ಪಾದಗಳ ನೋವು ಹಾಗೂ ಚುಚ್ಚುವಿಕೆ, ಕಾಲು ನೋವು ಹಿಮ್ಮಡಿ ನೋವು ಎಲ್ಲವೂ ಮಾಯವಾಗುತ್ತದೆ. ಅದು ಹೇಗೆ ಅಂತೀರಾ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ ಕೆಲವರಿಗೆ ಪಾದಗಳಲ್ಲಿ ಸುಮ್ಮನೆ ನೋವು ಆಗುತ್ತಿರುತ್ತದೆ. ಪಾದಗಳಲ್ಲಿ ಉರಿ ಆಗುತ್ತದೆ ಊದಿಕೊಳ್ಳುತ್ತವೆ. ಇದನ್ನು ಇಂಗ್ಲಿಷ್ ಭಾಷೆಯಲ್ಲಿ ಹೀಲ್ಸ್ ಪರ್ ಅಂತ ಕರೆಯುತ್ತಾರೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಹೀಲ್ಸ್ ಪರ್ ಅನ್ನುವುದು ಯಾವುದಕ್ಕೆ ಆಗುತ್ತದೆ ಹಿಮ್ಮಡಿಯಲ್ಲಿ ಚುಚ್ಚುತ್ತದೆ ನೋವು ಆಗುತ್ತಿರುತ್ತದೆ. ಇದಕ್ಕೆ ಕಾರಣಗಳು ಹಾಗೂ ಪರಿಹಾರ ಏನು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಅಷ್ಟೇ ಅಲ್ಲದೇ ರಸ್ತೆ ಬದಿಯಲ್ಲಿ ಸಿಗುವ ಹೂವುಗಳಿಂದ ಹೇಗೆ ಗುಣಪಡಿಸಿಕೊಳ್ಳಬಹುದು ಅಂತ ತಿಳಿಸಿಕೊಡುತ್ತೇವೆ ಬನ್ನಿ. ಪಾದಗಳಲ್ಲಿ ಅಥವಾ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುವುದಕ್ಕೆ ಸಾವಿರಾರು ಕಾರಣಗಳಿರುತ್ತವೆ. ಅವುಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ. ಪಾದದ ಹಿಮ್ಮಡಿಯಲ್ಲೀ ಎಕ್ಸ್ಟ್ರಾ ಮೂಳೆ ಅಥವಾ ಮಾಂಸ ಖಂಡ ಬೆಳೆಯುತ್ತದೆ ಅದಕ್ಕೆ ಹೀಲ್ಸ್ ಪರ್ ಅಂತ ಕರೆಯುತ್ತಾರೆ. ಈ ಸಮಸ್ಯೆ ಬರಲು ಕಾರಣ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಹಾಗೂ ಅರ್ಥರೋಟಿಸ್ ಸಮಸ್ಯೆ ಇದ್ದವರಿಗೆ ಇದು ಹೆಚ್ಚಾಗಿ ಕಂಡು ಬರುತ್ತದೆ.

 

ಹಾಗೂ ಸರಿಯಾದ ಚಪ್ಪಲಿಗಳನ್ನು ಹಾಕದೆ ಇದ್ದಲ್ಲಿ ಅಥವಾ ಅಳತೆಗು ಮೀರಿ ಹಾಗೂ ಭಾರವಾದ ಚಪ್ಪಲಿಗಳನ್ನು ಧರಿಸುವುದರಿಂದ ಹೀಲ್ಸ್ ಪರ್ ಕಾಣಿಸಿಕೊಳ್ಳುತ್ತದೆ. ಮಧುಮೇಹ ರೋಗಗಳಲ್ಲಿ ಹಾಗೂ ಪಾದಗಳಲ್ಲಿ ಒತ್ತಡ ಹೆಚ್ಚಾದಾಗ ಅಧಿಕವಾಗಿ ಓಡಾಡುವುದು ಕಾಣಿಸಿಕೊಳ್ಳುತ್ತದೆ. ಈ ನೋವು ಎಲ್ಲರಿಗೂ ಒಂದೇ ಸಮಯದಲ್ಲಿ ಕಾಣಿಸುವುದಿಲ್ಲ ಕೆಲವರಿಗೆ ಮಲಗಿದಾಗ ನೋವು ಉಂಟಾದರೆ ಇನ್ನೂ ಕೆಲವರಿಗೆ ಮಲಗಿ ಎದ್ದಾಗ ಆಗುತ್ತದೆ ಇನ್ನೂ ಕೆಲವರಿಗೆ ನಡೆಯುವಾಗ ಆಗುತ್ತದೆ. ಪಾದಗಳಲ್ಲಿ ನೋವು ಆಗುತ್ತಿರುತ್ತದೆ. ಚುಚ್ಚಿದ ಹಾಗೆ ಅನುಭವ ಆಗುತ್ತದೆ ಹಾಗಾದ್ರೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಅಂತ ತಿಳಿಯೋಣ ಬನ್ನಿ.ಎಕ್ಕದ ಗಿಡ. ಇದನ್ನು ನೀವು ನೋಡಿರುತ್ತೀರಿ. ಇದರ ಹೂವುಗಳು ಕೂಡ ಬಹಳಷ್ಟು ಪ್ರಯೋಜನಕಾರಿ ಅಂತ ಹೇಳಬಹುದು. ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಇದರ ಹೂವುಗಳು ಕಾಣಸಿಗುತ್ತವೆ.   ಈ ಹೂವುಗಳನ್ನು ತೆಗೆದುಕೊಂಡು ಜೊತೆಗೆ ಎರಡೂ ಮೂರು ಎಲೆಗಳನ್ನು ತೆಗೆದುಕೊಳ್ಳಿ. ಈ ಗಿಡದ ಹೂವುಗಳು ಕಿತ್ತುವಾಗ ಬಹಳ ಜಾಗ್ರತೆ ಇರಬೇಕು ಗೆಳೆಯರೇ. ಏಕೆಂದ್ರೆ ಇದರಲ್ಲಿ ಹಾಲು ಬರುತ್ತದೆ. ಇದು ಕಣ್ಣಿಗೆ ತಾಕಿದರೆ ಕಣ್ಣು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತುಂಬಾನೇ ಜಾಗೃತೆಯಿಂದ ಈ ಗಿಡದ ಹೂವುಗಳನ್ನು ಬಿಡಿಸಿಕೊಳ್ಳಿ.

 

ಬಳಿಕ ಮನೆಗೆ ತಂದು ಅವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಡಿ. ಕುದಿಸಿದ ನೀರನ್ನು ಹೂವು ಮತ್ತು ಎಲೆಗಳ ಮೇಲೆ ಹಾಕಿ 10-18 ನಿಮಿಷಗಳ ಕಾಲ ನೆನೆಸಿ ಇಡಿ. ಈಗ ನಿಮ್ಮ ಪಾದಗಳನ್ನು ಅಥವಾ ಹಿಮ್ಮಡಿ ಅನ್ನು ಎಣ್ಣೆಯ ಸಹಾಯದಿಂದ ಮಸಾಜ್ ಮಾಡಿಕೊಳ್ಳಿ. ಸಾಸಿವೆ ಎಣ್ಣೆ ಬಹಳ ಸೂಕ್ತವಾದದ್ದು. ಇದು ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ ಹಾಗೆಯೇ 10-15 ನಿಮಿಷ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಬಳಿಕ ನೆನೆಸಿಟ್ಟ ಹೂವು ಮತ್ತು ಎಲೆಗಳ ನೀರನ್ನು ತೆಗೆದುಕೊಳ್ಳಿ. ಒಂದು ಪ್ಲಾಸ್ಟಿಕ್ ಅನ್ನು ನೆಲದ ಮೇಲೆ ಹಾಸಿ ಅದರಲ್ಲಿ ಎಲೆಗಳನ್ನು ಜೋಡಿಸಿ ಮೇಲೆ ಹೂವುಗಳನ್ನು ಹಾಕಿ ನಿಮ್ಮ ಪೂರ್ತಿ ಪಾದವನ್ನು ಅದರ ಮೇಲೆ ಇಡಿ. ಬಳಿಕ ಒಂದು ಬಟ್ಟೆಯನ್ನು ಪೂರ್ತಿ ಕಾಲನ್ನು ಸುತ್ತಿಕೊಳ್ಳಿ. ಒಳಗಡೆ ಹೂವಿನ ಶಾಖವು ತಣ್ಣಗೆ ಆಗುವವರೆಗೂ 10 ನಿಮಿಷ ಹಾಗೆಯೇ ಬಿಟ್ಟು ಬಿಡಿ. ಹೀಗೆ ಮಾಡುವುದರಿಂದ ಹಿಮ್ಮಡಿ ನೋವು ಪಾದಗಳ ನೋವು ಚುಚ್ಚುವಿಕೆ ಎಲ್ಲವೂ ಕಡಿಮೆ ಆಗುತ್ತದೆ ಯಾವುದೇ ಖರ್ಚು ಇಲ್ಲದೆ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಈ ವಿಧಾನವನ್ನು ನೀವು ಎರಡು ದಿನಗಳವರೆಗೆ ಮಾಡಿ ನೋಡಿ ಖಂಡಿತವಾಗಿ ವಿಶ್ರಾಂತಿ ಸಿಗುತ್ತದೆ. ಶುಭದಿನ.

Leave a Reply

Your email address will not be published. Required fields are marked *