ಸೆಪ್ಟೆಂಬರ್ 25, ಮಹಾಲಯ ಅಮಾವಾಸ್ಯೆಯ ಭಾನುವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶುಭಕೃತ್ಥ್ ನಾಮ ಸಂವತ್ಸರ, ದಕ್ಷೀನಾಯಿನೆ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ ಸೆಪ್ಟೆಂಬರ್ 25 ನೆ ತಾರೀಕು ಭಾನುವಾರ ಅಮಾವಾಸ್ಯೆ. ಇಂದು ಉತ್ತರ ಪಲ್ಗುನಿ ನಕ್ಷತ್ರ. ಇಂದು ಮಹಾಲಯ ಅಮಾವಾಸ್ಯೆ. ಸರ್ವ ಪಿತೃ ಅಮಾವಾಸ್ಯೆ, ಇಂದಿನ ದಿನ ತರ್ಪಣ ಕೊಡಲೇಬೇಕು. ಮತ್ತು ಇಂದು ಶ್ರಾದ್ಧ ಕಾರ್ಯಗಳನ್ನು ಮಾಡಲೇಬೇಕು. ಪಕ್ಷ ಮಾಸದಲ್ಲಿ ಯಾರು ಇನ್ನೂ ಮಾಡದೆ ಇದ್ದರೆ ಹೋಗಿ ಇವತ್ತು ಕೊಟ್ಟು ಬರಬಹದು. ಅನ್ನ ಅಕ್ಕಿ ಬೆಲ್ಲ ಇತ್ಯಾದಿಗಳನ್ನು ಕೊಟ್ಟು ನಿಮ್ಮ ಎಲ್ಲಾ ಪಿತೃಗಳಿಗೆ ಶಾಂತಿ ಆಗಲಿ ಮುಕ್ತಿಯಾಗಲಿ ಎನ್ನುವ ಸಂಕಲ್ಪದಿಂದ ಅಮಾವಾಸ್ಯೆ ಮಾಡಲೇಬೇಕು.ನೀವು ಯಾವ ದೇವರನ್ನು ಬೇಕಾದರೂ ನಂಬಬಹುದು. ಯಾವುದೇ ಸಾಮಾಜಿಕ ವರ್ಗಕ್ಕೆ ಕೂಡ ನೀವು ಒಳಗಾಗಿರಬಹುದು. ಆದ್ರೆ ಕೂಡ ಎಲ್ಲರೂ ಮಾಡಲೇಬೇಕಾದ ಕರ್ತವ್ಯ. ನಿಮ್ಮ ಎಲ್ಲಾ ಪಿತೃಗಳಲ್ಲಿ ಯಾರಿಗೆ ಗತಿ ಪ್ರಾಪ್ತಿ ಆಗಿಲ್ಲ. ಸಂತತಿ ಪ್ರಾಪ್ತಿ ಆಗಿಲ್ಲ. ನೀವು ಮಾಡುವ ಒಂದು ಸಣ್ಣ ಪೂಜೆಯಿಂದ ಇಡೀ ನಿಮ್ಮ ವಂಶ ಕುಲ ಉದ್ಧಾರ ಆಗುತ್ತೆ. ಇಂದು ಪಿತೃ ಪಕ್ಷ ಮಾಡಿದರೆ ದೇವರಿಗಿಂತ ಬೇಗ ನಿಮ್ಮ ಪಿತೃಗಳು ವರ ಕೊಡುತ್ತಾರೆ. ಹಾಗಾಗಿ ಇಂದು ಅಮಾವಾಸ್ಯೆ ಶ್ರಾದ್ಧ ಕಾರ್ಯಗಳನ್ನು ಎಲ್ಲರೂ ಮಾಡಬೇಕು. ಎಲ್ಲಾ ರಾಶಿಗಳಿಗೆ ದಿನ ಭವಿಷ್ಯವನ್ನು ತಿಳಿಯೋಣ.

 

ಮೇಷ ರಾಶಿಗೆ ಇದು ಬಹಳ ಒಳ್ಳೆಯ ದಿನ ನಿಮಗೆ ನಿಮ್ಮ ಆತ್ಮ ವಿಶ್ವಾಸ ಇಂದು ಜಾಸ್ತಿ ಇರುತ್ತೆ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು ಆದ್ರೆ ಇವತ್ತು ನೀವು ಬೇರೆಯವರನ್ನು ಟೀಕೆ ಮಾಡುವಷ್ಟು ಆತ ವಿಶ್ವಾಸವನ್ನು ಇಟ್ಟುಕೊಂಡಿರುತ್ತಾರೆ. ಇದರಿಂದ ಬೇರೆಯವರಿಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಹಾಳಾಗಿ ಅಥವಾ ಬೇಜಾರು ಆಗಬಹುದು. ಹಾಗಾಗಿ ನಿಮ್ಮ ಆತ್ಮ ವಿಶ್ವಾಸ ಸ್ವಲ್ಪ ಕಡಿಮೆ ಮಾಡಿಕೊಂಡು ಎಲ್ಲರ ಜೊತೆ ವಿನಯದಿಂದ ಇರಿ. ವೃಷಭ ರಾಶಿಯವರಿಗೆ ಇಂದು ಸ್ವಲ್ಪ ಜವಾಬ್ದಾರಿಗಳು ಜಾಸ್ತಿ ಇರಬಹುದು. ಟೆನ್ಷನ್ ಆಗುತ್ತೆ. ವೃಷಭ ವೃಷಭದಂತೆ ಸಿಟ್ಟು ಬಂದ್ರೆ ಬಹಳ ಬೇಗ ಸಿಟ್ಟು ಬರುತ್ತೆ. ಇವತ್ತು ಆ ತರಹದ ದಿನ ಆಗಿರಬಹುದು. ನಿಮ್ಮ ಸಿಟ್ಟನ್ನು ಯಾರು ನೋಡುವುದಿಲ್ಲ. ಆದ್ರೆ ಇಂದು ಆ ಸಿಟ್ಟನ್ನು ನೀವು ತೋರಿಸಬೇಕಾಗಿ ಬರಬಹುದು. ಹಾಗಾಗಿ ಜಾಗ್ರತೆಯಿಂದ ವ್ಯವಹಾರ ಮಾಡಿ. ಮಿಥುನ ರಾಶಿಯವರಿಗೆ ಇದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮ ಮಾತುಕತೆಯಿಂದ ಬೇರೆಯವರನ್ನು ಗೆಲ್ಲುತ್ತಿರಿ. ಬಹಳ ಒಳ್ಳೆಯ ರೀತಿಯಲ್ಲಿ ಆತ್ಮ ವಿಶ್ವಾಸ ದಿಂದ ಮುಂದೆ ಹೋಗುತ್ತೀರಿ. ಬಹಳ ಚೆನ್ನಾಗಿದೆ. ಕರ್ಕಾಟಕ ರಾಶಿಗೆ ಬಹಳ ಒಳ್ಳೆಯ ದಿನ. ಮನೆಯಲ್ಲಿ ಮನದಲ್ಲಿ ನೆಮ್ಮದಿ ಕಾಣುತ್ತೀರಿ. ನಿಮ್ಮ ಮನೆಯವರ ಜೊತೆ ಬಹಳ ಒಳ್ಳೆಯ ರೀತಿಯಲ್ಲಿ ವ್ಯವಹಾರ ಮಾಡುವುದರಿಂದ ಸಂಸಾರದಲ್ಲಿ ಬಹಳ ದೊಡ್ಡ ಸುಖ ಶಾಂತಿಯನ್ನು ಕಾಣುತ್ತೀರಿ. ಸಿಂಹ ರಾಶಿಯವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಆತ್ಮ ವಿಶ್ವಾಸ. ಎಲ್ಲಾ ವಿಷಯಗಳಲ್ಲಿ ನಿಮಗೆ ಬೇಕಾದ ತಿರುವುಗಳನ್ನು ನೀವು ಕಾಣುತ್ತೀರಿ. ಆದ್ದರಿಂದ ಬಹಳ ಒಳ್ಳೆಯ ರೀತಿಯಲ್ಲಿ ಇವತ್ತು ದಿನ ಕಳಿತೀರ.

 

ಕನ್ಯಾ ರಾಶಿಗೆ ಮನಸ್ಸಿಗೆ ನೆಮ್ಮದಿ ಸ್ವಲ್ಪ ಕಡಿಮೆ ಇರುತ್ತೆ ಅನ್ನೋ ರೀತಿ ಭಾಸ ಆಗುತ್ತೆ. ನಿಮ್ಮ ಅಭಿಮಾನದಿಂದ ನಿಮಗೆ ಸ್ವಲ್ಪ ಹರ್ಟ್ ಆಗಬಹುದು. ಅಭಿಮಾನವನ್ನು ಪಕ್ಕಕ್ಕೆ ಇಟ್ಟುಬಿಡಿ. ಎರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ನಿಮ್ಮ ಗೌರವ ಪುನಃ ನಿಮಗೆ ಪ್ರಾಪ್ತಿ ಆಗುತ್ತೆ. ತುಲಾ ರಾಶಿಗೆ ಬಹಳ ಒಳ್ಳೆಯ ದಿನ. ನಿಮ್ಮ ಸಾಮಾಜಿಕ ವ್ಯವಹಾರಗಳಲ್ಲಿ ಯಶಸ್ಸು. ಗುಂಪುಗಳಿಂದ ನೆಮ್ಮದಿ. ಧನಾಗಮ. ಬ್ಯುಸಿನೆಸ್ ಮಾಡುವವರಿಗೆ ಒಳ್ಳೆಯ ದಿನ. ನಿಮ್ಮ ಕಾಂಟ್ರಾಕ್ಟ್ ಇವತ್ತು ಹೆಚ್ಚಾಗುತ್ತೆ. ಅಷ್ಟು ಜನ ನಿಮ್ಮನ್ನು ಮಾತನಾಡಿಸುತ್ತಾರೆ. ವೃಶ್ಚಿಕ ರಾಶಿಗೆ ಒಳ್ಳೆಯ ದಿನ. ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು. ನೀವು ಏನು ಮಾಡಿದ್ರೂ ಎಲ್ಲರೂ ಕೂಡ ಬಂದು ನಿಮ್ಮನ್ನೇ ಸಲಹೆ ಕೇಳುವರು. ಮನಸ್ಸಿಗೆ ನೆಮ್ಮದಿ. ಧನಸ್ಸು ರಾಶಿಗೆ ಇವತ್ತು ಭಾಗ್ಯೋದಯ. ಮನಸ್ಸಿಗೆ ನೆಮ್ಮದಿ ದೊಡ್ಡವರ ಆಶೀರ್ವಾದ. ಇಷ್ಟ ದೇವತೆಯೆಂದು ಆಶೀರ್ವಾದ ಪ್ರಾಪ್ತಿ. ಇವತ್ತು ಒಳ್ಳೆಯ ಕೆಲಸಗಳನ್ನು ಮಾಡಿ. ಹತ್ತರಷ್ಟು ಪುಣ್ಯ ಪಡೆಯಿರಿ. ಮಕರ ರಾಶಿಗೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಕಡಿಮೆ ಆದಂತೆ ಭಾಸ. ಅನೇಕ ವಿಷಯಗಳಲ್ಲಿ ಮನಸ್ಸಿಗೆ ಖೆದ ಎನ್ನುವಂತೆ ಭಾಸ. ಇದು ಯಾವುದೂ ನಿಜ ಅಲ್ಲ. ಬೇರೆಯವರು ನಿಮ್ಮನ್ನು ಹಿಂಸೆ ಮಾಡುತ್ತಿಲ್ಲ. ಎರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ. ಕುಂಭ ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ. ಆದ್ರೆ ಬೇರೆಯವರು ಮುಖ್ಯ ಆಗುತ್ತಾರೆ. ಬೇರೆಯವರ ಜೊತೆಯಲ್ಲಿ ಯಾವ ರೀತಿ ವ್ಯವಹಾರ ಮಾಡುತ್ತಿರಿ ಎನ್ನುವುದರ ಮೇಲೆ ನಿಮ್ಮ ಯಶಸ್ಸು ಅವಲಂಬಿತ ಆಗಿರುತ್ತೆ. ಆದ್ದರಿಂದ ಬೇರೆಯವರ ಜೊತೆ ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿ. ಅವರ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ. ಮೀನಾ ರಾಶಿಗೆ ಮನಸ್ಸಿಗೆ ನೆಮ್ಮದಿ. ಸಾಮಾಜಿಕ ವ್ಯವಾರಗಳಲ್ಲಿ ಕೆಲವು ಮತ್ತು ಯಶಸ್ಸು ಮತ್ತು ಮಿತ್ರರು ಹತ್ತಿರ ಶತ್ರುಗಳು ಹಿಮ್ಮೆಟ್ಟು ವ ದಿನ. ಎಲ್ಲಾ ಕಡೆಗೂ ಜಯ. ಶುಭದಿನ.

Leave a Reply

Your email address will not be published. Required fields are marked *