ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಜೋಳದ ರೊಟ್ಟಿ ಅಂತ ಅಂದರೆ ಸಾಕು ನನಗೆ ನೆನಪಿಗೆ ಬರುವುದು ಉತ್ತರ ಕರ್ನಾಟಕದ ಮಂದಿ. ಹೌದು ಜೋಳದ ರೊಟ್ಟಿ ಮೆಣಸಿನಕಾಯಿ ಚಟ್ನಿ ಅಂದರೆ ಬಲು ಪ್ರೀತಿ ಹಾಗೆಯೇ ಅಷ್ಟೇ ಅಚ್ಚು ಮೆಚ್ಚುಗೆಯನ್ನು ಪಡೆದಿದೆ. ಹೇಳಲಾಗುತ್ತದೆ, ದಕ್ಷಿಣ ಕನ್ನಡ ಹೆಚ್ಚು ರಾಗಿಗೆ ಹೇಗೆ ಪ್ರಸಿದ್ಧತೆಯನ್ನು ಪಡೆದು ಕೊಂಡಿದೆಯೋ ಹಾಗೆಯೇ ಉತ್ತರ ಕರ್ನಾಟಕವು ಜೋಳದ ರೊಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದಿದೆ. ಪ್ರತಿಯೊಬ್ಬರೂ ಅಂದರೆ ಬಡವರು ಶ್ರೀಮಂತರು ಚಿಕ್ಕವರು ದೊಡ್ಡವರು ಕೂಲಿಕಾರ್ಮಿಕರು ಎಲ್ಲರೂ ಸೇವನೆ ಮಾಡುತ್ತಾರೆ. ಉತ್ತರ ಕರ್ನಾಟಕದ ಸೊಗಡು ಈ ಜೋಳದ ರೊಟ್ಟಿಯಲ್ಲಿ ಅಡಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಜೋಳದ ರೊಟ್ಟಿಯ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ.ಜೋಳ ಎಲ್ಲ ಪ್ರಮುಖವಾದ ಧಾನ್ಯಗಳಲ್ಲಿ ಒಂದು ಅಂತ ಹೇಳಬಹುದು. ಸುಮಾರು ವರ್ಷಗಳ ಹಿಂದೆ ಈಜಿಪ್ತ್ ನಲ್ಲಿ ಜೋಳದ ಇತರ ಖಾದ್ಯಗಳನ್ನು ಮಾಡಿ ಸೇವನೆ ಮಾಡುತ್ತಿದ್ದರಂತೆ.
ಅಮೆರಿಕಾದ ಸಂಶೋಧನೆಯ ಪ್ರಕಾರ ಜೋಳದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೊಟೀನ್ ಸಲ್ಫರ್ ಫಾಸ್ಫರಸ್ಪ ಪೋಟ್ಯಾಶಿಯಂ ಮ್ಯಾಗ್ನಿಷಿಯಂ ಅಮೈನೋ ಆಮ್ಲಗಳು ವಿಟಮಿನ್ಗಳು ಹೇರಳವಾಗಿವೆ ನಾರಿನ ಅಂಶ ಹೆಚ್ಚು ಇರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಭಾರತದ ಪ್ರತಿಷ್ಟಿತ ಸಂಸ್ಥಾನ ಹೇಳಿರುವ ಹಾಗೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಮತ್ತು ದೇಹದಲ್ಲಿ ಶೇಖರಣೆ ಆದ ವಿಷಕಾರಿ ಅಂಶಗಳನ್ನು ಹೊರಗೆ ತೆಗೆದು ಹಾಕುವ ಕೆಲಸವನ್ನು ಮಾಡುತ್ತದೆ ಮಧುಮೇಹ ಸಮಸ್ಯೆಯನ್ನು ನಿವಾರಿಸಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗುತ್ತದೆ. ಹಾಗೂ ಹೃದಯದ ಕಾಯಿಲೆಯ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ಕಿಡ್ನಿ ವಿರೋಧಿ ಹೋರಾಡುತ್ತಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ವೈದ್ಯರು ಹೇಳುವ ಪ್ರಕಾರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾಗುವ ಹುಣ್ಣು ಕರುಳಿನ ಬೇನೆ ಮಲಬದ್ಧತೆ ಅತಿಯಾದ ಆಮ್ಲೀಯತೆ, ಹೊಟ್ಟೆ ಸೆಳೆತ ಹೊಟ್ಟೆ ಉಬ್ಬರ ಹೊಟ್ಟೆಗೆ ಸಂಭಂದಿಸಿದ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಜೋಳದ ರೊಟ್ಟಿ. ಏಕೆಂದರೆ ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ.
ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಇನ್ಸುಲಿನ್ ಉತ್ಪತ್ತಿ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಜೋಳದಲ್ಲಿ ಅತ್ಯುತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ ಜೊತೆಗೆ ರಕ್ತನಾಳದಲ್ಲಿ ಉಂಟಾಗುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಜೋಳದ ರೊಟ್ಟಿ ಸಹಾಯ ಮಾಡುತ್ತವೆ. ಜೋಳದಲ್ಲಿ ಮ್ಯಾಗ್ನಿಷಿಯಂ ಕ್ಯಾಲ್ಷಿಯಂ ಅಂಶ ಹೇರಳವಾಗಿ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಹಾಗೂ ಹಲ್ಲುಗಳಿಗೆ ಬಹಳ ಒಳ್ಳೆಯದು. ನಾರಿನ ಅಂಶ ಹೆಚ್ಚು ಇರುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯವನ್ನು ಮಾಡುತ್ತದೆ.ಜೊತೆಗೆ ಕರುಳಿನ ಆರೋಗ್ಯವೂ ವೃದ್ದಿಯಾಗುತ್ತದೆ. ಜೋಳದ ರೊಟ್ಟಿಯಲ್ಲಿ ಟ್ಯಾನಿನ್ ಎಂಬ ಅಂಶವು ಇದೆ ಇದರಿಂದ ಮಧುಮೇಹಿಗಳಿಗೆ ಉತ್ತಮ. ಏಕೆಂದ್ರೆ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಇನ್ನೂ ಜೋಳವನ್ನು ನಾವು ಹಿಟ್ಟು ಮಾಡಿಕೊಂಡು ಅದರಲ್ಲಿ ನೀರು ಹಾಕಿ ಆಮೇಲೆ ರೊಟ್ಟಿ ಮಾಡಿಕೊಂಡು ಸೇವನೆ ಮಾಡಬೇಕು. ಇದನ್ನು ನೀವು ತರಕಾರಿ ಪಲ್ಯ ಚಟ್ನಿ ಮಟನ್ ಚಿಕನ್ ಎಲ್ಲದರೊಂದಿಗೆ ಸೇವನೆ ಮಾಡಬಹುದು. ಜೋಳದ ರೊಟ್ಟಿ ನಿಜಕ್ಕೂ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಉತ್ತಮ. ಶುಭದಿನ.