ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ಪ್ರಕೃತಿಯು ಮೂರು ಕಾಲಗಳನ್ನು ಒಳಗೊಂಡಿದೆ. ಬೇಸಿಗೆ ಕಾಲ ಮಳೆಗಾಲ ಮತ್ತು ಚಳಿಗಾಲ ಎಂದು. ಪ್ರತಿಯೊಂದು ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಇರುತ್ತದೆ. ಅಂದ್ರೆ ಬೇಸಿಗೆ ಕಾಲದಲ್ಲಿ ಇಷ್ಟವಾದ ಆಹಾರಗಳು ಚಳಿಗಾಲದಲ್ಲಿ ಇಷ್ಟವಾಗುವುದಿಲ್ಲ. ಕೇವಲ ಕಾಲಕ್ಕೆ ಅಥವಾ ಋತುಗಳಿಗೆ ಹೋಲಿಕೆ ಮಾಡಿದರೆ ಮಾತ್ರವಲ್ಲದೆ ಮನೆಯಲ್ಲಿ ಮಾಡಿದ ಕೆಲವು ಆಹಾರಗಳು ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ರುಚಿ ಸ್ವಾದ ಇಷ್ಗಳು ಇರುತ್ತವೆ ಆಹಾರ ಪದ್ಧತಿಯಲ್ಲಿ ಅಂತ ಹೇಳಬಹುದು. ಬೇಸಿಗೆ ಕಾಲದಲ್ಲಿ ಸಿಗುವ ಪದಾರ್ಥಗಳನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ ಒಂದನ್ನು ಬಿಟ್ಟು ಗೆಳೆಯರೇ. ಅದು ಯಾವುದು ಅನ್ನುತ್ತೀರಾ ಅದುವೇ ಮೊಸರು. ಹೌದು ಮೊಸರು ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲೂ ಚಿಕ್ಕ ಮಕ್ಕಳಿಗೆ ಅಂತೂ ಬಲು ಪ್ರೀತಿ. ಇದನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಮುಖ್ಯವಾಗಿ ಇದರ ಮಹತ್ವ ಬೇಸಿಗೆ ಕಾಲದಲ್ಲಿ ನಮಗೆ ತಿಳಿಯುತ್ತದೆ. ಬೇಸಿಗೆ ಬಿಸಿಗೆ ದೇಹವು ಉಷ್ಣದಿಂದ ತತ್ತರಿಸಿ ಹೋಗಿರುತ್ತದೆ.
ದೇಹದಲ್ಲಿ ಉಷ್ಣ ಹೆಚ್ಚಾದಂತೆ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಅದಕ್ಕಾಗಿ ನಾವು ನಮ್ಮ ದೇಹವು ನಿರ್ಜಲೀಕರಣ ಆಗದಂತೆ ಹಾಗೂ ತಂಪಾಗಿ ಇಡುವಂತಹ ಮೊಸರನ್ನು ಸೇವನೆ ಮಾಡುವುದು ಬಹಳ ಸೂಕ್ತ. ಮೊಸರು ನಮ್ಮ ದೇಹವನ್ನು ಉಷ್ಣ ಮುಕ್ತವಾಗಿ ಮಾಡುತ್ತದೆ. ದೇಹದಲ್ಲಿ ಉಷ್ಣದ ತಾಪಮಾನ ಹೆಚ್ಚಾದಾಗ ಹಾಗೂ ಹೊಟ್ಟೆಗೆ ಸಂಭಂದ ಪಟ್ಟ ಸಮಸ್ಯೆಗಳು ಬಂದಾಗ ಹಾಗೂ ಜ್ವರ ಬಂದಾಗ ಮೊಟ್ಟ ಮೊದಲು ಮೊಸರು ಅನ್ನ ಸೇವನೆ ಮಾಡಿ. ಮೊಸರು ಅನ್ನ ಸೇವನೆ ಮಾಡುವುದರಿಂದ ನಿಜಕ್ಕೂ ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ನಿಮಗೆ ಗೊತ್ತೇ ಒಂದು ಬಟ್ಟಲು ಮೊಸರು ಸೇವನೆ ಮಾಡುವುದರಿಂದ ನಮಗೆ ಹಸಿವು ಆಗುವುದಿಲ್ಲ. ಹೊಟ್ಟೆ ತುಂಬಿದ ಹಾಗೆ ಅನ್ನಿಸುತ್ತದೆ. ನಮ್ಮ ದೇಹಕ್ಕೆ ಅಗತ್ಯವಾದ ಉತ್ತಮವಾದ ಬ್ಯಾಕ್ಟೀರಿಯಾ ಅನ್ನು ಹೊಟ್ಟೆಯೊಳಗೆ ಉತ್ಪತ್ತಿ ಮಾಡುತ್ತದೆ. ಇದರಲ್ಲಿ ಉತ್ತಮವಾದ ಕ್ಯಾಲೋರಿ ಇರುವುದರಿಂದ ಇನ್ನಿತರ ಆಹಾರಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯದ್ಭುತವಾದ ಆಹಾರ ಅಂತ ಹೇಳಿದರೆ ತಪ್ಪಾಗಲಾರದು.
ಇದರಲ್ಲಿ ಕಡಿಮೆ ಎಣ್ಣೆಯ ಅಂಶ ಇರುವುದರಿಂದ ಕೊಬ್ಬು ಹೆಚ್ಚಾಗದಂತೆ ಕೆಲಸವನ್ನು ಮಾಡುತ್ತದೆ ಹಾಗೂ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉತ್ತಮವಾದ ಬ್ಯಾಕ್ಟೀರಿಯ ಅಭಿವೃದ್ದಿ ಮಾಡುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಅಜೀರ್ಣತೆಯನ್ನು ಹೋಗಲಾಡಿಸಲು ಮೊಸರು ಅನ್ನ ಸೇವನೆ ಮಾಡುವುದು ಬಹಳ ಒಳ್ಳೆಯದು.ಇನ್ನೂ ಮೊಸರು ಅನ್ನ ಹೇಗೆ ಮಾಡಬೇಕು ಅಂದರೆ ಮೊದಲಿಗೆ ಮೊಸರು ಅನ್ನವನ್ನು ಕಲಿಸಬೇಕು. ನಂತರ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಉದ್ದಿನ ಬೇಳೆ ಕರಿಬೇವು ಒಣ ಕೆಂಪು ಮೆಣಸಿನ ಕಾಯಿ ಹಾಗೂ ಸ್ವಲ್ಪ ಇಂಗು ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಹಾಕಿ ಸ್ವಲ್ಪ ಕಾಯಿಸಿಕೊಳ್ಳಬೇಕು. ಬಳಿಕ ಅನ್ನವನ್ನು ಮೊಸರು ಎರಡನ್ನೂ ಮಿಕ್ಸ್ ಮಾಡಿಕೊಂಡು ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಮೊಸರು ಅನ್ನ ಸಿದ್ಧವಾಗುತ್ತದೆ. ಮೊಸರು ಅನ್ನ ಮಧ್ಯಾಹ್ನ ಸೇವನೆ ಮಾಡುವುದು ಬಹಳ ಸೂಕ್ತ ಏಕೆಂದ್ರೆ ಮಧ್ಯಾಹ್ನ ತುಂಬಾ ಬಿಸಿಲು ಇರುವುದರಿಂದ ಮಧ್ಯಾಹ್ನ ಸೇವನೆ ಮಾಡುವುದು ಬಹಳ ಒಳ್ಳೆಯದು.