ಅನ್ನದ ಬದಲಾಗಿ ನಾವು ಸಿರಿ ಧಾನ್ಯಗಳನ್ನು ಯಾಕೆ ಸೇವನೆ ಮಾಡಬೇಕು. ಇಲ್ಲಿದೆ ಅವುಗಳ ಅಮೋಘವಾದ ಪ್ರಯೋಜನಗಳು.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಾವು ಪ್ರತಿನಿತ್ಯವೂ ಆಹಾರವನ್ನು ಸೇವನೆ ಮಾಡುತ್ತೇವೆ. ಅಂದರೆ ಅನ್ನ ಸಾರು ಪಲ್ಯ ಚಟ್ನಿ ಹಾಗೆ. ಆದರೆ ನಮ್ಮ ದೇಹಕ್ಕೆ ಇದು ಮಾತ್ರ ಸಾಲುವುದಿಲ್ಲ. ದೇಹಕ್ಕೆ ಶಕ್ತಿ ಬೇಕು ಅಂದರೆ ನಾವು ಇನ್ನಿತರ ಸಿರಿ ಧಾನ್ಯಗಳನ್ನು ಸೇವನೆ ಮಾಡಬೇಕು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅನ್ನದ ಬದಲಾಗಿ ಸಿರಿ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಆಗುತ್ತವೆ ಅಂತ ತಿಳಿಸಿಕೊಡುತ್ತೇವೆ ಬನ್ನಿ. ಸಿರಿ ಧಾನ್ಯಗಳಲ್ಲಿ ಅನೇಕ ಬಗೆಯ ಪ್ರೊಟೀನ್ ವಿಟಮಿನ್ ಖನಿಜಗಳು ಇರುವುದರಿಂದ ಆಶ್ಚರ್ಯಕರ ರೀತಿಯಲ್ಲಿ ಡಯಾಬಿಟೀಸ್ ಕಡಿಮೆ ಆಗುತ್ತದೆ. ಕಿರು ಧಾನ್ಯಗಳಾದ ನವಣೆ ಸಾಮೆ, ಬರಗು ಊದಲು, ಹಾರಕ ಕೊರಲೆ ಜೋಳ ಸಜ್ಜೆ, ರಾಗಿಗಳನ್ನು ಸಿರಿ ಧಾನ್ಯಗಳು ಎಂದು ಕರೆಯುತ್ತಾರೆ ಸಿರಿ ಧಾನ್ಯಗಳನ್ನು ಹೆಚ್ಚು ನೀರು ಹಾಕಿ ರಾಸಾಯನಿಕ ಗೊಬ್ಬರ ಇಲ್ಲದೆ ಬಳಸಬಹುದಾದ ಬೇಳೆಗಳಾಗಿವೆ ಇವುಗಳನ್ನು ಶ್ರೀಮಂತರು ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ ಬದಲಾಗಿ ಬಡವರು ಹೆಚ್ಚಾಗಿ ಸೇವನೆ ಮಾಡುತ್ತಿದ್ದರು. ಆಹಾರ ತಜ್ಞರು ಕೆಲವು ಸಂಶೋಧನೆ ನಡೆಸಿ ಈ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿರಿ ಧಾನ್ಯಗಳು ಅಕ್ಕಿ ಗೋಧಿ ಗಿಂತ ನೂರು ಪಟ್ಟು ಹೆಚ್ಚು ಆರೋಗ್ಯಕಾರಿ ಎಂದು ತಿಳಿದು ಬಂದಿದೆ. ಇದೇ ಒಂದು ಕಾರಣಕ್ಕಾಗಿ, ಈ ಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಹಾಗೂ ಬೆಲೆ ಬಂದಿದೆ ಅಂತ ಹೇಳಬಹುದು.

 

ಹಾಗೂ ಈಗ ಈ ಸಿರಿ ಧಾನ್ಯಗಳನ್ನು ಶ್ರೀಮಂತರ ಬೇಡಿಕೆಗೆ ಮಾರಾಟ ಮಾಡಲಾಗುತ್ತಿದೆ. ಸಿರಿ ಧಾನ್ಯಗಳಲ್ಲಿ ಯಾವೆಲ್ಲ ಅಂಶಗಳು ಅಡಗಿವೆ ಅಂತ ಹೇಳುವುದಾದರೆ, ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ವಿಟಮಿನ್ ಗಳು, ಫೈಬರ್ ಅಮೈನೋ ಆಮ್ಲಗಳು ವಿಟಮಿನ್ಗಳು ಖನಿಜಗಳು ಪೋಲಿಕ್ ಆಸಿಡ್ ವಿಟಮಿನ್ ಇ, ಕಬ್ಬಿಣಾಂಶ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕ್ಯಾಲ್ಷಿಯಂ ಸತು ರಂಜಕ ತಾಮ್ರ ಎಲ್ಲ ಅಂಶಗಳು ಹೇರಳವಾಗಿ ಅಡಗಿವೆ. ಸಿರಿಧಾನ್ಯಗಳ ಆಹಾರ ಅಥವಾ ಅದರ ಪುಡಿಯನ್ನು ನೀವು ಹಾಲಿನಲ್ಲಿ ಕುದಿಸಿ ಕುಡಿಯುತ್ತಾ ಬಂದರೆ ನಿಮ್ಮ ಬ್ಲಡ್ ಶುಗರ್ ಲೆವೆಲ್ ಕಡಿಮೆ ಆಗುತ್ತದೆ. ಅಷ್ಟೊಂದು ಶಕ್ತಿ ಹಾಗೂ ರಾಮಬಾಣ ಇದ್ದಂತೆ ಈ ಸಿರಿಧಾನ್ಯಗಳು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಕ್ಕರೆ ಕಾಯಿಲೆಯು ನಮ್ಮ ದೇಶದ ಅನಾರೋಗ್ಯಕರ ಪಿಡುಗು ಅಂತ ಹೇಳಬಹುದು. ಪ್ರತಿಯೊಬ್ಬರ ಮನೆಯಲ್ಲಿ ಡಯಾಬಿಟೀಸ್ ರೋಗಿಗಳು ಇದ್ದೇ ಇರುತ್ತಾರೆ. ಹಾಗೂ ಈ ರೋಗಕ್ಕೆ ಅನೇಕ ಜನರು ಬಲಿ ಕೂಡ ಆಗುತ್ತಿದ್ದಾರೆ. ಇನ್ನೂ ನೀವು ಕೂಡ ಈ ಕಾಯಿಲೆಗೆ ತುತ್ತಾಗಿದ್ದಾರೆ ಇದನ್ನು ತಡೆಗಟ್ಟಲು ಹಾಗೂ ಮುಂದೆ ಬಾರದಂತೆ ತಡೆಯಲು,

 

ಈ ಸಿರಿಧಾನ್ಯಗಳ ಪಾತ್ರ ಬಹಳ ಮಹತ್ವದ್ದು. ಒಂದು ವರದಾನ ಅಂತ ಹೇಳಬಹುದು. ಅಕ್ಕಿ ಗೋಧಿ ರಾಗಿ ಗಳಿಗಿಂತ ಸಿರಿ ಧಾನ್ಯಗಳು ಬಹಳ ನಿಧಾನವಾಗಿ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಸೇರಿಸುತ್ತದೆ. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಸಿರಿ ಧಾನ್ಯಗಳಲ್ಲಿ ಗ್ಲುಟೆನ್ ಎಂಬ ಅಂಶ ಇರುವುದರಿಂದ ಇವುಗಳ ಸೇವನೆ ಇಂದ ಡಯಾಬಿಟೀಸ್ ರೋಗಿಗಳು ಅನ್ನ ಗೋಧಿಗಳನ್ನು ಸಿರಿ ಧಾನ್ಯಗಳಿಗೆ ಹೋಲಿಕೆ ಮಾಡಿ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ಹಾಗಾದರೆ ಈ ಸಿರಿ ಧಾನ್ಯಗಳನ್ನು ಹೇಗೆ ಬಳಕೆ ಮಾಡುವುದು ಅಂತ ನೋಡುವುದಾದರೆ, ಅಕ್ಕಿಯಿಂದ ಅನ್ನವನ್ನು ಮಾಡುವಾಗ ಸ್ವಲ್ಪ ನೀರು ಹಾಕಿ ಅನ್ನವನ್ನು ಮಾಡುತ್ತೇವೆ. ಹಾಗೆಯೇ ಈ ಸಿರಿ ಧಾನ್ಯಗಳಿಗು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಿಸಿ ಸಾಂಬಾರ್ ಮೊಸರು ಇಡ್ಲಿ ಇದಕ್ಕಾಗಿ ಬಳಸಿ ಊಟವನ್ನು ಸವಿಯಬಹುದು. ಅಲ್ಲದೆ ಉಪ್ಪಿಟ್ಟು ಬಿಸಿಬೇಳೆ ಬಾತ್ ದೋಸೆ ಇಡ್ಲಿ ಪಲಾವ್ ಮಾಡಿಕೊಂಡು ಸೇವನೆ ಮಾಡಬಹುದು. ಸಿರಿ ಧಾನ್ಯಗಳ ರುಚಿ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ಅನ್ನ ತಿನ್ನುವವರಿಗೆ ಇದು ಇಷ್ಟವಾಗುವುದಿಲ್ಲ ಆದರೆ ಸಮಯ ಹೋದಂತೆ ಅಭ್ಯಾಸ ಆಗುತ್ತದೆ.

Leave a Reply

Your email address will not be published. Required fields are marked *