ಗಂಟಲು ಒಣಗುವುದು ಅನಾರೋಗ್ಯದ ಸಂಕೇತವಾಗಿದೆ ಎಂದು ಮರೆಯಬೇಡಿ. ಜಾಗ್ರತೆ ಇರಲಿ. ಇಲ್ಲಿದೆ ಮಾಹಿತಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಗಂಟಲು ಒಣಗುವುದು ಸಹಜ. ನಾವೆಲ್ಲರೂ ಗಂಟಲು ಒಣಗಿದಾಗ ನೀರನ್ನು ಕುಡಿಯುತ್ತೇವೆ. ಆದರೆ ನಿಮಗೆ ಗೊತ್ತೇ ಗಂಟಲು ಪದೇ ಪದೇ ಒಣಗುವುದು ಅನಾರೋಗ್ಯಕ್ಕೆ ಹಾಗೂ ಹಲವು ರೋಗಗಳಿಗೆ ಆಹ್ವಾನ ಮಾಡಿದ ಹಾಗೆ. ನಾವೆಲ್ಲರೂ ಸಾಮಾನ್ಯವಾಗಿ ಗಂಟಲು ಒಣಗುತ್ತಿದ್ದರೆ ಅಥವಾ ಅಲರ್ಜಿ ಆಗಿ ಗಂಟಲು ಒಣಗುತ್ತಿದೆ ಎಂದು ಆದಷ್ಟು ನಿರ್ಲಕ್ಷ್ಯ ಮಾಡುತ್ತೇವೆ. ಇದೇನು ದೊಡ್ಡದಾದ ಸಮಸ್ಯೆ ಇಲ್ಲವೆಂದು. ಆದರೆ ಅಲ್ಲಿಂದಲೇ ನಮಗೆ ಸಮಸ್ಯೆಗಳು ಬರಲು ಶುರು ಆಗುತ್ತದೆ. ಒಣ ಗಂಟಲು ಯಾವ ಕಾಲದಲ್ಲಿ ಅಥವಾ ಋತುವಿನಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆ ಆಗಿದೆ. ಬೇಸಿಗೆ ಕಾಲದಲ್ಲಿ ಸ್ವಲ್ಪ ಬಿಸಿಲಿನಲ್ಲಿ ಹೋಗಿ ಬಂದರೆ ಸಾಕು ಗಂಟಲು ಒಣಗುತ್ತದೆ. ಬಿಸಿಲಿನ ತಾಪಮಾನಕ್ಕೆ ಅತಿಯಾದ ಬೆವರು ದೇಹದಿಂದ ಹೊರಗೆ ಹೋಗುವುದರಿಂದ ದೇಹವು ನಿರ್ಜಲೀಕರಣ ಆಗಿ ಗಂಟಲು ಒಣಗಿ ಬಾಯಾರಿಕೆ ಆಗುತ್ತದೆ. ಇನ್ನೂ ಚಳಿಗಾಲದಲ್ಲಿ ಕೂಡ ಗಂಟಲು ಒಣಗುತ್ತದೆ. ಚಳಿಗಾಲದಲ್ಲಿ ಬೆವರು ಬರುವುದಿಲ್ಲ. ಚಳಿ ತಂಪಾದ ವಾತಾರಣ ಇರುತ್ತದೆ. ಇದು ಬಾಯರಿಕೆಗೆ ಕಾರಣ ಆಗುವುದಿಲ್ಲ. ಬಾಯಾರಿಕೆ ಕಡಿಮೆ ಆಗುತ್ತದೆ.

 

ಆದರೆ ಚಳಿಗಾಲದಲ್ಲಿ ಉಸಿರಾಟದ ಮೂಲಕ ತೆಗೆದುಕೊಂಡ ಗಾಳಿಯು ಒಳಗೆ ಹೊರಗೆ ಒಳಗೆ ಹೊರಗೆ ತೆಗೆದುಕೊಳ್ಳುವುದರಿಂದ ಗಂಟಲು ಒಣಗುವ ಸಾಧ್ಯತೆ ಇರುತ್ತದೆ. ನಿಮಗೆ ಗೊತ್ತೇ ಮಿತ್ರರೇ ಗಂಟಲು ಪದೇ ಪದೇ ಒಣಗುವುದು ಕೂಡ ಭಯಂಕರವಾದ ವಿಷಯ ಅಂತ ಹೇಳಬಹುದು. ಇದನ್ನು ನಾವು ನಿರ್ಲಕ್ಷ್ಯ ಮಾಡುವ ಹಾಗಿಲ್ಲ ಮಿತ್ರರೇ. ಒಣ ಗಂಟಲು ನಿಮ್ಮಲ್ಲಿ ಅನುಭವ ಆಗುತ್ತಿದ್ದರೇ ನಿಮಗೆ ಕೀಲು ನೋವಿನ ಅಪಾಯ ಹೆಚ್ಚಾಗುತ್ತದೆ ಎಂದು ಅರ್ಥ. ಹಾಗೂ ಇನ್ನೂ ಅನೇಕ ಬಗೆಯ ರೋಗ ರುಜಿನಗಳು ನಿಮ್ಮಲ್ಲಿ ಬಂದು ಹಾಸು ಹೊಕ್ಕಾಗಿವೆ ಎಂದು ಅರ್ಥ ಮಾಡಿಕೊಳ್ಳಬೇಕು. ದೇಹದಲ್ಲಿ ನೀರಿನ ಕೊರತೆ ಆದರೆ ಗಂಟಲು ಒಣಗುವುದರ ಮೂಲಕ ತಿಳಿದು ಬರುತ್ತದೆ. ವ್ಯಕ್ತಿಯ ದೈಹಿಕ ಚಲನೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮೆದುಳಿನ ಎಲ್ಲ ಕಾರ್ಯ ಕ್ಷಮತೆಗಳು ಮಂದವಾಗುತ್ತವೆ. ಗಂಟಲಿನ ಹಿಂಭಾಗದಲ್ಲಿ ಎರಡು ಗ್ರಂಥಿಗಳು ಇವೆ. ಅವುಗಳನ್ನು ಟಾನ್ಸಿಲ್‌ಗಳು ಎಂದು ಕರೆಯುತ್ತಾರೆ. ಇವುಗಳು ಸೋಂಕಿನಿಂದ ನಮ್ಮನ್ನು ರಕ್ಷಣೆ ಮಾಡುತ್ತವೆ. ಈ ಎರಡು ಗ್ರಂಥಗಳಿಗೆ ಏನಾದರೂ ಸೋಂಕು ತಗುಲಿದರೆ ನಮಗೆ ನುಂಗಲು ಕಷ್ಟ ಆಗುತ್ತದೆ, ತುಂಬಾ ನೋವು ಆಗುತ್ತದೆ.

 

ನೀರು ಕೂಡ ಕುಡಿಯಲು ಆಗುವುದಿಲ್ಲ ಕಿವೀನೋವು ಜ್ವರ ಗಂಟಲು ಬೇನೆ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಈ ಒಣ ಗಂಟಲು ಸಮಸ್ಯೆ ನಿವಾರಣೆಗೆ ಏನು ಮಾಡಬೇಕು ಅಂತ ಹೇಳುವುದಾದರೆ, ಬಿಸಿ ನೀರಿನಿಂದ ಸಾಧ್ಯವಾದಷ್ಟು ಗಾರ್ಗಲಿಂಗ್ ಮಾಡಿ, ಚಳಿಗಾಲದಲ್ಲಿ ಶೀತ ಆಹಾರಗಳನ್ನು ಸೇವನೆ ಮಾಡಬೇಡಿ. ವರ್ಷದಲ್ಲಿ ಒಮ್ಮೆ ದಂತ ತಪಾಸಣೆ ಮಾಡಿ. ಬಾಯಿಯಲ್ಲಿ ಸಲೈವಾ ರಚನೆಯನ್ನು ವೇಗಗೊಳಿಸುತ್ತದೆ ಮತ್ತು ಗಂಟಲು ಒಣಗುವುದಿಲ್ಲ. ಸೋಂಪು ಕಾಳು ತಿನ್ನಿರಿ. ಮತ್ತು ಉತ್ತಮವಾದ ಟಿಪ್ಸ್ ಯಾವುದು ಅಂದರೆ ನಿಂಬೆ ಹಣ್ಣಿನ ಪಾನಕ ಕುಡಿಯಿರಿ.
ಬಾಯಿಯ ಸುರಕ್ಷತೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.ಉತ್ತಮವಾದ ಆಹಾರ ಸಿಟ್ರಿಕ್ ಆಮ್ಲ ಇರುವ ಫ್ರೂಟ್ಸ್ ಗಳನ್ನು ಸೇವಿಸಿ. ಹೆಚ್ಚು ನಾರಿನ ಅಂಶ ಇರುವ ಎಲ್ಲ ಬಗೆಯ ಹಸಿರು ಸೊಪ್ಪು ತರಕಾರಿ ಸೇವನೆ ಮಾಡಿ ಇದರಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚುತ್ತದೆ. ಸಾಧ್ಯವಾದಷ್ಟು ನಿಮ್ಮ ಗಂಟಲು ಒಣಗದಂತೆ ನೋಡಿಕೊಳ್ಳಿ. ನೀರಿನಾಂಶ ಹೆಚ್ಚು ಇರುವ ಪದಾರ್ಥಗಳನ್ನು ಸೇವಿಸಿ. ಶುಭದಿನ.

Leave a Reply

Your email address will not be published. Required fields are marked *