ನಮಸ್ತೆ ಪ್ರಿಯ ಓದುಗರೇ, ಮನುಷ್ಯ ಯಾವುದೇ ಕೆಲಸವನ್ನು ಮಾಡಬೇಕಾದರೂ ಅವನ ಆರೋಗ್ಯ ಸುಸ್ಥಿರವಾಗಿ ಇರಬೇಕು. ಎಷ್ಟೇ ಸಂಪತ್ತು ಇದ್ರು ಆರೋಗ್ಯ ಭಾಗ್ಯ ಇಲ್ಲದೇ ಹೋದ್ರೆ ಮನುಷ್ಯ ಎಷ್ಟೇ ಗಳಿಸಿದರೆ ಏನು ಪ್ರಯೋಜನ? ಕೆಲವೊಮ್ಮೆ ವೈದ್ಯೋ ನಾರಾಯಣೋ ಹರಿಃ ಎಂದು ಕರೆಯೂ ವೈದ್ಯರೇ ದೈವ ಇಚ್ಛೆ ಇದ್ದರೆ ನಿಮ್ಮ ರೋಗ ವಾಸಿ ಆಗುತ್ತೆ ಎಂದು ಹೇಳುವ ಎಷ್ಟೋ ಉದಾಹರಣೆಗಳು ಅನೇಕ ಜನರ ಜೀವನದಲ್ಲಿ ನಡೆದು ಹೋಗಿರುತ್ತೆ. ನಿಮಗೆ ಎಷ್ಟೇ ಭೀಕರವಾದ ರೋಗ ಬಂದ್ರು ಈ ದೇವನ ಸನ್ನಿಧಿಗೆ ಹೋದ್ರೆ ಆ ರೋಗಗಳು ಎಲ್ಲವೂ ಭಗವಂತನ ಅನುಗ್ರಹ ದಿಂದ ವಾಸಿ ಆಗುತ್ತಂತೆ. ಬನ್ನಿ ಭವ ರೋಗಗಳನ್ನು ದೂರ ಮಾಡೋ ಆ ದೇವಾಲಯ ಯಾವುದು ಅಲ್ಲಿನ ಮಹಿಮೆ ಏನು ಎನ್ನೋದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸುಮಾರು 1000 ವರ್ಷಗಳಷ್ಟು ಪುರಾತನವಾದ ಅರೆಯೂರು ದೇಗುಲದಲ್ಲಿ ಈಶ್ವರನು ವೈದ್ಯನಾಥೇಶ್ವರ ಎನ್ನುವ ಹೆಸರಿನಿಂದ ನೆಲೆ ನಿಂತಿದ್ದು ಈ ಕ್ಷೇತ್ರದಲ್ಲಿ ನೂರಾರು ಋಷಿಗಳ ತಪಸ್ಸಿನ ಶಕ್ತಿ ಇಂದಿಗೂ ಜಾಗೃತವಾಗಿ ದೆ ಎಂದು ಹೇಳಲಾಗುತ್ತದೆ. ಇಲ್ಲಿ ಸ್ಥಾಪಿಸಿರುವ ಜ್ಯೋತಿರ್ಲಿಂಗ ವೂ ಕಾಸ್ಮಿಕ್ ಶಕ್ತಿಯನ್ನು ಹೊಂದಿದ್ದು, ಈ ಶಿವನ ಲಿಂಗದ ದರ್ಶನದಿಂದ ಮಾತ್ರವೇ ಏಳೇಳು ಜನ್ಮದ ಪಾಪ ಪರಿಹಾರ ಆಗುತ್ತೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರೋದಕ್ಕೆ ಕಾರಣ ಇಲ್ಲಿನ ವೈದ್ಯನಾಥೇಶ್ವರ ದೇವರು. ಎಂತಹ ಮಾರಣಾಂತಿಕ ಖಾಯಿಲೆಯಿಂದ ಬಳಲೀ ಬಂದವರನ್ನು ಕೂಡ ದೇವ ಕೈ ಬಿಡದೇ ಪೊರೆಯುತ್ತಿದ್ದನೆ.
ಕ್ಯಾನ್ಸರ್, ಅಸ್ತಮಾ, ಕಿಡ್ನಿ ಸ್ಟೋನ್, ಬಂಜೆತನ, ಚರ್ಮ ರೋಗ, ಕುಷ್ಟ ರೋಗ ಇನ್ನೂ ಭೀಕರ ಖಾಯಿಲೆ ಇಂದ ಜೀವನದಲ್ಲಿ ನೊಂದವರು ಈ ಕ್ಷೇತ್ರಕ್ಕೆ ಬಂದು ನೀರಿನಲ್ಲಿ ಸ್ನಾನ ಮಾಡಿ ಧೃಢ ಭಕ್ತಿಯಿಂದ ದೇವರಿಗೆ ಪೂಜೆ ಮಾಡಿಸುವುದರಿಂದ ಎಲ್ಲಾ ರೋಗಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಖಾಯಿಲೆ ಅಥವಾ ಇಷ್ಟಾರ್ಥಗಳು ಈಡೇರುತ್ತವೆ ಇಲ್ಲವೋ ಎಂದು ಈ ದೇಗುಲದಲ್ಲಿ ಪ್ರಸಾದ ಕೇಳುವುದರ ಮೂಲಕ ತಿಳಿಯಬಹುದು. ಕಾಯಿಲೆ ವಾಸಿ ಆಗುತ್ತದೋ ಇಷ್ಟಾರ್ಥ ಸಿದ್ಧಿ ಆಗುತ್ತದೆಯೋ ಎಂದು ಮನಸ್ಸಿನಲ್ಲಿ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲಿನ ಪ್ರಸಾದ ಕೊಡುವಂತೆ ವಿನಂತಿ ಮಾಡಿಕೊಳ್ಳಬೇಕು, ಆಗ ಅರ್ಚಕರು ಭಕ್ತಿಯಿಂದ ಲಿಂಗದ ಮೇಲಿಟ್ಟಿರುವ ಬಿಡಿ ಹೂಗಳನ್ನು ಮೂರು ಬೆರಳಿನಲ್ಲಿ ಪ್ರಸಾದದ ರೂಪದಲ್ಲಿ ತಂದು ಕೊಡ್ತಾರೆ. ಪ್ರಸಾದ್ ರೂಪದಲ್ಲಿ ಬಂದ ಹೂಗಳು ಬೆಸ ಸಂಖ್ಯೆಯ ಎಲ್ಲಿ ಇದ್ರೆ ಕಾಯಿಲೆ ಅಥವಾ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂದು, ಸಮ ಸಂಖ್ಯೆಯಲ್ಲಿ ಹೂಗಳು ಬಂದ್ರೆ ಅಂದುಕೊಂಡ ಕಾರ್ಯ ಫಲಿಸೋಡಿಲ್ಲಾ ದಿ ಎಂದು ಹೇಳಲಾಗುತ್ತದೆ. ಇನ್ನೂ ಮಕ್ಕಳು ಇಲ್ಲದವರು ಈ ದೇವಸ್ಥಾನಕ್ಕೆ ಬಂದು ತಲೆಯ ಮೇಲೆ ನೀರನ್ನು ಹಾಕಿಸಿಕೊಂಡು ಒದ್ದೆ ಬಟ್ಟೆಯಲ್ಲಿ ಸ್ವಾಮಿಯ ಸನ್ನಿದನದ ಸುತ್ತ ಮೂರು ಪ್ರದಕ್ಷಿಣೆ ಹಾಕಬೇಕು, ಇದೇ ರೀತಿ ಒಂಭತ್ತು ವಾರ ದೇವರನ್ನು ಪ್ರದಕ್ಷಿಣೆ ಹಾಕಿ ಪೂಜಿಸುವುದರಿಂದ ಸುಸಂಸ್ಕೃತ ಮಕ್ಕಳನ್ನು ಪಡೆಯಬಹುದು ಎಂಬ ಪ್ರತೀತಿ ಇದೆ. ಹಲವಾರು ಮಂದಿ ಉತ್ತಮವಾದ ಸಂತಾನ ಭಾಗ್ಯ ಪಡೆದ ಉದಾಹರಣೆಗಳು ಸಿಗುತ್ತವೆ. ಇವಿಷ್ಟೂ ಮಾತ್ರವಲ್ಲದೆ ಈ ದೇಗುಲವನ್ನು ನಾಗರ ಹಾವುಗಳು ಕಾಯುತ್ತಿದ್ದು,
ರಾತ್ರಿ ವೇಳೆ ದೇವರ ಆಭರಣಗಳನ್ನು ಕಾಯುವುದಕ್ಕೊಸ್ಕರ ನಾಗರ ಹಾವುಗಳು ನಿತ್ಯ ದೇವಸ್ಥಾನದ ಸುತ್ತ ತಿರುಗುತ್ತವೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಅಲ್ಲದೇ ಯಾರಾದ್ರೂ ದೇವರಿಗೆ ಅಶೌಚ ಮಾಡಿದ್ರೆ, ಅವರಿಗೆ ಹೆಡೆ ಬಿಚ್ಚಿ ಶುದ್ಧಿಯಾಗಿ ದೇಗುಲಕ್ಕೆ ಬನ್ನಿ ಎಂದು ಈ ಹಾವುಗಳು ಎಚ್ಚರಿಕೆ ನೀಡುತ್ತದೆ ಎಂದು ಇಲ್ಲಿಗೆ ಬಂದ ಅನೇಕ ಪ್ರತ್ಯಕ್ಷ ದರ್ಶಿಗಳ ಮನದ ಮಾತಾಗಿದೆ. ಭವ ರೋಗ ವೈದ್ಯ ಎಂದು ಕರೆಯುವ ಈ ದೇವರಿಗೆ ನಿತ್ಯ ತ್ರಿಕಾಲ ಪೂಜೆ ಮಾಡಲಾಗುತ್ತದೆ. ಭಾನುವಾರ, ಸೋಮವಾರ ಮತ್ತು ಅಮಾವಾಸ್ಯೆ ದಿನ ವಿಶೇಷ ಪೂಜೆ ನಡೆಯುತ್ತದೆ. ಆಚಾರ್ಯ ತಪ ಸಾಮ್ನಾ ಯ ಜಪೇನ ನಿಯಮೇನ ಚಾ, ಉತ್ಸವೇನನ್ನದಾನೇನೆ ಕ್ಷೇತ್ರ ವೃದ್ಧಿಸ್ತು ಪಂಚದಾ. ಎನ್ನುವ ಶ್ಲೋಕದ ಅನುಸಾರವಾಗಿ ಇಲ್ಲಿ ನಿತ್ಯ ದೇವರಿಗೆ ಪಂಚ ಕಾರ್ಯಗಳನ್ನು ವಿಧಿವತ್ತಾಗಿ ನಡೆಸಲಾಗುತ್ತದೆ. ಪ್ರತಿವರ್ಷ ಶಿವರಾತ್ರಿಯಂದು ರಥೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ದೇಗುಲಕ್ಕೆ ಭೇಟಿ ನೀಡುವ ಪ್ರತಿ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಇದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವನನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ, ಮೃತ್ಯುಂಜಯ ಹವನ, ಬಿಲ್ವಾರ್ಚನೆ, ಅಭಿಷೇಕ ಸೇವೆ, ಅಲಂಕಾರ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರವೂ ತುಮಕೂರು ಜಿಲ್ಲೆಯ ಅರೆಯೂರು ಎಂಬ ಗ್ರಾಮದಲ್ಲಿದೆ. ತುಮಕೂರಿನಿಂದ ಮಲ್ಲಸಂದ್ರ ಅಲಲೂರು, ಅರೆಯೂರು ಮಾರ್ಗವಾಗಿ ತೆರಳುವ ಬಸ್ ಗೆ ಹೋದ್ರೆ ಈ ಕ್ಷೇತ್ರಕ್ಕೆ ಸುಲಭವಾಗಿ ತಲುಪಬಹುದು. ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಆರೋಗ್ಯ ಸಮಸ್ಯೆ ಹೋಗಲಾಡಿಸಿಕೊಳ್ಳಿ. ಶುಭದಿನ.