ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಸಕ್ಕರೆ ಕಾಯಿಲೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿದೆ. ಆದಾಗ್ಯೂ ಇದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ.
ಇದೊಂದು ದೊಡ್ಡ ರೋಗ ಪಿಡುಗು ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಮಧುಮೇಹ ಎಂಬ ಕಾಯಿಲೆಗೆ ಯಾವುದೇ ಚಿಕಿತ್ಸೆ ಪರಿಹಾರ ಅನ್ನುವುದು ಇಲ್ಲ ಗೆಳೆಯರೇ. ಆದರೆ ಇದನ್ನು ನಾವು ಕೆಲವೊಂದು ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುವ ಬದಲಾವಣೆ ಇಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಹಾಗೆಯೇ ಉಪಶಮನ ಕೂಡ ಮಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆ ರೋಗಿಗಳು ಯಾವಾಗ್ಲೂ ಕಡಿಮೆ ಕೊಬ್ಬು ಕಡಿಮೆ ಎಣ್ಣೆ ಇಂದ ಮಾಡಿರುವ ಆಹಾರಗಳನ್ನು ಸೇವನೆ ಮಾಡಬೇಕು ಜೊತೆಗೆ ಮತ್ತು ಬಿಳಿ ಸಕ್ಕರೆ ಇಂದ ಮಾಡಿರುವ ಸಿಹಿ ತಿನಿಸುಗಳನ್ನು ತಿನ್ನಬಾರದು. ಮಧುಮೇಹಿ ಗಳು ತಮ್ಮ ಆಹಾರದ ಮೇಲೆ ತೀವ್ರವಾದ ಕಾಳಜಿ ಮತ್ತು ಗಮನ ಹರಿಸುವುದು ಬಹಳ ಅತ್ಯಗತ್ಯವಾಗಿದೆ. ಸಕ್ಕರೆ ಕಾಯಿಲೆ ರೋಗಿಗಳಿಗೆ ಬಹಳ ಹಸಿವು ಆಗುತ್ತದೆ ಅವರಿಗೆ ಸಮಯ ಸಮಯಕ್ಕೆ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ.
ಆಗ ಅವರು ಚಿಕ್ಕ ಚಿಕ್ಕ ತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹಿಗಳು ಯಾವಾಗ್ಲೂ ಕಡಿಮೆ ಕ್ಯಾಲೋರಿ ಇರುವ ಆಹಾರಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಹಾಗಾದರೆ ಬನ್ನಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಅಥವಾ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುವ ಟೇಸ್ಟಿ ಡಯಾಬಿಟೀಸ್ ತಿಂಡಿಗಳನ್ನು ತಿಳಿಯೋಣ ಬನ್ನಿ. ಮೊಟ್ಟ ಮೊದಲನೆಯದು ಮೊಸರು. ಮೊಸರಿನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಮೊಸರಿನಲ್ಲಿ ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಸತು ಕ್ಯಾಲ್ಷಿಯಂ ಬೀ, ಫಾಸ್ಫರಸ್, ರಂಜಕ ಮತ್ತು ಪೋಶಕಾಂಶಗಳನ್ನು ಹೊಂದಿರುತ್ತದೆ. ಒಂದು ಕಪ್ ಮೊಸರಿನಲ್ಲಿ ಸ್ಟ್ರಾಬೆರಿ, ಬ್ಲ್ಯಾಕ್ಬೆರ್ರಿ, ಬೆರಿಹಣ್ಣುಗಳು, ಒಣದ್ರಾಕ್ಷಿ ಅಥವಾ ಕೆಲವು ಕಾಯಿಗಳೊಂದಿಗೆ ಸೇವಿಸಿ. ಇದರಿಂದ ಮಧುಮೇಹ ಆದಷ್ಟು ನಿಯಂತ್ರಣಕ್ಕೆ ಬರುತ್ತದೆ. ಮೊಸರು ಆರೋಗ್ಯಕ್ಕು ಕೂಡ ಒಳ್ಳೆಯದು. ಎರಡನೆಯದು ಆ್ಯಪಲ್. ಈ ಹಣ್ಣಿನಲ್ಲಿ, ವಿಟಮಿನ್ಸ್ ಗಳು ಪ್ರೊಟೀನ್ ಖನಿಜಗಳು ಫೈಟೊನ್ಯೂಟ್ರಿಯೆಂಟ್ಸ್, ಕಬ್ಬಿಣ, ಪೊಟ್ಯಾಷಿಯಮ್, ಫಾಸ್ಫರಸ್ ಮತ್ತು ಕ್ಯಾಲ್ಸಿಯಂನ ಲಾಭವನ್ನು ನೀವು ಪಡೆಯುತ್ತೀರಿ. ಒಂದು ಆ್ಯಪಲ್ ದೀರ್ಘಕಾಲದ ವರೆಗೆ ನಮ್ಮನ್ನು ವೈದ್ಯರಿಂದ ದೂರವಿರಿಸುತ್ತದೆ ಎಂಬ ಮಾತಿದೆ ಗೆಳೆಯರೇ.
ಇದರಲ್ಲಿ ಕಡಿಮೆ ಕ್ಯಾಲೋರಿ ಕರಗ ಬಲ್ಲ ಫೈಬರ್ ಇರುವುದರಿಂದ ಒಂದು ಆ್ಯಪಲ್ ತಿನ್ನುವುದರಿಂದ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಹಾಗೂ ಹಸುವನ್ನು ನೀಗಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಅಷ್ಟೊಂದು ಲಾಭದಾಯಕ ಹಣ್ಣು ಇದಾಗಿದೆ. ಮೂರನೆಯದು ಪಾಪ್ ಕಾರ್ನ್. ಇದರಲ್ಲಿ ತುಂಬಾನೇ ಕಡಿಮೆ ಕ್ಯಾಲೋರಿ ಇರುತ್ತದೆ.ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಏಕೆಂದ್ರೆ ಇದು ಗ್ಲೂಕೋಸ್ ಅನ್ನು ರಕ್ತಕ್ಕೆ ನಿಧಾನವಾಗಿ ಸಂಚಾರ ಮಾಡಲು ಸಹಾಯ ಮಾಡುತ್ತವೆ. ಈ ಪಾಪ್ ಕಾರ್ನ್ ನಲ್ಲಿ ಸಮೃದ್ಧವಾದ ನಾರಿನಾಂಶ ಜೀವಸತ್ವಗಳು, ಫೈಬರ್ ಹೇರಳವಾಗಿದೆ. ಇನ್ನೂ ಕಾಟೇಜ್ ಚೀಸ್. ಇದರಲ್ಲಿ ಒಳ್ಳೆಯ ಕಾರ್ಭೋಹೇಡ್ರೆಟ್, ಪ್ರೊಟೀನ್, ವಿಟಮಿನ್ ಎ, ಕಬ್ಬಿಣ, ಮೆಗ್ನೀಷಿಯಮ್, ರಂಜಕ, ಪೊಟ್ಯಾಷಿಯಮ್, ಸೆಲೆನಿಯಮ್ ಮತ್ತು ಸತು ಇರುತ್ತದೆ. ಮಧುಮೇಹಿಗಳು ಇದನ್ನು ಸುಲಭವಾಗಿ ತಿನ್ನಬಹುದು. ಒಂದು ಕಪ್ ಕಾಟೇಜ್ ಚೀಸ್ ಅನ್ನು ತೆಗೆದು ಕೊಂಡು ಸ್ವಲ್ಪ ಉಪ್ಪು ಅದರ ಮೇಲೆ ಸಿಂಪಡಣೆ ಮಾಡಿ ಮಧುಮೇಹಿಗಳು ಸೇವನೆ ಮಾಡಬಹುದು.