ಸೆಪ್ಟೆಂಬರ್ 24, ಶನಿವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶುಭ ಕೃಥ್ ನಾಮ ಸಂವತ್ಸರ, ಡಕ್ಷಿನಾಯಿನೆ ವರ್ಷ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ. ಇಂದು ಸೆಪ್ಟೆಂಬರ್ 24 ಶನಿವಾರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಇಂದು ಪೂರ್ವ ಪಲ್ಗುಣಿ ನಕ್ಷತ್ರ. ಮೇಷ ರಾಶಿಗೆ ಇದು ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ತರುವ ದಿನ. ಬೆಳಿಗ್ಗೆ ಇಂದ ಮಧ್ಯಾನದ ವರೆಗೆ ಸ್ವಲ್ಪ ಖೆದ ಇದ್ದಂಗೆ ಭಾಸ ಆಗುತ್ತೆ. ಮಧ್ಯಾನದ ನಂತ್ರ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಕಾಣುತ್ತೀರಿ. ನಿಮ್ಮ ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ದಾಂಪತ್ಯದಲ್ಲಿ ಯಶಸ್ಸು. ವೃಷಭ ರಾಶಿಯವರಿಗೆ ಮಧ್ಯಾನದ ವರೆಗೂ ಕೂಡ ಬಹಳ ಪರಾಕ್ರಮದಿಂದ ಓಡಾಡಿಕೊಂಡು ಎಲ್ಲಾ ಕೆಲಸಗಳನ್ನೂ ಚೆನ್ನಾಗಿ ಮಾಡಿಕೊಳ್ಳುತ್ತೀರಿ. ಮಧ್ಯಾನದ ನಂತ್ರ ಸ್ವಲ್ಪ ಗಂಭೀರ ಸಮಸ್ಯೆ ಅಥವಾ ಕೆಲಸಗಳ ಜವಾಬ್ದಾರಿ ನಿಮಗೆ ಬರುತ್ತೆ. ಆದ್ದರಿಂದ ಮಧ್ಯಾನದ ನಂತ್ರ ಸ್ವಲ್ಪ ನೆಮ್ಮದಿ ಕಡಿಮೆ ಆದಂತೆ ಅಥವಾ ಒತ್ತಡಗಳು ಹೆಚ್ಚಾದಂತೆ ಭಾಸವಾಗುತ್ತದೆ. ಮಿಥುನ ರಾಶಿಯವರಿಗೆ ಮಧ್ಯಾನದ ವರೆಗೂ ಕೂಡ ಮನಸಿನಲ್ಲಿ ನೆಮ್ಮದಿ ಸಂಸಾರದಲ್ಲಿ ನೆಮ್ಮದಿ ನಿಮ್ಮ ಪ್ರೀತಿ ಪಾತ್ರರಿಂದ ಒಳ್ಳೆಯ ರೀತಿಯಲ್ಲಿ ಪ್ರೇಮವನ್ನು ಅಕ್ಕರೆಯನ್ನು ಕಾಣುತ್ತೀರಿ. ಸಂಸಾರದಲ್ಲಿ ಸುಖವನ್ನು ಕಾಣುತ್ತೀರಿ. ಮಧ್ಯಾನದ ನಂತ್ರ ಇದೆ ಪ್ರೇಮ ಪ್ರೀತಿ ನಿಮ್ಮ ಸುಖ ನಿಮ್ಮ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ಕೂಡ ಹರಿದು ಹೋಗುತ್ತೆ ಆದ್ದರಿಂದ ಇನ್ನೂ ಹೆಚ್ಚಿನ ನೆಮ್ಮದಿ ಖಂಡಿತವಾಗಿ ಪಡಿತೀರ.

 

ಕರ್ಕಾಟಕ ರಾಶಿಗೆ ಮಧ್ಯಾನದ ವರೆಗೂ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಕಾಣುತ್ತೀರಿ. ನಿಮ್ಮ ರಾಶಿಯಲ್ಲಿ ಚಂದ್ರ ಸಂಚಾರವನ್ನು ಮಾಡ್ತಾ ಇರುವುದರಿಂದ ಚಂದ್ರನಂತೆ ಹೊಳೆಯುತ್ತಿರ. ಇದಾದ ನಂತರ ಮಧ್ಯಾನದ ಮೇಲೆ ನಿಮ್ಮ ಸಂಸಾರದ ಬಗ್ಗೆ ಗಮನ ಕೊಡುತ್ತೀರಿ. ಮನೆಯಲ್ಲಿ ಇದ್ದು ಕೆಲಸವನ್ನು ಬಿಟ್ಟು ಮನೆಯವರ ಜೊತೆ ಒಳ್ಳೆಯ ಸಮಯ ಸಂಜೆಯ ನಂತರ ಕಳಿತಿರ. ಸಿಂಹ ರಾಶಿಯವರಿಗೆ ಮಧ್ಯಾನದ ವರೆಗೂ ಮನಸ್ಸಿಗೆ ಸ್ವಲ್ಪ ಖೆದಾ ನೆಮ್ಮದಿ ಇಲ್ಲದಂತೆ ಅನಿಸುತ್ತೆ ಮುಖ್ಯವಾದ ಕೆಲವು ವಿಚಾರಗಳಲ್ಲಿ ನಿಮಗೆ ಬೇಕಾದ ತಿರುವುಗಳು ಪ್ರಾಪ್ತಿ ಆಗದೆ ಇರಬಹುದು. ಮಧ್ಯಾನದ ಮೇಲೆ ನಿಮಗೆ ಬೇಕಾದಂತೆ ಎಲ್ಲಾ ಪರಿಸ್ಥಿತಿಗಳು ಸಂಪೂರ್ಣವಾಗಿ ನಿಮ್ಮ ಪರವಾಗಿ ತಿರುಗುತ್ತ. ಕನ್ಯಾ ರಾಶಿಗೆ ಮಧ್ಯಾನದ ವರೆಗೂ ಬಹಳ ಒಳ್ಳೆಯ ದಿನ. ಮಿತ್ರರಿಂದ ನೆಮ್ಮದಿ ಇಷ್ಟಾರ್ಥ ಸಿದ್ಧಿ. ಮಧ್ಯಾನದ ಮೇಲೆ ಸ್ವಲ್ಪ ರೆಸ್ಟ್ ಮಾಡಬೇಕು. ಇಡೀ ತಿಂಗಳಲ್ಲಿ ಅನೇಕ ಚಟುವಟಿಕೆಗಳಲ್ಲಿ ಮಾಡ್ತಾ ಇದೀರಿ ನನ್ನ ಬಗ್ಗೆ ಕೂಡ ಗಮನ ಕೊಡಿ. ತುಲಾ ರಾಶಿಗೆ ಮಧ್ಯಾನದ ವರೆಗೂ ಕೆಲಸದ ಒತ್ತಡಗಳು ಜವಾಬ್ದಾರಿ ಜಾಸ್ತಿ ಇರುತ್ತೆ. ಮಧ್ಯಾನದ ಮೇಲೆ ಇಷ್ಟಾರ್ಥ ಸಿದ್ಧಿ. ಮಿತ್ರರ ಜೊತೆ ಬಹಳ ಒಳ್ಳೆಯ ವಾತಾವರಣ ಆಲಾಪ ಸಂತೋಷದ ಸಮಯ ಕಳಿತಿರಿ. ವೃಶ್ಚಿಕ ರಾಶಿಗೆ ಮಧ್ಯಾನದ ವರೆಗೂ ಕೂಡ ಮನಸ್ಸಿಗೆ ನೆಮ್ಮದಿ ದೊಡ್ಡವರ ಆಶೀರ್ವಾದ ಎಲ್ಲವೂ ಪ್ರಾಪ್ತಿ ಆಗುತ್ತೆ. ಮಧ್ಯಾನದ ನಂತ್ರ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗುವುದರಿಂದ ಕೆಲಸವನ್ನು ಮಾಡಲೇ ಬೇಕಾಗುತ್ತದೆ. ಎರಡು ದಿನ ಕೆಲಸ ಮಾಡಿಬಿಡಿ ಅದ್ದಾದ ನಂತ್ರ ಮೋಜು ಮಸ್ತಿ ನಿಮ್ಮನ್ನು ಕಾಯ್ತಾ ಇದೆ.

 

ಧನಸ್ಸು ರಾಶಿಗೆ ಮಧ್ಯಾನದ ವರೆಗೂ ಮನಸ್ಸಿಗೆ ಸ್ವಲ್ಪ ಬೇಸರ ಇರುತ್ತೆ. ಮಧ್ಯಾನದ ಮೇಲೆ ಬೇಸರವಿಲ್ಲ ಕರಗಿ ಹೋಗುತ್ತೆ. ನಿಮ್ಮ ಮನಸ್ಸಿನಲ್ಲಿ ಇದ್ದ ಕಳವಳ ತೊಂದರೆ ಎಲ್ಲಾ ಕಳೆದು ಹೋಗುತ್ತೆ. ಒಳ್ಳೆಯ ರೀತಿಯಲ್ಲಿ ನೆಮ್ಮದಿ ದೊಡ್ಡವರ ಆಶೀರ್ವಾದ ಪ್ರಾಪ್ತಿ. ಮಕರ ರಾಶಿಗೆ ಮಧ್ಯಾನದ ವರೆಗೆ ಅನೇಕ ರೀತಿಯ ತೊಂದರೆಗಳು ಬರಬಹುದು ಎನ್ನಿಸುತ್ತೆ. ಮಧ್ಯಾನದ ಮೇಲೆ ಸುಸ್ತಾಗಿ ಹೋಗುತ್ತೀರಿ. ಇವತ್ತು ಯಾಕೋ ನನಗೆ ಸರಿ ಹೋಗ್ತಾ ಇಲ್ಲ. ಈ ಕೆಲಸಗಳನ್ನು ಇಲ್ಲಿಗೆ ನಿಲ್ಲಿಸಿ ನನ್ನ ಪಾಡಿಗೆ ನಾನು ಇರುವುದು ಒಳ್ಳೆಯದು ಎನ್ನಿಸುತ್ತೆ. ಎರಡು ದಿನಗಳ ಕಾಲ ಯಾವುದರಲ್ಲಿ ಆಸಕ್ತಿ ಇಲ್ಲ ಎನ್ನುವ ಮನಸ್ಥಿತಿ ಇರುತ್ತೆ ಎರಡು ದಿನಗಳ ನಂತರ ಎಲ್ಲಾ ಸರಿ ಹೋಗುತ್ತೆ. ಮುಖ್ಯ ನಿರ್ಧಾರ ಬೇಡ. ಕುಂಭ ರಾಶಿಗೆ ಮಧ್ಯಾನದ ವರೆಗೂ ಮನಸ್ಸಿಗೆ ನೆಮ್ಮದಿ. ಸಾಮಾಜಿಕ ವಾತಾವರಣದಲ್ಲಿ ಕೀರ್ತಿ ಯಶಸ್ಸು ಪ್ರಾಪ್ತಿ. ಮಧ್ಯಾನದ ಮೇಲೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಬಹಳ ಒಳ್ಳೆಯ ಸಮಯ ಕಳೆಯುವ ಅವಕಾಶ ಪ್ರಾಪ್ತಿ.ಅನೆಯವರೊಂಡಿಗೆ ದಾಂಪತ್ಯ ಜೀವನದಲ್ಲಿ ಯಶಸ್ಸು. ಮತ್ತು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು. ಮೀನಾ ರಾಶಿಗೆ ಮಧ್ಯಾನದ ವರೆಗೂ ಪ್ರಶಸ್ತವಾದ ದಿನ ಎಲ್ಲಾ ವಿಷಯಗಳಲ್ಲಿ ಜಯ ಪ್ರಾಪ್ತಿ. ಮಧ್ಯಾನದ ಮೇಲೆ ಆತ್ಮವಿಶ್ವಾಸ ಸ್ವಲ್ಪ ಹೆಚ್ಚಾಯಿತು ಎಂದು ಭಾಸವಾಗಿ ಬಹಳ ಟ್ರಿಕ್ಕಿ ಸಿಟುವೇಶನ್ ಸಿಲುಕಿ ಹಾಕಿಕೊಳ್ಳುತ್ತಿ್ರಿ. ಹಾಗಾಗಿ ವಿನಮ್ರತೆಯಿಂದ ಕೆಲಸ ಸಾಧಿಸಿ.

Leave a Reply

Your email address will not be published. Required fields are marked *