ಮಲಬದ್ಧತೆಯ ನಿವಾರಣೆಗೆ ನೈಸರ್ಗಿಕವಾದ ಮನೆಮದ್ದುಗಳು ಇಲ್ಲಿವೆ. ಯಾವುವು ಅಂತೀರಾ?? ತಿಳಿದುಕೊಳ್ಳಿ.

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ, ಮಲಬದ್ಧತೆ, ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಎದುರಿಸುತ್ತಿದ್ದಾರೆ. ಹೌದು ಈ ಮಲಬದ್ಧತೆ ಸಮಸ್ಯೆ ಒಮ್ಮೆ ದೇಹವನ್ನು ಸೇರಿಕೊಂಡರೆ ನಮಗೆ ಅನೇಕ ಬಗೆಯ ಕಾಯಿಲೆಗಳು ಶುರು ಆಗುತ್ತದೆ. ಜೊತೆಗೆ ನಮಗೆ ಯಾವುದೇ ಕೆಲಸವನ್ನು ಮಾಡಲು ಕೂಡ ಮನಸ್ಸು ಆಗುವುದಿಲ್ಲ. ಅಷ್ಟೇ ಅಲ್ಲದೇ ಹಸಿವು ಕೂಡ ಆಗುವುದಿಲ್ಲ. ಮಲಬದ್ಧತೆಯ ಲಕ್ಷಣಗಳು ಯಾವುವು ಅಂದರೆ ಮಲ ವಿಸರ್ಜನೆ ಮಾಡುವಾಗ ನೋವು ಆಗುವುದು. ಮಲ ಗಟ್ಟಿ ಆಗುವುದು ಬಹಳ ಒತ್ತಾಯದಿಂದ ಮಲ ವಿಸರ್ಜನೆ ಮಾಡುವಾಗ ನೋವು ಆಗುವುದು ಹೊಟ್ಟೆ ನೋವು ಬರುವುದು ಇನ್ನೂ ಕೆಲವು ಜನರಿಗೆ ಮೋಷನ್ ನಲ್ಲಿ ರಕ್ತ ಕೂಡ ಬರುತ್ತದೆ ಇಂತಹ ಸಮಸ್ಯೆಗಳನ್ನು ನಾವು ಮಲಬದ್ಧತೆ ಉಂಟಾದಾಗ ಎದುರಿಸಬೇಕಾಗುತ್ತದೆ. ದೀರ್ಘಕಾಲದ ಮಲಬದ್ಧತೆ ಅಂದರೆ ಒಂದು ವಾರದವರೆಗೆ ಇರುತ್ತದೆ.

 

ಇನ್ನೂ ಒಂದೆರಡು ದಿನಗಳ ಮಲಬದ್ಧತೆ ಸಮಸ್ಯೆ ಇದ್ದರೆ ಮಾತ್ರೆಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ನೀವು ಸೇವನೆ ಮಾಡುವುದರಿಂದ ನೀರು ಚೆನ್ನಾಗಿ ಕುಡಿಯದೇ ಇದ್ದಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಇನ್ನೂ ಇದಕ್ಕೆ ಪರಿಹಾರವಾದರೂ ಏನು ಅಂತ ಹೇಳುವುದಾದರೆ, ಮೊದಲಿಗೆ ಚೆನ್ನಾಗಿ ನೀರು ಕುಡಿಯಬೇಕು. ಹೌದು ಪ್ರತಿ ಗಂಟೆಗೆ ಇಲ್ಲವಾದರೆ ಎರಡು ಗಂಟೆಗೆ ಒಮ್ಮೆ ನೀವು ನೀರು ಕುಡಿಯುತ್ತಾ ಬರಬೇಕು. ಇದರಿಂದ ಮಲ ವಿಸರ್ಜನೆ ಸರಿಯಾಗಿ ಯಾವುದೇ ತೊಂದರೆ ಇಲ್ಲದೆ ಆಗುತ್ತದೆ. ಇನ್ನೂ ಸರಿಯಾದ ವೇಳೆಗೆ ನಿದ್ರೆಯನ್ನು ಮಾಡುವುದು ಮತ್ತು ಊಟವನ್ನು ಮಾಡುವುದನ್ನು ರೂಢಿಸಿಕೊಳ್ಳಿ ಆಹಾರದ ಸಮಯ ಮತ್ತು ನಿದ್ದೆಯ ಸಮಯ ಒಂದೇ ಇರುವಂತೆ ನೋಡಿಕೊಳ್ಳಿ. ರಾತ್ರಿ ಚೆನ್ನಾಗಿ ನಿದ್ದೆಯನ್ನು ಮಾಡಿ. ಇಲ್ಲವಾದರೆ ಮಲಬದ್ಧತೆ ಸಮಸ್ಯೆ ಕಾಡುವುದು ಖಚಿತ. ಇನ್ನೂ ಇದರ ಜೊತೆಗೆ ನಿಮ್ಮ ಆಹಾರದಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ. ಪ್ರತಿನಿತ್ಯವೂ ಉತ್ತಮವಾದ ಆಹಾರವನ್ನು ಸೇವಿಸಿ. ಹಾಗೂ ಹಸಿರು ಸೊಪ್ಪು ತರಕಾರಿ ಮೊಳಕೆ ಒಡೆದ ಕಾಳುಗಳು ಸೇವನೆ ಮಾಡಿ.

 

ಇನ್ನೂ ಕೆಲವು ಜನರು ಸ್ವಯಂ ಪ್ರೇರಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮಾತ್ರೆಗಳ ಸೇವನೆ ಮಧ್ಯಪಾನ ಧೂಮಪಾನ ಮಸಾಲೆ ಆಹಾರಗಳು ಕೂಡ ಮಲಬದ್ಧತೆಗೆ ಕಾರಣವಾಗುತ್ತದೆ. ಹೀಗಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕೆ ಮನೆಮದ್ದು ನೋಡುವುದಾದರೆ, ಒಣದ್ರಾಕ್ಷಿ, ಇದನ್ನು ನೀವು ರಾತ್ರಿ ಮಲಗುವಾಗ ನಾಲ್ಕೈದು ಒಣದ್ರಾಕ್ಷಿ ನೀರಿನಲ್ಲಿ ಹಾಕಿ ನೆನೆಸಿಡಿ. ಹಾಗೂ ಬೆಳಿಗ್ಗೆ ಆ ನೀರನ್ನು ಮತ್ತು ಒಣದ್ರಾಕ್ಷಿ ಜಗಿದು ತಿನ್ನಿ ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಊಟವಾದ ಮೇಲೆ ಒಂದು ಅರ್ಧ ಹೋಳು ಪಪ್ಪಾಯಿ ಹಣ್ಣು ತಿನ್ನಿ ಇದರಿಂದ ಕೂಡ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಶುಂಠಿ ಮತ್ತು ಓಂ ಕಾಳು ಪುಡಿಯ ಜೊತೆಗೆ ಸ್ವಲ್ಪ ಅಜವಾಯಿನ್ ಪುಡಿ ಹಾಕಿ ಕುದಿಸಿ ಕುಡಿಯಿರಿ ಹಾಗೂ ರಾತ್ರಿ ಊಟವಾದ ಮೇಲೆ ಒಂದು ಬಾಳೆಹಣ್ಣು ಸೇವನೆ ಮಾಡಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ನಿಮ್ಮ ಪ್ರತಿನಿತ್ಯ ಆಹಾರದಲ್ಲಿ ಶುಂಠಿ ಬೆಳ್ಳುಳ್ಳಿ ಪುದೀನಾ ಜೀರಿಗೆ ನಿಂಬೆ ಹಣ್ಣು ಇರುವಂತೆ ನೋಡಿಕೊಳ್ಳಿ. ಸೌತೆಕಾಯಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ಕೂಡ ಮಲಬದ್ಧತೆ ಉಂಟಾಗುವುದಿಲ್ಲ. ವ್ಯಾಯಮ ಉತ್ತಮವಾದ ಆಹಾರದಿಂದ ನೀವು ಮಲಬದ್ಧತೆಗೆ ಬೈ ಬೈ ಹೇಳಬಹುದು. ಶುಭದಿನ.

Leave a Reply

Your email address will not be published. Required fields are marked *