ಎಂಟು ಗಂಟೆಗಳ ಕಾಲ ಸೂರ್ಯನ ಬಿಸಿಲಿಗೆ ನೀರನ್ನು ಇಟ್ಟು ಆ ನೀರನ್ನು ಕುಡಿಯಿರಿ. ಏನಾಗುತ್ತದೆ ಗೊತ್ತೇ…..

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಸೂರ್ಯನು ಇಡೀ ಜಗತ್ತಿಗೆ ಬೆಳಕು ನೀಡುತ್ತಾನೆ. ಜೊತೆಗೆ ಸೂರ್ಯ ಕಿರಣಗಳಲ್ಲಿ ಶಕ್ತಿಶಾಲಿ ವಿಟಮಿನ್ ಡಿ ಅಡಗಿದೆ. ಇದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಇದು ವಿಟಮಿನ್ ಡಿ ಎಂಬುದು ಆಹಾರಗಳಿಂದ ಕಡಿಮೆ ಸಿಕ್ಕಿದರೂ ಕೂಡ ನೀವು ಸ್ವಲ್ಪ ನಿಮ್ಮ ದೇಹವನ್ನು ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ನಿಂತರೆ ನಿಮಗೆ ಬೇಕಾದಷ್ಟು ವಿಟಮಿನ್ ಡಿ ಸಿಗುತ್ತದೆ. ನಮ್ಮ ಆಯುರ್ವೇದ ಪದ್ಧತಿಯಲ್ಲಿ ಸೂರ್ಯನ ಬೆಳಕಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸೂರ್ಯನ ಕಿರಣಗಳಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಅದಕ್ಕಾಗಿ ನಮ್ಮ ಹಿರಿಯರು, ಗರ್ಭಿಣಿಯರಿಗೆ ಸೂರ್ಯನ ಬೆಳಕಿಗೆ ನಿಂತುಕೊಳ್ಳಿ ಎಂದು ಸಲಹೆ ನೀಡುತ್ತಿದ್ದರು. ಏಕೆಂದ್ರೆ ಸೂರ್ಯನ ಕಿರಣಗಳು, ಗರ್ಭಿಣಿಯರಿಗೆ ತಾಕಿದರೆ ಹುಟ್ಟುವ ಮಗುವಿಗೆ ಕಾಮಾಲೆ ಎಂಬ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ ಇತ್ತು. ಹಾಗೂ ಇದು ಸತ್ಯ ಕೂಡ ಆಗಿದೆ. ಹೀಗಾಗಿ ಸೂರ್ಯನಿಗೆ ಅನೇಕ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಸೂರ್ಯನ ಬೆಳಕಿನಿಂದ ನಾವು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಂಡು ಲಾಭಗಳನ್ನು ಪಡೆಯಬಹುದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಸೂರ್ಯ ಜಲ ಚಿಕಿತ್ಸೆ ವಿಧಾನದ ಬಗ್ಗೆ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ.

 

ಸೂರ್ಯ ಜಲ ಚಿಕಿತ್ಸೆ ಇದೊಂದು ಪ್ರಾಚೀನ ಚಿಕಿತ್ಸೆ ವಿಧಾನವಾಗಿದೆ. ಇದರಲ್ಲಿ ಸೂರ್ಯನ ಬೆಳಕನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಕೆ ಮಾಡಲಾಗುತ್ತದೆ. ಸೂರ್ಯನ ಬೆಳಕಿಗೆ ನೀರನ್ನು ಇಟ್ಟು ಆ ನೀರನ್ನು ಕುಡಿಯುವುದರಿಂದ, ನಮ್ಮ ಆಯಸ್ಸು ಕೂಡ ವೃದ್ಧಿ ಆಗುತ್ತದೆ. ಸೂರ್ಯನ ಬೆಳಕು ನೀರಿನ ಮೇಲೆ ಬಿದ್ದಾಗ ಅದು ಅನ್ವಿಕ್ ಅಣುಗಳನ್ನು ಹೆಚ್ಚಿಸುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಸೂರ್ಯನ ಬೆಳಕು ನೀರಿನ ಮೇಲೆ ಬಿದ್ದರೆ ನೀರಿನ ಶಕ್ತಿ ಮತ್ತಷ್ಟು ದುಪ್ಪಟ್ಟು ಆಗುತ್ತದೆ. ಅಷ್ಟೇ ಅಲ್ಲದೇ ಆಂಟಿ ಬ್ಯಾಕ್ಟೀರಿಯಾ ಆಂಟಿ ಫಂಗಲ್ ಆಂಟಿ ಬಯೋಟಿಕ್ ಆಂಟಿ ಆಕ್ಸಿಡೆಂಟ್ ಗಳು ಒಳಗೊಂಡಿರುತ್ತವೆ. ಇದನ್ನು ಕುಡಿಯುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ನಿಮಗೆಲ್ಲರಿೂ ಗೊತ್ತಿರುವ ಹಾಗೆ ಸೂರ್ಯನ ಬೆಳಕಿನಲ್ಲಿ ಹೇರಳವಾದ ವಿಟಮಿನ್ ಡಿ ಅಡಗಿದೆ. ವಿಟಮಿನ್ ಡಿ ಅಂಶವು ದೇಹವನ್ನು ಸೇರಿಕೊಂಡರೆ ನಮಗೆ ಮೂಳೆಗಳು ಸ್ನಾಯುಗಳು ಬಲಗೊಳ್ಳುತ್ತವೆ ಹಾಗೆಯೇ ನಮಗೆ ಇನ್ನಿತರ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಇನ್ನೂ ಈ ನೀರನ್ನು ಕುಡಿಯುವುದರಿಂದ ಎದೆ ಉರಿ ಕರುಳಿನ ಕ್ಯಾನ್ಸರ್ ಜೀರ್ಣ ಕ್ರಿಯೆಗೆ ಸಂಭಂದ ಪಟ್ಟ ಕಾರ್ಯಗಳನ್ನು ಸುಗಮಗೊಳಿಸುತ್ತದೆ.

 

ಕರುಳಿನ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ ಇನ್ನೂ ಅನೇಕ ಬಗೆಯ ಸಮಸ್ಯೆಗಳನ್ನು ಹೊಡೆದೋಡಿಸುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿರಬಹುದು, ಹಳ್ಳಿಗಳಲ್ಲಿ ಕೆರೆ ಹಳ್ಳಗಳ ನೀರನ್ನು ಶೋಧಿಸಿ ಕುಡಿಯುತ್ತಾರೆ. ಕೆರೆಗಳಲ್ಲಿ ಇರುವ ನೀರಿನ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ. ಹೀಗಾಗಿ ಈ ನೀರು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಹೌದು, ಹೀಗಾಗಿ ಹಳ್ಳಿಯಲ್ಲಿ ವಾಸಿಸುವ ಜನರು ದೀರ್ಘಕಾಲದ ವರೆಗೆ ಬದುಕುತ್ತಾರೆ. ಅವರಿಗೆ ಯಾವುದೇ ಬಗೆಯ ರೋಗ ರುಜಿನಗಳು ಬರುವುದಿಲ್ಲ. ಇನ್ನೂ ಈ ನೀರನ್ನು ಹೇಗೆ ತಯಾರಿಸಬೇಕು ಅಂತ ಹೇಳುವುದಾದರೆ, ಒಂದು ಗಾಜಿನ ಬಾಟಲಿನಲ್ಲಿ 7-8 ಗಂಟೆಗಳ ಕಾಲ ಬಿಸಿಲಿನಲ್ಲಿ ಸೂರ್ಯನ ಬೆಳಕು ತಾಕುವಂತೆ ಇಡೀ. ಈ ನೀರನ್ನು ನೀವು ಪೂರ್ತಿ ದಿನ ಕುಡಿಯಬಹುದು. ಸೂರ್ಯನ ಬೆಳಕಿನಿಂದ ಈ ನೀರು ಚಾರ್ಜ್ ಆಗಿರುತ್ತದೆ. ಇದನ್ನು ಕುಡಿಯುವುದರಿಂದ ನಿಮಗೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಆದರೆ ಔಷಧ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದರೆ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಶುಭದಿನ.

Leave a Reply

Your email address will not be published. Required fields are marked *