ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಮ್ಮ ದೇಹದ ಪ್ರಕ್ರಿಯೆ ನಮ್ಮ ನರಗಳ ಮೇಲೆ ಅವಲಂಬಿತವಾಗಿರುತ್ತದೆ. ವಯಸ್ಸಾದವರಲ್ಲಿ ನರಗಳ ದೌರ್ಬಲ್ಯ ಸ್ವಲ್ಪ ಕುಳಿತುಕೊಂಡರು ಕೈ ಕಾಲುಗಳಲ್ಲಿ ಸೆಳೆತ ಕೈ ಕಾಲುಗಳು ಜೋಮು ಹಿಡಿಯುವುದು ನರಗಳಲ್ಲಿ ಬ್ಲೋಕೇಜ ಆಗುವುದು ನರಗಳಲ್ಲಿ ಬಾವು ಬರುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಇವೆಲ್ಲ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹಾಗೆಯೇ ಇವುಗಳ ನೋವು ಸಮಯ ಕಳೆದಂತೆ ಹೆಚ್ಚುತ್ತಲೇ ಹೋಗುತ್ತಿದೆ ಹೊರತು ಕಡಿಮೆ ಆಗುತ್ತಿಲ್ಲ. ಇದಕ್ಕಾಗಿ ಜನರು ನ್ಯೂರಾಲಜಿಸ್ಟ್ ಹತ್ತಿರ ಚಿಕಿತ್ಸೆ ಪಡೆಯುತ್ತಾರೆ ಆದರೆ ಯಾವುದೇ ರೀತಿಯಲ್ಲಿ ಸಂತೃಪ್ತಿಕಾರಕ ಫಲಿತಾಂಶ ದೊರೆಯುವುದಿಲ್ಲ. ಅಷ್ಟೇ ಅಲ್ಲದೇ ಈ ಸಮಸ್ಯೆಗಳಿಂದ ಹೊರಗೆ ಬರಲು ಇಂಗ್ಲಿಷ್ ಮಾತ್ರೆಗಳನ್ನು ಔಷಧಗಳನ್ನು ತೆಗೆದುಕೊಳ್ಳುತ್ತೇವೆ. ನಿಮಗೆ ಗೊತ್ತೇ ಪೈನ್ ಕ್ಯೂಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಬೀರುತ್ತದೆ. ಅದಕ್ಕಾಗಿ ಆದಷ್ಟು ನಾವು ನೈಸರ್ಗಿಕವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ಈ ನರಗಳ ದೌರ್ಬಲ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ನಮ್ಮ ಅನಾರೋಗ್ಯ ಹಾಳಾಗಲು ಮುಖ್ಯ ಕಾರಣ ಏನೆಂದರೆ ಅದು ಟೆನ್ಷನ್ ಅಥವಾ ಒತ್ತಡ. ಯಾವ ವ್ಯಕ್ತಿ ಖಿನ್ನತೆ ಬೇಜಾರು ನೋವು ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಾನೆ ಅವನಲ್ಲಿ ಇಂತಹ ಸಮಸ್ಯೆಗಳನ್ನು ಕಾಣಬೇಕಾಗುತ್ತದೆ.
ಅದಕ್ಕಾಗಿ ನಾವು ಎಂಥಹ ಸಮಸ್ಯೆಗಳು ಬರಲಿ ಆದಷ್ಟು ಒತ್ತಡವನ್ನು ಮಾಡಿಕೊಳ್ಳಬಾರದು ಟೆನ್ಷನ್ ಮಾಡಿಕೊಳ್ಳಬಾರದು. ಪ್ರತಿಯೊಬ್ಬರ ಮನೆಯಲ್ಲಿ ಸಮಸ್ಯೆಗಳು ಇರುತ್ತವೆ ಅದಕ್ಕಾಗಿ ಚಿಂತೆ ಮಾಡಬಾರದು. ಯಾರೂ ಚಿಕ್ಕ ಪುಟ್ಟ ವಿಶಯಗಳಿಗೆ ಟೆನ್ಷನ್ ಮಾಡಿಕೊಳ್ಳುತ್ತಾರೆ ಅವರ ನರಗಳು ವೀಕ್ ಆಗುತ್ತವೆ ಬಲಹೀನ ಆಗುತ್ತವೆ. ಇನ್ನೂ ಎರಡನೇಯ ಮನೆಮದ್ದು. ಅದುವೇ ಬೆಳ್ಳುಳ್ಳಿ ಎಲ್ಲರ ಮನೆಯಲ್ಲಿ ಬೆಳ್ಳುಳ್ಳಿ ಸಿಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನರಗಳನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ಮೂಳೆಗಳಿಗೆ ಒಳ್ಳೆಯದು. ನಾಲ್ಕು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಕುಟ್ಟಿ ಪೇಸ್ಟ್ ಮಾಡಿಕೊಂಡು. ಈಗ ಒಂದು ಲೋಟ ಹಾಲಿನಲ್ಲಿ ಈ ಪೇಸ್ಟ್ ಅನ್ನು ಹಾಕಿ ಕುದಿಸಿಕೊಂಡು ಸೋಸಿ ರಾತ್ರಿ ಮಲಗುವ ವೇಳೆಯಲ್ಲಿ ಕುಡಿದು ಮಲಗಿ. ಈ ರೀತಿಯಾಗಿ ವಾರದಲ್ಲಿ ಮೂರ್ನಾಲ್ಕು ಬಾರಿ ಮಾಡಿ. ಈ ರೀತಿ ಮಾಡುವುದರಿಂದ ನರಗಳ ಬಲಹೀನತೆ, ಕಡಿಮೆ ಆಗುತ್ತದೆ. ನಿಮ್ಮ ದೇಹಕ್ಕೆ ಶಕ್ತಿ ಕೂಡ ಸಿಗುತ್ತದೆ.ಇನ್ನೂ ರಾತ್ರಿ ವೇಳೆಗೆ ಮಲಗುವಾಗ ನಾಲ್ಕೈದು ಬಾದಾಮಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅದರ ಸಿಪ್ಪೆ ತೆಗೆದು ತಿನ್ನಬೇಕು.
ನೆನೆಸಿದ ಬಾದಾಮಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಅನೇಕ ಬಗೆಯ ಪೋಷಕಾಂಶಗಳು ಸಿಗುತ್ತದೆ. ಅಷ್ಟೇ ಅಲ್ಲದೇ ವಿಟಮಿನ್ ಸಿ ಡಿ ಕೆ ಮ್ಯಾಗ್ನಿಷಿಯಂ ಕ್ಯಾಲ್ಷಿಯಂ ಪೊಟ್ಯಾಶಿಯಂ ಐರನ್ ನಾರಿನ ಅಂಶ ತಾಮ್ರ ರಂಜಕ ಅನೇಕ ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಸೇವನೆ ಮಾಡುವುದರಿಂದ ಮನಸ್ಸಿನ ಸ್ಥಿತಿ ಉತ್ತಮಗೊಳ್ಳುತ್ತದೆ. ಹಾಗೂ ನರಗಳು ಕೂಡ ಬಲಗೊಳ್ಳುತ್ತವೆ. ಹೃದ್ರೋಗದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ದೇಹದಲ್ಲಿ ಉತ್ಕಕರ್ಷಕ ಗುಣಗಳನ್ನು ಹೊಂದಿವೆ. ಇನ್ನೂ ವಾರದಲ್ಲಿ ಎರಡು ಬಾರಿ ಆದರೂ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹಾಗೂ ನರಗಳಿಗೆ ದೇಹದ ಎಲ್ಲ ಅಂಗಗಳಿಗೆ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಜೊತೆಗೆ ನರಗಳ ಬಲಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಈ ಬಾದಾಮಿ. ಅದಕ್ಕಾಗಿ ಈ ಬಾದಾಮಿ ಡ್ರೈ ಫ್ರೂಟ್ಸ್ ಅನ್ನು ತಂದು ಸೇವನೆ ಮಾಡಿ ಶುಭದಿನ.