ನಮಸ್ತೆ ಪ್ರಿಯ ಓದುಗರೇ, ನಾವು ಯಾವುದೇ ಕಾರ್ಯವನ್ನು ಪ್ರಾರಂಭ ಮಾಡುವ ಮೊದಲು ಸ್ತುತಿಸೋದೂ ಪಾರ್ವತಿ ಸುತನಾದ ಗಣೇಶನನ್ನು, ಗಜಾನನ, ವಕ್ರತುಂಡ, ಹೇರಂಭಾ, ಏಕದಂತ, ಮೂಷಿಕ ವಾಹನ ಎಂಬೆಲ್ಲ ಹೆಸರಿನಿಂದ ಕರೆಯೂ ಅಂಬಾಸುತನು ಈ ಕ್ಷೇತ್ರದಲ್ಲಿ ಸಿದ್ಧಿ ವಿನಾಯಕನಾಗಿ ನೆಲೆ ನಿಂತು ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಕಾರಣಗಿರಿಯ ಸಿದ್ಧಿ ವಿನಾಯಕ ನನ್ನು ಕಣ್ಣು ತುಂಬಿಕೊಂಡು ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಕಾರಣಗಿರಿಯಲ್ಲಿ ಭಕ್ತರ ಅಭೀಶ್ಟೆಗಳನ್ನ ನೆರವೇರಿಸುವ ಸಿದ್ಧಿ ವಿನಾಯಕ ನೆಲೆ ನಿಂತಿದ್ದು, ಈ ದೇಗುಲವು ೮೧ ಅಡಿ ಎತ್ತರವಿರುವ ಬೃದಾಕಾರವಾ ದ ರಾಜ ಗೋಪುರ, ವಿಶಾಲವಾದ ಪ್ರಾಂಗಣ, ಪುಷ್ಕರಣಿ, ಪ್ರದಕ್ಷಿಣಾ ಪಥ, ಯಾಗ ಶಾಲೆ ಹಾಗೂ ಗರ್ಭಗೃಹ ವನ್ನಾ ಒಳಗೊಂಡಿದೆ. ದೇಗುಲದ ಗೋಡೆಗಳ ಮೇಲಿರುವ ವರ್ಣರಂಜಿತ ಕಲಾಕೃತಿಗಳು ಮನಸ್ಸನ್ನು ಸೋರೆಗೊಳಿಸಿದರೆ, ಇಲ್ಲಿನ ಪ್ರಶಾಂತ ವಾತಾವರಣ ವೂ ಚಿತ್ತ ಕ್ಲೇಶವನ್ನು ದೂರ ಮಾಡುತ್ತೆ. ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಎದುರಿನಲ್ಲಿ ನಿಂತು ಭಕ್ತಿಯಿಂದ ಕೇಳಿಕೊಂಡರೆ ಮನದ ಕೋರಿಕೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಭಕ್ತರು ದೇವನ ಬಳಿ ಬಂದು ತಮ್ಮ ಮನಸ್ಸಿನ ಅಭೀಷ್ಟೆಗಳ ನ್ನು ನೆರವೇರುತ್ತದೆ ಇಲ್ಲವೋ ಎಂದು ಸ್ವಾಮಿಯ ಬಳಿ ಹೂವಿನ ಪ್ರಸಾದವನ್ನು ಕೂಡ ಕೇಳಬಹುದು. ದೇವರ ಬಲಗಡೆ ಇಂದ ಹೂವು ಬಿದ್ದರೆ, ಕಾರ್ಯ ಸಿದ್ಧಿ ಆಗುತ್ತೆ ಎಂದು, ಎಡಗಡೆ ಇಂದ ಬಿದ್ದರೆ ಕಾರ್ಯ ಸಿದ್ಧಿ ಆಗೋದಿಲ್ಲ ಎಂದು ಹೇಳಲಾಗುತ್ತದೆ. ಸಾಕಷ್ಟು ಮಂದಿ ಇಷ್ಟಾರ್ಥ ಸಿದ್ಧಿ ಆದ್ರೆ ಸ್ವಾಮಿಗೆ ಗಣ ಹೋಮವನ್ನು ಮಾಡಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ತನ್ನನ್ನು ನಂಬಿ ಯಾರೇ ಬಂದು ಏನನ್ನೇ ಬೇಡಿದರೂ ಈ ಸ್ವಾಮಿ ಇಲ್ಲ ಎನ್ನದೆ ಸಿದ್ಧಿಯನ್ನು ನೀಡುವುದರಿಂದ ಇಲ್ಲಿನ ಗಣೇಶನನ್ನು ಸಿದ್ಧಿ ವಿನಾಯಕ ಎಂದೇ ಕರೆಯಲಾಗುತ್ತದೆ. ಇನ್ನೂ ಪುರಾಣದ ಕಾಲದಲ್ಲಿ ಅಗಸ್ತ್ಯ ಮುನಿಗಳು ಈ ಸ್ಥಳದಲ್ಲಿ ಬಹು ಕಲ್ಲ ನೆಲೆ ನಿಂತು ಈಗಿನ ದೇಗುಲದ ಎದುರಿನಲ್ಲಿರುವಾ ಪುಷ್ಕರಣಿಯಲ್ಲಿ ವರ ಸಿದ್ಧಿ ವಿನಾಯಕ ಸ್ವಾಮಿಯನ್ನು ಇಟ್ಟು ಪೂಜೆ ಮಾಡುತ್ತಿದ್ದರು ಎಂಬ ಐತಿಹಾಸಿಕ ಹಿನ್ನೆಲೆ ಇದ್ದು,
ಕಾಲಾ ನಂತರ ಅಗಸ್ತ್ಯ ಮುನಿಗಳು ಸ್ವಾಮಿಯನ್ನು ಪುಷ್ಕರಣಿ ಇಂದ ಹೊರ ತಂದು ಈಗಿನ ಗರ್ಭಗುಡಿ ಇರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು ಎಂದು ಹೇಳಲಾಗುತ್ತದೆ. ಇಂದಿಗೂ ಕೂಡ ದೇಗುಲದ ಎದುರಿಗೆ ಅಗಸ್ತ್ಯ ತೀರ್ಥ ಎಂಬ ಪುಷ್ಕರಣಿ ಇರುವುದನ್ನು ನಾವು ಕಾಣಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಶ್ರೀರಾಮಚಂದ್ರನು ಕೂಡ ಈ ದೇವನನ್ನು ಎರೆಡು ಬಾರಿ ಪೂಜಿಸಿದರು ಎಂಬ ಪ್ರತೀತಿ ಇದ್ದು, ಈ ಪ್ರತೀತಿ ಹಿಂದೆ ಒಂದು ಘಟನೆ ಇದೆ. ತ್ರೇತಾಯುಗ ಕಾಲದಲ್ಲಿ ಶ್ರೀರಾಮಚಂದ್ರನು ಲಕ್ಷ್ಮಣನ ಜೊತೆಗೂಡಿ ಸೀತಾನೇಷಣೆ ಮಾಡುತ್ತಾ ಈ ಸ್ಥಳಕ್ಕೆ ಬಂದಾಗ ಅಗಸ್ತ್ಯರು ಶ್ರೀರಾಮನ ಬಳಿ ನೀನು ಈ ಜಾಗದಲ್ಲಿ ವಿನಾಯಕನನ್ನು ಪೂಜಿಸಿ ಹೋಗು ನಿನ್ನ ಕಾರ್ಯ ಸಿದ್ಧಿ ಆಗುತ್ತೆ ಹಾಗೆಯೇ ಸೀತೆಯನ್ನು ಕರೆದುಕೊಂಡು ಬರುವಾಗ ಪುನಃ ಈ ಸ್ವಾಮಿಯನ್ನು ದರ್ಶನ ಮಾಡಿ ಹೋಗು ಎಂದು ಹೇಳಿದರಂತೆ. ನಂತರ ರಾಮಚಂದ್ರನು ವಿನಾಯಕನನ್ನು ಪೂಜಿಸಿ ಸೀತೆಯನ್ನು ಹುಡುಕಲು ಲಂಕೆಯ ಕಡೆ ಹೊರಟು ಹೋಗ್ತಾನೆ. ಮುಂದೆ ರಾವಣನನ್ನು ಸಂಹರಿಸಿ ಸೀತಾ ಲಕ್ಷ್ಮಣರ ಸಮೇತ ಶ್ರೀರಾಮನು ಇದೇ ದಾರಿಯಲ್ಲಿ ಹಿಂತಿರುಗಿದರು ಆದರೆ ಅಗಸ್ತ್ಯರು ಹೇಳಿದ ಮಾತನ್ನು ಮರೆತು ಹೋದುದರ ಪರವಾಗಿ ಶ್ರೀರಾಮನು ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಗುಡ್ಡವೊಂದು ಎದುರು ನಿಂತಿತು, ಆಗ ರಾಮನು ಕಿಮ್ ಕಾರಣಂ ಗಿರಿಃ ಅಂದರೆ ಈ ಬೆಟ್ಟ ಅಡ್ಡವೇಕೆ ಅಂದಾಗ ಲಕ್ಷ್ಮಣನು ಅಗಸ್ತ್ಯರು ಹೇಳಿದ ಮಾತನ್ನು ನೆನಪಿಸುತ್ತಾನೆ. ನಂತರ ಶ್ರೀರಾಮನು ಸೀತಾ ಸಹಿತವಾಗಿ ಇಲ್ಲಿಗೆ ಬಂದು ಸ್ವಾಮಿಯನ್ನು ಪೂಜಿಸಿ ಮುಂದೆ ಹೋದನಂತೆ. ಶ್ರೀರಾಮನ ಬಾಯಿ ಇಂದ ಬಂದ ಕಿಮ್ ಕಾರಣಂ ಗಿರಿಹಿ ಅನ್ನುವ ಉಕ್ತಿಯೇ ಈ ಕ್ಷೇತ್ರಕ್ಕೆ ಕಾರಣಾಗಿರಿ ಎಂಬ ಹೆಸರು ಬರಲು ಕಾರಣವಾಯಿತು ಎಂದು ಹೇಳಲಾಗುತ್ತದೆ.
ಇನ್ನೂ ಕಲಿಯುಗದಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ಕೂಡ ಇಲ್ಲಿಗೆ ಬಂದು ಗಣೇಶನನ್ನು ಅರ್ಚಿಸಿದರು ಎಂಬ ಮಾತುಗಳು ಈ ಕ್ಷೇತ್ರದ ಕುರಿತಾಗಿ ಕೇಳಿ ಬರುತ್ತವೆ. ಸಿದ್ಧಿ ವಿನಾಯಕ ನೆಲೆಸಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ವೈಶಾಖ ಶುದ್ಧ ಚೌತಿಯಂದು ಸ್ವಾಮಿಯ ರಥೋತ್ಸವ ನಡೆಯುತ್ತದೆ. ಪ್ರತಿ ಸಂಕಷ್ಟಿಯಂದು 48 ಕಾಯಿಗಳ ಗಣ ಹೋಮವನ್ನು ಕೂಡ ನಡೆಸಲುಗುತ್ತದೆ. ಅಕ್ಷಯ ತೃತೀಯ ದಂದು ರಜತೋತ್ಸವ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಅಂಗಾರಕ ಸಂಕಷ್ಟಿ, ಗಣೇಶ ಚತುರ್ಥಿಯನ್ನು ಕೂಡ ಈ ಕ್ಷೇತ್ರದಲ್ಲಿ ವಿಧಿವತ್ತಾಗಿ ಆಚರಿಸಲಾಗುತ್ತದೆ. ನಿತ್ಯವೂ ಪೂಜೆಗೊಳ್ಳುತ್ತಿರುವ ಇಲ್ಲಿನ ಸಿದ್ಧಿ ವಿನಾಯಕ ಸ್ವಾಮಿಯನ್ನು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಸಂಜೆ 6-8.30 ರ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಸರ್ವ ಪೂಜೆ, ಗಣ ಹೋಮ, ಮಹಾ ಪೂಜೆ, ಪಂಚಾಮೃತ ಅಭಿಷೇಕ ಇನ್ನೂ ಮುಂತಾದ ಸೇವೆಗಳನ್ನು ಮಾದಿಸಬಹುದಾಗಿದೇ. ಉತ್ತಮವಾದ ವಸತಿ ಸೌಲಭ್ಯ ಹೊಂದಿರುವ ಈ ದೇಗುಲದಲ್ಲಿ ಪ್ರತಿ ದಿನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕೂಡ ನಡೆಸಲಾಗುತ್ತದೆ. ಅಗಸ್ತ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀರಾಮಚಂದ್ರ ನಿಂದ ಎರಡು ಬಾರಿ ಪೂಜಿಸಲ್ಪಟ್ಟ ಸಿದ್ದಿ ವಿನಾಯಕ ದೇವನು ನೆಲೆ ನಿಂತಿರುವ ಈ ಪುಣ್ಯ ಕ್ಷೇತ್ರವೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರೀ ಎಂಬ ಸ್ಥಳದಲ್ಲಿದೆ. ಈ ಪುಣ್ಯ ಕ್ಷೇತ್ರವೂ ಬಂಗಳೂರಿನಿಂದ 374 ಕಿಮೀ, ಶಿವಮೊಗ್ಗದಿಂದ 72 ಕಿಮೀ, ಹೊಸನಗರ ದಿಂದ ಕೇವಲ 6 ಕಿಮೀ ದೂರದಲ್ಲಿದೆ. ಹೊಸನಗರ ದಿಂದ ಸರ್ಕಾರಿ ಬಸ್ ಅಥವ ಬಾಡಿಗೆ ವಾಹನದಲ್ಲಿ ಸುಲಭವಾಗಿ ಈ ಸ್ಥಳಕ್ಕೆ ತಲುಪಬಹುದು. ಶುಭದಿನ.