ಮೂಲಂಗಿ ಇಷ್ಟ ಪಡುವ ಜನರು ಇಂತಹ ಆಹಾರಗಳ ಜೊತೆಗೆ ಇದನ್ನು ಒಂದೇ ಸಮಯದಲ್ಲಿ ಸೇವನೆ ಮಾಡಬೇಡಿ. ಇಲ್ಲಿದೆ ಮಾಹಿತಿ.

ಆರೋಗ್ಯ

ನಮಸ್ತೇ ಕನ್ನಡ ನಾಡಿನ ಸಮಸ್ತ ಮಿತ್ರರಿಗೆ, ಕೆಲವು ಆಹಾರಗಳು ಹೀಗೆ ಇರುತ್ತವೆ ಗೆಳೆಯರೇ ನಾವು ಅವುಗಳನ್ನು ಒಂದೇ ಸಮಯದಲ್ಲಿ ಎರಡು ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಅದು ವಿಷವಾಗಿ ಪರಿಣಮಿಸುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಕೆಲವು ಆಹಾರಗಳನ್ನು ಇನ್ನೊಂದು ಆಹಾರಗಳ ಜೊತೆಗೆ ಸೇರಿಸಿ ತಿನ್ನಬಾರದು ಎಂದು ಸ್ವಚ್ಛವಾಗಿ ಹೇಳಲಾಗಿದೆ. ಇಲ್ಲವಾದರೆ ಇದರ ಪರಿಣಾಮ ನಾವು ಗಂಭೀರವಾಗಿ ಎದುರಿಸಬೇಕಾಗುತ್ತದೆ. ಹಾಗೂ ಆರೋಗ್ಯವೂ ಹಾನಿಗೊಳಗಾಗುವುದು ನಿಜ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮೂಲಂಗಿ ಅನ್ನು ಬೇರೆ ಯಾವ ಆಹಾರ ಹಾಗೂ ಹಣ್ಣುಗಳ ಜೊತೆಗೆ ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ. ಮೂಲಂಗಿ ಹಸಿರು ತರಕಾರಿ ಗಳಲ್ಲಿ ಸೂಪರ್ ತರಕಾರಿ ಅಂತ ಹೇಳಬಹುದು. ಇದನ್ನು ನಾವು ಸಲಾಡ್ ಪಲ್ಯ ಚಟ್ನಿ ಪರೋಟ ಮಾಡಿ ಮಾಡಿ ಸೇವನೆ ಮಾಡಿದರೆ ಇದರ ರುಚಿಗೆ ಸರಿ ಸಾಟಿ ಯಾವ ತರಕಾರಿ ಕೂಡ ಇಲ್ಲ ಗೆಳೆಯರೇ.ಮೂಲಂಗಿಯಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ಇದು ಬಾಯಿ, ಹೊಟ್ಟೆ, ಕರುಳು, ಮೂತ್ರಪಿಂಡ, ಮಧುಮೇಹದಿಂದ ಕ್ಯಾನ್ಸರ್‌ವರೆಗಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

 

ಮೊದಲಿಗೆ ಯಾವ ಆಹಾರದಿಂದ ಮೂಲಂಗಿ ಅನ್ನು ದೂರವಿರಿಸಬಹುದು ಅಂತ ಹೇಳುವುದಾದರೆ ಅದು ಹಾಲು. ನೀವೇನಾದರೂ ಮೂಲಂಗಿ ಮತ್ತು ಹಾಲು ಒಟ್ಟಿಗೆ ಒಂದೇ ಸಮಯದಲ್ಲಿ ಸೇವನೆ ಮಾಡಿದರೆ ನಿಮ್ಮ ಚರ್ಮಕ್ಕೆ ಹಾನಿಕಾರಕ. ಇವೆರಡನ್ನೂ ಪರಸ್ಪರ ದೂರವಿಡಿ. ಅಷ್ಟೇ ಅಲ್ಲದೇ, ಮೂಲಂಗಿ ಸೇವನೆ ಮಾಡಿದ 2-3 ಗಂಟೆ ಬಿಟ್ಟು ನೀವು ಹಾಲನ್ನು ಸೇವನೆ ಮಾಡುವುದು ಸೂಕ್ತ. ಇನ್ನೂ ಎರಡನೆಯದು ಸೌತೆಕಾಯಿ. ಕೆಲವು ಜನರು ಸೌತೆಕಾಯಿ ಮತ್ತು ಮೂಲಂಗಿ ಎರಡನ್ನೂ ಚಿಕ್ಕದಾಗಿ ಕತ್ತರಿಸಿ ಸಲಾಡ್ ರೀತಿಯಲ್ಲಿ ಸೇವನೆ ಮಾಡುತ್ತಾರೆ.ಇದು ತುಂಬಾ ಹಾನಿಕಾರಕ ಅಲ್ಲದೇ. ಇದರಲ್ಲಿ ಇರುವ ವಿಟಮಿನ್ ಸಿ ಮತ್ತು ಆಸ್ಕೋರ್ಬಿನೇಸ್ ಕಾರ್ಯ ಮಾಡುತ್ತದೆ. ಆದ್ದರಿಂದ ಎರಡರಲ್ಲಿ ಒಂದನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜೊತೆಗೆ ಮೂಲಂಗಿ ಅನ್ನು ಎಂದಿಗೂ ಸೇವನೆ ಮಾಡಬೇಡಿ. ಕಿತ್ತಳೆ ಗುಣ ಹುಳಿ. ಇದು ರುಚಿಯಲ್ಲಿ ಬಹಳ ಹುಳಿ ಆಗಿರುತ್ತದೆ. ಕಿತ್ತಳೆ ಹಣ್ಣಿನಲ್ಲಿ ಮೂಲಂಗಿ ಅನ್ನು ಸೇರಿಸಿದರೆ ಇವುಗಳ ಮಿಶ್ರಣ ವಿಷದಂತೆ ಬದಲಾವಣೆ ಆಗಿ ಪರಿಣಮಿಸುತ್ತದೆ. ಇದು ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳನ್ನು ಉದ್ಭವಿಸುತ್ತದೆ. ನೀವೇನಾದರೂ ಕಿತ್ತಳೆ ಹಣ್ಣು ತಿಂದರೆ ಹತ್ತು ಗಂಟೆಗಳು ಬಿಟ್ಟು ನೀವು ಮೂಲಂಗಿ ಸೊಪ್ಪು ಸೇವನೆ ಮಾಡಿ.

 

ಇನ್ನೂ ಹಾಗಲ ಕಾಯಿ. ಹಾಗಲ ಕಾಯಿ ಆರೋಗ್ಯಕ್ಕೆ ಬಹಳ ಉತ್ತಮ. ಹೌದು ಇದು ಸತ್ಯವಾದರೂ ಕೂಡ ಇದನ್ನು ನೀವು ಮೂಲಂಗಿ ಜೊತೆಗೆ ಎಂದಿಗೂ ಸೇವನೆ ಮಾಡಬೇಡಿ. ಇವುಗಳ ಮಿಶ್ರಣ ಪರಸ್ಪರ ಹೊಂದಾಣಿಕೆ ಆಗುವುದಿಲ್ಲ. ಅಷ್ಟೇ ಅಲ್ಲದೇ ಹಾಗಲಕಾಯಿ ಮತ್ತು ಮೂಲಂಗಿ ದೇಹದಲ್ಲಿ ಬೇರೆ ಬೇರೆಯಾದ ಕ್ರಿಯೆಯಾಗಿ ಉಸಿರಾಟದ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ ಹಾಗೂ ಹೃದಯ ಮೇಲೆ ಪರಿಣಾಮ ಬೀರುತ್ತದೆ. ನೀವು ಹಾಗಲ ಕಾಯಿ ಪಲ್ಯ ಸೇವನೆ ಮಾಡಿದ 24 ಗಂಟೆ ನಂತರ ಮೂಲಂಗಿ ಸೇವನೆ ಮಾಡಿ. ಇಲ್ಲವಾದರೆ ಮರುದಿನ ಸೇವನೆ ಮಾಡಿ. ನೀರು ಮತ್ತು ಮೂಲಂಗಿ. ಮೂಲಂಗಿ ಸೊಪ್ಪು ಸೇವನೆ ಮಾಡಿದ ನಂತರ ನೀರು ಕುಡಿಯುವುದನ್ನು ನಿಲ್ಲಿಸಿ. ನೀವೇನಾದರೂ ಮೂಲಂಗಿ ತಿಂದು ತಕ್ಷಣವೇ ನೀರು ಕುಡಿದರೆ ಖಂಡಿತವಾಗಿಗಿ ನಿಮಗೆ ಗಂಟಲು ನೋವು ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ, ಮೂಲಂಗಿ ಜೊತೆಗೆ ಹಾಲು ಕುಡಿಯಬೇಡಿ ಇದು ನೀರಿಗಿಂತ ಅಪಾಯ ಹಾಗೂ ಹಾನಿಕಾರಕ. ತುಂಬಾ ಗಮನದಲ್ಲಿಟ್ಟುಕೊಳ್ಳಿ. ಗೆಳೆಯರೇ. ಶುಭದಿನ.

Leave a Reply

Your email address will not be published. Required fields are marked *