ಹರಳೆಣ್ಣೆಯನ್ನು ನಿತ್ಯವೂ ಬಳಕೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಗೂ ಗುಡ್ ಬೈ ಹೇಳಬಹುದು.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಎಣ್ಣೆಗಳಲ್ಲಿ ವಿಧವಾದ ಬಗೆಗಳು ಇವೆ. ತಲೆಕೂದಲಿಗೆ ಕೊಬ್ಬರಿ ಎಣ್ಣೆಯಾದರೆ, ಅಡುಗೆಗೆ ಬೇರೆ ಎಣ್ಣೆ ದೀಪವನ್ನು ಹಚ್ಚಲು ಬೇರೆ ಎಣ್ಣೆಯನ್ನು ಬಳಸುತ್ತಾರೆ. ಅದರಲ್ಲಿ ಹರಳೆಣ್ಣೆ ಕೂಡ ಒಂದಾಗಿದೆ.ಹರಳೆಣ್ಣೆಯನ್ನು ಜನರು ಅನೇಕ ಸಮಸ್ಯೆಗಳಿಗೆ ಬಳಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಹರಳೆಣ್ಣೆ ಅನ್ನು ಹಳ್ಳಿಗಳಲ್ಲಿ ಔಡಲ ಎಣ್ಣೆ ಎಂದು ಕರೆಯುತ್ತಾರೆ. ಹರಳೆಣ್ಣೆಯನ್ನು ಹೆಚ್ಚಾಗಿ ಜನರು ಬಳಕೆ ಮಾಡುವುದಿಲ್ಲ. ಇದರ ಬಳಕೆ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಅನೇಕ ಸಮಸ್ಯೆಗಳಿಗೆ ಹರಳೆಣ್ಣೆ ಪರಿಹಾರವಾಗಿದ್ದು, ಅದನ್ನು ಬಳಸುವುದು ಹೇಗೆಂದು ತಿಳಿದುಕೊಳ್ಳಲು ಮುಂದೆ ಓದಿ. ಮೊದಲನೆಯ ಉಪಯೋಗ, ಸುಮಾರು ಜನರಿಗೆ ಕಣ್ಣಿನ ಸುತ್ತಲೂ ಕಣ್ಣಿನ ಕೆಳಗಡೆ ಕಪ್ಪು ಡಾರ್ಕ್ ಸರ್ಕಲ್ ಆಗಿರುತ್ತವೆ. ಇದರಿಂದ ನಮ್ಮ ಸೌಂದರ್ಯವೂ ಹಾಳಾಗುತ್ತದೆ. ಜೊತೆಗೆ ನಮ್ಮ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಣ್ಣಿನ ಸುತ್ತಲೂ ಆಗಿರುವ ಡಾರ್ಕ್ ಸರ್ಕಲ್ ಅನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಬಳಸುತ್ತೇವೆ. ಆದರೆ ಇದರಿಂದ ನಮ್ಮ ಸೌಂದರ್ಯ ಮತ್ತಷ್ಟು ಹಾಳು ಆಗುತ್ತದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವ ಹರಳೆಣ್ಣೆಯನ್ನು ಬಳಕೆ ಮಾಡಿದರೆ ಸಾಕು ಇಂತಹ ಸಮಸ್ಯೆಗಳಿಂದ ದೂರವಿರಬಹುದು.

 

ನಿಮಗೇನಾದರೂ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಆಗಿದ್ದಾರೆ ಮುಖದ ಮೇಲೆ ಕಪ್ಪು ಕಲೆಗಳು ಆಗಿದ್ದರೆ ಒಮ್ಮೆ ನೀವು ಈ ಎಣ್ಣೆಯನ್ನು ಒಮ್ಮೆ ಮುಖದ ಮೇಲೆ ಹಚ್ಚಿ. ಇದರಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಹೆಚ್ಚಾಗಿ ಇರುವುದರಿಂದ ಇದು ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ.ಇನ್ನೂ ನಿಮ್ಮ ಮುಖದ ಮೇಲೆ ತುಂಬಾನೇ ಪಿಂಪ್ಲ್ಸ್ ಆಗಿದ್ದರೆ ಮುಖದ ತುಂಬಾ ಮೊಡವೆಗಳು ಆಗಿದ್ದರೆ ಈ ಹರಳೆಣ್ಣೆಯನ್ನು ಮಲಗುವ ವೇಳೆಯಲ್ಲಿ ಮುಖದ ತುಂಬಾ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆದುಕೊಳ್ಳಿ. ಇದರಿಂದ ಮುಖದ ಮೊಡವೆಗಳು ಮಾಯವಾಗುತ್ತವೆ. ಇನ್ನೂ ಕೂದಲಿನ ಬೆಳವಣಿಗೆಗೆ ಈ ಎಣ್ಣೆ ದಿವ್ಯ ಔಷಧವಾಗಿದೆ ಹೌದು ತಲೆಕೂದಲಿಗೆ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತವೆ. ತಲೆ ಕೂದಲಿನ ಬೇರುಗಳಿಗೆ ಹಚ್ಚಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಬೇಕು. ಏಕೆಂದ್ರೆ ಇದರಲ್ಲಿ ಅಂಟಿನ ಅಂಶ ಜಾಸ್ತಿ ಇರುತ್ತದೆ. ಇದಕ್ಕಾಗಿ ತಲೆಕೂದಲು ತೊಳೆಯಲು ಕಷ್ಟವಾಗುತ್ತದೆ ಆದರೆ ಇದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು

 

. ಹಾಗೂ ತಲೆ ಹೊಟ್ಟು ಕೂಡ ಕಡಿಮೆ ಆಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲು ಉದುರುವುದಿಲ್ಲ. ಇನ್ನೂ ಕೀಲು ನೋವು ಇದ್ದವರಿಗೆ ಇದು ರಾಮಬಾಣ ಇದ್ದಂತೆ. ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಅದರ ಮೇಲೆ ಬಿಸಿ ನೀರು ಹಾಕಿ. ಹೀಗೆ ವಾರದಲ್ಲಿ ನಾಲ್ಕು ಬಾರಿ ಮಾಡಿ. ಇದರಿಂದ ಸಂಧಿವಾತ ಕೀಲು ನೋವು ಎಲ್ಲವೂ ಉಪಶಮನ ಆಗುತ್ತದೆ. ಹೀಗೇ ಕೂದಲು, ಚರ್ಮ, ಕೀಲು ನೋವು, ದೇಹದ ನೋವು, ಕಾಲುಗಳ ಆರೈಕೆ ಹೀಗೆ ಇತ್ಯಾದಿ ಸಮಸ್ಯೆಗಳನ್ನು ಗುಣಪಡಿಸುವ ಅಂಶಗಳು ಹರಳೆಣ್ಣೆಯಲ್ಲಿದೆ ಅಂತ ಹೇಳಿದರೆ ತಪ್ಪಾಗಲಾರದು. ತುಂಬಾ ಜನರು ಈ ಎಣ್ಣೆಯನ್ನು ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಬಳಕೆ ಮಾಡುತ್ತಾರೆ. ಮತ್ತು ಮಲಬದ್ಧತೆ ಸಮಸ್ಯೆಯನ್ನು ಕೂಡ ಹೋಗಲಾಡಿಸಲು ಈ ಹರಳೆಣ್ಣೆ ಉಪಯೋಗಿಸುತ್ತಾರೆ. ಕೆಲವು ಹನಿ ಹರಳೆಣ್ಣೆ ಮತ್ತು ಸಮಾನ ಪ್ರಮಾಣದಲ್ಲಿ ಒಂದು ಹನಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಮುಖದ ಮೇಲೆ ಸಮಸ್ಯೆಯಿರುವ ಜಾಗಕ್ಕೆ ಹಚ್ಚಿ. ತೆಂಗಿನ ಎಣ್ಣೆಯೊಂದಿಗೆ ಹರಳೆಣ್ಣೆ ಕಪ್ಪು ಕಲೆಗಳನ್ನು ತೆಗೆದುಹಾಕಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಶುಭದಿನ.

Leave a Reply

Your email address will not be published. Required fields are marked *