ಗಂಗಾ ಪೂಜೆಗೆ ಪ್ರಸಿದ್ಧಿಯಾದ ಕೋಟೆ ನಾಡಿನ ಸುಂದರ ದೇವಾಲಯವಿದು…! ಅದುವೇ ಚಿತ್ರದುರ್ಗದ ಏಕನಾಥೆಶ್ವರಿ ದೇವಾಲಯ.

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಚಿತ್ರದುರ್ಗ ಈ ಊರಿನ ಹೆಸರನ್ನು ಕೇಳ್ತಾ ಇದ್ದ ಹಾಗೆ ನಮಗೆಲ್ಲಾ ಚಿತ್ರದುರ್ಗದ ಕೋಟೆ ನೆನಪಾಗುತ್ತೆ. ಹಾಗೆಯೇ ಇತಿಹಾಸ ಪ್ರಸಿದ್ಧವಾದ ಒನಕೆ ಓಬವ್ವನ ಚರಿತ್ರೆ ಹಾಗೂ ಮದಕರಿ ನಾಯಕರ ಚಿತ್ರ ಕಣ್ಣು ಮುಂದೆ ಬರುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಚಿತ್ರದುರ್ಗದ ಆದಿ ದೇವತೆಯಾಗಿ ಇರೋ ಶ್ರೀ ಏಕನಾಥೆಶ್ವರಿ ದೇವಿಯ ದರ್ಶನ ಪಡೆದು ಕೃತಾರ್ಥರಾಗೋಣ. ದ್ವಾಪರ ಯುಗದಲ್ಲಿ ಹಿಡಂಭ ಪಟ್ಟಣ ಕದಂಬರ ಕಾಲದಲ್ಲಿ ಚಂದ್ರವಳ್ಳಿ, ಚಾಲುಕ್ಯರ ಕಾಲದಲ್ಲಿ ಸೋಲ್ ಗಲ್ಲು, ಹೊಯ್ಸಳರ ಕಾಲದಲ್ಲಿ ಪೇರುಮಾಳೆಪೂರ ವಿಜಯನಗರ ಅರಸರ ಕಾಲದಲ್ಲಿ ಚಿಮ್ಮತಕಲ್ಲು, ಪಾಳೇಗಾರರ ಕಾಲದಲ್ಲಿ ಚತ್ರಕ ದುರ್ಗ ಎಂಬೆಲ್ಲ ಹೆಸರಿನಿಂದ ಕರೀತಾ ಇದ್ದ ಈಗಿನ ನಮ್ಮ ಚಿತ್ರದುರ್ಗದಲ್ಲಿ ಏಕನಾಥೆಶ್ವರಿ ಎಂಬ ದೇವಿಯ ಪುರಾತನವಾದ ದೇವಾಲಯ ಇದೆ. ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಆದಿ ದೇವತೆ ಆಗಿರುವ ಏಕನಾಥೆಶ್ವರಿ ದೇವಿಯು ಪಾರ್ವತಿ ದೇವಿಯ ಸ್ವರೂಪ ಆಗಿದ್ದು, ಈ ಕ್ಷೇತ್ರದಲ್ಲಿ ಅಮ್ಮನವರು ಸ್ವಯಂಭೂ ಆಗಿ ನೆಲೆಸಿ ಬೇಡಿ ಬಂದ ಭಕ್ತರ ಅರಸುತ್ತಿದ್ದಳೆ. ಅಮ್ಮಾ ಎಂದು ಭಕ್ತಿಯಿಂದ ಕೂಗಿದವರನ್ನು ಈ ತಾಯಿ ಎಂದೂ ಕೈ ಬಿಡೋದಿಲ್ಲ. ಚಿತ್ರದುರ್ಗದ ಜನರ ಮನೆ ದೇವಿಯ ಸನ್ನಿಧಾನಕ್ಕೆ ಬಂದು ಭಕ್ತಿಯಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿ ಆದ್ರೆ ನಿಮಗೆ ಪೂಜೆ ಮಾಡಿಸ್ತಿವಿ ಅಂತ ಹರಕೆಯನ್ನು ಹೊತ್ತುಕೊಂಡ ರೆ ಸಕಲ ಕಷ್ಟಗಳು ದೂರವಾಗಿ ಮನದ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ.

 

ಸಂತಾನ ಸಮಸ್ಯೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹೀಗೆ ಎಷ್ಟೇ ಕಠಿಣವಾದ ಸಮಸ್ಯೆಗಳು ಇದ್ದರೂ ಈ ದೇವಿಯ ಸನ್ನಿಧಾನಕ್ಕೆ ಬಂದರೆ ಆ ಸಮಸ್ಯೆಗಳು ಎಲ್ಲವೂ ಪೂರಿತವಾಗಿ ನೋಟದಿಂದಲೇ ದೂರವಾಗುತ್ತದೆ ಎಂದು ಈ ದೇವಿಯನ್ನು ನಂಬಿರುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಇನ್ನೂ ಮದಕರಿ ನಾಯಕರ ಆರಾಧ್ಯ ದೇವತೆಯಾದ ಏಕನಾತೆಸ್ವರಿ ದೇವಿಯ ದೇವಾಲಯವನ್ನು ಮತ್ತಿ ತಿಮ್ಮಣ್ಣ ನಾಯಕ ಎಂಬುವವರು ಪುನರ್ ನಿರ್ಮಾಣ ಮಾಡಿದರು ಎಂದು ಐತಿಹ್ಯ ಇದೆ. ಹಿಂದೆ ಈ ಸ್ಥಳದಲ್ಲಿ ಮತ್ತಿ ತಿಮ್ಮಣ್ಣ ನಾಯಕ ಎಂಬ ಪಾಳೆಗಾರ ಇದ್ದು, ಆತ ಇಲ್ಲಿಯ ಹಳೆ ಕೋಟೆಯನ್ನು ಕೆಡವಿ ಹೊಸ ಕೋಟೆಯನ್ನು ನಿರ್ಮಿಸಲು ಪ್ರಾರಂಭಿಸುತ್ತಾನೆ. ಆದ್ರೆ ಎಷ್ಟೇ ಬಾರಿ ಪ್ರಯತ್ನ ಪಟ್ಟರು ಕಟ್ಟುತ್ತಿದ್ದ ಹಾಗೆಯೇ ಕೋಟೆ ಬಿದ್ದು ಹೋಗುತ್ತೆ ಎಂದು ಇದರಿಂದ ಪಾಳೆಗಾರನು ಚಿಂತಾಕ್ರಾಂತನಾಗಿ ದಿನವನ್ನು ಕಳಿತ ಇರುವಾಗ  ಪಾಳೆಗಾರನ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ನಾನು ನೀನು ಕಟ್ಟುತ್ತಿರುವ ಕೋಟೆಯಲ್ಲಿ ನೆಲೆಸಿರುವ ದೇವಿ ನನ್ನ ಅಪ್ಪಣೆ ಇಲ್ಲದೆ ಯಾವ ಕೆಲಸವನ್ನೂ ನೀನು ಪ್ರಾರಂಭಿಸುವ ಹಾಗಿಲ್ಲ, ನನ್ನ ಸೇವೆಯನ್ನು ಮಾಡಿದರೆ ನಿನ್ನ ಕೋರಿಕೆಗಳು ನೆರವೇರುತ್ತದೆ ಎಂದು ಹೇಳಿದಳು. ನಂತರ ಪಾಳೆಗಾರ ನು ಅಮ್ಮನವರ ವಿಗ್ರಹ ಇರುವ ಸ್ಥಳವನ್ನು ಹುಡುಕಿಕೊಂಡು ಬಂದು ಪೂಜೆಯನ್ನು ಮಾಡಿದಾಗ ನಂತರ ಕೋಟೆಯನ್ನು ಮತ್ತೆ ಕಟ್ಟಲು ಪ್ರಾರಂಭಿಸಿದನು ಎಂದು ಆಮೇಲೆ ಕೋಟೆ ಯಾವುದೇ ಅಡೆತಡೆ ಇಲ್ಲದೆ ನಿರ್ಮಾಣ ಆಯ್ತು ಎಂದು ಇಲ್ಲಿನ ಸ್ಥಳ ಐತಿಹ್ಯದ ಲ್ಲಿ ತಿಳಿಸಲಾಗಿದೆ.

 

ಹೀಗಾಗಿ ಈ ಊರಿನ ಜನರು ಅಮ್ಮನ ಅಪ್ಪಣೆ ಇಲ್ಲದೆ ಯಾವ ಕೆಲಸವನ್ನೂ ಮಾಡಲು ಮುಂದಾಗುವುದಿಲ್ಲ. ಅಲ್ಲದೇ ಇಲ್ಲಿ ನಡೆಯುವ ಗಂಗಾ ಪೂಜೆಯು ಅತ್ಯಂತ ಪ್ರಸಿದ್ಧ ಆಗಿದ್ದು, ಪ್ರತಿ ವರ್ಷವೂ ನವೆಂಬರ್ ತಿಂಗಳಲ್ಲಿ ಇಲ್ಲಿ ಗಂಗಾ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಸರ್ವಲಾಂಕೃತ ಭೋಶಿತೆ ಆದ ಏಕನಾಥೆಶ್ವರಿ  ಅಮ್ಮನವರನ್ನು ನೋಡುವುದೇ ಬದುಕಿನ ಸುಕೃತಾಗಳಲ್ಲಿ ಒಂದಾಗಿದೆ. ಇನ್ನೂ ಇಲ್ಲಿ ನೆಲೆಸಿರುವ ಏಕನಾಥೆಶ್ವರಿ ಅಮ್ಮನವರು ದಕ್ಷಿಣಾಭಮುಖವಾಗಿ ನೆಲೆ ನಿಂತಿದ್ದು, ಇಲ್ಲಿರುವ ಪುರಾತನವಾದ ನಗಾರಿಯನ್ನು ಭೀಮನು ಭಾರಿಸಿದನು ಎಂದು ಪ್ರತೀತಿ ಕೂಡ ಇದೆ. ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಿಡಿ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. As ಸಮಯದಲ್ಲಿ ಚಿಕ್ಕ ಮಕ್ಕಳನ್ನು ಸಿಡಿ ಗೆ ಮುಟ್ಟಿಸಿದರೆ ಮಕ್ಕಳಿಗೆ ಯಾವುದೇ ರೋಗಗಳು ಸಮಸ್ಯೆಗಳು ಬರೋದಿಲ್ಲ ಎನ್ನುವ ನಂಬಿಕೆಯು ಇಲ್ಲಿನ ಜನರಲ್ಲಿ ಮನೆ ಮಾಡಿದೆ.

Leave a Reply

Your email address will not be published. Required fields are marked *