ರೆಫ್ರಿಜರೇಟರ್ ನಲ್ಲಿ ಇಂತಹ ವಸ್ತುಗಳನ್ನು ಇಡಬೇಡಿ. ಹಾಗೆಯೇ ಈ ಕಾಯಿಲೆ ಇದ್ದವರು ಸೇವನೆ ಕೂಡ ಮಾಡಬೇಡಿ.

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ರೆಫ್ರಿಜರೇಟರ್ ಅನ್ನುವುದು ತರಕಾರಿಯನ್ನು ತುಂಬುವ ಒಂದು ದೊಡ್ಡ ಮಾರುಕಟ್ಟೆ ಅಂತ ಹೇಳಬಹುದು. ಇದೊಂದು ಈಗಿನ ಕಾಲದ ಒಂದು ದೊಡ್ಡ ಕೊಡುಗೆ ಅಂತ ಹೇಳಬಹುದು. ಯಾವುದೇ ತರಕಾರಿ ಹಣ್ಣುಗಳು ಎಲ್ಲ ಬಗೆಯ ವಸ್ತುಗಳನ್ನು ನಾವು ಹಾಳು ಆಗಬಾರದು ಎಂದು ರೆಫ್ರಿಜರೇಟರ್ ನಲ್ಲಿ ತುಂಬಿ ಇಡುತ್ತೇವೆ. ಈಗಿನ ಕಾಲದ ಐಷಾರಾಮಿ ವಸ್ತು ಅಂತ ಹೇಳಿದ್ರೆ ಸಾಲದು. ಇದರ ಬಳಕೆಯನ್ನು ಈಗ ಪ್ರತಿಯೊಬ್ಬರೂ ಮಾಡುತ್ತಿದ್ದಾರೆ. ಆದರೇ ಇದರ ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅವರಿಗೆ ಸೂಕ್ತವಾಗಿ ತಿಳಿದಿಲ್ಲ. ಅವರು ಎಲ್ಲ ವಸ್ತುಗಳನ್ನು ಫ್ರಿಜ್ ನಲ್ಲಿ ಇಟ್ಟು ಬಿಡುತ್ತಿದ್ದಾರೆ. ಇದು ನಮ್ಮ ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ. ಫ್ರಿಜ್ ನಲ್ಲಿ ಇಟ್ಟ ಎಲ್ಲ ಆಹಾರಗಳ ಸೇವನೆ ಮಾಡುವುದು ಒಳ್ಳೆಯದಲ್ಲ ಗೆಳೆಯರೇ. ಕೆಡುವ ಆಹಾರವನ್ನು ನಾವು ರೆಫ್ರಿಜರೇಟರ್ ನಲ್ಲಿ ಇಟ್ಟು ಸೇವನೆ ಮಾಡುವ ವಿದೇಶಿ ಪದ್ಧತಿಯನ್ನು ಅಳವಡಿಸಿ ಕೊಂಡಿದ್ದೇವೆ. ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೊಟೀನ್ ವಿಟಮಿನ್ ಖನಿಜಗಳು ದೊರೆಯುತ್ತಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಫ್ರಿಜ್ ನಲ್ಲಿ ಇಟ್ಟ ಆಹಾರವನ್ನು ಯಾಕೆ ಸೇವನೆ ಮಾಡಬಾರದು. ಹಾಗೂ ಯಾವೆಲ್ಲ ಆಹಾರವನ್ನು ಫ್ರಿಜ್ ನಲ್ಲಿ ಶೇಖರಣೆ ಮಾಡಿಟ್ಟು ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಈ ನಮ್ಮ ಚಿಕ್ಕ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಮೊದಲನೆಯದು ಕಲ್ಲಂಗಡಿ ಹಣ್ಣು. ಹೌದು ಇದು ಬೇಸಿಗೆ ಕಾಲದಲ್ಲಿ ಸಿಗುವ ಸೂಪರ್ ಫುಡ್ ಆಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬಿಸಿ ತಾಪಮಾನ ಹೆಚ್ಚಾಗಿರುವ ಕಾರಣ ಈ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟು ಸೇವನೆ ಮಾಡುವುದು ತುಂಬಾ ಜನರ ಹವ್ಯಾಸವಾಗಿದೆ. ಆದರೆ ಇದು ತಪ್ಪು. ಈ ಕಲ್ಲಂಗಡಿ ಹಣ್ಣನ್ನು ನೀವು ಕೋಣೆಯ ತಾಪಮಾನದಲ್ಲಿ ಇಟ್ಟು ಸೇವನೆ ಮಾಡಬೇಕು. ಇದರಿಂದ ಆರೋಗ್ಯಕ್ಕೆ ಉತ್ತಮ. ಹಾಗೂ ಕೋಣೆಯ ತಾಪಮಾನದಲ್ಲಿ ಇಡುವುದರಿಂದ ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ದೇಹಕ್ಕೆ ಸಿಗುತ್ತದೆ. ಇನ್ನೂ ಎರಡನೆಯದು ಬ್ರೆಡ್. ಹೌದು ಬ್ರೆಡ್ ಅನ್ನು ಕೂಡ ಕೆಲವು ಜನರು ಹಾಳಾಗಬಾರದು ಅಂತ ರೆಫ್ರಿಜರೆಟರ ನಲ್ಲಿ ಇಡುತ್ತಾರೆ. ಆದರೆ ಇದು ಫ್ರಿಜ್ ನಲ್ಲಿ ಇಡುವುದರಿಂದ ಬೇಗನೆ ಹಾಳಾಗುತ್ತದೆ. ಆದ್ದರಿಂದ ಒಣ ಜಾಗದಲ್ಲಿ ಬ್ರೆಡ್ ಅನ್ನು ಇಡಬೇಕು. ಇಲ್ಲವಾದರೆ ಬೇಗನೆ ಒಣಗಿ ಹೋಗುತ್ತದೆ ರುಚಿಯೂ ಕೂಡ ಹಾಳಾಗುತ್ತದೆ. ಇನ್ನೂ ಈರುಳ್ಳಿ. ಕೆಲವು ಜನರಿಗೆ ಈರುಳ್ಳಿಯನ್ನು ಫ್ರಿಜ್ ನಲ್ಲಿ ಇದು ಹವ್ಯಾಸ ಉಂಟು. ಇದು ಬಹಳ ತಪ್ಪು ಕೆಲಸ. ಈರುಳ್ಳಿಯನ್ನು ಯಾವಾಗಲೂ ಕತ್ತಲು ಅಥವಾ ಒಣ ಜಾಗದಲ್ಲಿ ಇಡುವುದು ಒಳ್ಳೆಯದು. ಇನ್ನೂ ತಾಜಾ ಹಸಿರು ಹಾಗೂ ಸೊಪ್ಪು ತರಕಾರಿಗಳು. ಇವುಗಳನ್ನು ನೀವು ಫ್ರಿಜ್ ನಲ್ಲಿ ಇಡುವುದು ತಪ್ಪು.

 

ಏಕೆಂದ್ರೆ ಹಸಿರು ಸೊಪ್ಪು ತರಕಾರಿಗಳು ಬೇಗನೆ ಒಣಗಿ ಹೋಗುತ್ತದೆ. ಇನ್ನೂ ಜೇನುತುಪ್ಪ. ಇದನ್ನು ಫ್ರಿಜ್ ನಲ್ಲಿ ಇಡುವುದರಿಂದ ಇದರ ರುಚಿ ಸ್ವಾದ ಹಾಳಾಗುತ್ತದೆ. ಹಾಗೂ ಬೇಗನೆ ಕೆಟ್ಟು ಹೋಗುತ್ತದೆ. ಇದರ ರುಚಿ ಪಡೆಯಲು ನೀವು ಫ್ರಿಜ್ ನಲ್ಲಿ ಇದನ್ನು ಇಡಲು ಮುಂದಾಗಬೇಡಿ.ಇನ್ನೂ ಆಲೂಗಡ್ಡೆ. ಇದನ್ನು ನೀವು ಫ್ರಿಜ್ ನಲ್ಲಿ ಇಡುವ ಬದಲು ಕಡಿಮೆ ತಾಪಮಾನ ಫ್ರಿಜ್ ಬಿಟ್ಟು ಹೊರಗೆ ಇಡಬೇಕು ಇದರಿಂದ ಅದರಲ್ಲಿ ಇರುವ ಉತ್ತಮವಾದ ಪೋಷಕಾಂಶಗಳು ದೊರೆಯುತ್ತವೆ. ಫ್ರಿಜ್ ನಲ್ಲಿ ಇಟ್ಟರೆ, ಇದರಲ್ಲಿರುವ ಪಿಸ್ಟ ಸಕ್ಕರೆ ಆಗಿ ಪರಿವರ್ತನೆ ಆಗುತ್ತದೆ. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಅದಕ್ಕಾಗಿ ವೈದ್ಯರು ಆಲೂಗಡ್ಡೆ ಸೇವನೆ ಮಾಡಬೇಡಿ ಅಂತ ಹೇಳುತ್ತಾರೆ ಇನ್ನೂ ಡ್ರೈ ಫ್ರೂಟ್ಸ್ ಕೂಡ ಫ್ರಿಜ್ ನಲ್ಲಿ ಇಡಬೇಡಿ. ಅವುಗಳನ್ನು ಗಾಳಿ ಆಡದಂತೆ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಇಡಿ. ಇನ್ನೂ ಕೊನೆಯದಾಗಿ ಚಾಕೊಲೇಟ್ ಮತ್ತು ಟೊಮ್ಯಾಟೋ ಕೆಚಪ್. ಇವೆರಡನ್ನೂ ಕೂಡ ಫ್ರಿಜ್ ನಲ್ಲಿ ಇಡಬೇಡಿ. ಅವುಗಳ ಲಾಭವನ್ನು ಪಡೆಯಲು ನೀವು ಹೊರಗೆ ಒಂದು ಡಬ್ಬದಲ್ಲಿ ಹಾಕಿ ಇಡಿ. ಶುಭದಿನ.

Leave a Reply

Your email address will not be published. Required fields are marked *