ಇಂತಹ ಗುಣ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ನಿಮಗೆ ಥೈರಾಯಿಡ್ ಇದೆ ಎಂದು ಅರ್ಥ. ಅವು ಯಾವುವು ಗೊತ್ತೇ??????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗಗಳು ಮತ್ತು ಗ್ರಂಥಿಗಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಥೈರಾಯಿಡ್ ಗ್ರಂಥಿಯು ಬಹಳ ಪ್ರಮುಖವಾದದ್ದು. ಥೈರಾಯಿಡ್ ಸಮಸ್ಯೆ ಒಮ್ಮೆ ದೇಹದಲ್ಲಿ ಸೇರಿಕೊಂಡರೆ ಇನ್ನಿತರ ದೇಹದ ಅಂಗಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಥೈರಾಯಿಡ್ ಸಮಸ್ಯೆ ಅನ್ನುವುದು ಹೆಚ್ಚಾಗಿ ಬಹಿರಂಗವಾಗಿ ಗೊತ್ತಾಗುವುದಿಲ್ಲ. ಒಳಗಡೆ ಅನೇಕ ಬಗೆಯ ಬದಲಾವಣೆ ಆಗುತ್ತಿರುತ್ತದೆ. ಆದರೆ ಯಾವಾಗ ನೀವು ರಕ್ತ ತಪಾಸಣೆ ಮಾಡುತ್ತೀರಿ ಆಗ ನಿಮಗೆ ಈ ಥೈರಾಯಿಡ್ ಸಮಸ್ಯೆ ಇದೆ ಎಂದು ತಿಳಿಯುತ್ತದೆ. ಆಗ ವೈದ್ಯರು ಇದಕ್ಕೆ ಸೂಕ್ತವಾದ ಪರಿಹಾರವನ್ನು ನೀಡುತ್ತಾರೆ. ಕೆಲವು ಜನರಿಗೆ ಈ ಥೈರಾಯ್ಡ್ ಸಮಸ್ಯೆ ಹೇಗೆ ಬರುತ್ತದೆ. ಇದರ ಗುಣಲಕ್ಷಣಗಳು ಯಾವುವು ಅಂತ ಗೊತ್ತೇ ಇರುವುದಿಲ್ಲ. ಥೈರಾಯಿಡ್ ಗ್ರಂಥಿ ಏನು ಅಂತ ಹೇಳುವುದಾದರೆ ಕುತ್ತಿಗೆಯ ಭಾಗದಲ್ಲಿ ಗಂಟಲಿನ ಮುಂದೆ ಶ್ವಾಸನಾಳದ ಮುಂದೆ ಇದೆ. ಇದು ಥೈರಾಕ್ಸಿನ್ ಎಂಬ ಗ್ರಂಥಿಯನ್ನು ಸ್ರವಿಸುತ್ತದೆ. ಇದು ಅಯೋಡಿನ್ ಇಂದ ಕೂಡಿದ್ದು ಅಮೈನೋ ಆಮ್ಲವಾಗಿದೆ.

 

ಆಹಾರದ ಉಷ್ಣತೆಯ ಪ್ರಮಾಣವನ್ನು ನಿಯಂತ್ರನ ಮಾಡುತ್ತದೆ. ಹಾಗೂ ಚಯಾಪಚಯ ಕ್ರಿಯೆಯನ್ನು ವೇಗ ಗೊಳಿಸುತ್ತದೆ. ಅವುಗಳ ಬೆಳವಣಿಗೆಗೆ ಈ ಹಾರ್ಮೋನ್ ತುಂಬಾನೇ ಅವಶ್ಯಕವಾಗಿದೆ. ವ್ಯಕ್ತಿಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಆದ ಕಾರಣವೇ ಇದನ್ನು ವ್ಯಕ್ತಿತ್ವದ ಹಾರ್ಮೋನ್ ಎಂದು ಕರೆಯುತ್ತಾರೆ. ಎರಡು ವಿಧವಾಗಿ ವಿಂಗಡನೆ ಮಾಡಲಾಗುತ್ತದೆ. ಟಿ 2, ಟಿ 4 ಕಡಿಮೆ ಆಗುವುದರಿಂದ ಹೈಪೋ ಥೈರಾಯಿಡ್ ಸಮಸ್ಯೆ ಬರುತ್ತದೆ. ಟಿ 3 ಹೈಪರ್ ಥೈರಾಯ್ಡ್ ಗೆ ಕಾರಣವಾಗುತ್ತದೆ. ಈ ರೋಗದ ಮುಖ್ಯ ಲಕ್ಷಣ ಅಂದರೆ ಒಣ ಚರ್ಮವನ್ನು ಕಾಣಬಹುದು. ನಮ್ಮ ದೇಹದ ಮೇಲೆ ಕೆಂಪು ಬಣ್ಣದ ಕಲೆಗಳು ಆಗುತ್ತವೆ. ಅದು ಒಣ ಚರ್ಮಕ್ಕೆ ಕಾರಣವಾಗುತ್ತದೆ. ಹಾಗೂ ತುಂಬಾನೇ ಬೆವರು ಬರುತ್ತದೆ ಸ್ವಲ್ಪ ಬಿಸಿಲು ಕೂಡ ತಡೆಯಲು ಆಗುವುದಿಲ್ಲ. ನೀರು ಬೇಧಿ ಆಗಾಗ ಆಗುತ್ತದೆ. ಹೆಚ್ಚು ಹೆಚ್ಚು ಹಸಿವು ಆಗುವುದು ಹಸಿವು ಆದಾಗ ಊಟವನ್ನು ಮಾಡಿದರು ಕೂಡ ಅವರ ತೂಕ ಹೆಚ್ಚಳ ಆಗುವುದಿಲ್ಲ. ನಾಡಿ ವೇಗದಲ್ಲಿ ಏರುಪೇರು ಆಗುತ್ತದೆ. ಕೈಕಾಲುಗಳು ಹೆಚ್ಚು ಹೆಚ್ಚು ನಡಗುತ್ತವೆ.

 

ತೂಕ ಹೆಚ್ಚುತ್ತದೆ ಇನ್ನೂ ಕೆಲವು ಜನರಿಗೆ ತೂಕ ಕಡಿಮೆ ಆಗುತ್ತದೆ. ಹಾಗೂ ಕೋಪವು ಜಾಸ್ತಿ ಬರುತ್ತದೆ. ಇನ್ನೂ ಕೆಲವು ಜನರಿಗೆ ಸುಸ್ತು ಆಗುತ್ತದೆ. ಏನು ಕೆಲಸವನ್ನು ಮಾಡದೇ ಇದ್ದರೂ ಕೂಡ ಸುಸ್ತು ಆಗುತ್ತದೆ. ಇದು ಪ್ರತಿ ವ್ಯಕ್ತಿಯಲ್ಲಿ ವಿಭಿನ್ನವಾಗಿ ಇರುತ್ತದೆ. ಏನು ಕೆಲಸವನ್ನು ಮಾಡದೇ ಕೇವಲ ನಿದ್ದೆ ಮಾಡಬೇಕು ಅನ್ನಿಸುತ್ತದೆ. ಈ ರೀತಿ ರಕ್ತದಲ್ಲಿ ಹಾರ್ಮೋನ್ ಗಳ ಪ್ರಮಾಣ ಕಡಿಮೆ ಆದರೆ ಜಡತ್ವ ಆಗುತ್ತದೆ. ಅದಕ್ಕಾಗಿ ನೀವು ನಿಮ್ಮನ್ನು ಆದಷ್ಟು ಬಿಝಿ ಇರುವಂತೆ ಅಂದರೆ ಯಾವುದಾದರೂ ಕೆಲಸದಲ್ಲಿ ನಿಮ್ಮನ್ನ ನೀವು ಮಗ್ನ ಮಾಡಿಕೊಳ್ಳಿ. ಕೆಲಸವನ್ನು ಮಾಡುತ್ತಾ ಇರಿ. ಇನ್ನೂ ನಿಮಗೆ ಥೈರಾಯಿಡ್ ಸಮಸ್ಯೆ ಇದೆ ಎಂದು ತುಂಬಾನೇ ವಿಳಂಬವಾಗಿ ತಿಳಿದರೆ ನಿಮ್ಮಲ್ಲಿ ತಲೆಕೂದಲು ಉದುರುವುದು ಗುಪ್ತಚರ ಸಮಸ್ಯೆಗಳು ಸ್ಥೂಲಕಾಯ ಹೃದ್ರೋಗದ ಸಮಸ್ಯೆಗಳು ಬಂಜೆತನ ಇಂತಹ ಸಮಸ್ಯೆಗಳು ಕಾಡುತ್ತವೆ. ಅದಕ್ಕಾಗಿ ನೀವು ತೀರ ಗಾಭರಿ ಆಗುವ ಅಗತ್ಯವಿಲ್ಲ ಗೆಳೆಯರೇ. ಅದಕ್ಕಾಗಿ ನೀವು ಉತ್ತಮವಾದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಅನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *