ಈ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಕಿತ್ತಳೆ ಹಣ್ಣು ಸೇವಿಸಬೇಡಿ…

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಚಳಿಗಾಲದಲ್ಲಿ ರಸಭರಿತವಾದ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ ಈ ಕಿತ್ತಳೆಗೆ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ.ಕಿತ್ತಳೆ ಹಣ್ಣಿನ ಸೇವನೆಯು ಕೆಮ್ಮು, ನೆಗಡಿ ಮತ್ತು ಕೆಮ್ಮಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಹಣ್ಣು ಚರ್ಮದಿಂದ ಹಿಡಿದು ಹೊಟ್ಟೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಉತ್ತಮ ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ, ಮಾರ್ಚ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆಯನ್ನು ಇಂದೇ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ ಲಾಭ ಪಡೆಯಿರಿ. ಕಿತ್ತಳೆ ಹಣ್ಣು ಆರೋಗ್ಯಕ್ಕೆ ಹಿತಕರ ನಿಜ ಗೆಳೆಯರೇ. ಆದರೆ ಇಂತಹ ಅನಾರೋಗ್ಯದ ಸಮಸ್ಯೆಗಳು ಇದ್ದವರು ಕಿತ್ತಳೆ ಹಣ್ಣು ಸೇವನೆ ಮಾಡದೇ ಇರುವುದು ಬಹಳ ಒಳ್ಳೆಯದು. ಹಾಗಾದರೆ ಯಾವೆಲ್ಲ ಸಮಸ್ಯೆಗಳು ಇದ್ದವರು ಕಿತ್ತಳೆ ಹಣ್ಣು ಸೇವನೆ ಮಾಡಬಾರದು ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.

 

ಕಿತ್ತಳೆ ಹಣ್ಣು ಸಿಟ್ರಿಕ್ ಆಸಿಡ್ ಅಂಶವನ್ನು ಹೊಂದಿರುವ ಹಾಗೂ ಪೋಷಕಾಂಶಗಳು ಆರೋಗ್ಯಕರ ಹಣ್ಣು ಆಗಿದೆ. ಕಿತ್ತಳೆ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಕಿತ್ತಳೆ ಹಣ್ಣು ಕೆಲವು ಕಾಯಿಲೆ ಹೊಂದಿರುವವರಿಗೆ ತೊಂದರೆಯಾಗಬಹುದು. ಹಾಗಾದರೆ ಬನ್ನಿ ಯಾವ ಯಾವ ಕಾಯಿಲೆಗಳು ಇದ್ದ ಜನರು ಕಿತ್ತಳೆ ಹಣ್ಣು ಸೇವನೆ ಮಾಡಬಾರದು ಅಂತ ತಿಳಿಯೋಣ.ಮೊದಲನೆಯದು ಹಲ್ಲುಗಳ ಸಮಸ್ಯೆ ಇರುವವರು ಕಿತ್ತಳೆ ಹಣ್ಣು ಸೇವನೆ ಮಾಡಬಾರದು. ಏಕೆಂದ್ರೆ, ಕಿತ್ತಳೆ ಹಣ್ಣಿನಲ್ಲಿ ಆಮ್ಲಗಳು ಇರುತ್ತವೆ, ಈ ಆಮ್ಲಗಳು ಹಲ್ಲುಗಳ ಎನಾಮಲ್‌ನಲ್ಲಿ ಕ್ಯಾಲ್ಸಿಯಂ ಅಂಶವಿರುವಂತೆ ಕಂಡು ಬರುತ್ತವೆ ಮತ್ತು ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಇವುಗಳಿಂದ ಹಲ್ಲುಗಳಲ್ಲಿ ಕುಳಿಯನ್ನು ಸಹ ಹೊಂದಿರಬಹುದು. ಆದ್ದರಿಂದ ನಿಮಗೇನಾದರೂ ಹಲ್ಲು ನೋವಿನ ಸಮಸ್ಯೆ ಇದ್ದವರು ಕಿತ್ತಳೆ ಹಣ್ಣಿನ ಸೇವನೆ ಅನ್ನು ಕಡ್ಡಾಯವಾಗಿ ನಿಲ್ಲಿಸಿ. ಇನ್ನೂ ಯಾರಿಗೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವರು ಕಿತ್ತಳೆ ಹಣ್ಣು ಸೇವನೆ ಮಾಡಲು ಹೋಗಬೇಡಿ. ಕಿತ್ತಳೆ ಹಣ್ಣಿನಲ್ಲಿ ಅಧಿಕವಾದ ನಾರಿನಾಂಶ ಇದೆ.

 

ಕಿತ್ತಳೆ ಹಣ್ಣು ಅತಿಯಾಗಿ ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಉತ್ತಮ ಆಗುವುದಿಲ್ಲ. ಕಿತ್ತಳೆ ಹಣ್ಣು ಅತಿಯಾಗಿ ಸೇವನೆ ಮಾಡಿದ್ರೆ ಅತಿಸಾರ ಅಜೀರ್ಣತೆ ಗ್ಯಾಸ್ಟ್ರಿಕ್ ಅಸಿಡಿಟಿ ಹೊಟ್ಟೆ ಉರಿ ಹೊಟ್ಟೆ ಉಬ್ಬರ ಸಮಸ್ಯೆಗಳು ಕಾಡುತ್ತವೆ. ಅದಕ್ಕಾಗಿ ಜೀರ್ಣ ಕ್ರಿಯೆಗೆ ಸಂಭಂದ ಸಮಸ್ಯೆಗಳು ಇದ್ದವರು ಕಿತ್ತಳೆ ಹಣ್ಣು ಸೇವನೆ ಮಾಡಬಾರದು. ಕಿತ್ತಳೆ ಹಣ್ಣಿನಲ್ಲಿ ಅಸಿಡಿಟಿ ಹೆಚ್ಚಿಸುವ ಗುಣವನ್ನೂ ಹೊಂದಿದೆ. ಹೌದು ಕಿತ್ತಳೆ ಹಣ್ಣಿನಲ್ಲಿ ಹೇರಳವಾದ ನಾರಿನಾಂಶ ಇದೆ. ಅದಕ್ಕಾಗಿ ಅಸಿಡಿಟಿ ಸಮಸ್ಯೆ ಇರುವವರು ಕಿತ್ತಳೆ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಕಿತ್ತಳೆ ಹಣ್ಣಿನಲ್ಲಿ ಇರುವ ಆಮ್ಲಗಳು ಹೆಚ್ಚಿನ ಆಮ್ಲಿಯತೆಯನ್ನು ಹೆಚ್ಚಿಸುತ್ತದೆ. ಅಸೌಖ್ಯ ವನ್ನು ಹೆಚ್ಚಿಸುತ್ತದೆ. ಎದೆ ಉರಿ ಶುರು ಆಗುತ್ತದೆ ಹೊಟ್ಟೆ ಉರಿ ಶುರು ಆಗುತ್ತದೆ. ಕಿತ್ತಳೆ ಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಅಂಶ ಇರುವುದರಿಂದ ಇದರ ಅತಿಯಾದ ಸೇವನೆ ಕಿಡ್ನಿ ಮೇಲೆ ಬಹಳ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳು ಇದ್ದವರು ಕಿತ್ತಳೆ ಹಣ್ಣು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಶುಭದಿನ.

Leave a Reply

Your email address will not be published. Required fields are marked *