ನಮಸ್ತೇ ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೆ, ದೊಡ್ಡವರು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಹರಸಾಹಸವನ್ನು ಮಾಡುತ್ತಾರೆ. ಆದರೆ ಚಿಕ್ಕ ಮಕ್ಕಳು ತಮ್ಮ ತ್ವಚೆಯನ್ನು ತಾವೇ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವುಗಳ ಕಾಳಜಿಯನ್ನು ತಾಯಿ ಮಾಡಬೇಕಾಗುತ್ತದೆ. ಕಾಲಿನಿಂದ ಹಿಡಿದು ತಲೆಯವರೆಗೆ ಹಾಗೂ ಊಟದಿಂದ ಹಿಡಿದು ತ್ವಚೆಯ ಮತ್ತು ಆರೋಗ್ಯದವರೆಗೆ ಆರೈಕೆ ಮಾಡಬೇಕಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಚಿಕ್ಕ ಮಗುವಿನ ತ್ವಚೆ ಬ್ರೈಟ್ ಕಲರ್ ಹಾಗೂ ಒಳ್ಳೆಯ ರೀತಿಯಲ್ಲಿ ಲುಕ್ ಆಗಿ ಕಾಣಬೇಕು ಅಂದರೆ ಕೆಲವು ಮನೆಮದ್ದುಗಳನ್ನು ನಾವು ತಿಳಿಸಿ ಕೊಡುತ್ತೇವೆ ಬನ್ನಿ. ಎಲ್ಲಾ ತಾಯಂದಿರಿಗೆ ತಮ್ಮ ಮಗುವಿನ ತ್ವಚೆ ಬೆಳ್ಳಗೆ ಸುಂದರವಾಗಿ ಕೋಮಲವಾಗಿ ಇರಬೇಕು ಅಂತ ಆಸೆ ಇರುತ್ತದೆ. ನೀವು ಸಾಮಾನ್ಯವಾಗಿ ಕೇಳಿರಬಹುದು. ಮಗು ಕಪ್ಪಗೆ ಹುಟ್ಟಿದರೆ ನೀವು ಏನು ಆಹಾರ ಸೇವನೆ ಮಾಡಿದ್ದೀರಿ. ಹಾಗೆ ಹೀಗೆ ಅಂತ ಜನರು ಅಪಹಾಸ್ಯ ಮಾಡುತ್ತಾರೆ. ಅದಕ್ಕಾಗಿ ನಿಮ್ಮ ಮಗು ಕಪ್ಪಗೆ ಹುಟ್ಟಿದ್ದರೂ ಕೂಡ ನೀವು ಈ ಮನೆಮದ್ದುಗಳನ್ನು ಬಳಸಿ ನೋಡಿ.
ಖಂಡಿತವಾಗಿ ನಿಮ್ಮ ಮಗು ಸುಂದರವಾಗಿ ಬೆಳ್ಳಗೆ ಕಾಣುತ್ತದೆ. ಮೊದಲನೆಯದು, ಮಗುವಿಗೆ ಎಣ್ಣೆಯ ಮಸಾಜ್ ಚೆನ್ನಾಗಿ ಮಾಡಬೇಕು. ಮೊದಲಿನ ಕಾಲದಲ್ಲಿ ಜನರು ತಾಯಿಗೆ ಮತ್ತು ಮಗುವಿಗೆ ಸಂಜೆ ವೇಳೆಗೆ ಎಣ್ಣೆ ಮಸಾಜ್ ಮಾಡಿ ಬಿಸಿ ಬಿಸಿ ನೀರಿನ ಸ್ನಾನವನ್ನು ಮಾಡಿಸುತ್ತಿದ್ದರು ಇದರಿಂದ ತಾಯಿ ಹಾಗೂ ಮಗುವಿನ ಚರ್ಮದಲ್ಲಿ ಅನೇಕ ಬದಲಾವಣೆ ಕಂಡು ಬರುತ್ತಿತ್ತು. ಹೌದು ಮಗುವಿನ ದೇಹವನ್ನು ಪೂರ್ತಿಯಾಗಿ ಎಣ್ಣೆಯಿಂದ ಮಸಾಜ್ ಮಾಡಿದರೆ ಸಾಕು ಸಮಯ ಹೋದಂತೆ ಮಗುವಿನ ಬಣ್ಣ ಬದಲಾಗುತ್ತದೆ. ಮಗು ಸುಂದರವಾಗಿ ಕಾಣುತ್ತದೆ. ಚಳಿಗಾಲದಲ್ಲಿ ಮಳೆಗಾಲದಲ್ಲಿ ಆಲಿವ್ ಆಯಿಲ್ ಬಾದಾಮಿ ಎಣ್ಣೆ ಕೊಬ್ಬರಿ ಎಣ್ಣೆ ಸಾಸಿವೆ ಎಣ್ಣೆ ಇವುಗಳಲ್ಲಿ ಯಾವುದಾದರು ಒಂದು ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ ಮಗುವಿಗೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆ ಬಿಟ್ಟು ಸ್ನಾನವನ್ನು ಮಾಡಿಸಿ ನೋಡಿ. ಇನ್ನೂ ಬೇಸಿಗೆ ಕಾಲದಲ್ಲಿ ಹರಳೆಣ್ಣೆ ಕೊಬ್ಬರಿ ಎಣ್ಣೆ ಎಳ್ಳೆಣ್ಣೆ ಇವುಗಳಲ್ಲಿ ಯಾವುದಾದರೂ ಒಂದು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಮಗುವಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಮಗುವಿನ ತ್ವಚೆಯು ಕೋಮಲವಾಗುತ್ತದೆ.
ಮಗುವಿನ ತ್ವಚೆಗೆ ಅದರಲ್ಲೂ ಸ್ನಾನವನ್ನು ಮಾಡಿಸುವಾಗ ಯಾವುದೇ ರೀತಿಯ ಸೋಪನ್ನು ಬಳಕೆ ಮಾಡಬೇಡಿ. ಬದಲಾಗಿ ಮನೆಯಲ್ಲಿ ಪೌಡರ್ ಅನ್ನು ತಯಾರಿಸಿ ಬಳಕೆ ಮಾಡಿ. ಒಂದು ಭಟ್ಟಲು ಹೆಸರು ಕಾಳು ತೆಗೆದುಕೊಂಡು ಅವುಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ಅರಿಶಿಣ ಹಾಗೂ ಒಂದು ಇಂಚು ಲವಂಚ ಹಾಕಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಈ ಪೌಡರ್ ಅನ್ನು ಮಗುವಿಗೆ ಸ್ನಾನವನ್ನು ಮಾಡಿಸುವಾಗ ಉಪಯೋಗಿಸಿ. ಹೆಸರು ಕಾಳು ಪುಡಿ ಇಷ್ಟವಾಗದೆ ಇರುವವರು ಕಡಲೆ ಹಿಟ್ಟು ಉಪಯೋಗಿಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಹೌದು ನಾವು ತಿಳಿಸುವ ಈ ಟಿಪ್ಸ್ ಗಳು ನಿಜಕ್ಕೂ ಬಹಳ ಅದ್ಭುತವಾಗಿದೆ ಹಾಗೂ ಯಾವುದೇ ಖರ್ಚು ವೆಚ್ಚ ಇಲ್ಲದೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಮಗುವಿನ ತ್ವಚಯ ಆರೈಕೆಯನ್ನು ಮಾಡಬಹುದು. ಇದರಿಂದ ಒಂದೇ ವಾರದಲ್ಲಿ ನೀವು ಫಲಿತಾಂಶ ಕಂಡು ಕೊಳ್ಳಬಹುದು. ಒಮ್ಮೆ ಟ್ರೈ ಮಾಡಿ ನೋಡಿ ಗೆಳೆಯರೇ. ಶುಭದಿನ.