ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಾವು ಚಿಕ್ಕವರು ಇದ್ದಾಗ ಕೆಲವು ಹಣ್ಣುಗಳನ್ನು ಸೇವನೆ ಮಾಡಿದ್ದೇವೆ. ಉದಾಹರಣೆಗೆ ಬಾರ್ಲಿ ನೆಲ್ಲಿಕಾಯಿ ಹುಣಸೆ ಹಣ್ಣು, ಪೇರಲ ಹಣ್ಣು ಇತ್ಯಾದಿ. ಅವುಗಳಲ್ಲಿ ಇಲಾಚಿ ಕಾಯಿ ಅಥವಾ ಹಣ್ಣು ಕೂಡ ಒಂದು ಅಂತ ಹೇಳಬಹುದು. ಈ ಕಾಯಿ ನೋಡಿದರೆ ಸಾಕು ತಕ್ಷಣವೇ ನಮಗೆ ನೆನಪಿಗೆ ಬರುವುದು ನಮ್ಮ ಬಾಲ್ಯ. ಚಿಕ್ಕವರಿದ್ದಾಗ ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡಿಯೇ ಇರುತ್ತಾರೆ. ಹಿಂದಿನ ಕಾಲದಲ್ಲಿ ಜನರು ಈ ಹಣ್ಣನ್ನು ಬಹಳ ಬೇಗನೆ ಪರಿಚಯಿಸುತ್ತಿದ್ದರು ಹಾಗೂ ಬಹಳ ಇಷ್ಟ ಪಟ್ಟು ಸೇವನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮರೆಮಾಚಿ ಹೋಗಿದೆ ಅಂತ ಹೇಳಿದರೆ ತಪ್ಪಾಗಲಾರದು. ನಮ್ಮ ಪ್ರಕೃತಿಯಲ್ಲಿ ಬಹಳಷ್ಟು ವಿಸ್ಮಯ ವಾದ ರೋಚಕವಾದ ಸೇವನೆ ಮಾಡದ ಇರುವ ಹಾಗೂ ನೋಡದೆ ಇರುವ ಅನೇಕ ಬಗೆಯ ಹಣ್ಣುಗಳು ತರಕಾರಿಗಳು ನಿಸರ್ಗದಲ್ಲಿ ಹಾಸು ಹೊಕ್ಕಾಗಿದೆ. ಆದರೆ ಅವುಗಳ ಪರಿಚಯ ಇರುವುದಿಲ್ಲ ಜೊತೆಗೆ ಅವುಗಳಿಂದ ಸಿಗುವ ಲಾಭಗಳು ಅಂತೂ ಗೊತ್ತೇ ಇರುವುದಿಲ್ಲ. ಅಷ್ಟೊಂದು ಅಪರಿಚಿತರು ಆಗಿರುತ್ತೇವೆ.
ಕೆಲವು ಹಣ್ಣುಗಳು ನಮಗೆ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಅವುಗಳನ್ನು ನಾವು ಹಳ್ಳಿಗಳಲ್ಲಿ ಹಾಗೂ ಕಾಡುಗಳಲ್ಲಿ ಹೆಚ್ಚಾಗಿ ಕಾಣಬಹುದು. ಕೆಲವು ಹಣ್ಣುಗಳು ಲಾಭಗಳು ನೀಡುತ್ತವೆ ಅನ್ನುವುದಾದರೆ ಖಂಡಿತವಾಗಿ ಅವುಗಳನ್ನು ನಾವು ಸೇವನೆ ಮಾಡುವುದು ಒಳ್ಳೆಯದು. ಹಾಗಾದರೆ ಬನ್ನಿ ಅದರ ಬಗ್ಗೆ ತಿಳಿಯೋಣ. ಇಲಾಚಿ ಹಣ್ಣು ಸೀಬೆ ಹುಣಸೆ ಹಣ್ಣು ಅಂತ ಕರೆಯುತ್ತಾರೆ. ಈ ಹಣ್ಣು ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗವನ್ನು ಒದಗಿಸಿ ಕೊಡುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಇಲಾಚೀ ಹಣ್ಣಿನಲ್ಲಿ ಇರುವ ಅಂಶಗಳ ಬಗ್ಗೆ ನೋಡುವುದಾದರೆ, ಪ್ರೊಟೀನ್ ಫೈಬರ್ ಕ್ಯಾಲ್ಷಿಯಂ ಮ್ಯಾಗ್ನಿಷಿಯಂ ಕಬ್ಬಿಣ ಸೋಡಿಯಂ ವಿಟಮಿನ್ಸ್ ಖನಿಜಗಳು ರೈಬೊಪ್ಲೇವಿನ್ ನಿಯಾಸಿನ್ ವಿಟಮಿನ್ ಸಿ ಅಂಶಗಳನ್ನು ಹೊಂದಿದೆ. ಈ ಹಣ್ಣು ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದು ಕಣ್ಣಿನಲ್ಲಿ ಆಗುವ ಉರಿ ಅನ್ನು ಕಡಿಮೆ ಮಾಡಿಸುತ್ತದೆ. ಇದರಲ್ಲಿ ವಿಟಮಿನ್ ಬಿ ಅಂಶ ಇರುವುದರಿಂದ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ದೇಹವನ್ನು ಬಲಶಾಲಿ ಮಾಡಿ ನಮ್ಮ ದೇಹವನ್ನು ಇನ್ನಿತರ ರೋಗಗಳು ಸೇರದಂತೆ ತಡೆಯುತ್ತದೆ.
ಅಷ್ಟೇ ಅಲ್ಲದೇ ನಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವುದಲ್ಲದೆ, ರಕ್ತ ಪರಿಚಲನೆ ಸರಾಗವಾಗಿ ಆಗುವಂತೆ ಮಾಡುತ್ತದೆ. ಹಾಗೂ ಈ ಇಲಾಚಿ ಹಣ್ಣು ತಿನ್ನುವುದರಿಂದ ಪಾಷ್ವವಾಯು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಚಿಕ್ಕ ಮಕ್ಕಳಿಗೆ ಇದು ಬಹಳ ಇಷ್ಟವಾದ ಹಣ್ಣು. ಇದನ್ನು ಅವರು ಆಸೆ ಇಂದ ತಿನ್ನುತ್ತಾರೆ. ಚಿಕ್ಕ ಮಕ್ಕಳಿಗೆ ಈ ಹಣ್ಣು ತಿನ್ನಲು ಕೊಡುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅವರ ಬುದ್ದಿ ಚೆನ್ನಾಗಿ ಬೆಳೆಯುತ್ತದೆ. ಇನ್ನೂ ನಿಮ್ಮ ಮೂಡ್ ಸರಿಯಾಗಿ ಇಲ್ಲದಿದ್ದರೆ ಬೇಜಾರು ನೋವು ಆಗಿದ್ದರೆ ಈ ಇಲಾಚಿ ಹಣ್ಣು ತಿನ್ನಿ. ಇದರಿಂದ ನಿಮ್ಮ ಮೂಡ್ ರಿಲಾಕ್ಸ್ ಆಗುತ್ತದೆ ಶಾಂತವಾಗುತ್ತದೆ. ಒತ್ತಡವು ಕಡಿಮೆ ಆಗುತ್ತದೆ. ಹಾಗೂ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕರುಳಿನ ಸಮಸ್ಯೆಗಳನ್ನು ದೂರ ಮಾಡುತ್ತದೆ.ಮೂಳೆಗಳನ್ನು ಸ್ನಾಯುಗಳನ್ನು ಬಲಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ಅನ್ನು ಗಟ್ಟಿ ಮಾಡುತ್ತದೆ.