ನಮಸ್ತೆ ಪ್ರಿಯ ಓದುಗರೇ, ದುಷ್ಟನಾದ ಹಿರಣ್ಯ ಕಶ್ಯಪ ನನ್ನು ಸಂಹರಿಸಲು ಅವತಾರ ಎತ್ತಿದ ನರಸಿಂಹ ಸ್ವಾಮಿಯು ಅನೇಕ ಕ್ಷೇತ್ರಗಳಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಯಾಗಿ, ಯೋಗ ನರಸಿಂಹ ನಾ ಗೀ ಭಕ್ತರನ್ನು ಪೊರೆಯುವ ಶಾಂತ ಮೂರ್ತಿಯಾಗಿ ನೆಲೆ ನಿಂತಿದ್ದಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಸಾಕ್ಷಾತ್ ನರಸಿಂಹ ಸ್ವಾಮಿಯೇ ಇಷ್ಟ ಪಟ್ಟು ಬಂದು ನೆಲೆಸಿದ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಹಚ್ಚ ಹಸುರಿನ ವನ ಸಿರಿಯ ನಡುವೆ ಕಣ್ಮನವನ್ನು ತಣಿಸುವ ಬೆಟ್ಟಗಳ ಮೇಲೆ ಲಕ್ಷ್ಮಿ ನರಸಿಂಹ ಸ್ವಾಮಿಯು ಸಾಲಿಗ್ರಾಮ ಶಿಲೆಯ ರೂಪದಲ್ಲಿ ಉದ್ಭವ ಮೂರ್ತಿಯಾಗಿ ನೆಲೆನಿಂತಿ ದ್ದು. ಈ ದೇವಾಲಯವು ಗೋಪುರ, ಗರುಡ ಗಂಬ, ಪ್ರದಕ್ಷಿಣಾ ಪಥ, ಗರ್ಭ ಗೃಹ ಗಾಳನ್ನ ಒಳಗೊಂಡಿದೆ. ಸ್ವಲ್ಪ ವರ್ಷಗಳ ಮುಂಚೆ ದೇಗುಲವನ್ನು ಜೀರ್ಣೋದ್ಧಾರ ಮಾಡಿದ್ದು ದೇವಾಲಯ ದ ಹೊರಭಾಗದಲ್ಲಿ ರುವಾ ಕಲ್ಲು ಬಂಡೆಗಳ ಮೇಲೆ ಕೆಂಪು ಬಿಳಿ ಬಣ್ಣದ ಪಟ್ಟಿಗಳನ್ನು ಎಳೆಯಲಾಗಿದೆ. ಇಲ್ಲಿನ ಪ್ರಶಾಂತವಾದ ವಾತಾವರಣವು ಮನಸ್ಸಿನ ಸೂರೆಗೊಳಿಸುತ್ತೆ.
ಪ್ರಕೃತಿ ಯ ಸುಂದರವಾದ ಪ್ರದೇಶದಲ್ಲಿ ನೆಲೆಸಿರುವ ಈ ದೇವನನ್ನು ಕಣ್ ತುಂಬಿಕೊಳ್ಳಬೇಕು ಅಂದ್ರೆ ಬರೋಬ್ಬರಿ 200-300 ಮೆಟ್ಟಿಲುಗಳನ್ನು ಹತ್ತಿ ದೇಗುಲಕ್ಕೆ ಹೋಗಬೇಕು. ಲಕ್ಷ್ಮೀ ದೇವಿಯ ಸಮೇತನಾಗಿ ನೆಲೆಸಿರುವ ಈ ದೇವನ ಸನ್ನಿಧಾನಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಮನೋ ಕಾಮನೆಗಳು ಎಲ್ಲಾ ಪೂರ್ತಿ ಆಗುತ್ತೆ ಎಂದು ಹೇಳಲಾಗುತ್ತದೆ. ವಿಧ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ವೈವಾಹಿಕ ಸಮಸ್ಯೆ, ಅನಾರೋಗ್ಯ, ಆರ್ಥಿಕ ಸಮಸ್ಯೆ ಹೀಗೆ ಏನೇ ಸಮಸ್ಯೆಗಳು ಇದ್ರೂ ಈ ದೇವನ ಬಳಿ ಬಂದು ಕೈಲಾದ ಸೇವೆಯನ್ನು ಮಾಡ್ತೀವಿ ಸ್ವಾಮಿಯೇ ನಮ್ಮನ್ನು ಕಷ್ಟಗಳಿಂದ ಪಾರು ಮಾಡು ಅಂತ ಭಕ್ತಿಯಿಂದ ಬೇಡಿದರೆ, ಸಮಸ್ಯೆಗಳು ಎಲ್ಲವೂ ಸ್ವಾಮಿಯ ಕೃಪೆಯಿಂದ ಬಲು ಬೇಗ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಗಂಗರ ಕಾಲದಿಂದಲೂ ಪೂಜೆಗೊಳ್ಳುತ್ತಿರುವ ಲಕ್ಷ್ಮೀ ನರಸಿಂಹ ಸ್ವಾಮಿಯು ಈ ಕ್ಷೇತ್ರದಲ್ಲಿ ಸ್ವಯಂಭೂ ಆಗಿ ನೆಲೆಸುವ ಹಿಂದೆ ಒಂದು ಕಥೆ ಇದೆ. ಬಹಳ ಹಿಂದೆ ಸಾಸಲು ಚಿನ್ನಮ್ಮ ಎಂಬ ಹೆಣ್ಣು ಮಗಳಿಗೆ ಗಂಡನ ಮನೆಯವರು ಚಿತ್ರ ಹಿಂಸೆಯನ್ನು ನೀಡ್ತಾ ಇದ್ರಂತೆ, ಆಗ ಅವಳು ನರಸಿಂಹ ನನ್ನು ಭಕ್ತಿಯಿಂದ ಪ್ರಾರ್ಥಿಸಿ ದ್ದಕ್ಕಾಗಿ ಸ್ವಾಮಿಯು ಅವಳ ಕಷ್ಟಗಳನ್ನು ಪರಿಹರಿ ಸೋದಕ್ಕೆ ಅಣ್ಣನಾಗಿ ಬಂದು ಚಿನ್ನಮ್ಮ ನನ್ನು ಸಂಕಷ್ಟದಿಂದ ಪಾರು ಮಾಡಿ ಈ ಸ್ಥಳದಲ್ಲಿ ಸ್ವಯಂಭೂ ಆಗಿ ನೆಲೆಸಿದನು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಹೇಳಲಾಗಿದೆ.
ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಇಲ್ಲಿನ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಕದ್ರಿ ಹುಣ್ಣಿಮೆ ಯಂ ದು ಭಕ್ತರು ಹರಕೆ ಹೊತ್ತು ಇಲ್ಲಿಗೆ ಬಂದು ಸುದರ್ಶನ ಹೋಮ, ನವಗ್ರಹ ಹೋಮ, ಗಣ ಹೋಮ ಹೀಗೆ ನಾನಾ ಬಗೆಯ ಹೋಮಗಳನ್ನು ಸ್ವಾಮಿಯ ಸನ್ನಿಧಾನ ದಲ್ಲಿ ನಡೆಸಿ ತಮ್ಮ ಹರಕೆಗಳನ್ನು ಒಪ್ಪಿಸುತ್ತಾರೆ. ನಿತ್ಯವೂ ಪೂಜೆ ಗೊಳ್ಳುವ ಈ ಸ್ವಾಮಿಗೆ ಪ್ರತಿ ಶನಿವಾರ ವೂ ಬೆಳಿಗ್ಗೆ 4 ಗಂಟೆಗೆ ಪಂಚಾಮೃತ ಅಭಿಷೇಕ, ಹಾಗೂ ಮಂಗಳಾರತಿ ಯನ್ನ ಮಾಡಲಾಗುತ್ತದೆ. ಇಲ್ಲಿರುವ ದೇವನನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಲಂಕಾರ ಸೇವೆ, ಅಭಿಷೇಕ ಸೇವೆ, ಹಣ್ಣು ಕಾಯಿ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಗುತ್ತೆ ಲಕ್ಷ್ಮೀ ನರಸಿಂಹ ಸ್ವಾಮಿ ಯು ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಮರಾಜಪೇಟೆಯ ಸಾಸಲು ಹಳ್ಳಿಯ ಆರೋಡಿ ಯಲ್ಲಿದೆ. ಈ ಪುಣ್ಯ ಕ್ಷೇತ್ರವೂ ಬೆಂಗಳೂರಿಂದ 68 ಕಿಮೀ , ದೊಡ್ಡ ಬಲ್ಲಾಪೂರದಿಂದ 29 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ. ಶುಭದಿನ.