ಸೆಪ್ಟೆಂಬರ್ 25, ಮಂಗಳವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭಕ್ರುತ್ ನಾಮ ಸಂವತ್ಸರ, ದಾಕ್ಷಿನಾಯಿನೇ, ಶರದ್ ಋತು ಆಶ್ವೀಜ ಮಾಸ, ಶುಕ್ಲ ಪಕ್ಷ. ಇಂದು ಸೆಪ್ಟೆಂಬರ್ 27 ನೆ ತಾರೀಕು ಮಂಗಳವಾರ. ಇಂದು ಹಸ್ಥ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಇಂದು ಚಂದ್ರದರ್ಷನ ಮಾಡುವ ದಿನ. ಆದ್ದರಿಂದ ಎಲ್ಲರೂ ಚಂದ್ರನ ದರ್ಶನ ಮಾಡಿದರೆ . ಗಣೇಶನ ಚತುರ್ಥಿಯಲ್ಲಿ ಮಾಡಿದ ಪಾಪಕ್ಕೆ ಈಗಲೂ ಪಾಪ ಹೋಗುತ್ತೆ. ಆದ್ದರಿಂದ ಗಣೇಶ ಚತುರ್ಥಿ ಹಬ್ಬದಲ್ಲಿ ಚಂದ್ರ ದರ್ಶನ ಮಾಡಿಲ್ಲ ಅಂದ್ದೆ ಇಂದು ಮಾಡಿ. ಮೇಷ ರಾಶಿಗೆ ಇಂದು ನಿಮ್ಮ ಪ್ರೀತಿ ಪಾತ್ರರಿಂದ ಬೇಡದ ಕೆಲವು ಮನಸ್ಸಿಗೆ ಭಾವನೆಗಳು ಪ್ರಾಪ್ತಿ ಆಗಬಹುದು ಅಥವಾ ಪರಿವರ್ತನೆ ಪ್ರಾಪ್ತಿ ಆಗಬಹುದು. ಇದನ್ನು ನೀವು ತುಂಬಾ ಭಾವುಕವಾಗಿ ತೆಗೆದುಕೊಂಡರೆ ಮಾತ್ರ ತೊಂದರೆ ಆಗುತ್ತೆ. ಎರಡು ದಿನ ಸುಮ್ಮನೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ. ವೃಷಭ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಇಂದು ನಿಮ್ಮ ಭಾವನೆಗಳು ಆಳವಾಗಿ ಇರುತ್ತೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುತ್ತಿರ. ಅವರಿಗೆ ತಕ್ಕಂಥ ಪ್ರತಿಕ್ರಿಯೆ ಪ್ರಾಪ್ತಿ ಆಗುತ್ತೆ. ಮಿಥುನ ರಾಶಿಯವರಿಗೆ ಇಂದು ಅಮ್ಮ ಸ್ವಲ್ಪ ಹೆಚ್ಚು ಭಾವುಕಳಾಗಿ ಇರುತ್ತಾಳೆ. ಹಾಗಾಗಿ ಅಮ್ಮನ ಜೊತೆ ಸಮಯವನ್ನು ಕಳೆಯಬೇಕಾಗಿ ಬರುತ್ತೆ. ಇಲ್ಲದೆ ಹೋದರೆ ಅಮ್ಮನಿಗೆ ಬೇಜಾರು ಆಗುವ ಸಾಧ್ಯತೆ ಇರುತ್ತದೆ. ಕರ್ಕಾಟಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ.

 

ನಿಮ್ಮ ಸಹೋದರ ಸಹೋದರಿ ಜೊತೆ ಅತಿ ಹೆಚ್ಚಿನ ಭಾವುಕ ಆಗುವ ಸಂತೋಷಗಳನ್ನು ನೀವು ಹಂಚಿಕೊಳ್ಳುತ್ತಿರಿ. ಸಣ್ಣ ಪುಟ್ಟ ಪಿಕ್ನಿಕ್ ಕೂಡ ಇದ್ರು ಇರಬಹುದು. ಸಿಂಹ ರಾಶಿಯವರಿಗೆ ಇಂದು ನಿಮ್ಮ ಕುಟುಂಬದಲ್ಲಿ ಬಹಳ ನೆಮ್ಮದಿ ನೋಡುತ್ತೀರಿ. ಬಹಳ ಒಳ್ಳೆಯ ರೀತಿಯಲ್ಲಿ ಆಪ್ಯಾಯ ಮಾನವಾಗಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಲಿತಿರಿ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ. ಕನ್ಯಾ ರಾಶಿಗೆ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಎರಡು ದಿನಗಳಿಂದ ಮನಸ್ಸಿನಲ್ಲಿ ಇದ್ದ ಕ್ಲೇಶಗಳು ಕಳೆದು ಮನಸ್ಸಿಗೆ ನೆಮ್ಮದಿ. ಮುಂದೇನು ಮಾಡಬೇಕು ಎಂಬುದು ಸರಿಯಾದ ರೀತಿಯಲ್ಲಿ ಇವತ್ತು ತೋರುತ್ತೆ. ತುಲಾ ರಾಶಿಗೆ ಸ್ವಲ್ಪ ಕಷ್ಟದ ದಿನ. ಭಾವನೆಗಳು ಆಳವಾಗಿ ಇರುತ್ತೆ. ಅನೇಕ ರೀತಿಯಲ್ಲಿ ನಿಮ್ಮನ್ನು ಕಾಡಬಹುದು. ಎರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ. ಮುಖ್ಯ ನಿರ್ಧಾರ ಬೇಡ. ವೃಶ್ಚಿಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಿತ್ರರ ಜೊತೆ ಭಾವುಕರಾಗಿ ನಿಮ್ಮ ದುಗುಡಗಳನ್ನು ಹೇಳಿಕೊಳ್ಳುತ್ತಿರ. ಜಾಗಿ ಅವರಿಂದ ಬಹಳ ಒಳ್ಳೆಯ ರೀತಿಯ ಪ್ರೀತಿಯನ್ನು ನೀವು ಸಂಪಾದಿಸುತ್ತಿರಿ. ಧನಾಗಮ, ಇಷ್ಟಾರ್ಥ ಸಿದ್ಧಿ. ಧನಸ್ಸು ರಾಶಿಗೆ ಇವತ್ತು ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಆದ್ದರಿಂದ ಬಹಳ ಭಾವುಕತೆಯಿಂದ ಎಲ್ಲದನ್ನೂ ಸೆಲೆಬ್ರೇಟ್ ಮಾಡ್ತೀರಿ.

 

ಕೆಲಸಗಳನ್ನು ನಿಗದಿತ ಸಮಯಕ್ಕೆ ಮುಂಚೆ ಮಾಗಿಸುತ್ತಿರಿ. ನೀವು ಹಿಂದಿನ ಅನೇಕ ದಿನಗಳಿಂದ ನೋಡದ ಯಶಸ್ಸು ಹಾಗೂ ಸಾರ್ಥಕತೆ ಪಡಿತಿರಿ. ಮಕರ ರಾಶಿಗೆ ಭಾಗ್ಯೋದಯ ಆಗುತ್ತೆ. ಬಹಳ ಮುಖ್ಯ ದಿನ. ತಂದೆ ತಾಯಿಯ ವಿಶೇಷ ಆಶೀರ್ವಾದ ಪ್ರಾಪ್ತಿ ಆಗುತ್ತೆ. ದೊಡ್ಡವರ ಆಶೀರ್ವಾದ ಮತ್ತು ದೇವರ ವರ ಪ್ರಾಪ್ತಿ ಆಗುವ ವಿಶೇಷವಾದ ದಿನ. ನಮ್ರತೆಯಿಂದ ಪ್ರಾರ್ಥನೆ ಮಾಡಿ. ಕುಂಭ ರಾಶಿಗೆ ಇವತ್ತು ಮನಸ್ಸಿಗೆ ಬಹಳ ಆಳವಾದ ಯೋಚನೆಗಳು ತೊಂದರೆಗಳು ನಿಮಗೆ ಕಣ್ಣಿಗೆ ಎದುರಿಗೆ ಬರಬಹುದು. ಏನು ಮಾಡಲು ಆಗುತ್ತಿಲ್ಲ ಎನ್ನುವ ಹತಾಶೆ ಭಾವನೆ ಬರಬಹುದು. ಬಹಳ ಭಾವುಕರಾಗಿ ಯಾವುದೇ ವ್ಯವಹಾರ ಮಾಡಬೇಡಿ. ಸುಮ್ಮನೆ ಇದ್ದುಬಿಡಿ. ಎರಡು ದಿನಗಳಲ್ಲಿ ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತೆ. ಆಗ ಏನು ಬೇಕಾದರೂ ನಿರ್ಧಾರ ಮಾಡಬಹುದು. ಮೀನಾ ರಾಶಿಗೆ ಇಂದು ನಿಮ್ಮ ಪ್ರೀತಿ ಪಾತ್ರರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಪ್ರಾಪ್ತಿ ಆಗುತ್ತೆ. ಇದರಿಂದ ನಿಮ್ಮ ಭಾವುಕವಾದ ಸಂಬಂಧ ಚೆನ್ನಾಗಿ ಮುಂದುವರೆಯುತ್ತೆ. ಮತ್ತು ಬಹಳ ಗಟ್ಟಿ ಆಗುತ್ತೆ. ಆದ್ರೆ ಅತಿ ಭಾವುಕತೆ ತೋರಿಸಲು ಹೋಗಬೇಡಿ. ನಿಮ್ಮ ಪ್ರೀತಿ ಪಾತ್ರರಿ ಹೇಳಿದ್ದನ್ನೂ ಹೌದು ಎಂದು ಒಪ್ಪಿಕೊಂದುಬಿದಿ. ಶುಭದಿನ.

Leave a Reply

Your email address will not be published. Required fields are marked *