ಸೆಪ್ಟೆಂಬರ್ 23, ಶುಕ್ರವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಭಗವದ್ಗೀತೆ ಎನ್ನುವ ಅರ್ಥವನ್ನು ನಾನು ಸೂರ್ಯ ದೇವನಿಗೆ ಉಪದೇಶ ಮಾಡಿದೆ ಸೂರ್ಯ ದೇವ ಮನುವಿಗೆ ಉಪದೇಶ ಮಾಡಿದ ಮತ್ತು ಮನು ದೀಕ್ಷಾ ಕುಲಕ್ಕೆ ಉಪದೇಶ ಮಾಡಿದ. ಇಂದು ಶ್ರೀ ಶುಭಕೃತ್ ನಾಮ ಸಂವತ್ಸರ. ದಕ್ಷಿಣಾಯನ ವರ್ಷ ಋತು,ಭಾದ್ರಪದ ಮಾಸ ಕೃಷ್ಣ ಪಕ್ಷ . ಇಂದು ಸೆಪ್ಟೆಂಬರ್ 23 ನೆ ತಾರೀಕು. ಶುಕ್ರವಾರ. ಇಂದು ಮಘಾ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇದು ಬಹಳ ಒಳ್ಳೆಯ ದಿನ. ನೀವು ಏನು ಬಯಸಿದ್ದಿರಿ ಅದು ನಿಮ್ಮ ಮೂಲಕ ನಡೆಯುವಂತಹ ಎಲ್ಲದು ನಿಮ್ಮನ್ನು ಅವಲಂಬಿಸಿ ನೀವು ಹೇಳುವುದನ್ನು ಸರಿ ಎನ್ನುವ ದಿನ ಇಂದಾಗಿರುತ್ತೆ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ಸೌಹಾರ್ದವನ್ನು ನೀವು ಕಾಣುತ್ತೀರಿ. ವೃಷಭ ರಾಶಿಯವರಿಗೆ ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಬಹಳ ಜವಾಬ್ದಾರಿಯಿಂದ ಮತ್ತು ಹೆಚ್ಚು ಕೆಲಸ ಮಾಡಬೇಕಾಗುತ್ತೆ. ಸ್ವಲ್ಪ ನೀವು ಸಹಕಾರವನ್ನು ತೋರಿಸದೆ ಹೋದ್ರು ಕೂಡ ದೊಡ್ಡವರು ನಿಮ್ಮ ಮೇಲೆ ದೂರನ್ನು ಹೇಳುವ ಸಾಧ್ಯತೆ ಇರುತ್ತದೆ. ಮನಸ್ಸಿಗೆ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಅವಕಾಶ ಇರುತ್ತೆ. ಅಮ್ಮನ ಅರೋಗ್ಯದ ಬಗ್ಗೆ ಕೂಡ ಗಮನ ಕೊಡಿ. ಮಿಥುನ ರಾಶಿಯವರಿಗೆ ಇದು ಬಹಳ ಒಳ್ಳೆಯ ದಿನ ಅನೇಕ ರೀತಿಯ ಯಶಸ್ಸು ಕಾಣುತ್ತೀರಿ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಮತ್ತು ಮಿತ್ರರಿಂದ ಬಹಳ ಒಳ್ಳೆಯ ದಿನ ಹುರುಪನ್ನು ನೋಡುತ್ತೀರಿ.

 

ನಿಮಗೆ ಇವತ್ತು ಎಷ್ಟ್ಟು ಸಮಯ ಇರುತ್ತೋ ಅಷ್ಟನ್ನು ಬಹಳ ಸರಿಯಾಗಿ ಉಪಯೋಗ ಮಾಡಿಕೊಳ್ಳಿ ಮತ್ತು ಪರಾಕ್ರಮದಿಂದ ಅನೇಕ ರೀತಿಯ ಜಯವನ್ನು ಸಾಧಿಸುತ್ತೀರಿ. ಕರ್ಕಾಟಕ ರಾಶಿಗೆ ಇಂದು ನಿಮ್ಮ ಕೌಟುಂಬಿಕ ವಾತಾವರಣದಲ್ಲಿ ಸ್ವಲ್ಪ ಏರು ಪೇರು ಆಗಬಹುದು. ನಂದೇ ನಡೀಬೇಕು ಎನ್ನುವ ಹಠ ನಿಮಗೆ ನಿಮ್ಮ ಮನೆಯಲ್ಲಿ ನೋಡುತ್ತೀರಿ. ಎಲ್ಲವೂ ಸೌಹಾರ್ದದಿಂದ ನಿಭಾಯಿಸಿಕೊಂಡು ಹೋದ್ರೆ ಮನೆಗೆ ಅತ್ಯಂತ ಹೆಚ್ಚಿನ ನೆಮ್ಮದಿ ಸಂತೋಷ ನೀಡುವ ದಿನ. ಸಿಂಹ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ ಮನಸಿನಲ್ಲಿ ನಮ್ಮದು ಅತಿ ಹೆಚ್ಚು ಇರುತ್ತೆ. ನಾನು ಏನೇ ಮಾಡಿದ್ರು ಜಯವನ್ನು ಸಾಧಿಸುತ್ತೆನೇ ಎನ್ನುವ ಧೋರಣೆ ನಿಮಗೆ ಇರುತ್ತೆ ಆದ್ರೆ ಬೇರೆಯವರ ವಿಶ್ವಾಸವನ್ನು ಖಂಡಿತವಾಗಿ ಪಡೆಯಬೇಕು. ಕನ್ಯಾ ರಾಶಿಗೆ ಇದು ಸುಗಮವಾದ ದಿನ. ಆದ್ರೆ ಮಿತ್ರತ್ವದಲ್ಲಿ ಒಡಕು ಬಂತ ಎನ್ನುವ ಭಯ ನೋಡುತ್ತೀರಿ. ಅದು ಭಯ ಅಷ್ಟೇ ಆದ್ರೆ ನಿಜ ಆಗಿರಲ್ಲ. ಮನಸ್ಸಿಗೆ ನೆಮ್ಮದಿ ಎರಡು ದಿನಗಳ ನಂತರ ಪ್ರಾಪ್ತಿ ಆಗುತ್ತೆ. ಯಾವುದೇ ನಿರ್ಧಾರಗಳನ್ನು ಮಾಡಬೇಕು. ತುಲಾ ರಾಶಿಗೆ ಬಹಳ ಒಳ್ಳೆಯ ದಿನ. ನೀವು ನಿಮ್ಮ ಮಿತ್ರರಿಂದ ಧನಾಗಮ ಸೂಚನೆ ಕಾಣುತ್ತೀರಿ ಯಶಸ್ಸನ್ನು ಕಾಣುತ್ತೀರಿ. ಇಷ್ಟಾರ್ಥ ಸಿದ್ಧಿ. ಎಲ್ಲರನ್ನೂ ಮನ ಪೂರ್ವಕವಾಗಿ ಮಾತನಾಡಿಸಿ ಜಯ ಪ್ರಾಪ್ತಿ ಆಗುತ್ತೆ. ವೃಶ್ಚಿಕ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಉದ್ಯಮದಲ್ಲಿ ಅತಿ ಹೆಚ್ಚಿನ ಪ್ರಗತಿ. ಎಲ್ಲಾ ಕಡೆಯಿಂದ ನಿಮಗೆ ಸೌಹಾರ್ದ ಗೌರವ ಪ್ರಾಪ್ತಿ ಆಗುತ್ತೆ. ಧನಸ್ಸು ರಾಶಿಗೆ ಭಾಗ್ಯೋದಯ ಆಗುತ್ತೆ. ನೀವು ಹೇಳಿದ್ದೆಲ್ಲ ನಡೆಯುತ್ತೆ.

 

ದೊಡ್ಡವರು ನಿಮಗೆ ಆಶೀರ್ವಾದ ಮಾಡುತ್ತಾರೆ. ದೇವರ ಆಶೀರ್ವಾದ ಪಡೆಯುವುದನ್ನು ಮರೆಯಬೇಡಿ. ಮಕರ ರಾಶಿಗೆ ಇಂದು ಮಧ್ಯಾನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಕಡಿಮೆ ಆಗುವ ಸಂಭವ ಇರುತ್ತದೆ. ನೀವು ಬೇರೆಯವರಿಂದ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀವು ನಿರೀಕ್ಷೆ ಮಾಡಬಾರದು. ಬೇರೆಯವರಿಂದ ಎಷ್ಟು ಬೇಕು ಅಂತ ಕೇಳುತ್ತೀರಿ ಅಷ್ಟು ಇವ್ವತ್ತು ಸಿಗದೆ ಹೋಗಬಹುದು. ಆದ್ದರಿಂದ ಧ್ಯಾನ ಮಾಡಿ ಮನಸ್ಸಿಗೆ ಶಾಂತಿ ಪಡೆಯಬಹುದು. ಕುಂಭ ರಾಶಿಗೆ ಇದು ಬಹಳ ಒಳ್ಳೆಯ ದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ. ಬೇರೆಯವರೊಂದಿಗೆ ಬಹಳ ಒಳ್ಳೆಯ ಸಹಕಾರದಿಂದ ಮುಂದೆ ಹೋಗಿ. ಅನೇಕ ರೀತಿಯಲ್ಲಿ ಒಳ್ಳೆಯದನ್ನು ಕಾಣುತ್ತೀರಿ. ಮೀನಾ ರಾಶಿಗೆ ಇಂದು ಸಾಮಾಜಿಕ ವಾತಾವರಣದಲ್ಲಿ ಜಯ ಕಾಣುವ ದಿನ. ಮಿತ್ರರು ಅನೇಕ ರೀತಿಯಲ್ಲಿ ನಿಮಗೆ ಸಹಕಾರ ಕೊಡುತ್ತಾರೆ. ಶತ್ರುಗಳು ಮಿತ್ರರಾಗಿ ಪರಿವರ್ತನೆ ಆಗುತ್ತಾರೆ. ಅಥವಾ ಹೆಮ್ಮಿಟ್ಟುತ್ತಾರೆ. ಆದ್ದರಿಂದ ಎಲ್ಲಿ ಹೋದರು ಜಯ ನಿಮ್ಮದೇ ಹಾಗಂತ ಅತಿ ಆತ್ಮ ವಿಶ್ವಾಸ ಒಳ್ಳೆಯದಲ್ಲ. ನಿಮ್ಮ್ ಕೆಲಸ ಸರಿಯಾದ ರೀತಿಯಲ್ಲಿ ಮಾಡಿ. ಶುಭದಿನ

Leave a Reply

Your email address will not be published. Required fields are marked *