿ ಮೇಲೆ ಬಂದು ನೆಲೆ ನಿಂತ ಉದಾಹರಣೆಗಳು ಸಾಕಷ್ಟಿವೆ. ಅಮ್ಮಾ ಎಂದು ಭಕ್ತಿಯಿಂದ ಬೇಡಿದರೆ, ಮಾತೃ ಹೃದಯಿ ಆದ ಆ ತಾಯಿಯು ಇಲ್ಲ ಎನ್ನದೆ ನಮ್ಮೆಲ್ಲ ಕೋರಿಕೆಗಳನ್ನು ಮಾನ್ಯ ಮಾಡ್ತಾಳೆ. ಅದ್ರಲ್ಲೂ ಶಕ್ತಿ ರೂಪಿನೀ ಆದ ಮಹಾಲಕ್ಷ್ಮೀ ಹಾಗೂ ಪಾರ್ವತಿ ದೇವಿ ಇಬ್ಬರೂ ಒಂದೇ ಕಡೆ ನೆಲೆಸಿರುವ ಈ ಕ್ಷೇತ್ರಕ್ಕೆ ಹೋದ್ರೆ ಮನುಷ್ಯ ಜನ್ಮ ಸಾರ್ಥಕ ಆದಂತೆ. ಬನ್ನಿ ಹಾಗಾದ್ರೆ ಆ ಪವಿತ್ರ ಕ್ಷೇತ್ರ ಯಾವುದು ಅಲ್ಲಿಗೆ ಹೋದ್ರೆ ಯಾವೆಲ್ಲ ಕಷ್ಟಗಳು ಪರಿಹಾರ ಆಗುತ್ತೆ ಅನ್ನೋದನ್ನ ಇವತ್ತಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಸುಮಾರು ಎಂಟನೇ ಶತಮಾನಕ್ಕೆ ಸೇರಿದ ಕುಕನೂರಿನ ಮಹಾಮಯಾ ದೇವಾಲಯವು ಅತ್ಯಂತ ಪುರಾತವಾದ ದೆಗುಲವಾಗಿದ್ದು, ಈ ಆಲಯವು ಪ್ರದಕ್ಷಿಣಾ ಪಥ, ಗರ್ಭಗೃಹ, ಅದ್ಭುತ ಕಲಾ ಕೆತ್ತನೆಗಳುಳ್ಳ ಕಲ್ಲು ಕಂಬಗಳನ್ನು ಒಳಗೊಂಡಿದೆ. ಈ ದೇಗುಲದ ಮುಖ್ಯ ಗರ್ಭಗುಡಿ ಒಳಗೆ ಮೂರು ದೇವರ ಮೂರ್ತಿ ಇದ್ದು, ಆ ಮೂರ್ತಿಗಳು ಎಲ್ಲವೂ ದಕ್ಷಿಣದ ಕಡೆ ಮುಖ ಮಾಡಿ ನಿಂತಿದ್ದು, ಈ ಕ್ಷೇತ್ರದ ವಿಶೇಷತೆ ಏನೆಂದರೆ ಲಕ್ಷ್ಮೀ ಹಾಗೂ ಪಾರ್ವತಿಯ ಮಧ್ಯದಲ್ಲಿ ಹರಿಹರನ ವಿಗ್ರಹ ಮಾಡಿರೋದು. ಈ ಕ್ಷೇತ್ರದಲ್ಲಿ ನೆಲೆ ನಿಂತಿರುವ ಈ ದೇವಿಯನ್ನು ಜೇಶ್ಟದದೇವಿ, ದ್ಯಾಮವ್ವ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

 

ಯಾರಿಗೆ ವಿವಾಹ ವಿಳಂಬ ಸಮಸ್ಯೆ ಇರುತ್ತೋ ಅವರು ಇಲ್ಲಿಗೆ ಬಂದು ಉಡಿಯನ್ನೂ ತುಂಬಿ ಹೋದ್ರೆ ಅವರಿಗೆ ಒಂದು ವರ್ಷದ ಒಳಗೆ ಮದುವೆ ಆಗುತ್ತೆ ಎಂದು ಹೇಳಲಾಗುತ್ತದೆ. ತೊಟ್ಟಿಲು ಸೇವೆ ಮಾಡಿಸಿದರೆ ಉತ್ತಮವಾದ ಸಂತಾನ ಭಾಗ್ಯ, ಭಕ್ತಿಯಿಂದ ಆರಧಿಸಿದವರಿಗೆ ಅಶೈಷ್ವರ್ಯವನ್ನು ಈ ದೇವಿ ಕರುಣಿಸುತ್ತಾಳೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಾಲಯಕ್ಕೆ ಹೆಚ್ಚಾಗಿ ಹೊಸದಾಗಿ ಮದುವೆಯಾದ ಜೋಡಿ ಬರ್ತಾರೆ, ಮದುವೆಯಾದ ನವ ದಂಪತಿಗಳು ಇಲ್ಲಿಗೆ ಬಂದು ದೇವಿಗೆ ಪೂಜೆ ಮಾಡಿಸಿಕೊಂಡು ಹೋದ್ರೆ ಅವರಿಗೆ ದಾಂಪತ್ಯ ಜೀವನ ಉತ್ತಮವಾಗಿ ಇರುತ್ತೆ ಎನ್ನುವುದು ಇಲ್ಲಿಗೆ ಬಂದು ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ಮಂಗಳವಾರ ಶುಕ್ರವಾರ ದ ದಿನಗಳಂದು ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಈ ಕ್ಷೇತ್ರದಲ್ಲಿ ನವರಾತ್ರಿ ಸಂದರ್ಭದಲ್ಲಿ ನವರಾತ್ರಿಯ ಒಂಭತ್ತು ದಿನಗಳು ದೇವಿಗೆ ಬಗೆಯ ಅಲಂಕಾರ ಮಾಡಲಾಗುತ್ತದೆ ಆ ಸಮಯದಲ್ಲಿ ಸರ್ವಾಲಂಕಾರ ಭೋಶಿತೇ ಆದ ದೇವಿಯನ್ನು ನೋಡೋದು ಕಣ್ಣಿಗೊಂದು ಹಬ್ಬವಾಗಿದೆ. ಪ್ರತಿವರ್ಷ ಈ ಕ್ಷೇತ್ರದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಹಾ ರಥೋತ್ಸವ ನಡೆಸಲಾಗುತ್ತದೆ. ಆ ಸಮಯದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.

 

ತ್ರಿಕಾಲ ಪೂಜೆ ಮಾಡುವ ಅತ್ಯಂತ ಶಕ್ತಿಶಾಲಿ ಆದ ಕುಕನೂರಿನ ಮಹಮಾಯಾ ದೇವಿಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಕುಂಕುಮಾರ್ಚನೆ, ಅಲಂಕಾರ ಸೇವೆ, ಸೀರೆ ಕುಪ್ಪಸ ಸಮರ್ಪಣೆ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ನಂಬಿ ಬಂದ ಭಕ್ತರನ್ನು ಕೈ ಬಿಡದೇ ಪೊರೆಯುತ್ತಿರುವ ಈ ಮಹಾಮಾಯಾ ದೇವಾಲಯವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರು ಎಂಬ ಪುಟ್ಟ ಗ್ರಾಮದಲ್ಲಿದೆ. ಈ ಕ್ಷೇತ್ರವು ಬೆಂಗಳೂರಿನಿಂದ 379 ಕಿಮೀ, ಮಂಗಳೂರಿನಿಂದ 389 ಕಿಮೀ, ಹುಬ್ಬಳ್ಳಿಯಿಂದ 109 ಕಿಮೀ, ಬಳ್ಳಾರಿಯಿಂದ 220 ಕಿಮೀ, ಕೊಪ್ಪಳದಿಂದ 27 ಕಿಮೀ, ಯಲಬುರ್ಗಾ ದಿಂದ 17 ಕಿಮೀ, ಬನ್ನಿಕೊಪ್ಪ ದಿಂದ 14 ಕಿಮೀ, ದೂರದಲ್ಲಿದೆ. ಕೊಪ್ಪಳಕ್ಕೆ ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸೌಲಭ್ಯ ಇದ್ದು, ಕೊಪ್ಪಳದಿಂದ ಯಲಬುರ್ಗಾ ಸೇರಿ ಅಲ್ಲಿಂದ ಬಾಡಿಗೆ ವಾಹನದ ಮುಖಾಂತರ ಸುಲಭವಾಗಿ ತಲುಪಬಹುದು. ಶುಭದಿನ.

Leave a Reply

Your email address will not be published. Required fields are marked *